ಅಕ್ರಮ ಸಂಬಂಧ ಮತ್ತು ಪತ್ನಿ ಮೇಲೆ ಹಲ್ಲೆ ಆರೋಪ; ಮೊದಲ ಬಾರಿಗೆ ಮೌನ ಮುರಿದ ಯೋ ಯೋ ಹನಿ ಸಿಂಗ್​

ಅಕ್ರಮ ಸಂಬಂಧ ಮತ್ತು ಪತ್ನಿ ಮೇಲೆ ಹಲ್ಲೆ ಆರೋಪ; ಮೊದಲ ಬಾರಿಗೆ ಮೌನ ಮುರಿದ ಯೋ ಯೋ ಹನಿ ಸಿಂಗ್​
ಹನಿ ಸಿಂಗ್​-ಶಾಲಿನಿ

‘ಶಾಲಿನಿ ತಲ್ವಾರ್ ಸುಳ್ಳು ಆರೋಪಗಳನ್ನು ಮಾಡಿರುವುದು ನನಗೆ ತೀವ್ರ ನೋವುಂಟು ಮಾಡಿದೆ. ನನ್ನ ಸಹೋದರಿ, ತಂದೆ-ತಾಯಿ ಮೇಲೆ ಆರೋಪ ಬಂದಿರುವುದರಿಂದ ನಾನು ಮೌನವಾಗಿರುವುದು ಸೂಕ್ತವಲ್ಲ’ ಎಂದು ಹನಿ ಸಿಂಗ್​ ಹೇಳಿದ್ದಾರೆ.

TV9kannada Web Team

| Edited By: Madan Kumar

Aug 07, 2021 | 1:55 PM

ಗಾಯಕ ಯೋ ಯೋ ಹನಿ ಸಿಂಗ್​ (Yo Yo Honey Singh) ವಿರುದ್ಧ ಅವರ ಪತ್ನಿ ಶಾಲಿನಿ ತಲ್ವಾರ್​ (Shalini Talwar) ಅವರು ಹಲವು ಗಂಭೀರ ಆರೋಪಗಳನ್ನು ಹೊರಿಸಿದ್ದರು. ಅವುಗಳ ಬಗ್ಗೆ ಇಷ್ಟು ದಿನ ಮೌನವಾಗಿ ಉಳಿದಿದ್ದ ಹನಿ ಸಿಂಗ್​ ಇದೇ ಮೊದಲ ಬಾರಿಗೆ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪತ್ನಿ ಮಾಡಿರುವ ಎಲ್ಲ ಗಂಭೀರ ಆರೋಪಗಳನ್ನು ಅವರು ತಳ್ಳಿ ಹಾಕಿದ್ದಾರೆ. ತಮ್ಮ ತಂದೆ-ತಾಯಿ ಮತ್ತು ಕುಟುಂಬದ ಬಗ್ಗೆ ಶಾಲಿನಿ ತಲ್ವಾರ್ ಹೊರಿಸಿರುವ ಆರೋಪಗಳೆಲ್ಲ ಸುಳ್ಳು ಎಂದು ಹನಿ ಸಿಂಗ್​ ವಾದ ಮಂಡಿಸುತ್ತಿದ್ದಾರೆ.

‘20 ವರ್ಷಗಳಿಂದ ನನ್ನ ಬಾಳ ಸಂಗಾತಿ ಆಗಿರುವ ಶಾಲಿನಿ ತಲ್ವಾರ್ ಅವರು ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿರುವುದು ನನಗೆ ತೀವ್ರ ನೋವುಂಟು ಮಾಡಿದೆ. ಈ ನನ್ನ ಆರೋಗ್ಯದ ಬಗ್ಗೆ ಊಹಾಪೋಹ ಹಬ್ಬಿದ್ದಾಗ, ನನ್ನ ಸಾಹಿತ್ಯದ ಬಗ್ಗೆ ಕಟು ಟೀಕೆ ಕೇಳಿಬಂದಾಗ, ಮಾಧ್ಯಮಗಳಲ್ಲಿ ನೆಗೆಟಿವ್​ ಪ್ರಚಾರ ಮಾಡಿದಾಗ ನಾನು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿರಲಿಲ್ಲ. ಆದರೆ ಇಂದು ನನ್ನ ಸಹೋದರಿ, ತಂದೆ-ತಾಯಿ ಮೇಲೆ ಆರೋಪ ಕೇಳಿ ಬಂದಿರುವುದರಿಂದ ನಾನು ಮೌನವಾಗಿರುವುದು ಸೂಕ್ತವಲ್ಲ’ ಎಂದು ಹನಿ ಸಿಂಗ್​ ಹೇಳಿದ್ದಾರೆ.

‘ಕಳೆದ 15 ವರ್ಷಗಳಿಂದ ಈ ಇಂಡಸ್ಟ್ರಿಯಲ್ಲಿದ್ದೇನೆ. ದೇಶ-ವಿದೇಶದ ಹಲವು ಕಲಾವಿದರು ಮತ್ತು ಸಂಗೀತಗಾರರ ಜೊತೆ ಕೆಲಸ ಮಾಡಿದ್ದೇನೆ. ಪತ್ನಿ ಜೊತೆ ನನ್ನ ಸಂಬಂಧ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಆಕೆ ಕೂಡ ನನ್ನ ಕಾರ್ಯಕ್ಷೇತ್ರದ ಭಾಗವಾಗಿರುತ್ತಿದ್ದಳು. ನಾನು ಹೋದಲೆಲ್ಲ ಬರುತ್ತಿದ್ದಳು. ಆಕೆ ಮಾಡಿದ ಎಲ್ಲ ಆರೋಪಗಳನ್ನು ನಾನು ಅಲ್ಲಗಳೆಯುತ್ತೇನೆ. ಆದರೆ ಹೆಚ್ಚಿನ ಕಮೆಂಟ್​ ಮಾಡುವುದಿಲ್ಲ. ಯಾಕೆಂದರೆ ಈ ಪ್ರಕರಣ ಈಗ ಕೋರ್ಟ್​ನಲ್ಲಿದೆ’ ಎಂದು ಅವರು ಹೇಳಿದ್ದಾರೆ.

‘ದೇಶದ ಕಾನೂನಿನ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ಸತ್ಯ ಹೊರಗೆ ಬರಲಿದೆ ಎಂಬ ಭರವಸೆ ಇದೆ. ನ್ಯಾಯಾಲಯ ತೀರ್ಪು ನೀಡುವುದಕ್ಕಿಂತ ಮುನ್ನವೇ ಜನರು ಮತ್ತು ಅಭಿಮಾನಿಗಳು ತೀರ್ಮಾನಕ್ಕೆ ಬರಬಾರದ ಅಂತ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಹನಿ ಸಿಂಗ್​ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:

ಏಕಕಾಲಕ್ಕೆ ಅನೇಕ ಸ್ತ್ರೀಯರ ಜೊತೆ ಲೈಂಗಿಕ ಕ್ರಿಯೆ, ಪತ್ನಿಗೆ ಥಳಿತ; ಹನಿ ಸಿಂಗ್​ ಕರ್ಮಕಾಂಡದ ಪೂರ್ತಿ ಲಿಸ್ಟ್​ ಇಲ್ಲಿದೆ

ಯೋ ಯೋ ಹನಿ ಸಿಂಗ್​ಗೆ ಶಾರುಖ್ ಖಾನ್ ಕಪಾಳಕ್ಕೆ ಬಾರಿಸಿದ್ದು ಯಾಕೆ ಅಂತ ಇದುವರೆಗೆ ಗೊತ್ತಾಗಿಲ್ಲ!

Follow us on

Related Stories

Most Read Stories

Click on your DTH Provider to Add TV9 Kannada