Shilpa Shetty: ‘ಸತ್ಯ ಗೊತ್ತಿಲ್ಲದೆ ಕಮೆಂಟ್ ಮಾಡಬೇಡಿ’; ಮಕ್ಕಳಿಗಾಗಿ ಮನವಿ ಮಾಡಿಕೊಂಡ ಶಿಲ್ಪಾ ಶೆಟ್ಟಿ
Shilpa Shetty statement: ‘ಕಳೆದ ಕೆಲವು ದಿನಗಳು ನನ್ನ ಪಾಲಿಗೆ ತುಂಬ ಚಾಲೆಂಜಿಂಗ್ ಆಗಿದ್ದವು. ಹಲವು ಊಹಾಪೋಹ ಮತ್ತು ಆರೋಪಗಳು ಎದುರಾಗಿವೆ’ ಎಂದು ಶಿಲ್ಪಾ ಶೆಟ್ಟಿ ಅವರು ತಮ್ಮ ಮಾತು ಆರಂಭಿಸಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ, ಉದ್ಯಮಿ ರಾಜ್ ಕುಂದ್ರಾ (Raj Kunda) ಬಂಧನಕ್ಕೆ ಒಳಗಾಗಿ ಹಲವು ದಿನಗಳು ಕಳೆದಿವೆ. ಅಶ್ಲೀಲ ಸಿನಿಮಾ ದಂಧೆಯಲ್ಲಿ ರಾಜ್ ಕುಂದ್ರಾ ತೊಡಗಿಕೊಂಡಿದ್ದರು ಎಂಬ ಆರೋಪ ಇದೆ. ಹಾಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ನಡುವೆ ಶಿಲ್ಪಾ ಶೆಟ್ಟಿ ಕುರಿತಂತೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಅದರಿಂದ ಬೇಸತ್ತಿರುವ ಅವರು ಇದೇ ಮೊದಲ ಬಾರಿಗೆ ಹೇಳಿಕೆ (Shilpa Shetty statement) ಬಿಡುಗಡೆ ಮಾಡಿದ್ದಾರೆ. ‘ಮಕ್ಕಳ ಸಲುವಾಗಿ ನಮ್ಮ ಖಾಸಗಿತನಕ್ಕೆ ಗೌರವ ನೀಡಿ’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ಮೂಲಕ ಶಿಲ್ಪಾ ಶೆಟ್ಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಕಳೆದ ಕೆಲವು ದಿನಗಳು ನನ್ನ ಪಾಲಿಗೆ ತುಂಬ ಚಾಲೆಂಜಿಂಗ್ ಆಗಿದ್ದವು. ಹಲವು ಊಹಾಪೋಹ ಮತ್ತು ಆರೋಪಗಳು ಎದುರಾಗಿವೆ. ಮಾಧ್ಯಮಗಳಿಂದ ಮತ್ತು ಹಿತ ಶತ್ರುಗಳಿಂದ ನನ್ನ ಮಾನಹಾನಿ ಆಗಿದೆ. ನನ್ನ ಕುಟುಂಬವನ್ನೂ ಟ್ರೋಲ್ ಮಾಡಲಾಗಿದೆ’ ಎಂದು ಶಿಲ್ಪಾ ಬರಹ ಆರಂಭಿಸಿದ್ದಾರೆ.
‘ಈ ಪ್ರಕರಣವು ತನಿಖೆಯ ಹಂತದಲ್ಲಿ ಇರುವುದರಿಂದ ನಾನು ಅದರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಹಾಗಾಗಿ ನಾನು ಹೇಳಿದ್ದೇನೆ ಎಂಬಂತಹ ಸುಳ್ಳು ಹೇಳಿಕೆಗಳನ್ನು ಪ್ರಕಟಿಸಬೇಡಿ. ಮುಂಬೈ ಪೊಲೀಸರು ಮತ್ತು ಭಾರತದ ಕಾನೂನಿನ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಒಂದು ಕುಟುಂಬವಾಗಿ ನಾನು ಕಾನೂನಿನ ಮೂಲಕ ಹೋರಾಡುತ್ತೇವೆ. ಆದರೆ ಅಲ್ಲಿನವರೆಗೂ ತಾಯಿಯಾಗಿ ನನ್ನ ಮಕ್ಕಳ ಖಾಸಗಿತನವನ್ನು ರಕ್ಷಿಸುವ ಸಲುವಾಗಿ ಒಂದು ಮನವಿ ಮಾಡುತ್ತೇನೆ’ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
My statement. pic.twitter.com/AAHb2STNNh
— SHILPA SHETTY KUNDRA (@TheShilpaShetty) August 2, 2021
‘ಅರೆಬೆಂದ ವಿಷಯಗಳ ಬಗ್ಗೆ ಸರಿಯಾಗಿ ಗೊತ್ತಿಲ್ಲದೇ ಕಮೆಂಟ್ ಮಾಡಬೇಡಿ. ಕಾನೂನಿಗೆ ತಲೆ ಬಾಗುವಂತಹ ಪ್ರಜೆ ನಾನು. ಕಳೆದ 29 ವರ್ಷದಿಂದ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅದನ್ನು ಹುಸಿ ಆಗಿಸಲು ನಾನು ಬಿಡುವುದಿಲ್ಲ. ಈ ಸಮಯದಲ್ಲಿ ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸಿ ಎಂದು ನಾನು ಕೇಳಿಕೊಳ್ಳುತ್ತೇನೆ. ಮಾಧ್ಯಮಗಳ ವಿಚಾರಣೆ ನಮಗೆ ಬೇಕಿಲ್ಲ. ಕಾನೂನಿನ ಪ್ರಕಾರ ಎಲ್ಲವೂ ನಡೆಯಲಿ. ಸತ್ಯಮೇವ ಜಯತೆ’ ಎಂದು ತಮ್ಮ ಹೇಳಿಕೆಯಲ್ಲಿ ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ:
ಪತಿ ರಾಜ್ ಕುಂದ್ರಾ ನೀಲಿ ಚಿತ್ರ ಕರ್ಮಕಾಂಡದಿಂದ ಶಿಲ್ಪಾ ಶೆಟ್ಟಿಗೆ ಆಗುತ್ತಿದೆ ಕೋಟಿ ಕೋಟಿ ನಷ್ಟ
Published On - 1:46 pm, Mon, 2 August 21