Weekly Horoscope: ವಾರ ಭವಿಷ್ಯ: ಜ 19 ರಿಂದ 26 ರವರೆಗೆ ವಾರ ಭವಿಷ್ಯ
ಇದು ಜನವರಿ ತಿಂಗಳ ನಾಲ್ಕನೇ ವಾರವಿದಾಗಿದೆ. ೧೯-೦೧೨೦೨೫ರಿಂದ ೨೬-೦೧-೨೦೨೫ರವರೆಗೆ ಇರಲಿದೆ. ಕುಜನ ಸ್ಥಾನ ಬದಲಾಗಿದೆ. ಸದ್ಯ ನೀಚದಲ್ಲಿರುವ ಕುಜನು ವಕ್ರನಾಗಿ ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಬಲಶಾಲಿಯಾದ ಕುಜನ ಅನುಗ್ರಹವನ್ನು ಪಡೆದರೆ ಅನೇಕ ಅಸಾಧ್ಯ ಕಾರ್ಯಗಳು ಸಾಧ್ಯವಾಗುತ್ತದೆ. ತಾಯಿಯ ಪ್ರೀತಿಯು ದೊರೆಯುವ ದಿನವಿಂದು.
ಇದು ಜನವರಿ ತಿಂಗಳ ನಾಲ್ಕನೇ ವಾರವಿದಾಗಿದೆ. ೧೯-೦೧೨೦೨೫ರಿಂದ ೨೬-೦೧-೨೦೨೫ರವರೆಗೆ ಇರಲಿದೆ. ಕುಜನ ಸ್ಥಾನ ಬದಲಾಗಿದೆ. ಸದ್ಯ ನೀಚದಲ್ಲಿರುವ ಕುಜನು ವಕ್ರನಾಗಿ ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಬಲಶಾಲಿಯಾದ ಕುಜನ ಅನುಗ್ರಹವನ್ನು ಪಡೆದರೆ ಅನೇಕ ಅಸಾಧ್ಯ ಕಾರ್ಯಗಳು ಸಾಧ್ಯವಾಗುತ್ತಬೆ.
ಮೇಷ ರಾಶಿ; ಇದು ಜನವರಿಯ ನಾಲ್ಕನೇ ವಾರವಾಗಿದ್ದು ರಾಶಿಯ ಅಧಿಪತಿ ತೃತೀಯದಲ್ಲಿ ಶನಿಯ ಅಂಶದಲ್ಲಿ ಇದ್ದು ಸ್ನೇಹದಲ್ಲಿ ಬಾಂಧವ್ಯ ಕೊಡಿಸವನು. ಸ್ನೇಹವು ಕೆಟ್ಟದ್ದು ಆಗಿರುವ ಸಾಧ್ಯತೆ ಹೆಚ್ಚು. ಕುಟುಂಬದಲ್ಲಿ ಪಿತ್ರಾರ್ಜಿತ ಆಸ್ತಿಯ ಮಾತುಕತೆಯಗಲಿದ್ದು ತಂದೆಗೆ ಚಿಂತೆಯು ಕಾಡಬಹುದಾಗಿದೆ. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಗೊಂದಲಗಳು ಬರಬಹುದು. ಹೆಚ್ಚಿನ ರಿಸ್ಕ್ ನ್ನು ತೆಗದುಕೊಳ್ಳಬೇಕಾಗಬಹುದು. ತಾಯಿಯ ಪ್ರೀತಿಯು ದೊರೆಯುವ ದಿನವಿಂದು. ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ. ಗುರುದೆಶೆಯವರಿಗೆ ಈಗ ಶುಭ ಕಾಲಸ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನವನ್ನು ಕೊಟ್ಟು ಪರೀಕ್ಷೆಗೆ ಸಿದ್ಧತೆಯನ್ನು ಮಾಡುವುದು ಉಚಿತ. ನಿರೀಕ್ಷಿತ ಮಟ್ಟವನ್ನು ತಲುಪಬಹುದು.
ವೃಷಭ ರಾಶಿ: ಜನವರಿಯ ನಾಲ್ಕನೇ ವಾರದಲ್ಲಿ ನಿಮಗೆ ರಾಶಿಯ ಅಧಿಪತಿ ಶನಿಯ ರಾಶಿಯಲ್ಲಿ ದಶಮದಲ್ಲಿ ಇದ್ದು ಕಲೆಗೆ ಹೆಚ್ಚು ಪ್ರಶಸ್ತ. ನೈಪುಣ್ಯತೆಗೆ ಒಳ್ಳೆಯ ಅವಕಾಶ. ಪ್ರಯಾಣವನ್ನು ಮಾಡಲು ಹೋಗಬೇಡಿ. ಅನಾರೋಗ್ಯ ಅಥವಾ ಅನಾಹುತವಾಗುವ ಸಾಧ್ಯತೆ ಇದೆ. ನೀವು ಹೇಳದೇ ಇರುವ ರಹಸ್ಯವನ್ನು ಇಂದು ನಿಮ್ಮಿಂದ ತಿಳಿಯಲಿದೆ. ಯಾರಿಗೂ ಉಪದೇಶವನ್ನು ಕೊಡಲು ಹೋಗಬೇಡಿ. ಬುಧನ ಅಂಶವನ್ನು ಪಡೆದು ಗುರುವು ಮಾತಿಗೆ ಅನನುಕೂಲನಾಗಿರುವನು. ಅಪಹಾಸ್ಯಕ್ಕೆ ಒಳಗಾಗಬೇಕಾಗಿ ಬರಬಹುದು. ಉನ್ನತವಾದ ಧ್ಯೇಯವೇ ನಿಮ್ಮ ಯಶಸ್ಸಿನ ಮೊದಲು ಮೆಟ್ಟಿಲು ಎನ್ನುವುದನ್ನು ತಿಳಿದಿದ್ದೀರಿ. ಕಲಹಕ್ಕೆ ದಾರಿಯನ್ನು ಮಾಡಿಕೊಡಬೇಡಿ. ಮಾತನಾಡುವಾಗ ಪದಗಳ ಮೇಲೆ ಜಾಗರೂಕತೆಯನ್ನು ಇರಿಸಿ. ಶಿವಪಾರ್ವತಿಯರ ಅರ್ಚನೆಯಿಂದ ಸುಖ.
ಮಿಥುನ ರಾಶಿ: ರಾಶಿಯ ಅಧಿಪತಿ ಜನವರಿಯ ನಾಲ್ಕನೇ ವಾರದಲ್ಲಿ ಶನಿಯ ಸ್ಥಾನದಲ್ಲಿ ಶನಿಯ ಜೊತೆ ಇರುವ ಕಾರಣ ಆರೋಗ್ಯದ ಬಗ್ಗೆ ಎಚ್ಚರಿಕೆ ಬೇಕು. ಯಾವುದೇ ಬಾಧೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನೀವು ಉದ್ಯೋಗದ ಸ್ಥಳದಲ್ಲಿ ಕಾರ್ಯದ ಒತ್ತಡದಿಂದ ಕಿರಿಕಿರಿಯು ಆಗಬಹುದಾಗಿದೆ. ಸಂಗಾತಿಯಿಂದ ಸಂಪತ್ತನ್ನು ಪಡೆದು ಖರೀದಿಗಳನ್ನು ಮಾಡಲಿದ್ದೀರಿ. ಸ್ನೇಹಿತರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ನಿಮ್ಮ ರಾಶಿಗೆ ಕುಜನ ಪ್ರವೇಶವಾಗಲಿದೆ. ಕುಜನ ಶತ್ರುಸ್ಥಾನದ ಕಾರಣ ಕೋಪವನ್ನು ಹೆಚ್ಚು ಮಸಡಿಸುವನು. ಧಾರ್ಮಿಕದತ್ತ ನಿಮ್ಮ ಮನಸ್ಸು ಒಲಿಯುವ ಸಾಧ್ಯತೆ ಇದ್ದು. ಹೆಚ್ಚು ಕಾಲ ದೇವತೋಪಾಸನೆಯಲ್ಲಿ ಕಾಲವನ್ನು ಕಳೆಯುವಿರಿ. ದೇವಾಲಯ, ಪವಿತ್ರ ನದಿಗಳ ದರ್ಶನ ಸ್ನಾನವನ್ನು ಮಾಡುವವರಿದ್ದೀರಿ. ವಿಷ್ಣು ಸಹಸ್ರನಾಮ ಪಠಿಸಿ.
ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರದಲ್ಲಿ ರಾಶಿಯ ಅಧಿಪತಿ ಕುಜನ ಹಾಗೂ ಶನಿ ಅಂಶದಲ್ಲಿ ಸಂಚರಿಸುವ ಕಾರಣ ಕೋಪ ತಾಪಗಳು ಕಾಣಿಸುವುದು. ಕೆಲವೊಮ್ಮೆ ಯಾವುದೂ ಬೇಡ ಎಂಬ ಭಾವವೂ ಬರಬಹುದು. ನಿಶ್ಚಿತ ಬುದ್ಧಿಯ ಕೊರತೆ ಇರಲಿದೆ. ಬೆನ್ನಿನಲ್ಲಿ ಆದ ಹುಣ್ಣು ನಿಮಗೆ ನೋವನ್ನು ಕೊಡುವಂತೆ ನಿಮ್ಮದೇ ಮಿತ್ರರು ಶತ್ರುಗಳಾಗಿ ನುಂಗಲೂ ಆಗದ ಉಗುಳಲೂ ಆಗದ ಸ್ಥಿತಿಯನ್ನು ಅನುಭವಿಸುವಿರಿ. ಯಂತ್ರೋಪಕರಣಗಳು ಕೆಟ್ಟುನಿಲ್ಲಬಹುದು. ನೀವಿಮು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿದರೆ ಉತ್ತಮವಾಗಲಿದೆ. ಆರೋಗ್ಯವನ್ನು ಹೆಚ್ಚಿಸುವ, ಚೆನ್ನಾಗಿಡುವ ಆಹಾರ, ಪಾನೀಯಗಳನ್ನು ಸೇವಿಸಿ. ಗೋವಿನ ಸಹವಾಸದಿಂದ ಮನಸ್ಸು ಸಾತ್ವಿಕರೂಪಕ್ಕೆ ಬರಲಿದೆ.
ಸಿಂಹ ರಾಶಿ; ಈ ವಾರದಲ್ಲಿ ರಾಶಿಯ ಅಧಿಪತಿ ಮಕರದಲ್ಲಿ ಇದ್ದು ಕುಜನ ಅಂಶವನ್ನು ಪಡೆದಿದ್ದಾನೆ. ಆತ ಷಷ್ಠದಲ್ಲಿ ಇದ್ದುದು ಒಳ್ಳೆಯದಲ್ಲದೇ ಇದ್ದರೂ ಕುಜನ ಕಾರಣಕ್ಕೆ ಶುಭ. ರಾಜಕಾರ್ಯ ಅಥವಾ ರಾಜಕೀಯದಲ್ಲಿ ಶ್ರಮದಿಂದ ಸ್ಥಾನವನ್ನು ಪಡೆಯುವಿರಿ. ಯಂತ್ರಗಳ ರಿಪೇರಿಯಿಂದಾಗಿ ಅಧಿಕ ಖರ್ಚುಗಳು ಆಗಬಹುದು. ಮಕ್ಕಳ ಬಗ್ಗೆ ಹೆಚ್ಚು ಕಾಳಜಿಯನ್ನು ಇರಿಸಿಕೊಳ್ಳುವುದು ಉತ್ತಮ. ಅಪರಿಚಿತರು ನಿಮ್ಮ ಸಹಾಯವನ್ನು ಕೇಳಿ ಬರಬಹುದು. ಸಹಾಯವನ್ನು ಮಾಡಿ ಸಮಯವನ್ನು ವ್ಯರ್ಥಮಾಡಬೇಡಿ. ಸ್ತ್ರೀಯರಿಂದ ಎಚ್ಚರಿಕೆಯ ಅವಶ್ಯಕತೆ ಇದೆ. ವೃತ್ತಿಯಿಂದ ನಿಮಗೆ ಬೇಸರವುಂಟಾಗಬಹುದು. ಯಾವುದೇ ನಿರ್ಧಾರಗಳನ್ನು ಇಂತಹ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಡಿ. ಹಣರ ಉಳಿತಾಯಕ್ಕೆ ದಾರಿಯನ್ನು ಕಂಡುಕೊಳ್ಳಲು ಬಯಸುವಿರಿ. ಮೃತ್ಯುಂಜಯನ ಸ್ತೋತ್ರದಿಂದ ಶತ್ರು ಬಲ ಕಡಿಮೆ ಆಗುವುದು.
ಕನ್ಯಾ ರಾಶಿ: ಈ ತಿಂಗಳ ನಾಲ್ಕನೇ ವಾರ ರಾಶಿಯ ಅಧಿಪತಿ ಷಷ್ಠದಲ್ಲಿ ಇದ್ದು ಶನಿಯ ಅಂಶವನ್ನು ಪಡೆದಿದ್ದಾನೆ. ವಾತ ಸಂಬಂಧಿ ರೋಗ ಕಾಣಿಸುವುದು. ನೋವುಗಳು ಹೆಚ್ಚು ಕಾಣಿಸುವುದು. ನಿದ್ರೆಯು ಸರಿಯಾಗಿ ಆಗದೆ ಮನಸ್ಸು ಉತ್ಸಾಹವನ್ನು ತೋರಿಸುವುದಿಲ್ಲ. ಆಲಸ್ಯವನ್ನು ಇಂದು ಮೈಗೂಡಿಸಿಕೊಂಡಿರುತ್ತೀರಿ. ವಿದ್ಯಾರ್ಥಿಗಳು ಶಿಕ್ಷಕರಿಂದ ಉಪದೇಶವನ್ನು ಪಡೆಯುವರು. ಸಮಾಜಸೇವೆಗೆ ನಿಮ್ಮನ್ನು ತೊಡಗಿಸಿಕೊಳ್ಳುವ ಹಂಬಲದಲ್ಲಿ ಇರುತ್ತೀರಿ. ಮಾಡುತ್ತಿರುವ ವೃತ್ತಿಯ ಬಗ್ಗೆ ಭಯವಾಗಲಿದೆ. ವೈದ್ಯರ ಸಲಹೆಯನ್ನು ನಿರಾಕರಿಸದೇ ಹಾಗೆಯೇ ನಡೆದುಕೊಳ್ಳಿ. ಬೆಟ್ಟ ಗುಡ್ಡಗಳನ್ನು ಏರುವ ಸಾಹಸಕ್ಕೆ ಹೋಗಬೇಡಿ. ಬಿದ್ದು ಪೆಟ್ಟು ಮಾಡಿಕೊಳ್ಳಬಹುದು. ಎಂದೋ ಖರೀದಿಸಿದ ವಸ್ತುವಿನ ಬಳಕೆಯು ಇಂದಾಗಲಿದೆ. ಶ್ರೀರಾಮನ ಅಭಯಮಂತ್ರವನ್ನು ಪಠಿಸಿ.
ತುಲಾ ರಾಶಿ: ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ವಾರ ರಾಶಿಯ ಅಧಿಪತಿ ಚತುರ್ಥದಲ್ಲಿ ಇದ್ದು ಕುಟುಂಬಸೌಖ್ಯವನ್ನು ನೋಡಿಕೊಳ್ಳುವನು. ತಾಯಿಯ ಬಗ್ಗೆ ಹೆಚ್ಚು ಒಲವು ಬರುವುದು. ಬಂಗಾರದ ವ್ಯಾಪಾರಿಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ನೌಕರಸ್ಥರು ಇಂದು ಒತ್ತಡಗಳು ಇಲ್ಲದೇ ನಿಶ್ಚಿಂತೆಯಿಂದ ಕೆಲಸವನ್ನು ಮಾಡುವಿರಿ. ವೈದ್ಯರು ರೋಗಿಯ ತಪಾಸಣೆಯಲ್ಲಿ ಜಾಗರೂಕರಾಗಿರಿ. ಸಣ್ಣ ಅನಾಹುತವೂ ನಿಮ್ಮ ವೃತ್ತಿಗೆ ಕಂಟಕವಾದೀತು. ತಾಯಿಯ ಕಡೆಯವರಿಂದ ಪ್ರೋತ್ಸಾಹ ಸಿಗದು. ಯಾರ ಮಾತಿಗೂ ಎದುರಾಡದೇ ಒಪ್ಪಿಕೊಳ್ಳಿ. ನಿಮ್ಮ ಸ್ವಂತ ಆಲೋಚನೆಗಳಿಂದ ಮಾಡಬೇಕಾದುದನ್ನು ಮಾಡಿಕೊಳ್ಳಿ. ಹೊರಗಿನ ಆಹಾರವು ನಿಮಗೆ ದೀರ್ಘಕಾಲದ ಅನಾರೋಗ್ಯವನ್ನು ತಂದೊಡ್ಡಬಹುದು. ಲಕ್ಷ್ಮೀನಾರಾಯಣರ ಉಪಾಸನೆಯಿಂದ ಸಮಾಧಾನ.
ವೃಶ್ಚಿಕ ರಾಶಿ: ಈ ತಿಂಗಳ ನಾಲ್ಕನೇ ವಾರದಲ್ಲಿ ರಾಶಿಯ ಅಧಿಪತಿ ಸ್ಥಾನವನ್ನು ಬದಲಿಸಿ ಬುಧನ ಸ್ಥಾನಕ್ಕೆ ಹೋಗಿದ್ದಾನೆ. ಬಂಧುದ್ವೇಷ ಅಥವಾ ಬಂಧುಗಳಿಂದ ನೋವಿನ ಮಾತುಗಳೂ ಕೇಳಿಸವುದು. ಯಾರ ಬಲವನ್ನೂ ತಪ್ಪಾಗಿ ಗ್ರಹಿಸಿಬೇಡಿ. ರೂಪಕ್ಕೆ ತಕ್ಕಂತೆ ಸ್ವರೂಪವಿರುವುದಿಲ್ಲ ಎನ್ನುವ ಮಾತನ್ನು ನೆನಪಿಸಿಕೊಳ್ಳುತ್ತ ಇರಿ. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಬೇಡಿ. ಈ ವಾರ ಶತ್ರುಗಳ ಪೀಡೆಯಿಂದ ಮುಕ್ತಿ ಕಷ್ಟವಾದೀತು. ನಿಮ್ಮನ್ನು ಅನ್ಯರಂತೆ ಕಂಡಾರು. ಹಿರಿಯ ಜೊತೆ ಕುಳಿತು ಅನುಭವವನ್ನು ಕೇಳಿ ಪಡೆಯಿರಿ. ದಾಂಪತ್ಯದಲ್ಲಿ ಬಿರುಸಿನ ಮಾತುಗಳು ಕೇಳಿಬರಬಹುದು. ಎಂದೋ ಸಾಂದರ್ಭಿಕವಾಗಿ ಆಡಿದ ಮಾತು ನಿಮಗೆ ಮುಳ್ಳಾದೀತು. ಓಡಾಟವನ್ನು ಕಡಿಮೆ ಮಾಡಿ ವಿಶ್ರಾಂತಿಯ ಕಡೆಗೆ ಗಮನಹರಿಸಿ. ಸುಬ್ರಹ್ಮಣನನ್ನು ಭಕ್ತಿಯಿಂದ ಧ್ಯಾನಿಸಿದರೆ ಶತ್ರು ಸಂಹಾರಕನಾಗುವನು.
ಧನು ರಾಶಿ: ರಾಶಿಯ ಅಧಿಕಾರ ಗುರು ಈ ವಾರ ಷಷ್ಠದಲ್ಲಿ ಇದ್ದು ಸಂಗಾತಿಯಿಂದ ಕಿರಿಕಿರಿ, ಉದ್ಯೋಗದಲ್ಲಿಯೂ ನೆಮ್ಮದಿ ಇರದೇ ಮನಸ್ಸು ದುರ್ಬಲವಾಗುವುದು. ಹಿರಿಯರಿಂದ ಬಲ್ಲವರಿಂದ ಅಪಮಾನವಾಗಲಿದೆ. ನಿಮ್ಮ ಮಾತುಕತೆಗಳಿಂದ ನೀವಿನ್ನೂ ಬಹಳ ತಿಳಿದುಕೊಳ್ಳಬೇಕು ಎಂದನ್ನಿಸುವುದು. ಎಲ್ಲರೂ ವಿದ್ಯಾವಂತೆ ತೋರಿ ನಿಮಗೇ ನಿಮ್ಮ ಮೇಲೆ ಅಶಿಕ್ಷಿತ ಭಾವನೆ ಬರಲಿದೆ. ಕುಟುಂಬದಿಂದ ನಿಮಗೆ ಅಲ್ಪ ಧನಸಹಾಯವಾಗಲಿದೆ. ಯಾರದೋ ಸಿಟ್ಟನ್ನು ಮಕ್ಕಳ ಮೇಲೆ ತೀರಿಕೊಂಡು ಪಶ್ಚಾತ್ತಾಪವನ್ನು ಅನುಭವಿಸುವಿರಿ. ನಿಮ್ಮವರೇ ನಿಮಗೆ ಶತ್ರುಗಳಂತೆ ಕಂಡಾರು. ತಂದೆಯೊಂದಿಗೆ ಕಲಹವೂ ನಡೆದು ಬಿಡುವುದು. ಪೂರ್ವಕೃತ್ಯಗಳು ನಿಮಗೆ ನೆನಪಾಗಲಿದೆ. ಗುರುಚರಿತ್ರೆಯನ್ನು ಪಠಿಸುವುದು ಮುಖ್ಯವಾಗಿರಲಿ.
ಮಕರ ರಾಶಿ: ಇದು ಜನವರಿಯ ನಾಲ್ಕನೇ ವಾರವಾಗಿದ್ದು ರಾಶಿಯ ಅಧಿಪತಿ ದ್ವಿತೀಯದಲ್ಲಿ ಇರುವ ಕಾರಣ ಆರ್ಥಿಕತೆ ಚೆನ್ನಾಗಿ ಇರುವುದು. ಪರಿಶ್ರಮದ ಕಾರ್ಯಕ್ಕೆ ಹೆಚ್ಚು ಒತ್ತು ಬೇಕು. ನಿಮ್ಮವರೇ ನಿಮಗೆ ವಂಚನೆಯ ಸಂಚನ್ನು ಹಾಕುವರು. ನೀವೇ ಮಾಡಿಕೊಂಡ ತಪ್ಪಿನಿಂದ ನಿಮಗೆ ಬೀಳುವ ಸಾಧ್ಯತೆ ಇದೆ. ಉದ್ಯೋಗದ ನಿಮಿತ್ತ ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಶನಿದಶೆಯುಳ್ಳವರಿಗೆ ಶನಿಯು ಉತ್ಯಮಸ್ಥಾನದಲ್ಲಿ ಇದ್ದರೆ ಲಾಭವಿದೆ. ಹೋರಾಟಕ್ಕೂ ಜಯಸಿಗಲಿದೆ. ಕೆಲಸಗಳನ್ನು ಮಾಡುವ ಉತ್ಸಾಹದಲ್ಲಿ ಇರುತ್ತೀರಿ. ಉದ್ಯೋಗದ ಅನ್ವೇಷಣೆಯನ್ನು ಮಾಡುತ್ತಿರುವವರಿಗೆ ಉದ್ಯೋಗವು ಪ್ರಾಪ್ತವಾಗುವುದು. ನೂತನ ಗೃಹಪ್ರವೇಶ ಕಾರ್ಯಕ್ರಮವು ನೆರವೇರಲಿದೆ. ಹೊಸದಾದ ವಸ್ತುವೊಂದನ್ನು ಖರೀದಿಸುವಿರಿ. ಧನ್ವಂತರಿಯ ಮಂತ್ರವನ್ನು ಪ್ರಾತಃಕಾಲದಲ್ಲಿ ಪಠಿಸಿ.
ಕುಂಭ ರಾಶಿ: ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ರಾಶಿಯ ಅಧಿಪತಿಯಿಂದ ಶುಭ. ಕುಜನ ಅಂಶವನ್ನು ಪಡೆದು ಮನೋಬಲವನ್ನು ನೀಡುವನು. ಮುಂದಾಲೋಚನೆಯ ಫಲವಾಗಿ ನೀವು ಧನವನ್ನು ಹೊಂದಿದ್ದೀರಿ. ಸ್ನೇಹಿತರ ವಿಯೋಗವಾಗುವ ಸಾಧ್ಯತೆ ಇದೆ. ನಿಮ್ಮ ಮಾತುಗಳು ಪ್ರೀತಿಸಿದವರ ಹೃದಯಕ್ಕೆ ನಾಟಿ ಅವರೂ ದೂರಾಗುವರು. ಪಂಚಮದಲ್ಲಿ ಅಶುಭಗ್ರಹರಿರುವುದರಿಂದ ವಿದ್ಯಾಭ್ಯಾಸಕ್ಕೆ ವಿಘ್ನ ಬರಲಿದೆ. ಬೇಸರವನ್ನು ಹೆಚ್ಚು ಮಾಡಿಕೊಳ್ಳುವ ಸನ್ನಿವೇಶವನ್ನು ಎದುರು ಹಾಕಿಳ್ಳಬೇಡಿ. ನಿಮ್ಮ ಸತ್ಕಾರ್ಯವು ನಿಮ್ಮನ್ನು ಕೈ ಬಿಡದು. ಒಳ್ಳೆಯವರ ಸಹವಾಸವನ್ನು ಮಾಡಿದ್ದಕ್ಕೆ ಒಳ್ಳೆಯ ಸ್ಥಿತಿಯು ಬರಲಿದೆ. ಕಛೇರಿಯ ಕೆಲಸ ಸಲೀಸಾಗಿ ಮುಕ್ತಾಯವಗುವುದು. ಕುಜ ದಶೆ ನಡೆಯುತ್ತಿರುವವರಿಗೆ ಸುಬ್ರಹ್ಮಣ್ಯನ ಸ್ತೋತ್ರ ಉತ್ತಮ.
ಮೀನ ರಾಶಿ: ಜನವರಿಯ ನಾಲ್ಕನೇ ವಾರದಲ್ಲಿ ರಾಶಿಯ ಅಧಿಪತಿ ತೃತೀಯದಲ್ಲಿ ಬುಧನ ಅಂಶವನ್ನು ಪಡೆದಿರುತ್ತಾನೆ. ಸಾಹೋದರ್ಯದಲ್ಲಿ ವ್ಯತ್ಯಯ ಕಾಣಿಸದರೂ ಹಿರಿಯರು ಅದನ್ನು ಸರಿದೂಗೀಸಬೇಕಾಗುವುದು. ಈ ವಾರ ಒತ್ತಡದಲ್ಲಿ ಆರಂಭವಾದರೂ ಮುಕ್ತಾಯಕ್ಕೆ ಪ್ರಶಾಂತಮನಸ್ಕರಾಗಿ ಇರುವಿರಿ. ನೀರಿನ ಉತ್ಪನ್ನದ ವ್ಯಾಪರಿಗಳಿಗೆ ಲಾಭವು ಸಿಗಲಿದೆ. ನಿಮ್ಮ ಪ್ರತಿಭೆಗೆ ತಕ್ಕುದಾದ ಸಮ್ಮಾನವು ಸಿಗಲಿದೆ. ಕುಜನ ಸ್ಥಾನ ಬದಲಾವಣೆಯಿಂದ ಸುಖದಲ್ಲಿ ಅಪೂರ್ಣತೆ ಇರಲಿದೆ. ಹಣವನ್ನು ಉಳಿಸಲು ಬೇಕಾದ ಹೂಡಿಕೆ ಮುಂತಾದ ಯೋಜನೆಗಳನ್ನು ಆರಂಭಿಸುವ ಮನಸ್ಸು ಮಾಡುವಿರಿ. ವಿವಾದಗಳನ್ನು ಛಲದಿಂದ ಗೆಲ್ಲಬೇಕಾಗುವುದು. ರಾಮರಕ್ಷೆಯನ್ನು ಧರಿಸಿ.
ಲೋಹಿತ ಹೆಬ್ಬಾರ್ – 8762924271 (what’s app only)