ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಮುಖ ಆರೋಪಿ ರಿಯಾ ಚಕ್ರವರ್ತಿಗೆ ಹಾಲಿವುಡ್​ನಿಂದ ಆಫರ್​?

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಮುಖ ಆರೋಪಿ ರಿಯಾ ಚಕ್ರವರ್ತಿಗೆ ಹಾಲಿವುಡ್​ನಿಂದ ಆಫರ್​?
ಸುಶಾಂತ್​ ಸಿಂಗ್​ ರಜಪೂತ್​, ರಿಯಾ ಚಕ್ರವರ್ತಿ

ರಿಯಾ ಚಕ್ರವರ್ತಿ ಹಾಲಿವುಡ್​ಗೆ ಕಾಲಿಡುತ್ತಾರೆ ಎಂಬ ಗುಸುಗುಸು ಕೇಳಿಬರುತ್ತಿದ್ದಂತೆಯೇ ಸುಶಾಂತ್​ ಸಿಂಗ್​ ರಜಪೂತ್​ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಆರೋಪ ಹೊತ್ತ ನಟಿಗೆ ಹಾಲಿವುಡ್​ ಮಂದಿ ಮಣೆ ಹಾಕುತ್ತಿರುವುದನ್ನು ಸುಶಾಂತ್​ ಫ್ಯಾನ್ಸ್​ ಸಹಿಸುತ್ತಿಲ್ಲ.

TV9kannada Web Team

| Edited By: Madan Kumar

Jul 26, 2021 | 8:21 AM

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput) ನಿಧನರಾದ ಬಳಿಕ ಅವರ ಪ್ರೇಯಸಿ ರಿಯಾ ಚಕ್ರವರ್ತಿ (Rhea Chakraborty) ಜೀವನದಲ್ಲಿ ಬಿರುಗಾಳಿ ಬೀಸಿತು. ಸುಶಾಂತ್​ ಇಹಲೋಹ ತ್ಯಜಿಸಿ ಒಂದು ವರ್ಷಕ್ಕೂ ಅಧಿಕ ಸಮಯ ಆಗಿದ್ದರೂ ಕೂಡ ರಿಯಾ ನಾರ್ಮಲ್​ ಜೀವನಕ್ಕೆ ಹೊಂದಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಹೋದಲ್ಲಿ ಬಂದಲ್ಲಿ ಅವರು ಸುಶಾಂತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಂತೂ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗುತ್ತಿದೆ. ಈ ನಡುವೆ ರಿಯಾ ಚಕ್ರವರ್ತಿಗೆ ಹಾಲಿವುಡ್ (Hollywood) ಸಿನಿಮಾಗಳಿಂದ ಆಫರ್​ ಬರುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ರಿಯಾ ಚಕ್ರವರ್ತಿ ಬಾಲಿವುಡ್​ನಲ್ಲಿ ಮಾಡಿರುವುದು ಮೂರು ಮತ್ತೊಂದು ಸಿನಿಮಾ ಮಾತ್ರ. ಇನ್ನೇನು ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳಬೇಕು ಎಂಬಷ್ಟರಲ್ಲಿ ಅವರ ಜೀವನದಲ್ಲಿ ದುರಂತ ನಡೆಯಿತು. ಈಗ ಅವರು ಜೊತೆಗೆ ಹಾಲಿವುಡ್​ನ ಕೆಲವು ಕಾಸ್ಟಿಂಗ್​ ಏಜೆನ್ಸಿಗಳು ಮಾತುಕತೆ ನಡೆಸುತ್ತಿವೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಯಾವುದೇ ಪ್ರಾಜೆಕ್ಟ್​ಗಳನ್ನೂ ರಿಯಾ ಇನ್ನೂ ಒಪ್ಪಿಕೊಂಡಿಲ್ಲ. ಶೀಘ್ರದಲ್ಲೇ ಅವರು ದೊಡ್ಡ ಸುದ್ದಿ ನೀಡಲಿದ್ದಾರೆ ಎನ್ನಲಾಗುತ್ತಿದೆ.

ರಿಯಾ ಚಕ್ರವರ್ತಿ ಹಾಲಿವುಡ್​ಗೆ ಕಾಲಿಡುತ್ತಾರೆ ಎಂಬ ಗುಸುಗುಸು ಕೇಳಿಬರುತ್ತಿದ್ದಂತೆಯೇ ಸುಶಾಂತ್​ ಸಿಂಗ್​ ರಜಪೂತ್​ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಸುಶಾಂತ್​ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ತಿಳಿದುಬಂದಿಲ್ಲ. ಸುಶಾಂತ್​ ಕುಟುಂಬದವರ ಆರೋಪದ ಪ್ರಕಾರ ರಿಯಾ ಅವರೇ ಸುಶಾಂತ್​ ಸಾವಿಗೆ ಕಾರಣ. ಹಾಗಾಗಿ ಅಂಥ ನಟಿಗೆ ಹಾಲಿವುಡ್​ ಮಂದಿ ಮಣೆ ಹಾಕುತ್ತಿರುವುದನ್ನು ಸುಶಾಂತ್​ ಫ್ಯಾನ್ಸ್​ ಸಹಿಸುತ್ತಿಲ್ಲ.

‘ದೀಪಿಕಾ ಪಡುಕೋಣೆ ಅವರಂತಹ ಟಾಪ್​ ನಟಿಯರೇ ಹಾಲಿವುಡ್​ನಲ್ಲಿ ಏನೂ ಸಾಧಿಸಲಾಗದೇ ವಾಪಸ್​ ಬಂದರು. ಇನ್ನು ರಿಯಾ ಚಕ್ರವರ್ತಿ ಏನು ಮಾಡಲು ಸಾಧ್ಯ? ಸುಶಾಂತ್​ ಕಾರಣದಿಂದ ಇಂದಿಗೂ ರಿಯಾಗೆ ಅವಕಾಶಗಳು ಸಿಗುತ್ತಿವೆ. ಸಾವಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ರಾಜೀ ಆಗುವುದೇ ಇಲ್ಲ’ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ. ಅಂತಿಮವಾಗಿ ಇದಕ್ಕೆಲ್ಲ ರಿಯಾ ಏನು ಉತ್ತರ ನೀಡುತ್ತಾರೆ ಎಂಬ ಕುತೂಹಲ ಈಗ ಸೃಷ್ಟಿ ಆಗಿದೆ.

ಬಾಲಿವುಡ್​ನಲ್ಲಿ ಇಮ್ರಾನ್​ ಹಷ್ಮಿ ಮತ್ತು ಅಮಿತಾಭ್​ ಬಚ್ಚನ್​ ಜೊತೆಗೆ ‘ಚೆಹ್ರೆ’ ಸಿನಿಮಾದಲ್ಲಿ ರಿಯಾ ಚಕ್ರವರ್ತಿ ನಟಿಸುತ್ತಿದ್ದಾರೆ. ಆ ಸಿನಿಮಾ ಕೂಡ ಸುಶಾಂತ್​ ಅಭಿಮಾನಿಗಳಿಂದ ವಿರೋಧ ಎದುರಿಸುತ್ತಿದೆ. 2020ರ ಜೂನ್​ 14ರಂದು ಮುಂಬೈನ ಅಪಾರ್ಟ್​ಮೆಂಟ್​ನಲ್ಲಿ ಸುಶಾಂತ್​ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿತ್ತು. ಅಂದಿನಿಂದಲೂ ಅವರ ಅಭಿಮಾನಿಗಳು ರಿಯಾ ಅವರನ್ನು ದ್ವೇಷಿಸುತ್ತಿದ್ದಾರೆ.

ಇದನ್ನೂ ಓದಿ:

ಸುಶಾಂತ್​ ಸಿಂಗ್​ ಸ್ಥಾನ ತುಂಬಲು ಬಂದ ಮಹಾಭಾರತದ ಅರ್ಜುನ; ಫ್ಯಾನ್ಸ್​ ಇದನ್ನು ಒಪ್ತಾರಾ?

Sushant Singh Rajput: ಸುಶಾಂತ್​ ವಾಸವಾಗಿದ್ದ ಮನೆ ಈಗ ಬಾಡಿಗೆಗೆ ಲಭ್ಯ; ತಿಂಗಳ ಬಾಡಿಗೆ ಅಬ್ಬಬ್ಬಾ ಇಷ್ಟೊಂದಾ?

Follow us on

Related Stories

Most Read Stories

Click on your DTH Provider to Add TV9 Kannada