ಫಿಟ್ ಅಂಡ್ ಫೈನ್ ರಜನೀಕಾಂತ್ ಇಂದು ಭಾರತಕ್ಕೆ ವಾಪಸ್ಸು, ತಲೈವಾರನ್ನು ಬರಮಾಡಿಕೊಳ್ಳಲು ಅಭಿಮಾನಿಗಳ ಭರದ ಸಿದ್ಧತೆ
Rajinikanth: ಚೆನೈಗೆ ವಾಪಸ್ಸಾದ ನಂತರ ರಜಿನಿ ಅವರು ಎರಡು ದಿನ ವಿಶ್ರಾಂತಿ ತೆಗೆದುಕೊಂಡು ‘ಅಣ್ಣತ್ತೆ’ ಚಿತ್ರದ ಡಬ್ಬಿಂಗ್ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಚಿತ್ರದ ಡಬ್ಬಿಂಗ್ ಕೆಲಸ ಇನ್ನೂ ಪೂರ್ಣಗೊಂಡಿಲ್ಲ.
ಭಾರತದ ಮೆಗಾ ಸ್ಟಾರ್ ಮತ್ತು ಕೋಟ್ಯಾಂತರ ಅಭಿಮಾನಿಗಳ ಕಣ್ಮಣಿ ರಜನೀಕಾಂತ್ ಅವರು ಇಂದು ಅಂದರೆ ಗುರುವಾರ ಅಮೆರಿಕಾದಿಂದ ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ. ‘ಅಣ್ಣತ್ತೆ’ ಚಿತ್ರದ ಶೂಟಿಂಗ್ ಮುಗಿದ ನಂತರ ರಜಿನಿ ತಮ್ಮ ರೂಟೀನ್ ಮೆಡಿಕಲ್ ಚೆಕಪ್ಗೋಸ್ಕರ ಅಮೇರಿಕಾಗೆ ತೆರಳಿದ್ದರು. ಅಲ್ಲಿ ಅವರ ದೇಹದ ಸಂಪೂರ್ಣ ತಪಾಸಣೆ ನಡೆದಿದ್ದು ರಿಪೋರ್ಟ್ಗಳೆಲ್ಲ ನಾರ್ಮಲ್ ಅಗಿವೆಯೆಂದು ನಟನ ಕೌಟುಂಬಿಕ ಮೂಲಗಳಿಂದ ತಿಳಿದು ಬಂದಿದೆ. ಹಾಗಾಗಿ, ಅವರು ಗುರವಾರ ಬೆಳಗ್ಗೆ ಅಮೆರಿಕದಿಂದ ಹಿಂತಿರುಗಲಿದ್ದಾರೆ. ರಜನಿ ಅವರ ಮಗಳು ಐಶ್ವರ್ಯ ತಂದೆಯೊಂದಿಗಿದ್ದಾರೆ. ಸೂಪರ್ ಸ್ಟಾರ್ ಅವರನ್ನು ಸ್ವಾಗತಿಸಲು ಅಭಿಮಾನಿಗಳು ತಮ್ಮದೇ ಆದ ಶೈಲಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ರಜನಿ ಅವರು ತಮ್ಮ ಆಪ್ತ ಸ್ನೇಹಿತ ಮತ್ತು ತಮಿಳು ಚಿತ್ರರಂಗದ ಪ್ರಖ್ಯಾತ ಸಂಭಾಷಣೆ ಮತ್ತು ಗೀತ ರಚನೆಕಾರ ವೈರಮುತ್ತು ಅವರಿಗೆ ಪೋನ್ ಮಾಡಿ ಚೆಕಪ್ ನಿಮಿತ್ತ ಅಮೇರಿಕ ಪ್ರವಾಸ ಮತ್ತು ಚೆಕಪ್ಗಳ ನಂತರ ತಾನು ಫಿಟ್ ತ್ತು ಫೈನ್ ಆಗಿರುವುದಾಗಿ ಹೇಳಿ ಗುರುವಾರ ಸ್ವದೇಶಕ್ಕೆ ಹಿಂತಿರುಗಲಿರುವ ಬಗ್ಗೆ ತಿಳಿಸಿದ್ದರು. ವೈರಮುತ್ತು ಅವರು ರಜನಿ ಹೇಳಿದನ್ನೇ ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಶೇರ್ ಮಾಡಿದ್ದರು. ಅದನ್ನು ನೋಡಿರುವ ಅಭಿಮಾನಿಗಳು ತಮ್ಮ ತಲೈವಾರನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
ಚೆನೈಗೆ ವಾಪಸ್ಸಾದ ನಂತರ ರಜನಿ ಅವರು ಎರಡು ದಿನ ವಿಶ್ರಾಂತಿ ತೆಗೆದುಕೊಂಡು ‘ಅಣ್ಣತ್ತೆ’ ಚಿತ್ರದ ಡಬ್ಬಿಂಗ್ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಚಿತ್ರದ ಡಬ್ಬಿಂಗ್ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಸದರಿ ಚಿತ್ರದ ಪೋಸ್ಟರ್ವೊಂದನ್ನು ಕೆಲ ದಿನಗಳ ಹಿಂದೆ ಹರಿಬಿಟ್ಟಿದ್ದು ಸಿನಿಮಾವನ್ನು ದೀಪಾವಳಿಗೆ (ನವೆಂಬರ್ 4) ಬಿಡುಗಡೆ ಮಾಡಲಾಗುವುದೆಂದು ಚಿತ್ರದ ನಿರ್ಮಾಪಕರು ಹೇಳಿದ್ದಾರೆ.
ಸಿರುತಾಯಿ ಶಿವ ನಿರ್ದೇಶನ ಈ ಚಿತ್ರದಲ್ಲಿ ರಜನಿ ಜೊತೆ ನಯನತಾರಾ, ಕೀರ್ತಿ ಸುರೇಶ್, ಖುಷ್ಬೂ, ಮೀನ, ಸೂರಿ, ಸತೀಶ್ ಮತ್ತಿತರು ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ‘ಅಣ್ಣತ್ತೆ’ ಚಿತ್ರವನ್ನು ನಿರ್ಮಿಸುತ್ತಿದೆ.
ರಜನೀಕಾಂತ್ ಅವರು ಪ್ರತಿವರ್ಷ ರೂಟೀನ್ ಮೆಡಿಕಲ್ ಚೆಕಪ್ಗಾಗಿ ಅಮೇರಿಕಾಗೆ ಹೋಗುತ್ತಾರೆ. ಆದರೆ, ಕೋವಿಡ್-19 ಪಿಡುಗುನಿಂದಾಗಿ ಅವರು ಕಳೆದ ವರ್ಷ ಪ್ರಯಾಣಿಸಿರಲಿಲ್ಲ.
ಇದನ್ನೂ ಓದಿ: Rajinikanth ‘Annaatthe’ Shoot : ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಟ ರಜಿನಿ ಸಿನಿಮಾ ಶೂಟಿಂಗ್
ಇದನ್ನೂ ಓದಿ: Rajinikanth: ನಿವೃತ್ತಿ ಬಗ್ಗೆ ಕೊನೆಗೂ ಮೌನ ಮುರಿದ ರಜನಿಕಾಂತ್; ಅವರ ಕೊನೆಯ ಚಿತ್ರ ಯಾವುದು?
Published On - 7:35 pm, Wed, 7 July 21