ಸುಶಾಂತ್​ ಸಿಂಗ್​ ಸ್ಥಾನ ತುಂಬಲು ಬಂದ ಮಹಾಭಾರತದ ಅರ್ಜುನ; ಫ್ಯಾನ್ಸ್​ ಇದನ್ನು ಒಪ್ತಾರಾ?

Sushant Singh Rajput: ಇಂಥ ಒಂದು ದೊಡ್ಡ ಜವಾಬ್ದಾರಿಯನ್ನು ಶಾಹೀರ್​ ಶೇಖ್​ ಹೊತ್ತುಕೊಂಡಿದ್ದಾರೆ. ಸುಶಾಂತ್​ ಜಾಗದಲ್ಲಿ ಈ ನಟನನ್ನು ಜನರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕುತೂಹಲ ಈಗ ಎಲ್ಲರ ಮನದಲ್ಲಿ ಮೂಡಿದೆ.

ಸುಶಾಂತ್​ ಸಿಂಗ್​ ಸ್ಥಾನ ತುಂಬಲು ಬಂದ ಮಹಾಭಾರತದ ಅರ್ಜುನ; ಫ್ಯಾನ್ಸ್​ ಇದನ್ನು ಒಪ್ತಾರಾ?
ಶಾಹೀರ್​ ಶೇಖ್​, ಸುಶಾಂತ್​ ಸಿಂಗ್​ ರಜಪೂತ್​
Follow us
TV9 Web
| Updated By: ಮದನ್​ ಕುಮಾರ್​

Updated on: Jul 07, 2021 | 3:45 PM

ನಟ ಸುಶಾಂತ್​ ಸಿಂಗ್​ ರಜಪೂತ್​ ಅವರನ್ನು ಕಳೆದುಕೊಂಡ ಬಳಿಕ ಬಾಲಿವುಡ್​ಗೆ ದೊಡ್ಡ ನಷ್ಟವಾಯಿತು. ಅವರ ಅನುಪಸ್ಥಿತಿಯನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಹಾಗಿದ್ದರೂ ಕೂಡ ಅವರ ಸ್ಥಾನವನ್ನು ತಾವು ತುಂಬುವುದಾಗಿ ನಟ ಶಾಹೀರ್​ ಶೇಖ್​ ಮುಂದೆಬಂದಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಸುದ್ದಿ ಹೊರಬಿದ್ದಿದೆ. ಅಷ್ಟಕ್ಕೂ ಸುಶಾಂತ್ ಸ್ಥಾನವನ್ನು ಶಾಹೀರ್​ ಶೇಖ್​ ತುಂಬುವುದು ಹೇಗೆ? ಅದಕ್ಕೆ ಉತ್ತರ; ‘ಪವಿತ್ರ ರಿಶ್ತಾ 2’!

ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಸುಶಾಂತ್​ ಸಿಂಗ್​ ರಜಪೂತ್​ ಅವರು ಸೀರಿಯಲ್​ನಲ್ಲಿ ನಟಿಸುತ್ತಿದ್ದರು. ಜೀ ಟಿವಿಯಲ್ಲಿ ಪ್ರಸಾರವಾದ ‘ಪವಿತ್ರ ರಿಶ್ತಾ’ ಧಾರಾವಾಹಿಯಲ್ಲಿ ಅವರು ಮಾಡಿದ ಪಾತ್ರ ಸೂಪರ್​ ಹಿಟ್​ ಆಗಿತ್ತು. ಆ ಮೂಲಕ ಸುಶಾಂತ್​ ಅವರು ಹಿಂದಿ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದರು. ಅವರಿಗೆ ಜೋಡಿಯಾಗಿ ಅಂಕಿತಾ ಲೋಖಂಡೆ ನಟಿಸಿದ್ದರು. ಈಗ ಅದೇ ಸೀರಿಯನ್​ನ ಸೀಕ್ವೆಲ್​ ಬರುತ್ತಿದೆ. ‘ಪವಿತ್ರ ರಿಶ್ತಾ 2.0’ ಎಂಬ ಶೀರ್ಷಿಕೆಯಲ್ಲಿ ಆ ಧಾರಾವಾಹಿಯ ಕಥೆ ಮುಂದುವರಿಯಲಿದೆ. ಅಂದು ಸುಶಾಂತ್​ ಮಾಡಿದ್ದ ಪಾತ್ರವನ್ನು ಇಂದು ಶಾಹೀರ್​ ಶೇಖ್​ ಮಾಡಲು ಮುಂದೆಬಂದಿದ್ದಾರೆ.

‘ಪವಿತ್ರ ರಿಶ್ತಾ 2.0’ ಬರುವುದು ನಿಜ ಎಂದು ಕೆಲವೇ ದಿನಗಳ ಹಿಂದೆ ಸುಶಾಂತ್​ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಹೇಳಿದ್ದರು. ಈಗ ಆ ಧಾರಾವಾಹಿಯ ಅಧಿಕೃತ ಮೂಲಗಳಿಂದ ಸುದ್ದಿ ಹೊರಬಿದ್ದಿದೆ. ಸುಶಾಂತ್​ ಮಾಡಿದ್ದ ಪಾತ್ರವನ್ನು ಶಾಹೀರ್​ ಶೇಖ್​ ಮಾಡುವುದು ಖಚಿತ ಆಗಿದೆ. ಈ ಹಿಂದೆ ಸ್ಟಾರ್​ ಪ್ಲಸ್​ ವಾಹಿನಿಯಲ್ಲಿ ಪ್ರಸಾರವಾದ ‘ಮಹಾಭಾರತ’ ಧಾರಾವಾಹಿಯಲ್ಲಿ ಅರ್ಜುನನ ಪಾತ್ರವನ್ನು ಮಾಡುವ ಮೂಲಕ ಶಾಹೀರ್​ ಶೇಖ್​ ಫೇಮಸ್​ ಆಗಿದ್ದರು. ಈಗ ‘ಪವಿತ್ರ ರಿಶ್ತಾ 2.0’ ಸೀರಿಯಲ್​ನಲ್ಲಿ ಅವರಿಗೆ ದೊಡ್ಡ ಜವಾಬ್ದಾರಿ ಹೊರಿಸಲಾಗುತ್ತಿದೆ.

ಟಿವಿ ಬದಲಿಗೆ ಈ ಬಾರಿ ಆನ್​ಲೈನ್​ನಲ್ಲಿ ಈ ಸೀರಿಯಲ್​ ಪ್ರಸಾರ ಆಗಲಿದೆ. ದಿನಾಂಕ, ಸಮಯ ಮುಂತಾದ ವಿವರಗಳು ಇನ್ನಷ್ಟೇ ಸಿಗಬೇಕಿದೆ. ‘ಪವಿತ್ರ ರಿಶ್ತಾ’ ಸೀರಿಯಲ್​ ಈಗಾಗಲೇ ಒಂದು ದೊಡ್ಡ ಮೈಲುಗಲ್ಲು ಸ್ತಾಪಿಸಿತ್ತು. ಅದನ್ನು ಮೀರಿಸುವ ಸವಾಲಿನೊಂದಿಗೆ ‘ಪವಿತ್ರ ರಿಶ್ತಾ 2.0’ ತಂಡ ಸಜ್ಜಾಗಿದೆ. ಸುಶಾಂತ್​ ಜಾಗದಲ್ಲಿ ಶಾಹೀರ್​ ಶೇಖ್​ ಅವರನ್ನು ಜನರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ:

SSR Case: ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?

ಸುಶಾಂತ್​ ಸಿಂಗ್ ಸಾವಿನ​ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ? ಆರ್​ಟಿಐ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಬಿಐ