ಯುರೋಪ್ಗೆ ಹಾರಿದ ಆಲಿಯಾ, ರಾಮ್ ಚರಣ್, ಜ್ಯೂ. ಎನ್ಟಿಆರ್, ರಾಜಮೌಳಿ
ಆರ್ಆರ್ಆರ್ ಸಿನಿಮಾದಲ್ಲಿ ಜ್ಯೂ. ಎನ್ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಕೊಮರಾಮ್ ಭೀಮ್ ಪಾತ್ರದಲ್ಲಿ ಜ್ಯೂ. ಎನ್ಟಿಆರ್ ಕಾಣಿಸಿಕೊಳ್ಳುತ್ತಿದ್ದಾರೆ.
ಆರ್ಆರ್ಆರ್ ಸಿನಿಮಾ ದೊಡ್ಡಮಟ್ಟದಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ಫ್ರೆಂಡ್ಶಿಪ್ ಡೇ ದಿನ ರಿಲೀಸ್ ಆದ ಈ ಚಿತ್ರದ ಹಾಡು ಲಕ್ಷಲಕ್ಷ ವೀಕ್ಷಣೆ ಕಾಣುತ್ತಿರುವಾಗಲೇ ಇಡೀ ಚಿತ್ರತಂಡ ಯುರೋಪ್ಗೆ ಪ್ರಯಾಣ ಬೆಳೆಸಿದೆ. ಇಂದು ಮುಂಜಾನೆಯೇ ಆಲಿಯಾ ಭಟ್, ರಾಮ್ ಚರಣ್, ಜ್ಯೂ.ಎನ್ಟಿಆರ್, ರಾಜಮೌಳಿ ಹಾಗೂ ಆರ್ಆರ್ಆರ್ ತಂಡ ಪೂರ್ವ ಯುರೋಪ್ಗೆ ಪ್ರಯಾಣ ಬೆಳೆಸಿದೆ.
ಆರ್ಆರ್ಆರ್ ಸಿನಿಮಾದಲ್ಲಿ ಜ್ಯೂ. ಎನ್ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಕೊಮರಾಮ್ ಭೀಮ್ ಪಾತ್ರದಲ್ಲಿ ಜ್ಯೂ. ಎನ್ಟಿಆರ್ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪಾತ್ರಕ್ಕೆ ರಾಮ್ ಚರಣ್ ಬಣ್ಣ ಹಚ್ಚುತ್ತಿದ್ದಾರೆ. ಆಲಿಯಾ ಭಟ್ಗೆ ಸೀತಾ ಎಂಬ ಪಾತ್ರ ನೀಡಲಾಗಿದೆ. ಈ ಚಿತ್ರದಲ್ಲಿ ವಿಶೇಷ ಹಾಡೊಂದು ಬರಲಿದ್ದು, ಇದರ ಶೂಟಿಂಗ್ ಯುರೋಪ್ನಲ್ಲಿ ನಡೆಯಲಿದೆ.
ಇಂದು ಮುಂಜಾನೆ ಆರ್ಆರ್ಆರ್ ತಂಡ ವಿಮಾನ ಏರಿದೆ. ಸದ್ಯ, ಭಾರತದಲ್ಲಿ ಕೊವಿಡ್ ಪ್ರಕರಣ ಹೆಚ್ಚುತ್ತಿದೆ. ಮತ್ತೆ ಲಾಕ್ಡೌನ್ ಆಗುವ ಭಯವೂ ಚಿತ್ರತಂಡಕ್ಕೆ ಕಾಡಿದೆ. ಈ ಕಾರಣಕ್ಕೆ ಕೊಂಚ ಬೇಗವೇ ಚಿತ್ರತಂಡ ಯುರೋಪ್ ವಿಮಾನ ಏರಿದೆ ಎನ್ನಲಾಗಿದೆ. ಕೊವಿಡ್ ಎರಡನೇ ಅಲೆ ಕಾಣಿಸಿಕೊಂಡಿದ್ದರಿಂದ ಸಿನಿಮಾ ಶೂಟಿಂಗ್ ವಿಳಂಬವಾಗಿತ್ತು. ಈಗ ಕೊನೆಯ ಹಂತದ ಚಿತ್ರೀಕರಣಕ್ಕೆ ಸಿನಿಮಾ ತಂಡ ಚುರುಕುಮುಟ್ಟಿಸಿದೆ.
ಅಕ್ಟೋಬರ್ 13ರಂದು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. ಆಗಸ್ಟ್ 1ರಂದು ದೋಸ್ತಿ ಹಾಡು ರಿಲೀಸ್ ಆಗಿತ್ತು. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ ಹಾಡು ಮೂಡಿಬಂದಿದೆ. ಎಲ್ಲ ಭಾಷೆಯಲ್ಲೂ ಬೇರೆ ಬೇರೆ ಗಾಯಕರು ಹಾಡಿದ್ದಾರೆ. ಕನ್ನಡ ವರ್ಷನ್ಗೆ ಯಾಸಿನ್ ನಿಜಾರ್ ಧ್ವನಿ ನೀಡಿದ್ದಾರೆ. ಅವರು ಮೂಲತಃ ಕನ್ನಡದವರಲ್ಲ. ಈವರೆಗೂ ಕನ್ನಡದ ಕೆಲವೇ ಕೆಲವು ಹಾಡುಗಳನ್ನು ಅವರು ಹಾಡಿದ್ದಾರಷ್ಟೇ. ಹಾಗಾಗಿ ‘ದೋಸ್ತಿ’ ಗೀತೆಯಲ್ಲಿ ಹೆಚ್ಚು ಕನ್ನಡದ ಫ್ಲೇವರ್ ಕೇಳಿಸುತ್ತಿಲ್ಲ ಎಂದು ಕೆಲವು ಸಿನಿಪ್ರಿಯರು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಫ್ರೆಂಡ್ಶಿಪ್ ಡೇ ಪ್ರಯುಕ್ತ RRR ಚಿತ್ರದ ‘ದೋಸ್ತಿ’ ಹಾಡು ರಿಲೀಸ್; ಕನ್ನಡಿಗರಿಗೆ ಕಾಡಿದೆ ಒಂದು ಕೊರತೆ