ಕುಂಭಮೇಳ ಕಾಲ್ತುಳಿತ: ಮನೆಯೊಡತಿ ಸಾವಿನ ಸುದ್ದಿ ತಿಳಿದು ಅನ್ನ, ನೀರು ಬಿಟ್ಟು ಸಾಕು ನಾಯಿಯ ಮೂಕರೋಧನೆ

ಕುಂಭಮೇಳ ಕಾಲ್ತುಳಿತ: ಮನೆಯೊಡತಿ ಸಾವಿನ ಸುದ್ದಿ ತಿಳಿದು ಅನ್ನ, ನೀರು ಬಿಟ್ಟು ಸಾಕು ನಾಯಿಯ ಮೂಕರೋಧನೆ

Sahadev Mane
| Updated By: ವಿವೇಕ ಬಿರಾದಾರ

Updated on:Jan 31, 2025 | 11:52 AM

ಪ್ರಯಾಗರಾಜ್‌ನ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ಜ್ಯೋತಿ ಹತ್ತರವಾಠ ಮತ್ತು ಅವರ ಪುತ್ರಿ ಮೇಘಾ ಮೃತಪಟ್ಟಿದ್ದಾರೆ. ಮನೆಯ ನಾಯಿ ಸನ್ನಿ ತನ್ನ ಒಡತಿಯ ಸಾವಿಗೆ ಕಣ್ಣೀರು ಹಾಕಿದ್ದು, ಆಹಾರವನ್ನೂ ತ್ಯಜಿಸಿದೆ. ಈ ದುರಂತದಿಂದಾಗಿ ಉಂಟಾದ ನಾಯಿಯ ಮೂಕ ರೋಧನೆ ಅನೇಕರ ಹೃದಯವನ್ನು ಚುಚ್ಚಿದೆ.

ಬೆಳಗಾವಿ, ಜನವರಿ 31: ಪ್ರಯಾಗ್‌ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ. ಕಾಲ್ತುಳಿತದಲ್ಲಿ ಮೃತಪಟ್ಟಿರುವ ಬೆಳಗಾವಿಯ ವಡಗಾವಿ ನಗರದ ಜ್ಯೋತಿ ಹತ್ತರವಾಠ ಮತ್ತು ಇವರ ಪುತ್ರಿ ಮೇಘಾ ಮೃತಪಟ್ಟಿದ್ದಾರೆ. ಮನೆಯೊಡತಿಯ ಸಾವಿನ ಸುದ್ದಿ ತಿಳಿದು ಸಾಕು ನಾಯಿ ಸನ್ನಿ ಕಣ್ಣೀರು ಹಾಕಿತು. ತನ್ನ ಒಡತಿಗೆ ಸನ್ನು ಅಂತಿಮ‌ ನಮನ ಸಲ್ಲಿಸಿತು. ಮೇಘಾ ಹಾಗೂ ಜ್ಯೋತಿ ಹತ್ತರವಾಠ ಸಾವಿನ‌ ಸುದ್ದಿ ತಿಳಿಯುತ್ತಿದ್ದಂತೆ ಶ್ವಾನ ಆಹಾರ ತ್ಯಜಿಸಿದೆ. ಮೇಘಾ ಮತ್ತು ಜ್ಯೋತಿ ಪ್ರಯಾಗರಾಜ್ ಹೋದಾಗಿಂದಲೂ ಶ್ವಾನ ಸನ್ನಿ ಸಪ್ಪೆಯಾಗಿತ್ತು. ಶ್ವಾನ ಸನ್ನಿ ಮೂಕರೋಧನೆ ಮನಕಲಕುವಂತಿದೆ.

Published on: Jan 31, 2025 10:11 AM