AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕ್ಕಿ ಜೈನ್​ ತುಟಿಗೆ ಮುತ್ತಿಟ್ಟು ದುಬಾರಿ ಗಿಫ್ಟ್​ ನೀಡಿದ ಸುಶಾಂತ್ ಸಿಂಗ್​ ಮಾಜಿ ಪ್ರೇಯಸಿ ಅಂಕಿತಾ

Ankita Lokhande: ‘ನಿನ್ನ ಜೀವನದ ಅತ್ಯುತ್ತಮ ದಿನಗಳು ಬರುತ್ತಿವೆ. ಬದುಕಿನ ಎಲ್ಲ ಏಳು-ಬೀಳುಗಳ ಸಮಯದಲ್ಲೂ ನಾನು ನಿನ್ನ ಜೊತೆ ಇರುತ್ತೇನೆ’ ಎಂಬ ಕ್ಯಾಪ್ಷನ್​ನೊಂದಿಗೆ ಈ ವಿಡಿಯೋ ಹಂಚಿಕೊಂಡು ಪ್ರಿಯಕರನಿಗೆ ಅಂಕಿತಾ ಶುಭಕೋರಿದ್ದಾರೆ.

ವಿಕ್ಕಿ ಜೈನ್​ ತುಟಿಗೆ ಮುತ್ತಿಟ್ಟು ದುಬಾರಿ ಗಿಫ್ಟ್​ ನೀಡಿದ ಸುಶಾಂತ್ ಸಿಂಗ್​ ಮಾಜಿ ಪ್ರೇಯಸಿ ಅಂಕಿತಾ
ವಿಕ್ಕಿ ಜೈನ್​ ತುಟಿಗೆ ಮುತ್ತಿಟ್ಟು ದುಬಾರಿ ಗಿಫ್ಟ್​ ನೀಡಿದ ಸುಶಾಂತ್ ಸಿಂಗ್​ ಮಾಜಿ ಪ್ರೇಯಸಿ ಅಂಕಿತಾ
TV9 Web
| Edited By: |

Updated on:Aug 02, 2021 | 10:02 AM

Share

ಹಿಂದಿ ಸಿನಿಮಾ ಮತ್ತು ಕಿರುತೆರೆಯ ಧಾರಾವಾಹಿಗಳ ಮೂಲಕ ಫೇಮಸ್​ ಆದವರು ನಟಿ ಅಂಕಿತಾ ಲೋಖಂಡೆ. ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput) ಅವರ ಪ್ರೇಯಸಿ ಆಗಿದ್ದರು ಎಂಬ ಕಾರಣಕ್ಕೆ ಅವರು ಹೆಚ್ಚು ಸುದ್ದಿ ಆಗುತ್ತಿದ್ದರು. ‘ಪವಿತ್ರ ರಿಶ್ತಾ’ ಸೀರಿಯಲ್​ನಲ್ಲಿ ಸುಶಾಂತ್​ ಸಿಂಗ್​ ಮತ್ತು ಅಂಕಿತಾ ಲೋಖಂಡೆ (Ankita Lokhande) ಜೋಡಿಯಾಗಿ ನಟಿಸಿದ್ದರು. ರಿಯಲ್​ ಲೈಫ್​ನಲ್ಲಿಯೂ ಈ ಜೋಡಿಯ ನಡುವೆ ಪ್ರೀತಿ ಚಿಗುರಿತ್ತು. ಆದರೆ ಬಳಿಕ ಬ್ರೇಕಪ್​ ಮಾಡಿಕೊಂಡರು. ಅತ್ತ ಸುಶಾಂತ್​ ಅವರು ನಟಿ ರಿಯಾ ಚಕ್ರವರ್ತಿ (Rhea Chakraborty) ಜೊತೆ ಡೇಟಿಂಗ್​ ಮಾಡಲು ಆರಂಭಿಸಿದರು. ಇತ್ತ ವಿಕ್ಕಿ ಜೈನ್​ (Vicky Jain) ಜೊತೆ ಅಂಕಿತಾಗೆ ಪ್ರೀತಿ ಚಿಗುರಿತು.

ವಿಕ್ಕಿ ಜೈನ್​ ಮತ್ತು ಅಂಕಿತಾ ಪರಸ್ಪರ ಪ್ರೀತಿಸುತ್ತಿರುವ ವಿಚಾರವನ್ನು ಮುಚ್ಚಿಟ್ಟಿಲ್ಲ. ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕ ಅವರು ತಮ್ಮ ಪ್ರೀತಿಯನ್ನು ಜಗಜ್ಜಾಹೀರು ಮಾಡಿದ್ದಾರೆ. ಇತ್ತೀಚೆಗೆ ವಿಕ್ಕಿ ಜೈನ್​ ಜನ್ಮದಿನ ಆಚರಿಸಿಕೊಂಡರು. ಆ ಪ್ರಯುಕ್ತ ಅವರಿಗೆ ಅಂಕಿತಾ ಒಂದು ಗಿಫ್ಟ್​ ಕೊಡಿಸಿದರು. 60 ಸಾವಿರ ರೂ. ಬೆಲೆಬಾಳುವ ಹೆಡ್​ಫೋನ್​ ಉಡುಗೊರೆಯಾಗಿ ನೀಡಿದರು. ಅಲ್ಲದೆ, ಅದೇ ಖುಷಿಯಲ್ಲಿ ಪ್ರಿಯಕರನನ್ನು ತಬ್ಬಿಕೊಂಡು ತುಟಿಗೆ ಮುತ್ತಿಕ್ಕಿದರು. ಆ ಕ್ಷಣದ ವಿಡಿಯೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

‘ನಿನ್ನ ಜೀವನದ ಅತ್ಯುತ್ತಮ ದಿನಗಳು ಬರುತ್ತಿವೆ. ಬದುಕಿನ ಎಲ್ಲ ಏಳು-ಬೀಳುಗಳ ಸಮಯದಲ್ಲೂ ನಾನು ನಿನ್ನ ಜೊತೆ ಇರುತ್ತೇನೆ’ ಎಂಬ ಕ್ಯಾಪ್ಷನ್​ನೊಂದಿಗೆ ಈ ವಿಡಿಯೋ ಹಂಚಿಕೊಂಡು ಪ್ರಿಯಕರನಿಗೆ ಅಂಕಿತಾ ಶುಭಕೋರಿದ್ದಾರೆ. ಕಮೆಂಟ್​ ಮಾಡಿರುವ ಅನೇಕ ಅಭಿಮಾನಿಗಳು ಮತ್ತು ಸ್ನೇಹಿತರು ಈ ಜೋಡಿಗೆ ಶುಭ ಹಾರೈಸಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ನಿಧನರಾದ ಬಳಿಕ ಅಂಕಿತಾ ಲೋಖಂಡೆ ಕೂಡ ಒಂದು ವರ್ಗದ ನೆಟ್ಟಿಗರಿಂದ ಟೀಕೆಗೆ ಗುರಿ ಆಗಿದ್ದರು. ಅಂಕಿತಾ ಜೊತೆ ಬ್ರೇಕಪ್​ ಆಗಿದ್ದರಿಂದಲೇ ಸುಶಾಂತ್​ ಸಾವಿನ ಹಾದಿ ಹಿಡಿಯುವಂತಾಯಿತು ಎಂದು ಅನೇಕರು ಕಮೆಂಟ್​ ಮಾಡಿದ್ದರು. ಸುಶಾಂತ್​-ಅಂಕಿತಾ ಬ್ರೇಕಪ್​ಗೆ ವಿಕ್ಕಿ ಜೈನ್​ ಕಾರಣ ಎಂದು ಕೂಡ ಕೆಲವರು ದೂರಿದ್ದರು. ಆದರೆ ಅದೆಲ್ಲ ನಿಜವಲ್ಲ ಎಂದು ಅಂಕಿತಾ ಸ್ಪಷ್ಟನೆ ನೀಡಿದ್ದರು. ಶೀಘ್ರದಲ್ಲೇ ಅಂಕಿತಾ ಮತ್ತು ವಿಕ್ಕಿ ಜೈನ್​ ಹಸೆಮಣೆ ಏರಲಿದ್ದಾರೆ.

ಇದನ್ನೂ ಓದಿ:

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಮುಖ ಆರೋಪಿ ರಿಯಾ ಚಕ್ರವರ್ತಿಗೆ ಹಾಲಿವುಡ್​ನಿಂದ ಆಫರ್​?

ಸುಶಾಂತ್​ ಸಿಂಗ್​ ಸ್ಥಾನ ತುಂಬಲು ಬಂದ ಮಹಾಭಾರತದ ಅರ್ಜುನ; ಫ್ಯಾನ್ಸ್​ ಇದನ್ನು ಒಪ್ತಾರಾ?

Published On - 9:57 am, Mon, 2 August 21

ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?