ಯಾರ ಮೇಲೂ ನಮ್ಮ ನಂಬಿಕೆಯನ್ನು ಹೇರಲಾಗಲ್ಲ, ಅದು ವೈಯಕ್ತಿಕವಾದದ್ದು: ಯತೀಂದ್ರ ಸಿದ್ದರಾಮಯ್ಯ
ನಾಸ್ತಿಕತೆ ಹಿಂದೂ ವಿರೋಧಿಯಲ್ಲ, ಮನೆಯಲ್ಲಿ ತಾನು ದೇವರನ್ನು ನಂಬಿದರೆ ತಂದೆ ಸಿದ್ದರಾಮಯ್ಯನವರು ನಂಬಲ್ಲ, ಹಿಂದೂ ಧರ್ಮದಲ್ಲಿ ಹಲವಾರು ನಂಬಿಕೆ ಮತ್ತು ಆಚರಣೆಗಳಿವೆ, ನಾಸ್ತಿಕತೆಯೂ ಹಿಂದೂ ಧರ್ಮದ ಭಾಗವಾಗಿದೆ, ನಾಸ್ತಿಕರು ಹಿಂದೂ ವಿರೋಧಿಗಳಲ್ಲ, ಎಲ್ಲ ಧರ್ಮಗಳಲ್ಲಿರುವ ಮೂಢನಂಬಿಕೆಗಳನ್ನು ಅವರು ಟೀಕೆ ಮಾಡುತ್ತಾರೆ ಎಂದು ಯತೀಂದ್ರ ಹೇಳಿದರು.
ಮೈಸೂರು: ಕುಂಭಮೇಳದಲ್ಲಿ ಯಾರಿಗೆ ನಂಬಿಕೆ ಇರುತ್ತೋ ಅವರು ಅಲ್ಲಿಗೆ ಹೋಗಿ ಪುಣ್ಯಸ್ನಾನ ಮಾಡುತ್ತಾರೆ, ನಂಬಿಕೆ ಇಲ್ಲದವರು ಹೋಗಲ್ಲ, ಈ ವಿಷಯ ವೈಯಕ್ತಿಕವಾದದ್ದು, ಯಾರ ಮೇಲೂ ನಮ್ಮ ಅಭಿಪ್ರಾಯವನ್ನು ಹೇರಲಾಗಲ್ಲ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಬಡತನ ನೀಗಲ್ಲ ಎಂದಿದ್ದಾರೆ, ಅದು ಅವರ ಅಭಿಪ್ರಾಯ ಮತ್ತು ಎಲ್ಲರೂ ಅದನ್ನು ಗೌರವಿಸಬೇಕು, ಹಾಗೆಯೇ ಕೋಟಿಗಟ್ಟಲೆ ಹಿಂದೂಗಳು ತಮಗೆ ಒಳ್ಳೆಯದಾಗುತ್ತೆ ಅಂತ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ, ಅವರ ಭಾವನೆಗಳನ್ನೂ ನಾವು ಗೌರವಿಸಬೇಕು ಎಂದು ಯತೀಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಶೃಂಗೇರಿ ಶ್ರೀಗಳು
Latest Videos