‘ಪ್ಲೀಸ್ ನನ್ನ ಹೊಟ್ಟೆ ಮೇಲೆ ಹೊಡಿಬೇಡಿ’; ಧೋನಿ ಬಳಿ ಮನವಿ ಮಾಡಿಕೊಂಡ ಬಾಲಿವುಡ್ ವಿಲನ್
MS Dhoni Hairstyle: ‘ಮಾಹೀ ಬ್ರದರ್ ನಿಮ್ಮ ಲುಕ್ ಸೂಪರ್ ಆಗಿದೆ. ಯಾವುದೇ ಡಾನ್ ಪಾತ್ರಗಳನ್ನು ಒಪ್ಪಿಕೊಳ್ಳಬೇಡಿ ಪ್ಲೀಸ್’ ಎಂದು ಎಂ.ಎಸ್. ಧೋನಿ ಬಳಿ ಖ್ಯಾತ ನಟ ಗುಲ್ಶನ್ ಗ್ರೋವರ್ ಮನವಿ ಮಾಡಿಕೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ (MS Dhoni) ಅವರಿಗೂ ಚಿತ್ರರಂಗಕ್ಕೂ ಮೊದಲಿನಿಂದಲೂ ನಂಟು ಇದೆ. ಅವರ ಜೀವನ ಆಧರಿಸಿ ಬಂದ ‘ಎಂ.ಎಸ್. ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅನೇಕ ಬಾಲಿವುಡ್ ಸ್ಟಾರ್ ನಟ-ನಟಿಯರು ಕೂಡ ಧೋನಿಗೆ ಫ್ಯಾನ್. ಹೀಗೆ ಎಲ್ಲರ ಜೊತೆ ಒಳ್ಳೆಯ ಒಡನಾಟ ಹೊಂದಿರುವ ಅವರು ಒಬ್ಬ ಕಲಾವಿದನ ವೃತ್ತಿಜೀವನಕ್ಕೆ ಮಾರಕ ಆಗುವ ಸಾಧ್ಯತೆ ಇದೆ! ಧೋನಿ ಬಗ್ಗೆ ಹೀಗೊಂದು ಅಭಿಪ್ರಾಯ ಕೇಳಿಬಂದಿದೆ. ಹಾಗಂತ ಈ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಖ್ಯಾತ ನಟ ಗುಲ್ಶನ್ ಗ್ರೋವರ್ (Gulshan Grover) ಅವರು ಧೋನಿಯ ಹೊಸ ಲುಕ್ ಬಗ್ಗೆ ಹೊಗಳುವಾಗ ತಮಾಷೆಯಾಗಿ ಈ ರೀತಿ ಹೇಳಿದ್ದಾರೆ ಅಷ್ಟೇ.
ಇತ್ತೀಚೆಗೆ ಧೋನಿ ಹೊಸ ಕೇಶವಿನ್ಯಾಸ ಮಾಡಿಕೊಂಡಿದ್ದರು. ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ತುಂಬ ಸ್ಟೈಲಿಶ್ ಆಗಿರುವ ಈ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಸೆಲೆಬ್ರಿಟಿಗಳು ಕೂಡ ಬೆರಗಾಗಿ ನೋಡುತ್ತಿದ್ದಾರೆ. ಸೆಲೆಬ್ರಿಟಿ ಕೇಶವಿನ್ಯಾಸಕಾರ ಆಲಿಮ್ ಹಕಿಮ್ ಅವರು ಈ ಹೇರ್ಸ್ಟೈಲ್ ಮಾಡಿದ್ದಾರೆ. ಅದನ್ನು ಕಂಡು ಫೇಮಸ್ ಖಳನಟ ಗುಲ್ಶನ್ ಗ್ರೋವರ್ ಫನ್ನಿಯಾಗಿ ಟ್ವೀಟ್ ಮಾಡಿದ್ದಾರೆ.
‘ಮಾಹೀ ಬ್ರದರ್ ನಿಮ್ಮ ಲುಕ್ ಸೂಪರ್ ಆಗಿದೆ. ಯಾವುದೇ ಡಾನ್ ಪಾತ್ರಗಳನ್ನು ಒಪ್ಪಿಕೊಳ್ಳಬೇಡಿ ಪ್ಲೀಸ್. ನೀವು ಡಾನ್ ಪಾತ್ರ ಮಾಡಿದರೆ ನನ್ನ ಹೊಟ್ಟೆ ಮೇಲೆ ಹೊಡೆದಂತೆ ಆಗುತ್ತದೆ. ಈಗಾಗಲೇ ನನ್ನ ಆತ್ಮೀಯ ಸಹೋದರರಾದ ಜಾಕಿ ಶ್ರಾಫ್, ಸಂಜಯ್ ದತ್ ಹಾಗೂ ಸುನೀಲ್ ಶೆಟ್ಟಿ ನನಗೆ ಕೆಲಸ ಇಲ್ಲದಂತೆ ಮಾಡಲು ಈ ರೀತಿ ಪಾತ್ರಗಳನ್ನು ಮಾಡುತ್ತಿದ್ದಾರೆ’ ಎಂದು ಗುಲ್ಶನ್ ಗ್ರೋವರ್ ಟ್ವೀಟ್ ಮಾಡಿದ್ದಾರೆ. ಈ ತಮಾಷೆಯ ಟ್ವೀಟ್ ಸದ್ಯ ವೈರಲ್ ಆಗುತ್ತಿದೆ.
Mahi brother @msdhoni Superb look!Plz don’t accept any Don Roles,that will be mere dhande par laat?Already 3 of my dearest Brothers @duttsanjay @SunielVShetty @bindasbhidu are doing this to get me out of business ?. Aalim @AalimHakim Badman is coming for you ?@HanspalShano pic.twitter.com/TntDWQ0lR4
— Gulshan Grover (@GulshanGroverGG) August 1, 2021
ಹಿಂದಿ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡುವ ಮೂಲಕ ಗುಲ್ಶನ್ ಗ್ರೋವರ್ ಫೇಮಸ್ ಆಗಿದ್ದಾರೆ. 400ಕ್ಕೂ ಅಧಿಕ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ಟಾರ್ ಹೀರೋಗಳು ವಿಲನ್ ಪಾತ್ರ ಮಾಡುವುದು ಟ್ರೆಂಡ್ ಆಗಿದೆ. ಬಹುನಿರೀಕ್ಷಿತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಆಗಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಚಿತ್ರದಲ್ಲಿ ಇಮ್ರಾನ್ ಹಷ್ಮಿಗೆ ಖಳನ ಪಾತ್ರ ನೀಡಲಾಗಿದೆ. ಆ ಕಾರಣಕ್ಕಾಗಿ ಎಂ.ಎಸ್. ಧೋನಿ ಬಗ್ಗೆ ಗುಲ್ಶನ್ ಗ್ರೋವರ್ ಹೀಗೆ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಕ್ಯಾಪ್ಷನ್ ಕೂಲ್ ಕಡೆಯಿಂದ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಾರೆ.
ಇದನ್ನೂ ಓದಿ:
ಖಡಕ್ ಪೋಸ್ಟರ್ ಮೂಲಕ ಅಧೀರ ಸಂಜಯ್ ದತ್ ಹುಟ್ಟುಹಬ್ಬಕ್ಕೆ ಶುಭಕೋರಿದ ‘ಕೆಜಿಎಫ್ 2’ ತಂಡ
MS Dhoni: ಹೊಸ ಕೇಶ ವಿನ್ಯಾಸದಿಂದ ಮಿಂಚುತ್ತಿದ್ದಾರೆ ಕ್ಯಾಪ್ಟನ್ ಕೂಲ್ ಧೋನಿ!