Yo Yo Honey Singh: ಹನಿ ಸಿಂಗ್ ವಿರುದ್ದ ಪತ್ನಿಯಿಂದ ಗಂಭೀರ ಆರೋಪ: ದೂರು ದಾಖಲು

Yo Yo Honey Singh: ಹನಿ ಸಿಂಗ್ ವಿರುದ್ದ ಪತ್ನಿಯಿಂದ ಗಂಭೀರ ಆರೋಪ: ದೂರು ದಾಖಲು
Yo Yo Honey Singh-Shalini Talwar

Shalini Talwar: ಅನೋನ್ಯತೆಯಿಂದಲೇ ಇದ್ದ ಈ ಜೋಡಿ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಮೆಚ್ಚುಗೆಗಳು ವ್ಯಕ್ತವಾಗಿತ್ತು. ಆದರೆ ಕೆಲ ವರ್ಷಗಳ ಹಿಂದೆ ಹನಿ ಸಿಂಗ್ ಕೂಡ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

TV9kannada Web Team

| Edited By: Zahir PY

Aug 03, 2021 | 6:57 PM

ಖ್ಯಾತ ರ್ಯಾಪ್ ಗಾಯಕ ಯೋ ಯೋ ಹನಿ ಸಿಂಗ್ (Yo Yo Honey Singh) ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ. ಅವರ ಪತ್ನಿ ಶಾಲಿನ ತಲ್ವಾರ್ (Shalini Talwar) ತಮ್ಮ ಪತಿ ಕೌಟುಂಬಿಕ ದೌರ್ಜನ್ಯ ಎಸೆಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ದೆಹಲಿಯ ತಿಸ್ ಹಜಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತಮ್ಮ ದೂರಿನಲ್ಲಿ ಹನಿ ಸಿಂಗ್ ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 28 ರೊಳಗೆ ಉತ್ತರ ನೀಡುವಂತೆ ಕೋರ್ಟ್ ಹನಿ ಸಿಂಗ್​ಗೆ ನೋಟಿಸ್ ನೀಡಿದೆ.

ಬಾಲಿವುಡ್​ ರ್ಯಾಪ್ ಗಾಯಕ ಹನಿ ಸಿಂಗ್ ಹಾಗೂ ಶಾಲಿನಿ 2011 ರಲ್ಲಿ ದೆಹಲಿಯ ಗುರುದ್ವಾರದಲ್ಲಿ ಪ್ರೇಮ ವಿವಾಹವಾಗಿದ್ದರು. 10 ವರ್ಷಗಳ ದಾಂಪತ್ಯ ಜೀವನದಲ್ಲಿ ಇದೀಗ ಬಿರುಕು ಬಿಟ್ಟಿದ್ದು, ಇದರ ಬೆನ್ನಲ್ಲೇ ಪತ್ನಿಯಿಂದ ಗಂಭೀರ ಆರೋಪ ಕೇಳಿ ಬಂದಿದೆ. ಪತಿಯು ತನ್ನನ್ನು ಥಳಿಸುತ್ತಿದ್ದರು. ಹಾಗೆಯೇ ಪ್ರತಿದಿನ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

ರಂಗೀನ್ ದುನಿಯಾದಿಂದ ಹನಿ ಸಿಂಗ್ ತಮ್ಮ ಪತ್ನಿಯನ್ನು ದೂರವೇ ಇಟ್ಟಿದ್ದರು. 2011 ರಲ್ಲಿ ಮದುವೆಯಾದರೂ ಸಾರ್ವಜನಿಕವಾಗಿ ಇಬ್ಬರು ಕಾಣಿಸಿಕೊಳ್ಳುತ್ತಿರಲಿಲ್ಲ. ಇದಾಗ್ಯೂ 2014 ರಲ್ಲಿ, ಹನಿ ಸಿಂಗ್ ತನ್ನ ಪತ್ನಿಯನ್ನು ಮೊದಲ ಬಾರಿಗೆ ರಿಯಾಲಿಟಿ ಶೋನಲ್ಲಿ ಜನರಿಗೆ ಪರಿಚಯಿಸಿದ್ದರು.

ಅಷ್ಟೇ ಅಲ್ಲದೆ ಅನೋನ್ಯತೆಯಿಂದಲೇ ಇದ್ದ ಈ ಜೋಡಿ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಮೆಚ್ಚುಗೆಗಳು ವ್ಯಕ್ತವಾಗಿತ್ತು. ಆದರೆ ಕೆಲ ವರ್ಷಗಳ ಹಿಂದೆ ಹನಿ ಸಿಂಗ್ ಕೂಡ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಒಂದು ಹಂತದಲ್ಲಿ ಟಾಪ್ ಸಿಂಗರ್ ಆಗಿ ಗುರುತಿಸಿಕೊಂಡಿದ್ದ ಹನಿ ಸಿಂಗ್, ದಿಢೀರಣೆ ತನ್ನ ನೇಮ್ ಫೇಮ್ ಕಳೆದುಕೊಂಡಿದ್ದರು. ಇದೇ ಸಮಯದಲ್ಲಿ ಪತ್ನಿ ಶಾಲಿನಿ ತನ್ನ ಜೊತೆ ನಿಂತು ಏಕಾಂಗಿತನವನ್ನು ದೂರ ಮಾಡಿದ್ದಳು. ಖಿನ್ನತೆಯ ಸಂದರ್ಭದಲ್ಲಿ ತುಂಬಾ ಚೆನ್ನಾಗಿ ನೋಡಿಕೊಂಡಿದ್ದರು ಎಂದು ಹನಿ ಸಿಂಗ್ ಹೇಳಿದ್ದರು.

ಅಷ್ಟೇ ಅಲ್ಲದೆ ಸಂದರ್ಶನವೊಂದರಲ್ಲಿ, ಶಾಲಿನಿ ನನ್ನ ಸ್ನೇಹಿತೆ ಮತ್ತು ನಾನು ಯಾವಾಗಲೂ ಅವಳ ಮಾತನ್ನು ಕೇಳುತ್ತೇನೆ. ಏಕೆಂದರೆ ಅವಳು ಎಲ್ಲದರಲ್ಲೂ ನನಗೆ ಬಹಳ ಮುಖ್ಯ ಮತ್ತು ಅವಳು ಯಾವಾಗಲೂ ಸರಿ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂದು ಪತ್ನಿಯನ್ನು ಹನಿ ಸಿಂಗ್ ಹಾಡಿ ಹೊಗಳಿದ್ದರು. ಇದೀಗ ಶಾಲಿನಿ ಕೌಟುಂಬಿಕ ದೌರ್ಜನ್ಯದ ಆರೋಪದಡಿಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಆರೋಪ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

ಇದನ್ನೂ ಓದಿ: LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ

(Yo Yo Honey Singh’s wife Shalini Talwar accuses him of domestic violence)

Follow us on

Related Stories

Most Read Stories

Click on your DTH Provider to Add TV9 Kannada