Horoscope Today 31 January 2025: ಬೇಕೆಂದುಕೊಂಡವರೇ ನಿಮ್ಮಿಂದ ಅನಿರೀಕ್ಷಿತವಾಗಿ ದೂರಾಗುವರು
ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ತೃತೀಯಾ ತಿಥಿ, ಪೂರ್ವಾಭಾದ್ರ ನಿತ್ಯನಕ್ಷತ್ರದಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ, ವ್ಯಾಪಾರದಲ್ಲಿ ಲಾಭ, ಆರೋಗ್ಯದಲ್ಲಿ ಸುಧಾರಣೆ, ದುರಭ್ಯಾಸ, ಆರ್ಥಿಕ ಲಾಭ, ಅಸೂಯೆ ಸಂಗಾತಿಯನ್ನು ಅನುನಯಿಸುವ ವಿಚಾರ, ವಿವಾದಗಳಿಂದ ದೂರವಿರಿ. ಎಲ್ಲರಿಗೂ ಮಂಗಳವಾಗಲಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ತೃತೀಯಾ ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ವರಿಯಾನ್, ಕರಣ : ಕೌಲವ, ಸೂರ್ಯೋದಯ – 07 – 02 am, ಸೂರ್ಯಾಸ್ತ – 06 – 30 pm, ಇಂದಿನ ಶುಭಾಶುಭಕಾಲ : ರಾಹು ಕಾಲ 11:20 – 12:46, ಮಘಂಡ ಕಾಲ 15:38 – 17:04, ಗುಳಿಕ ಕಾಲ08:28 – 09:54
ಮೇಷ ರಾಶಿ: ಅನಿರಿಕ್ಷಿತವಾಗಿ ಬರುವ ಸಾಲವನ್ನು ನಿಮ್ಮ ಭಾರವನ್ನು ಅಧಿಕಗೊಳಿಸುವುವು. ಅದನ್ನು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನೂ ಹುಡುಕಾಗುವುದು. ಇದರಿಂದ ನೀವು ಮನಸ್ಸಿನಲ್ಲಿ ಚಂಚಲತೆಯನ್ನು ಅನುಭವಿಸಬಹುದು. ಅಜ್ಞಾತ ಭಯವು ಕಾಡುವುದು. ನಿಮ್ಮ ದೈನಂದಿನ ದಿನಚರಿಯಿಂದ ವಿರಾಮವನ್ನು ಅಪೇಕ್ಷಿಸುವಿರಿ. ಯಾವುದರ ಬಗ್ಗೆಯೂ ಹೆಚ್ಚು ಯೋಚಿಸಬೇಡಿ. ನಿಮ್ಮರೊಂದಿಗೆ ಸಮಯ ಕಳೆಯಿರಿ ಮತ್ತು ನಿಮ್ಮ ಮನಸ್ಸಿನಲ್ಲಿರುವ ವಿಷಯಗಳ ಬಗ್ಗೆ ದೃಢತೆ ಇರಲಿ. ಪರರ ಅಸಭ್ಯವರ್ತನೆಯು ನಿಮಗೆ ಇಷ್ಟವಾಗದು. ಒಂದೇ ವಿಚಾರದ ಬಗ್ಗೆ ಹೆಚ್ಚು ಹೊತ್ತು ಚಿಂತಿಸಿದರೆ ಕ್ಲಿಷ್ಟವಾಗಬಹುದು. ದುರಭ್ಯಾಸವನ್ನು ಬೆಳೆಸಿಕೊಳ್ಳುವುದು ಬೇಡ. ಸಂಗಾತಿಯ ಬೆಂಬಲವಿಲ್ಲದ ಕಾರ್ಯವನ್ನು ಇಂದು ಮಾಡುವಿರಿ. ಆಕಸ್ಮಿಕವಾಗಿ ಆರ್ಥಿಕಲಾಭವಿದ್ದರೂ ಸಂತೋಷವಾಗದು. ಸಂತೋಷವನ್ನು ಹೇಳಿಕೊಳ್ಳಲು ನಿಮ್ಮ ಜೊತೆ ಯಾರೂ ಇಲ್ಲವೆನಿಸುವುದು. ಇಂದು ನೀವು ಬೇಡವೆಂದು ಬಿಟ್ಟ ವಸ್ತುವನ್ನು ಪುನಃ ಬಳಸಬೇಕಾಗುವುದು.
ವೃಷಭ ರಾಶಿ: ಅಸೂಯೆಯಿಂದ ತಾತ್ಕಾಲಿಕ ಸಂತೋಷ ಸಿಕ್ಕರೂ ಮುಂದೆ ನಮ್ಮ ಕಾಲ್ಬುಡಕ್ಕೇ ಬರಲಿದಡ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಹೊಸ ಕಾರ್ಯಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿರಿ. ಇದು ವೃತ್ತಿಜೀವನದ ಪ್ರಗತಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ವೃತ್ತಿಯ ಬಗ್ಗೆ ಅತಿಯಾದ ಆಸಕ್ತಿ ಇದ್ದು ಅಪಾಯವನ್ನೂ ತಂದುಕೊಳ್ಳುವ ಸಾಧ್ಯತೆ ಇದೆ. ಸುಖವಾದ ಜೀವನಕ್ಕೆ ಅನ್ಯರು ಮಾದರಿಯಾಗುವರು. ಅಪರಿಚಿತರಿಗೆ ನಿಮ್ಮ ವಾಹನವನ್ನು ಕೊಟ್ಟು ಕೆಡಿಸಿಕೊಳ್ಳುವಿರಿ. ದೂರಪ್ರಯಾಣವನ್ನು ಮಾಡಲು ಮನಸ್ಸು ಒಪ್ಪದು. ಮಾತನಾಡುವಾಗ ಸಮಯಪ್ರಜ್ಞೆ ಇರಲಿ. ನಿಮ್ಮ ಆತಂಕವನ್ನು ನೀವು ಆಪ್ತರ ಜೊತೆ ಹೇಳಿಕೊಳ್ಳಿ. ಇಂದು ಯಾರದೋ ಪ್ರೇರಣೆಯಿಂದ ನಿಮ್ಮ ಬದುಕು ಬದಲಾವಣೆಯ ಕಡೆ ಹೋಗಲಿದೆ. ಪ್ರೀತಿಯು ಸಿಗದೇ ಮೀನಿನಂತೆ ಒದ್ದಾಡುವಿರಿ. ಅತಿಯಾದ ಸಂತೋಷದಿಂದ ದುಃಖವನ್ನುವ ಅಭಿಪ್ರಾಯ ನಿಮ್ಮದು.
ಮಿಥುನ ರಾಶಿ: ಇಂದು ಬರುವ ಅನುಕೂಲಕರ ವಾತಾವರಣವನ್ನು ಮೂರ್ಖತನದಿಂದ ಹಾಳುಮಾಡಿಕೊಳ್ಳುವಿರಿ. ಆರೋಗ್ಯವು ಪೂರ್ಣವಾಗಿ ಸರಿಯಾಗದು. ಆಯಾಸವನ್ನು ನಿಯಂತ್ರಿಸಲಾಗಾದೇ ವಿಶ್ರಾಂತಿ ತೆಗೆದುಕೊಳ್ಳಿ. ಸಂತೋಷದಿಂದ ಎಲ್ಲರ ಜೊತೆ ಸಮಯ ಕಳೆಯಿರಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಆಪ್ತರ ಸಲಹೆ ಪಡೆಯಬೇಕಾಗುವುದು. ಹೊಸ ಬದಲಾವಣೆಗಳಿಗೆ ಎಂದಿಗೂ ತಯಾರಿರಲಾರಿರಿ. ಸವಾಲುಗಳಿಂದ ಒತ್ತಡವನ್ನು ತೆಗೆದುಕೊಳ್ಳುವ ಬದಲು, ಸಮಸ್ಯೆಗೆ ಪರಿಹಾರಗಳನ್ನು ಹುಡುಕುವತ್ತ ಗಮನಹರಿಸಿ. ಕಲಾವಿದರು ಅತಿಯಾದ ನಿರೀಕ್ಷೆಯಿಂದ ಬೇಸರವನ್ನು ತಂದುಕೊಳ್ಳುವರು. ನಿಮ್ಮ ಮಹತ್ತ್ವಾಕಾಂಕ್ಷೆಗೆ ಯಾರೂ ಅಡ್ಡಬರಲಾರರು. ಅಪರಿಚಿತರ ಸಲಹೆಗಳು ನಿಮಗೆ ಯೋಗ್ಯವೆನಿಸಬಹುದು. ಸಂಗಾತಿಯನ್ನು ನೋಡುವ ದೃಷ್ಟಿಯು ಬದಲಾದೀತು. ನೀವಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳಲು ನಿಮ್ಮವರು ಕಷ್ಟಪಟ್ಟಾರು. ಆದಾಯದ ನಿಯಮವನ್ನು ಮೀರುವುದು ಬೇಡ.
ಕರ್ಕಾಟಕ ರಾಶಿ: ಪ್ರೀತಿಯಿಂದ ಆಹ್ವಾನವಿತ್ತರೂ ಎಲ್ಲಿಗೂ ಹೊಇಗದೇ ಮನೆಯಲ್ಲಿಯೇ ಇರಬೇಕೆಂದು ಅನ್ನಿಸುವುದು. ನೀವು ವಹಿಸಿಕೊಂಡ ಕಾಮಗಾರಿಗಳನ್ನು ಮುಂದೂಡುವುದು ಉತ್ತಮ. ನಿಷ್ಪ್ರಯೋಜಕ ವಸ್ತುಗಳನ್ನು ನೀವು ಮಾರಾಟ ಮಾಡಿ ಅದನ್ನು ಭವಿಷ್ಯಕ್ಕೆಂದು ತೆಗೆದಿಡುವಿರಿ. ಆರ್ಥಿಕ ಕಚೇರಿಯಲ್ಲಿ ಬಿಡುವಿಲ್ಲದ ಕೆಲಸ ಇರುತ್ತದೆ. ನೀವು ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯುತ್ತೀರಿ. ಗ್ರಾಹಕರು ಅತೃಪ್ತರಾಗಿದ್ದರೆ, ಕೆಲವು ಕೆಲಸವನ್ನು ಮತ್ತೆ ಮಾಡಬೇಕಾಗಬಹುದು. ಒತ್ತಡವನ್ನು ತಪ್ಪಿಸಿ, ನಿಮ್ಮ ಪ್ರೀತಿಪಾತ್ರರ ಜೊತೆ ಅಲ್ಪ ಸಮಯವನ್ನು ಕಳೆಯಿರಿ. ಇದರಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ. ಇಂದು ಮನೆಯ ಸ್ವಚ್ಛತೆಯ ಕಡೆ ಗಮನ ಇರಲಿದೆ. ಉದ್ಯೋಗದ ನಿಮಿತ್ತ ಸುತ್ತಾಡುವುದರಿಂದ ಅನಾರೋಗ್ಯಕ್ಕೆ ಕಾರಣವಾಗಬಹುದು. ಬಂಧುಗಳಲ್ಲಿ ನಿಮ್ಮ ಬಗ್ಗೆ ಇರುವ ಅಭಿಪ್ರಾಯವು ಬದಲಾಗುವ ಸಂಭವವಿದೆ. ಅಧಿಕ ಒತ್ತಡವು ನಿಮ್ಮ ಕಾರ್ಯಕ್ಕೆ ಭಂಗ ತರಬಹುದು. ಯಾರ ವಸ್ತುಗಳನ್ನು ಬಳಸಿದರೂ ಮತ್ತೆ ಮರಳಿಸಿ.
ಸಿಂಹ ರಾಶಿ: ಇಂದು ಆಪ್ತರ ಸಲಹೆಯಿಂದ ಉದ್ಯೋಗಸ್ಥರು ವೃತ್ತಿಯನ್ನು ಬದಲಿಸುವ ಚಿಂತನೆಯಲ್ಲಿ ಇರುವರು. ಅಂತರ್ಜಾಲದಲ್ಲಿ ಅಪರಿಚಿತರ ಸಂಪರ್ಕವು ಬೆಳೆಯಬಹುದು. ನೀವು ಸಡಿಲವಾದರೆ ಅಪಾಯವನ್ನು ಕಾಣಬೇಕು. ಆರ್ಥಿಕ ಸ್ಥಿತಿಯು ಬಲವಾಗುವುದಕ್ಕೆ ಸಂತೃಪ್ತಿ ಇದೆ. ಬಂಧುಗಳ ಜೊತೆಗೆ ಬೇಡದ ಮಾತುಕತೆಯು ಇಷ್ಟವಾಗದು. ಧಾರ್ಮಿಕ ಆಚರಣೆಗಳು ನಿಮಗೆ ಬಂಧನದಂತೆ ಆದೀತು. ವೃತ್ತಿಯಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ. ದೀರ್ಘಕಾಲದ ಸಮಸ್ಯೆಗಳು ದೂರವಾಗುತ್ತವೆ. ಹೆಚ್ಚು ಆದಾಯವನ್ನು ಇಂದಿನ ಕಾರ್ಯದಿಂದ ನಿರೀಕ್ಷಿಸುವಿರಿ. ನಿಮ್ಮ ಕರ್ತವ್ಯದ ಕಡೆ ಸರಿಯಾದ ಗಮನ ಇರಲಿ. ಅದೃಷ್ಟವನ್ನು ನಂಬಿಕೊಂಡು ಸಮಯವನ್ನು ಹಾಳುಮಾಡುವುದು ಬೇಡ. ನಿಮ್ಮ ಕೆಲಸವನ್ನು ನೀವು ಮಾಡಿ. ಕೆಲವು ಜವಾಬ್ದಾರಿಗಳು ನಿಮ್ಮ ಹಿಡಿತದಿಂದ ತಪ್ಪಿಹೋಗಬಹುದು. ಮಾತಿಗೆ ತಪ್ಪಿದ್ದಕ್ಕೆ ನಿಮ್ಮನ್ನು ಅವಮಾನಿಸಿಯಾರು. ಆರ್ಥಿಕಬಲವು ಮನೋಬಲಕ್ಕೆ ಮೂಲವಾಗಿದೆ.
ಕನ್ಯಾ ರಾಶಿ: ಇಂದು ವ್ಯವಹಾರದಲ್ಲಿ ಆಶಾವಾದಿತನದಿಂದ ಬೇಸರವನ್ನು ಅನುಭವಿಸಬೇಕಾದೀತು. ಸಮಾರಂಭಗಳಿಗೆ ಭೇಟಿ ಕೊಟ್ಟರೂ ನಿಮಗೆ ಎಲ್ಲ ರೀತಿಯಿಂದ ಸಮನಾದವರು ಸಿಗಲಾರರು. ಉದ್ಯೋಗದಲ್ಲಿರುವ ಜನರು ಬಡ್ತಿ ಅಥವಾ ಸಂಬಳ ಹೆಚ್ಚಳ ಪಡೆಯಬಹುದು. ನಿಮ್ಮ ವೃತ್ತಿ ಜೀವನದಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರಿ. ಎಲ್ಲ ಮಾತುಗಳನ್ನು ನೀವು ನಕಾರಾತ್ಮಕವಾಗಿಯೇ ತೆಗೆದುಕೊಳ್ಳುವಿರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮಕ್ಕಳ ಹಣಕಾಸಿನ ವ್ಯವಹಾರವು ನಿಮಗೆ ಇಷ್ಟವಾಗದು. ಸಣ್ಣ ಉದ್ಯೋಗದವರು ಅಲ್ಪ ಲಾಭವನ್ನು ಗಳಿಸುವರು. ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಇರಲಿ. ಹಣದ ಬೆಲೆ ಗೊತ್ತಾಗುವ ಸಮಯವಿದು. ಆಗಾಗ ಬರುವ ಸಾಲದ ವಿಚಾರದಿಂದ ಮನೆಯ ವಾತಾವರಣವು ಸರಿಯಾಗಿ ಇರದು. ಕಳೆದ ವಿಷಯವನ್ನು ಪುನಃ ನೆನಪಿಸಿಕೊಂಡು ಮನಸ್ಸು ಭಾರವಾಗುವುದು. ಇಂದಿನ ನಿಮ್ಮ ಪ್ರಯಾಣವು ಕೆಲವು ಅಡೆತಡೆಗಳಿಂದ ಇರಲಿದೆ. ನಿಮ್ಮ ಆಸಕ್ತಿಯ ವಿಚಾರವನ್ನು ಬದಲಿಸುವಿರಿ.
ತುಲಾ ರಾಶಿ: ಚಿಕ್ಸೆಯು ನಿಮಗೆ ಸರಿಯಾಗಿ ಸ್ಪಂದಿಸದೇ ಇರಬಹುದು. ಕ್ರಿಯಾತ್ಮಕತೆಗೆ ಇಂದು ಹೆಚ್ಚಿನ ಮಹತ್ತ್ವವನ್ನು ಕೊಡುವಿರಿ. ಹೊಸ ಜವಾಬ್ದಾರಿಗಳನ್ನು ಪಡೆಯುವ ಉತ್ಸಾಹ ನಿಮ್ಮಲ್ಲಿ ಇರದು. ನಿಮ್ಮ ಕುತೂಹಲ ಸಂಗತಿಗಳಿಗೆ ತಣ್ಣೀರು ಬೀಳಬಹುದು. ಪ್ರೇಮ ಜೀವನವು ಹೊಸ ತಿರುವನ್ನು ಪಡೆಯಬಹುದು. ಇಬ್ಬರೂ ಒಟ್ಟಿಗೆ ಕುಳಿತು ಸಂಬಂಧದ ಸಮಸ್ಯೆಗಳನ್ನು ಪರಿಹರಿಸಿ. ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ಮುಕ್ತವಾಗಿ ವ್ಯಕ್ತಪಡಿಸಿ. ಏಕಾಂಗಿಯಾಗಿರುವವರು ಇಷ್ಟಪಟ್ಟವರ ಜೊತೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವರು. ದಾಂಪತ್ಯದಲ್ಲಿ ಬರುವ ಸಮಸ್ಯೆಗಳನ್ನು ಪರಸ್ಪರ ಮಾತು ಕತೆಯಿಂದ ಸರಿ ಮಾಡಿಕೊಳ್ಳಿ. ಎಲ್ಲ ಸಮಯದಲ್ಲಿಯೂ ನಿಮ್ಮ ಪರಿಸ್ಥಿತಿಯು ಸಕಾರಾತ್ಮಕವಾಗಿ ಇರದು. ಬಹಿರಂಗಪಡಿಸಿ ನಿಮ್ಮ ಮಾನವನ್ನು ಕಳೆದುಕೊಳ್ಳಬೇಕಾಗಬಹುದು. ಕೆಲವು ಬಂಧಗಳನ್ನು ನೀವು ಬಿಡಿಸಿಕೊಳ್ಳುವ ಮನಃಸ್ಥಿತಿಯಲ್ಲಿ ಇರುವಿರಿ. ಸಾಧ್ಯವಾದಷ್ಟು ಮಾತನ್ನು ಕಡಿಮೆ ಮಾಡಿ, ಕಾರ್ಯದಲ್ಲಿ ತೋರಿಸಿ.
ವೃಶ್ಚಿಕ ರಾಶಿ: ಅನ್ಯರ ನೋವಿಗೆ ನಿಮ್ಮ ಸ್ಪಂದನೆ ಇರಲಿದೆ. ನಿಮ್ಮ ಅಧಿಕಾರವನ್ನು ಬಳಸಿಕೊಂಡು ಸಲ್ಲದ ವ್ಯವಹಾರವನ್ನು ಮಾಡಿಸಿಕೊಳ್ಳುವ ಸಾಧ್ಯತೆ ಇದೆ. ನೀವು ಆಪ್ತ ಸ್ನೇಹಿತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗಬಹುದು. ದೊಡ್ಡ ಆಕಾಂಕ್ಷೆಯನ್ನು ಇಟ್ಟಕೊಂಡು ಕೆಲಸ ಮಾಡುವುದು ಬೇಡ. ವೃತ್ತಿ ಸಂಬಂಧಿತ ನಿರ್ಧಾರಗಳನ್ನು ಚಿಂತನಶೀಲವಾಗಿ ತೆಗೆದುಕೊಳ್ಳಿ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಕೋಪವನ್ನು ನಿಯಂತ್ರಿಸಿ. ನಿಮ್ಮ ಸಂಗಾತಿಯ ಭಾವನೆಗಳನ್ನು ನೋಯಿಸಬೇಡಿ. ಅವರು ಖುಷಿಯಾಗಿರುವಂತೆ ನೋಡಿಕೊಳ್ಳಿ. ನಿಮ್ಮ ಮಾತು ನಿಮಗೇ ಹೆಚ್ಚಾದಂತೆ ತೋರುವುದು. ಹೂಡಿಕೆಯ ಬಗ್ಗೆ ಆಸಕ್ತಿ ಕಡಿಮೆಯಾಗುವುದು. ಆರ್ಥಿಕ ನಷ್ಟದಿಂದ ನಿಮಗೆ ಚಿಂತೆಯಾಗಬಹುದು. ವಿವಿಧ ಹೂಡಿಕೆಗಳ ಬಗ್ಗೆ ಆಸಕ್ತಿ ಉಂಟಾದೀತು. ತಂದೆಯಿಂದ ನಿಮಗೆ ಬೇಕಾದ ಕೆಲಸವು ಮಾಡಿಸಿಕೊಳ್ಳುವಿರಿ. ನಿಮ್ಮ ಯೋಜನೆಯನ್ನು ಯಾರ ಬಳಿಯೂ ಪ್ರಕಟಮಾಡಿಕೊಳ್ಳುವುದು ಬೇಡ. ಬೇಕೆಂದುಕೊಂಡವರೇ ನಿಮ್ಮಿಂದ ದೂರಾದರೆ ಏನಾದೀತು?
ಧನು ರಾಶಿ: ಮೇಲಧಿಕಾರಿಗಳ ಜೊತೆ ಮಾತಿನ ಘರ್ಷಣೆಯಿಂದ ದ್ವೇಷವಾಗುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ಕಛೇರಿಯ ಕೆಲಸವನ್ನು ಮಾಡಬೇಕಾಗುವುದು. ಜೀವನದಲ್ಲಿ ಬರುವ ಸವಾಲುಗಳನ್ನು ಜಯಿಸಲು ಸಾಧ್ಯವಾಗುತ್ತದೆ. ವಾಗ್ವಾದವು ದ್ವೇಷದಲ್ಲಿ ಕೊನೆಗಾಣುವುದಿ. ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವಿರಿ. ಇದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಜಾಣತನದಿಂದ ಎಲ್ಲಿಯೂ ಸಿಕ್ಕಿಬೀಳಲಾರಿರಿ. ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಲಿದ್ದೀರಿ. ಜಾಣ್ಮೆಯಿಂದ ಕೆಲಸವನ್ನು ಮುಗಿಸುಕೊಳ್ಳಿ. ನಿಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬೀಳಬಹುದು. ಸಂಕಷ್ಟದಲ್ಲಿ ಇರುವವರಿಗೆ ನಿಮ್ಮ ಸಹಕಾರವು ಬೇಕಾದೀತು. ಅಪರಿಚಿತರ ಸ್ನೇಹವನ್ನು ಮಾಡುವಾಗ ಜಾಗರೂಕತೆ ಇರಲಿ. ಸ್ನೇಹವೇ ಪ್ರೇಮವೂ ಆಗಬಹುದು. ಮೇಲಧಿಕಾರಿಗಳು ನಿಮ್ಮ ಮೇಲಿಟ್ಟ ವಿಶ್ವಾಸಕ್ಕೆ ಭಂಗಬಾರದಂತೆ ನಿಮ್ಮ ವರ್ತಿಸಿ.
ಮಕರ ರಾಶಿ: ಹಸ್ತಕ್ಷೇಪವನ್ನು ಮಾಡುವ ಸಂದರ್ಭ ಬರಬಹುದು. ನಿಮ್ಮ ಪ್ರಯತ್ನವು ಪರಿಪೂರ್ಣವಾಗಿರಲಿ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಮನಸ್ಸು ಶಾಂತವಾಗಿ ಉಳಿಯುತ್ತದೆ. ನಿಮ್ಮ ಪ್ರೀತಿಪಾತ್ರರೊಡನೆ ಮೋಜಿನ ಕ್ಷಣಗಳನ್ನು ಆನಂದಿಸುವಿರಿ. ಇದರಿಂದ ನಿಮ್ಮ ಸಂಬಂಧವೂ ಗಟ್ಟಿಯಾಗುತ್ತದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣ ಅನುಕೂಲಕರವಾಗಿರುತ್ತದೆ. ಧನವ್ಯಯವಾಗುವ ಸಂದರ್ಭವು ಬರಬಹುದು. ತುರ್ತು ಹಣ ಸಂಪಾದನೆಯನ್ನು ಮಾಡಬೇಕಾದೀತು. ಸಹೋದರರಿಂದ ಅಪರೋಕ್ಷ ಸಹಾಯವು ನಿಮಗಾಗುವುದು. ಸಂಗಾತಿಯ ಜೊತೆ ವಾಗ್ವಾದ ಮಾಡಿ ಮನಸ್ಸನ್ನು ಕೆಡಿಸಿಕೊಳ್ಳುವಿರಿ. ಹಿತಶತ್ರುಗಳ ಬಗ್ಗೆ ನಿಮಗೆ ಕುತೂಹಲವಿರುವುದು. ಇಂದು ನಿಮ್ಮ ನಡತೆಯು ಇತರರಿಗೆ ತೊಂದರೆಯನ್ನು ಉಂಟುಮಾಡೀತು. ಅತಿಯಾದ ನಿದ್ರೆಯಿಂದ ಆರೋಗ್ಯಕ್ಕೆ ತೊಂದರೆ. ಸಾಮಾಜಿಕ ಗೌರವ ನಿಮ್ಮನ್ನು ಹುಡುಕಿ ಬರಲಿದೆ.
ಕುಂಭ ರಾಶಿ: ಯಾವುದೇ ಫಲಾಪೇಕ್ಷೆ ಇಲ್ಲದೇ ಕಾರ್ಯವನ್ನು ಮಾಡುವುದು ಕಷ್ಟ. ಇಂದು ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಬಹುದು. ಒಂಟಿ ಜನರು ಆಕರ್ಷಕ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ಇದರಿಂದ ನೀವು ಖುಷಿಯಾಗುವಿರಿ. ಆಶ್ಚರ್ಯಗಳಿಗೆ ಸಿದ್ಧರಾಗಿರಿ. ಜೀವನದಲ್ಲಿ ಸಂತೋಷದ ದಿನಗಳು ಬರಲಿದೆ. ಕೆಲಸದ ಕಾರಣದಿಂದಾಗಿ ಹೆಚ್ಚು ಒತ್ತಡ ತೆಗೆದುಕೊಳ್ಳುವುದನ್ನು ತಪ್ಪಿಸಿ. ನಿಮ್ಮ ತಪ್ಪುಗಳು ಅರ್ಥವಾಗದೇ ಬೇರೆಯವರ ಮೂಲಕ ನೀವು ತಿಳಿದುಕೊಳ್ಳಬೇಕಾದೀತು. ಒಳ್ಳೆಯ ಕಾರ್ಯಕ್ಕೆ ಕುಂಟು ನೆಪವನ್ನು ಹೇಳುವುದು ಬೇಡ. ರಾಜಕೀಯ ವ್ಯಕ್ತಿಗಳು ನಿಮ್ಮನ್ನು ಬಳಸಿಕೊಳ್ಳಬಹುದು. ಸಂಬಂಧಗಳಲ್ಲಿ ಸೌಹಾರ್ದತೆ ಇರಲಿದೆ. ಸ್ಥಾನವನ್ನು ಉಳಿಸಿಕೊಂಡು, ಗೌರವ ಪಡೆಯಿರಿ. ಯಾವ ಕೆಲಸವನ್ನು ಒಪ್ಪಿಕೊಳ್ಳುವಾಗಲೂ ಜಾಗರೂಕತೆ ಇರಲಿ. ಇನ್ನೊಬ್ಬರ ಒತ್ತಾಯಕ್ಕೆ ನೀವು ಮಣಿದು ಹಣದ ಹೂಡಿಕೆಯನ್ನು ಮಾಡುವಿರಿ. ಆದಾಯದ ಮೂಲವು ಬದಲಾಗಬಹುದು. ಚರಾಸ್ತಿಯನ್ನು ಕೊಟ್ಟು ಅಲ್ಪ ಲಾಭವನ್ನು ಮಾಡಿಕೊಳ್ಳುವಿರಿ.
ಮೀನ ರಾಶಿ: ನಿಮ್ಮ ಮಹತ್ತ್ವದ ನಿರ್ಧಾರಗಳನ್ನು ಪ್ರಕಟಿಸುವ ದಿನ. ನೀವು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ಸಾಧ್ಯತೆ ಇದೆ. ಪ್ರಭಾವಿ ವ್ಯಕ್ತಿಗಳ ಭೇಟಿಯಾಗಬಹುದು. ಯಾರ ಮುಲಾಜಿಗೂ ಕಟ್ಟುಬೀಳಲಾರಿರಿ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಪ್ರೇಮ ಜೀವನದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಸಮೃದ್ಧಿ ಇರುತ್ತದೆ. ಭಾವನೆಗಳಿಗೆ ಬೆಲೆ ಕೊಡದೇ ಇರುವುದು ನಿನಗೆ ಬೇಸರವಾಗಬಹುದು. ಬಂಧುಗಳ ಆಗಮನದಿಂದ ಇಂದಿನ ವ್ಯವಹಾರದಲ್ಲಿ ಬದಲಾವಣೆ ಇರುವುದು. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವ ಯೋಜನೆ ಇರಲಿದೆ. ಮಾತಿನ ಮೇಲೆ ಹಿಡಿತವು ಬೇಕಾದೀತು. ನಿಮಗೆ ಸಂಗಾತಿಯ ಮೇಲೆ ಸಿಟ್ಟಾಗುವ ಸನ್ನಿವೇಶವು ಬರಲಿದೆ. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಉತ್ತರವನ್ನು ಕೊಡುವ ಅವಶ್ಯಕ ಇರುವುದಿಲ್ಲ. ಉದ್ಯೋಗದಲ್ಲಿ ವಿಶ್ವಾಸಗಳಿಸುವುದು ಮುಖ್ಯ.
ಲೋಹಿತ ಹೆಬ್ಬಾರ್ – 8762924271 (what’s app only)