ಪೊಲೀಸರು ನನ್ನಿಂದ ಬಲವಂತವಾಗಿ ರಾಜ್​ ಕುಂದ್ರಾ ಹೆಸರು ಹೇಳಿಸಲು ಪ್ರಯತ್ನಿಸಿದ್ರು; ನಟಿ ಗೆಹನಾ ಸ್ಫೋಟಕ ಆರೋಪ

ಪೊಲೀಸರು ನನ್ನಿಂದ ಬಲವಂತವಾಗಿ ರಾಜ್​ ಕುಂದ್ರಾ ಹೆಸರು ಹೇಳಿಸಲು ಪ್ರಯತ್ನಿಸಿದ್ರು; ನಟಿ ಗೆಹನಾ ಸ್ಫೋಟಕ ಆರೋಪ
ಗೆಹನಾ ವಸಿಷ್ಠ್​, ರಾಜ್​ ಕುಂದ್ರಾ ಶೆಲ್ಪಾ ಶೆಟ್ಟಿ

ಪೊಲೀಸರ ವಿರುದ್ಧವೇ ಗೆಹನಾ ವಸಿಷ್ಠ್​ ಇಷ್ಟೆಲ್ಲ ಆರೋಪಗಳನ್ನು ಹೊರಿಸಿದ್ದಾರೆ. ಆದ್ದರಿಂದ ಪೊಲೀಸರು ಅವರನ್ನು ಮತ್ತೆ ಬಂಧಿಸುವ ಸಾಧ್ಯತೆ ಇದೆ.

TV9kannada Web Team

| Edited By: Madan Kumar

Aug 01, 2021 | 1:31 PM

ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ (Raj Kunda) ಅವರ ನೀಲಿ ಚಿತ್ರ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಕೇಸ್​ಗೆ ಸಂಬಂಧಪಟ್ಟಂತೆ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ತನಿಖೆ ವೇಳೆ ಹೊಸ ಹೊಸ ರಹಸ್ಯಗಳು ಬಯಲಾಗುತ್ತಿವೆ. ಅಶ್ಲೀಲ ಸಿನಿಮಾ ದಂಧೆಗೆ ಸಂಬಂಧಿಸಿದಂತೆ ನಟಿ ಗೆಹನಾ ವಸಿಷ್ಠ್​ (Gehana Vasisth) ಅವರನ್ನು ಕೆಲವು ತಿಂಗಳ ಹಿಂದೆ ಬಂಧಿಸಲಾಗಿತ್ತು. ಈಗ ಅವರು ಜಾಮೀನು ಪಡೆದು ಹೊರಬಂದಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ  ಮುಂಬೈ ಪೊಲೀಸರ (Mumbai Police) ವಿರುದ್ಧವೇ ಗೆಹನಾ ಹಲವು ಆರೋಪಗಳನ್ನು ಮಾಡಿದ್ದಾರೆ.

ಈ ವರ್ಷ ಫೆಬ್ರವರಿಯಲ್ಲಿ ಗೆಹನಾ ವಸಿಷ್ಠ್​ ಬಂಧನವಾಗಿತ್ತು. ಅಶ್ಲೀಲ ಸಿನಿಮಾ ದಂಧೆಯಲ್ಲಿ ಅವರು ಭಾಗಿ ಆಗಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಒಟ್ಟು ಮೂರು ಎಫ್​ಐಆರ್​ಗಳು ದಾಖಲಾಗಿವೆ. ‘ನನ್ನ ಬಳಿ ಪೊಲೀಸರು ಲಂಚ ಕೇಳಿದ್ದರು. 15 ಲಕ್ಷ ರೂ. ನೀಡಿದರೆ ಬಂಧಿಸುವುದಿಲ್ಲ ಎಂದಿದ್ದರು. ನಾನು ಏನೂ ತಪ್ಪು ಮಾಡಿಲ್ಲ ಎಂದಿದ್ದಕ್ಕೆ, ತಾವು ಯಾರ ಮೇಲೆ ಯಾವ ಕೇಸ್​ ಬೇಕಾದರು ಹಾಕಬಹುದು ಅಂತ ಪೊಲೀಸರು ಹೇಳಿದ್ದರು’ ಎಂದು ಗೆಹನಾ ಸ್ಫೋಟಕ ಆರೋಪ ಮಾಡಿದ್ದಾರೆ.

ರಾಜ್​ ಕುಂದ್ರಾ ಅವರ ಹಾಟ್​ಶಾಟ್ಸ್​ ಆ್ಯಪ್​ಗಾಗಿ ತಾವು ಕೆಲವು ಬೋಲ್ಡ್​ ಸಿನಿಮಾಗಳಲ್ಲಿ ನಟಿಸಿದ್ದು ಹೌದು ಎಂದು ಗೆಹನಾ ಒಪ್ಪಿಕೊಂಡಿದ್ದಾರೆ. ಆದರೆ ಅವು ನೀಲಿ ಅಥವಾ ಅಶ್ಲೀಲ ಸಿನಿಮಾ ಅಲ್ಲ ಎಂಬುದು ಗೆಹನಾ ವಾದ. ಈ ಪ್ರಕರಣದಲ್ಲಿ ರಾಜ್​ ಕುಂದ್ರಾ ಹೆಸರನ್ನು ಹೇಳುವಂತೆ ಪೊಲೀಸರು ತಮ್ಮ ಮೇಲೆ ಒತ್ತಡ ಹೇಳಿದ್ದರು ಎಂಬುದಾಗಿಯೂ ಗೆಹನಾ ಹೇಳಿದ್ದಾರೆ. ‘ನನ್ನ ಹೇಳಿಕೆಯಲ್ಲಿ ರಾಜ್​ ಕುಂದ್ರಾ ಮತ್ತು ನಿರ್ಮಾಪಕಿ ಏಕ್ತಾ ಕಪೂರ್​ ಅವರ ಹೆಸರನ್ನು ಉಲ್ಲೇಖಿಸುವಂತೆ ಪೊಲೀಸರು ಒತ್ತಾಯಿಸಿದ್ದರು. ಆದರೆ ನಾನು ಅದನ್ನು ನಿರಾಕರಿಸಿದೆ. ರಾಜ್​ ಕುಂದ್ರಾ ಮತ್ತು ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಗೆಹನಾ ಹೇಳಿದ್ದಾರೆ.

ಪೊಲೀಸರ ವಿರುದ್ಧವೇ ಗೆಹನಾ ಇಷ್ಟೆಲ್ಲ ಆರೋಪಗಳನ್ನು ಹೊರಿಸಿದ್ದಾರೆ. ಪೊಲೀಸರು ಮಾಧ್ಯಮಗಳಿಗೆ ತಮ್ಮ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಪೊಲೀಸರು ಅವರನ್ನು ಮತ್ತೆ ಬಂಧಿಸುವ ಸಾಧ್ಯತೆ ಇದೆ. ಹಾಗಾಗಿ ನಿರೀಕ್ಷಣಾ ಜಾಮೀನಿಗೆ ಗೆಹನಾ ಪರ ವಕೀಲರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:

ಪತಿ ರಾಜ್​ ಕುಂದ್ರಾ ನೀಲಿ ಚಿತ್ರ ಕರ್ಮಕಾಂಡದಿಂದ ಶಿಲ್ಪಾ ಶೆಟ್ಟಿಗೆ ಆಗುತ್ತಿದೆ ಕೋಟಿ ಕೋಟಿ ನಷ್ಟ

ತಿಳಿದಷ್ಟು ಚಿಕ್ಕದಿಲ್ಲ ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ದಂಧೆ; ಚಾರ್ಜ್​ಶೀಟ್​ನಿಂದ ಬಯಲಾಯ್ತು ಅಚ್ಚರಿಯ ವಿಚಾರ

Follow us on

Related Stories

Most Read Stories

Click on your DTH Provider to Add TV9 Kannada