Daily Horoscope: ಈ ರಾಶಿಯವರಿಗೆ ತಮ್ಮ ಬಗ್ಗೆ ತಮಗೆ ಪ್ರಶ್ನೆಗಳು ಮೂಡಬಹುದು
19 ಜನವರಿ 2025: ಭಾನುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಸ್ಪರ್ಧಾತ್ಮಕ ವಿಚಾರಕ್ಕೆ ಇತರರಿಂದ ಉತ್ತೇಜನವೂ ಬೇಕು. ನೂತನ ವಸ್ತ್ರಗಳನ್ನು ಧರಿಸಿ ಖುಷಿಪಡುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯವು ಇದಾಗಿದೆ. ಹಾಗಾದರೆ ಜನವರಿ 19ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಷಷ್ಠ, ನಿತ್ಯನಕ್ಷತ್ರ: ಹಸ್ತಾ, ಯೋಗ: ಅತಿಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 24 ನಿಮಿಷಕ್ಕೆ, ರಾಹು ಕಾಲ ಸಂಜೆ 04: 59 ರಿಂದ 06:24ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:34 ರಿಂದ 04:59 ರವರೆಗೆ, ಗುಳಿಕ ಬೆಳಿಗ್ಗೆ 07:03 ರಿಂದ 08:28 ರವರೆಗೆ.
ಮೇಷ ರಾಶಿ: ಸ್ಪರ್ಧಾತ್ಮಕ ವಿಚಾರಕ್ಕೆ ಇತರರಿಂದ ಉತ್ತೇಜನವೂ ಬೇಕು. ನೂತನ ವಸ್ತ್ರಗಳನ್ನು ಧರಿಸಿ ಖುಷಿಪಡುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯವು ಇದಾಗಿದೆ. ಅಂತಸ್ತಿನ ವಿಚಾರದಲ್ಲಿ ನಿಮಗೇ ಅಸಮಾಧನ. ಪ್ರೇಮ ಜೀವನ ಸುಧಾರಿಸುತ್ತದೆ. ಆರ್ಥಿಕ ಪರಿಸ್ಥಿತಿಯೂ ಮೊದಲಿಗಿಂತ ಉತ್ತಮವಾಗಿರುತ್ತದೆ. ಬೇಡದ ಸಂಗತಿಗಳೇ ಹೆಚ್ಚು ತಲೆಯಲ್ಲಿ ಓಡಾಡಬಹುದು. ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ನಿಮ್ಮ ಮೇಲೆ ಹಿತಶತ್ರುಗಳು ಆಕ್ರಮಣ ಮಾಡಬಹುದು. ಅನಿರೀಕ್ಷಿತ ಆದಾಯದ ಮೂಲಗಳಿಂದ ಆರ್ಥಿಕ ಲಾಭ ದೊರೆಯಲಿದೆ. ಯೋಚಿಸದೆ ಹೂಡಿಕೆ ಮಾಡಬೇಡಿ. ಹುಡುಗಾಟಿಕೆಯಿಂದ ಏನಾದರೂ ಅವಗಡ ಉಂಟಾದೀತು. ನಿಮ್ಮ ನೋವಿಗೆ ಸ್ಪಂದಿಸಿದವರ ಜೊತೆ ಸಮಯ ಕಳೆಯುವಿರಿ. ಯುಕ್ತಿಯನ್ನು ಬಳಸುವಷ್ಟು ತಾಳ್ಮೆ ನಿಮಗೆ ಬೇಕು.
ವೃಷಭ ರಾಶಿ: ಉದ್ಯಮದಿಂದ ಶ್ಲಾಘನೆ ಪ್ರಾಪ್ತಿ. ಮರೆತ ಕಾರ್ಯವನ್ನು ಪುನಃ ಕೈಗೆತ್ತಿಕೊಳ್ಳುವಿರಿ. ನಿರಾಧಾರದ ವಿಚಾರಗಳನ್ನು ನೀವು ಗಂಭೀರವಾಗಿ ಪರಿಗಣಿಸುವುದು ಬೇಡ. ಭಾವನಾತ್ಮಕ ಸಂಬಂಧಗಳಲ್ಲಿ ಜಗಳಗಳು ಸಾಧ್ಯ. ಇಂದು ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಲಿದೆ. ಪರಿವರ್ತನೆ ಸಕಾರಣಕ್ಕಾದರೆ ಉತ್ತಮ. ಕಚೇರಿಯಲ್ಲಿ ನಿಮಗೆ ಹೆಚ್ಚುವರಿ ಕೆಲಸದ ಜವಾಬ್ದಾರಿಗಳು ಸಿಗುತ್ತವೆ. ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ಹಣಕಾಸಿನ ವಿಷಯಗಳಲ್ಲಿ ನೀವು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಎಲ್ಲವೂ ನಿಮ್ಮ ಪರ ಎಂಬ ಭಾವ ಬೇಡ. ಸಕಾರಾತ್ಮಕ ಆಲೋಚನೆಯನ್ನು ನೀವು ಹೆಚ್ಚು ಮಾಡಿಕೊಳ್ಳುವಿರಿ. ಯಾರನ್ನೂ ಮೆಚ್ಚುವ ನಿಮ್ಮ ಗುಣವು ಶ್ಲಾಘ್ಯವೇ. ಬಂಧುಗಳ ಮನೆಯಲ್ಲಿ ನೀವು ಇಂದು ಅನಿರೀಕ್ಷಿತವಾಗಿ ಭೋಜನ ಮಾಡುವಿರಿ. ಪ್ರಾರಂಭಿಸಿದ ಕೆಲಸದಲ್ಲಿ ಉತ್ಸಾಹ ಹೆಚ್ಚಿದ್ದರೂ ಮಾರ್ಗದಲ್ಲಿ ಗೊಂದಲ ಎನಿಸಬಹುದು.
ಮಿಥುನ ರಾಶಿ: ಇಂದಾಗುವ ಯಾವುದೂ ಆಕಸ್ಮಿಕವಾಗಿರದು. ಉದ್ಯಮದಲ್ಲಿ ಉತ್ಸಾಹವು ಕಡಿಮೆ ಆಗಲಿದ್ದು, ಹೊಸ ತಂತ್ರವನ್ನು ರೂಪಿಸುವ ಸಾಧ್ಯತೆ ಇದೆ. ಸಮಯದ ಬಗ್ಗೆ ಗಾಂಭೀರ್ಯವು ಕಡಿಮೆ ಆಗುವುದು. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ಸಂಗಾತಿಯ ಜೊತೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಹೊಸ ಹೂಡಿಕೆ ಅವಕಾಶಗಳು ಲಭ್ಯವಾಗುತ್ತವೆ. ಪುಣ್ಯಸ್ಥಳಹಳ ಬಗ್ಗೆ ನಂಬಿಕೆ ಹೆಚ್ಚಾಗುವುದು. ನಿಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗಬಹುದು. ನಿಮ್ಮ ಸಾಮಾಜಿಕ ಕಾರ್ಯಕ್ಕೆ ಬೆಂಬಲವನ್ನು ಅಪೇಕ್ಷಿಸುವಿರಿ. ಮಕ್ಕಳ ಕಾಳಜಿಯು ಅತಿಯಾಗುವುದು. ನಿಮ್ಮ ಮಾತು ಸತ್ಯವಾಯಿತೆಂಬ ಸಂತೋಂಷವಿರುವುದು. ಖುಷಿಯಿಂದ ಮಾರ್ಗಗಳನ್ನು ಹುಡುಕುವಿರಿ. ಪ್ರಾಮಾಣಿಕತೆಯು ನಿಮಗೆ ಇಷ್ಟವಾದರೂ ಇದರಿಂದ ಪ್ರಯೋಜನವಿಲ್ಲ ಎಂದು ಅನ್ನಿಸುವುದು.
ಕರ್ಕಾಟಕ ರಾಶಿ: ಉದ್ವೇಗದಿಂದ ದೂರವಾಗಲು ಚಿಕಿತ್ಸೆ ಬೇಕಾದೀತು. ಸಂತಾನವನ್ನು ಅಪೇಕ್ಷಿಸಿ ಇದ್ದರೆ ನಿಮಗೆ ಶುಭಾವರ್ತೆ ಇರುವುದು. ವಾಸಸ್ಥಳದ ಬದಲಾವಣೆಯನ್ನು ಮಾಡುವಿರಿ. ಗೌಪ್ಯವಾಗಿ ಅಧಿಕಾರಿಗಳನ್ನು ಭೇಟಿ ಮಾಡುವಿರಿ. ಹೊಸ ಆದಾಯದ ಮಾರ್ಗಗಳು ಸಹ ತೆರೆದುಕೊಳ್ಳುತ್ತವೆ. ಇಂದು ನಿಮ್ಮ ಪ್ರೀತಿಪಾತ್ರರು ನಿಮ್ಮ ಜೊತೆ ಇರುತ್ತಾರೆ. ನಿಮಗೆ ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಸಿಗುತ್ತವೆ. ಮನೆಗೆ ಬೇಕಾಗದ ಖರ್ಚುಗಳನ್ನು ತಪ್ಪಿಸಿ. ಆಯಾಸವನ್ನು ತಪ್ಪಿಸಲು, ನಿಮ್ಮ ದೈನಂದಿನ ದಿನಚರಿಯಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳುವಿರಿ. ಕುಟುಂಬವರ ಜೊತೆ ಸಮಯವನ್ನು ಕಳೆಯುವುದು ಆಗದು. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು. ನಿಮಗೆ ಇಂದು ವಾದದಲ್ಲಿ ಸೋಲಾಗಬಹುದು. ಮುಗ್ಗರಿಸಿ ಬೀಳುವುದು ಬೇಡ. ನಡಿಗೆ ಸಾವಧಾನದಿಂದ ಇರಲಿ. ಇಂದು ಮೋಸದ ಕರೆಗಳಿಂದ ವಂಚನೆಯ ಜಾಲಕ್ಕೆ ಸಿಕ್ಕಿಕೊಳ್ಳಬಹುದು.
ಸಿಂಹ ರಾಶಿ: ಗೌಪ್ಯ ವಿಚಾರಗಳನ್ನು ನಿಮಗೆ ಅರಿವಿಲ್ಲದೆ ಹೊರಹಾಕುವಿರಿ. ಬಂಧುಗಳ ಬಗ್ಗೆ ಅಸಮಾಧಾನ ಇರುವುದು. ಅನುಪಯುಕ್ತ ವಸ್ತುಗಳಿಗೆ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ. ಇದು ನಿಮ್ಮನ್ನು ಆರ್ಥಿಕವಾಗಿ ಬಲಿಷ್ಠಗೊಳಿಸುತ್ತದೆ. ನಿಮ್ಮ ಬಗ್ಗೆ ನಿಮಗೇ ಪ್ರಶ್ನೆಗಳು ಮೂಡಬಹುದು. ಇಂದು ತಮ್ಮ ಮಾತನ್ನು ನಿಯಂತ್ರಿಸಬೇಕು ಮತ್ತು ನಿಂದನೀಯ ಪದಗಳನ್ನು ಬಳಸಬಾರದು. ಹಿರಿಯರಿಂದ ನಿಮಗೆ ಆಶೀರ್ವಾದ ಸಿಗುತ್ತದೆ. ಸಣ್ಣ ಭೂಮಿಯ ಖರೀದಿಸುವ ಸಾಧ್ಯತೆಗಳಿವೆ. ರಕ್ಷಣೆಯ ಸ್ಥಾನದಲ್ಲಿ ಇರುವವರಿಗೆ ಭಯವಿರುವುದು. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗುವುದು. ಪರರ ವಸ್ತುವನ್ನು ಅವರಿಗೆ ಹಿಂತಿರುಗಿಸಲು ನಿಮಗೆ ಆಗದೇ ಹೋಗುವುದು. ನಿದ್ರೆ ಇಲ್ಲದೇ ಇಂದಿನ ಎಲ್ಲ ಕಾರ್ಯವೂ ಅಸ್ತವ್ಯಸ್ತವಾಗುವುದು. ದಾಂಪತ್ಯದಲ್ಲಿ ಹೊಂದಾಣಿಕೆಗೆ ಇಬ್ಬರೂ ಪ್ರಯತ್ನಶೀಲರಾಗುವುದು ಉತ್ತಮ. ವಿದೇಶದಲ್ಲಿರುವ ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.
ಕನ್ಯಾ ರಾಶಿ: ಪೂರ್ಣಮನಸ್ಸಿಲ್ಲದೇ ಯಾವ ಒಪ್ಪಂದವನ್ನು ಮಾಡಿಕೊಳ್ಳುವುದು ಬೇಡ. ಚಾಲಕರು ಆದಾಯವನ್ನು ಹೆಚ್ಚಿಸಿಕೊಳ್ಳುವರು. ನಿರುದ್ಯೋಗದ ಚಿಂತೆ ದೂರವಾಗುವ ಲಕ್ಷಣವಿರಲಿದೆ. ರಾಜಕೀಯದಿಂದ ಅಂತರ ಕಾಯ್ದುಕೊಳ್ಳಿ. ಯಾವುದೇ ವಿವಾದಿತ ಮಾತುಗಳನ್ನಾಡಿ ಸಿಕ್ಕಿಕೊಳ್ಳಬೇಕಾದೀತು. ನಿಮ್ಮ ಎಲ್ಲಾ ಕೆಲಸಗಳಲ್ಲಿ ನೀವು ಸುಲಭವಾಗಿ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಖರ್ಚುಗಳ ಮೇಲೆ ನಿಗಾ ಇರಿಸಿ ಮತ್ತು ಅನುಪಯುಕ್ತ ವಸ್ತುಗಳಿಗೆ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ. ನಾಯಕತ್ವ ಸಿಕ್ಕಿ ಅದನ್ನು ನಿಭಾಯಿಸುವುದು ಕಷ್ಟ. ಸ್ತ್ರೀಯರಿಗೆ ಸಹಾಯ ಮಾಡಲು ಹೋಗಿ ನಗೆಗೀಡಾಗಬಹುದು. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು. ನಿಮ್ಮ ದಿವಸದ ವ್ಯವಸ್ಥೆಯನ್ನು ಕ್ರಮಬದ್ಧ ಮಾಡಿಕೊಳ್ಳಿ. ಮಾತಿನಿಂದ ಅಳೆದ ನಿಮ್ಮ ಮಾಪನವು ಸರಿಯಾಗದೇ ಇರುವುದು. ನಿಮ್ಮದೇ ಆದ ಸಂಸ್ಥೆಯನ್ನು ಆರಂಭಿಸಲು ಕೆಲವರನ್ನು ಸೇರಿಸಿಕೊಳ್ಳುವಿರಿ. ಮಾನಸಿಕ ಆಯಾಸದಿಂದ ನೀವು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಾಗಬಹುದು.