Tokyo Olympics 2020: ಈ ಗೆಲುವಿನೊಂದಿಗೆ ಭಾರತ ಹಾಕಿ ತಂಡದ ‘ಹೊಸ ಯುಗ’ ಆರಂಭ

Indian Hockey team: ಈ ಗೆಲುವು ಹಾಕಿ ಪ್ರಿಯರಿಗೆ ತುಂಬಾ ಆಹ್ಲಾದಕರ ಕ್ಷಣ. ಏಕೆಂದರೆ ಮತ್ತೆಂದೂ ದೇಶದಲ್ಲಿ ಹಾಕಿ ಕ್ರೇಜ್ ಹುಟ್ಟುಹಾಕಲ್ಲ ಎಂಬ ಹಂತಕ್ಕೆ ತಲುಪಿತ್ತು. ಆದರೆ ಇದೀಗ ನಮ್ಮ ಕ್ರೀಡೆಯ ಪುನರುತ್ಥಾನವನ್ನು ನೋಡಿ ತುಂಬಾ ಸಂತೋಷವಾಗಿದೆ.

Tokyo Olympics 2020: ಈ ಗೆಲುವಿನೊಂದಿಗೆ ಭಾರತ ಹಾಕಿ ತಂಡದ 'ಹೊಸ ಯುಗ' ಆರಂಭ
Indian Hockey team
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 05, 2021 | 4:59 PM

ಸತತ ಸೋಲು, 41 ವರ್ಷಗಳಿಂದ ಅವಮಾನ, 4 ದಶಕ ಕಳೆದರೂ ಸೆಮಿಫೈನಲ್ ಪ್ರವೇಶಿಸಿಲ್ಲ ಎಂಬ ಟೀಕೆ, ಭಾರತದ ಹಾಕಿಯ ಅಂತ್ಯ…ಹೀಗೆ ಒಲಿಂಪಿಕ್ಸ್​ ಕ್ರೀಡಾಕೂಟದಿಂದ ಭಾರತೀಯ ಹಾಕಿ ತಂಡ ಕುಟುಕು, ಟೀಕೆಗಳನ್ನು ಕೇಳುತ್ತಾ ಪ್ರತಿ ಬಾರಿ ನಿರಾಸೆಯೊಂದಿಗೆ ಮರಳುತ್ತಿತ್ತು. ಒಂದಾರ್ಥದಲ್ಲಿ ಕ್ರಿಕೆಟ್​ ಕ್ರೇಜ್ ಮುಂದೆ ದೇಶೀಯ ಕ್ರೀಡೆ ಹಾಕಿ ನೆಲ ಕಚ್ಚಿತ್ತು. ಹೀಗಾಗಿಯೇ ಭಾರತದ ಹಾಕಿಗೆ ಮರುಜನ್ಮ ನೀಡಬೇಕಾದ ಅನಿವಾರ್ಯತೆ ಇತ್ತು. ಭಾರತೀಯ ಹಾಕಿ ಸಂಸ್ಥೆ ಹಲವು ಹೊಸ ಕೋಚ್​ಗಳು ನೇಮಿಸಿದರು. ವಿದೇಶಿ ತರಬೇತುದಾರರನ್ನೇ ಕರೆತಂದರೂ ಫಲಿತಾಂಶ ಮಾತ್ರ ಶೂನ್ಯವಾಗಿತ್ತು. ಈ ಬಾರಿ ಕೂಡ ಭಾರತದ ಹಾಕಿ ತಂಡದ ಮೇಲೆ ಹೆಚ್ಚಿನ ನಿರೀಕ್ಷೆಗಳಿರಲಿಲ್ಲ. ಏಕೆಂದರೆ ಕೊರೋನಾ ಕಾರಣದಿಂದ ಕಳೆದ ಒಂದು ವರ್ಷ ಭಾರತೀಯ ಹಾಕಿ ತಂಡ ಮೈದಾನಕ್ಕಿಳಿದಿರಲಿಲ್ಲ. ಅದರಲ್ಲೂ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ 3-2 ಅಂತರದ ರೋಚಕ ಜಯ ಸಾಧಿಸಿತು. 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ 7-1 ಅಂತರದಿಂದ ಹೀನಾಯ ಸೋಲನುಭವಿಸಿತು. ಇದರೊಂದಿಗೆ ಈ ಸಲ ಕೂಡ ಪದಕವಿಲ್ಲ ಎಂದು ಎಲ್ಲರೂ ಷರಾ ಬರೆದಿದ್ದರು. ಆದರೆ ಆ ಬಳಿಕ ಟೀಮ್ ಇಂಡಿಯಾ ಪುಟಿದೇಳಿದ ಪರಿ ಇದೆಯಲ್ವಾ? ಅದು ಭಾರತದ ಹಾಕಿಯ ಗತ ವೈಭವನ್ನು ಮತ್ತೊಮ್ಮೆ ನೆನಪಿಸಿತು.

ಮೂರನೇ ಪಂದ್ಯದಲ್ಲಿ ಬಲಿಷ್ಠ ಸ್ಪೇನ್ ಪಡೆಗೆ ಟೀಮ್ ಇಂಡಿಯಾ 3-0 ಅಂತರದಿಂದ ಸೋಲಿನ ರುಚಿ ತೋರಿಸಿತು. ನಾಲ್ಕನೇ ಪಂದ್ಯದಲ್ಲಿ 3-1 ಅಂತರದಿಂದ ಅರ್ಜೆಂಟೀನಾವನ್ನು ಬಗ್ಗು ಬಡಿಯಿತು. ಐದನೇ ಪಂದ್ಯದಲ್ಲಿ ಭಾರತ ಆತಿಥೇಯ ಜಪಾನ್ ವಿರುದ್ದ 5 ಗೋಲು ಬಾರಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟಿತು. 8ರ ಘಟ್ಟದಲ್ಲಿ ಬಲಿಷ್ಠ ಗ್ರೇಟ್ ಬ್ರಿಟನ್​ (ಇಂಗ್ಲೆಂಡ್​) ಅನ್ನು 3-1 ಅಂತರದಿಂದ ಮಣಿಸಿ ಸೆಮಿ ಫೈನಲ್ ಪ್ರವೇಶಿತು. ಈ ಮೂಲಕ ಈ ಬಾರಿ ನಾವು ಪದಕದೊಂದಿಗೆ ಹಿಂತಿರುಗಲಿದೆ ಎಂಬುದನ್ನು ಟೀಮ್ ಇಂಡಿಯಾ ಸಾರಿತು. ಆದರೆ ಸೆಮಿ ಫೈನಲ್​ನಲ್ಲಿ ಬಲಿಷ್ಠ ಬೆಲ್ಜಿಯಂ ವಿರುದ್ದ ಕಠಿಣ ಪೈಪೋಟಿ (5-2) ನಡೆಸಿದರೂ, ಗೆಲುವು ದಕ್ಕಲಿಲ್ಲ. ಹೀಗಾಗಿ ಕಂಚಿನ ಪದಕದ ಬೇಟೆಗಿಳಿದ ಭಾರತ ತಂಡ ಆಕ್ರಮಣಕಾರಿ ತಂಡವಾದ ಜರ್ಮನಿಗೆ ಅವರದ್ದೇ ರೀತಿಯಲ್ಲಿ ಪ್ರತ್ಯುತ್ತರ ನೀಡಿತು. ಪರಿಣಾಮ 5-4 ಅಂತರದಿಂದ ಗೆಲ್ಲುವ ಮೂಲಕ ಭಾರತ 4 ದಶಕಗಳ ಬಳಿಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.

ಇಂತಹದೊಂದು ಗೆಲುವು ಭಾರತದ ಹಾಕಿ ಪಾಲಿಗೆ ಅನಿವಾರ್ಯವಾಗಿತ್ತು. ಆ ಗೆಲುವು ಇದೀಗ ದಕ್ಕಿದೆ. ಇಡೀ ಭಾರತದಲ್ಲಿ ಹಾಕಿ ಬಗ್ಗೆ ಚರ್ಚೆಗಳು ಶುರುವಾಗಿದೆ. ಹಾಕಿ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಒಂದು ಭರ್ಜರಿ ಗೆಲುವಿನ ಮೂಲಕ ಹಾಕಿ ಕೂಡ ದೇಶದಲ್ಲಿ ಕ್ರೇಜ್ ಹುಟ್ಟುಹಾಕಿದೆ. ಹೀಗಾಗಿಯೇ ಈ ಗೆಲುವಿನೊಂದಿಗೆ ಭಾರತದ ಹಾಕಿಯ ಹೊಸ ಯುಗ ಆರಂಭ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ವಿಶ್ವಕಪ್ ವಿಜೇತ ಹಾಕಿ ತಂಡದ ಮಾಜಿ ನಾಯಕ ಅಜಿತ್​ಪಾಲ್ ಸಿಂಗ್, ಟೀಮ್ ಇಂಡಿಯಾದ ಪ್ರದರ್ಶನದಿಂದ ನಾನು ತುಂಬಾ ಸಂತೋಷಗೊಂಡಿದ್ದೇನೆ. ಒಂದು ಕಾಲದಲ್ಲಿ ನಮ್ಮ ಹಾಕಿ ತಂಡ ಐಸಿಯುನಲ್ಲಿದೆ. ದೇಶದಲ್ಲಿ ಹಾಕಿ ಆಟವೇ ಸತ್ತಿದೆ ಎಂದೆಲ್ಲಾ ಮಾತನಾಡಿಕೊಂಡಿದ್ದರು. ಇದೀಗ ನಾವು ಭಾರತೀಯ ಹಾಕಿಯ ಪುನರುತ್ಥಾನಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಗೆಲುವು ಹಾಕಿ ಪ್ರಿಯರಿಗೆ ತುಂಬಾ ಆಹ್ಲಾದಕರ ಕ್ಷಣ. ಏಕೆಂದರೆ ಮತ್ತೆಂದೂ ದೇಶದಲ್ಲಿ ಹಾಕಿ ಕ್ರೇಜ್ ಹುಟ್ಟುಹಾಕಲ್ಲ ಎಂಬ ಹಂತಕ್ಕೆ ತಲುಪಿತ್ತು. ಆದರೆ ಇದೀಗ ನಮ್ಮ ಕ್ರೀಡೆಯ ಪುನರುತ್ಥಾನವನ್ನು ನೋಡಿ ತುಂಬಾ ಸಂತೋಷವಾಗಿದೆ. ಸಾಕಷ್ಟು ಶ್ರಮವಹಿಸಿದ್ದಾರೆ. ಸಾಕಷ್ಟು ಹಣವನ್ನು ಕೂಡ ಖರ್ಚು ಮಾಡಲಾಯಿತು. ಇದಾಗ್ಯೂ ರಿಯೊ ಒಲಿಂಪಿಕ್ಸ್​ನಲ್ಲಿ ನಾವು 12ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇದೀಗ ಹಾಕಿ ತಂಡ ಕಂಬ್ಯಾಕ್ ಮಾಡಿದೆ. ಅವರು ಒಳ್ಳೆಯ ಕೆಲಸವನ್ನು ಮುಂದುವರಿಸಬೇಕೆಂದು ನಾನು ಬಯಸುತ್ತೇನೆ ಮತ್ತು ಆಶಿಸುತ್ತೇನೆ ಎಂದು ಅಜಿತ್​ಪಾಲ್ ಸಿಂಗ್ ತಿಳಿಸಿದರು.

ಇನ್ನು 1980 ರ ಮಾಸ್ಕೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಬೇಟೆಯಾಡಿದ ಭಾರತ ತಂಡದ ಪ್ರಮುಖ ಸದಸ್ಯ ಜಾಫರ್ ಇಕ್ಬಾಲ್ ಮಾತನಾಡಿ, ಪಂದ್ಯದ ಕೊನೆಯ ಕೆಲವು ನಿಮಿಷಗಳಲ್ಲಿ ಜರ್ಮನಿಯು ಸಮಬಲದ ಹುಡುಕಾಟದಲ್ಲಿತ್ತು. ನಿಜವಾಗ್ಲೂ ತನ್ನ ಹೃದಯವೇ ಬಾಯಿಗೆ ಬಂದಂತಾಗಿತ್ತು. ಕೊನೆಯ ಕೆಲವು ನಿಮಿಷಗಳಲ್ಲಿ ಜರ್ಮನಿ ತೀವ್ರವಾಗಿ ಹೋರಾಟ ನಡೆಸುತ್ತಿದ್ದರು. ಈ ವೇಳೆ ನನ್ನಎದೆ ಬಡಿತ ಹೆಚ್ಚಾಗುತ್ತಿತ್ತು. ಇದೀಗ ಎಲ್ಲವನ್ನೂ ಮೀರಿ ನಾವು ಗೆದ್ದಿದ್ದೇವೆ. ಇದು ಒಂದು ಪವಾಡ. ಇದು ಆಟದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಇದು ದೇಶದಲ್ಲಿ ಹಾಕಿಯನ್ನು ಪುನರುಜ್ಜೀವನಗೊಳಿಸುತ್ತದೆ. ಇದು ಹಾಕಿಯ ಹೊಸ ಆರಂಭ, ಹೊಸ ಉದಯ…ಎಂದು ಜಾಫರ್ ಇಕ್ಬಾಲ್ ತಿಳಿಸಿದರು.

ಒಲಿಂಪಿಯನ್ ಮತ್ತು ರಾಷ್ಟ್ರೀಯ ತಂಡದ ಮಾಜಿ ತರಬೇತುದಾರ ಜೋಕ್ವಿಮ್ ಕರ್ವಾಲೋ ಅವರು ಕೂಡ ಭಾರತದ ಅಪೂರ್ವ ಗೆಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಹಳೆಯ ತಂಡದ ಪ್ರದರ್ಶನ ನೋಡಿ ಆನಂದಬಾಷ್ಪ ಹರಿಯಿತು. ಇದು ಭಾರತದ ಹಾಕಿಯ ರೆಡ್ ಲೆಟರ್ ದಿನವಾಗಿರಲಿದೆ. ಏಕೆಂದರೆ ನಾವು ಹಾಕಿಯಲ್ಲಿ ದೀರ್ಘಕಾಲದಿಂದ ಯಾವುದೇ ಭರ್ಜರಿ ಜಯ ಸಾಧಿಸಿಲ್ಲ. ಈ ಗೆಲುವು ಖಂಡಿತವಾಗಿಯೂ ದೇಶದ ಹಾಕಿ ಅಭಿವೃದ್ಧಿಗೆ ದೊಡ್ಡ ಉತ್ತೇಜನ ನೀಡುತ್ತದೆ ಎಂದು ಕರ್ವಾಲೋ ಅಭಿಪ್ರಾಯಪಟ್ಟರು.

ನಾನು ಮುಖ್ಯ ಕೋಚ್​ ಗ್ರಹಾಂ ರೀಡ್​ಗೆ ಸೆಲ್ಯೂಟ್ ನೀಡುತ್ತಿದ್ದೇನೆ. ನಮ್ಮ ಯುವ ತಂಡವನ್ನು ಕಟ್ಟಿ ಇಂದು ಪದಕ ಗೆದ್ದಿದ್ದೀರಿ ಎಂದು ಭಾರತದ ಮಾಜಿ ಕೋಚ್ ಹರೇಂದ್ರ ಸಿಂಗ್ ಐತಿಹಾಸಿಕ ಗೆಲುವಿನ ಖುಷಿ ಹಂಚಿಕೊಂಡರು. ಅಂದಹಾಗೆ ಟೋಕಿಯೊದಲ್ಲಿ ಕಣಕ್ಕಿಳಿದ ಭಾರತ ಹಾಕಿ ತಂಡದಲ್ಲಿ 2016 ರಲ್ಲಿ ಜೂನಿಯರ್ ವಿಶ್ವಕಪ್ ಪ್ರಶಸ್ತಿಗಾಗಿ ಕಾದಾಡಿದ ಅನೇಕ ಕಿರಿಯ ಆಟಗಾರರನ್ನು ಒಳಗೊಂಡಿದೆ. ಅಂದು ಕಿರಿಯರ ತಂಡವನ್ನು ರೂಪಿಸುವಲ್ಲಿ ಹರೇಂದ್ರ ಸಿಂಗ್ ದೊಡ್ಡ ಕೊಡುಗೆಯನ್ನು ನೀಡಿದ್ದರು. ಒಟ್ಟಿನಲ್ಲಿ 41 ವರ್ಷಗಳ ಬಳಿಕ ಮೂಡಿಬಂದ ಒಂದು ಭರ್ಜರಿ ಗೆಲುವಿನ ಇದೀಗ ಭಾರತದಲ್ಲಿ ಹಾಕಿಯ ಕ್ರೇಜ್ ಹುಟ್ಟುಹಾಕಿದೆ. ಕಂಚಿನ ಪದಕ ಗೆದ್ದ ತಂಡದ ಆಟಗಾರರಿಗೆ ಪ್ರೋತ್ಸಾಹಗಳು ಹರಿದು ಬರಲಾರಂಭಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಹಾಕಿ ಹವಾ ಶುರುವಾಗುವುದಂತು ದಿಟ ಎಂದೇ ಹೇಳಬಹುದು.

ಇದನ್ನೂ ಓದಿ:-

Tokyo Olympics: ಒಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!

Tokyo Olympics: ಪದಕ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾಗೆ ಕಾದಿತ್ತು ಸರ್​ಪ್ರೈಸ್..!

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ