AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ: ಧನರಾಜ್​ಗೆ ಢವ-ಢವ

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ: ಧನರಾಜ್​ಗೆ ಢವ-ಢವ

ಮಂಜುನಾಥ ಸಿ.
|

Updated on: Jan 18, 2025 | 1:47 PM

Share

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸೀಸನ್​ನ ಕೊನೆಯ ವಾರದ ಪಂಚಾಯಿತಿ ಇಂದು (ಜನವರಿ 18) ನಡೆಯಲಿದೆ. ಸೀಸನ್​ನ ಕೊನೆಯ ವಾರದ ಪಂಚಾಯಿತಿ ನಡೆಸಿಕೊಡಲು ಕಿಚ್ಚನ ಆಗಮನ ಆಗಿದೆ. ಧನರಾಜ್​ಗೆ ಈಗಾಗಲೇ ನಡುಕ ಶುರುವಾಗಿದೆ. ಈ ವಾರದ ಪಂಚಾಯಿತಿ ಹಲವು ಕಾರಣಗಳಿಗೆ ಮಹತ್ವದ್ದಾಗಿರಲಿದೆ.

ಬಿಗ್​ಬಾಸ್ ಕನ್ನಡ ಸೀಸನ್ 11 ಮುಕ್ತಾಯವಾಗಲು ಕೆಲವೇ ದಿನಗಳು ಬಾಕಿ ಇದೆ. ಈ ಸೀಸನ್​ನ ಕೊನೆ ಪಂಚಾಯಿತಿ ಇಂದು ನಡೆಯಲಿದೆ. ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ಸುದೀಪ್ ತೋಳು ಮೇಲೇರಿಸಿಕೊಂಡು ಬಂದಿದ್ದಾರೆ. ಇದು ಧನರಾಜ್​ಗೆ ನಡುಕ ಹುಟ್ಟಿಸಿದೆ. ಬಿಗ್​ಬಾಸ್​ ಇತಿಹಾಸದಲ್ಲಿ ಮೊದಲ ಬಾರಿಗೆ ಮಿಡ್ ವೀಕ್ ಎಲಿಮಿನೇಷನ್ ರದ್ದಾಗಿದೆ. ಇದಕ್ಕೆ ಧನರಾಜ್ ಕಾರಣವಾಗಿದ್ದಾರೆ. ಈ ಬಗ್ಗೆ ಸುದೀಪ್ ಮಾತನಾಡಲಿದ್ದಾರೆ. ಧನರಾಜ್ ಈಗಾಗಲೇ ತಪ್ಪು ಒಪ್ಪಿಕೊಂಡಿದ್ದಾರೆ. ಆದರೆ ಸುದೀಪ್ ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಮಾತ್ರವಲ್ಲದೆ ನಾಮಿನೇಷನ್​ನಿಂದ ಈ ವಾರ ತಪ್ಪಿಸಿಕೊಳ್ಳುವರು ಯಾರೆಂಬುದು ಸಹ ಕುತೂಹಲ ಕೆರಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More