ಪತಿ ರಾಜ್​ ಕುಂದ್ರಾ ನೀಲಿ ಚಿತ್ರ ಕರ್ಮಕಾಂಡದಿಂದ ಶಿಲ್ಪಾ ಶೆಟ್ಟಿಗೆ ಆಗುತ್ತಿದೆ ಕೋಟಿ ಕೋಟಿ ನಷ್ಟ

ಗಂಡನ ಕರ್ಮಕಾಂಡ ಬಯಲಾಗುವುದಕ್ಕೂ ಮುನ್ನ ಹಲವು ಪ್ರಾಜೆಕ್ಟ್​ಗಳಲ್ಲಿ ಶಿಲ್ಪಾ ಶೆಟ್ಟಿ ತೊಡಗಿಕೊಂಡಿದ್ದರು. ಆದರೆ ಈಗ ಈ ಯಾವ ಕಾರ್ಯಕ್ರಮಗಳಿಗೂ ಹೋಗಲು ಶಿಲ್ಪಾಗೆ ಸಾಧ್ಯವಾಗಿಲ್ಲ.

ಪತಿ ರಾಜ್​ ಕುಂದ್ರಾ ನೀಲಿ ಚಿತ್ರ ಕರ್ಮಕಾಂಡದಿಂದ ಶಿಲ್ಪಾ ಶೆಟ್ಟಿಗೆ ಆಗುತ್ತಿದೆ ಕೋಟಿ ಕೋಟಿ ನಷ್ಟ
ಶಿಲ್ಪಾ ಶೆಟ್ಟಿ
TV9kannada Web Team

| Edited By: Madan Kumar

Jul 31, 2021 | 6:22 PM

ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರಿಗೆ ಪತಿ ರಾಜ್​ ಕುಂದ್ರಾ ಕಡೆಯಿಂದ ತೀವ್ರ ಸಂಕಷ್ಟ ಎದುರಾಗಿದೆ. ಅಶ್ಲೀಲ ಸಿನಿಮಾ ದಂಧೆಯ ಪ್ರಮುಖ ಆರೋಪಿಯಾಗಿ ರಾಜ್​ ಕುಂದ್ರಾ (Raj Kundra) ಪೊಲೀಸರ ಅತಿಥಿ ಆಗಿದ್ದಾರೆ. ಶಿಲ್ಪಾ ಶೆಟ್ಟಿ ಕೂಡ ಈ ದಂಧೆಯಲ್ಲಿ ಭಾಗಿಯಾಗಿದ್ರಾ ಎಂಬ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದ್ದು, ಎಲ್ಲ ಆಯಾಮದಿಂದಲೂ ತನಿಖೆ ಮಾಡಲಾಗುತ್ತಿದೆ. ಎರಡು ಬಾರಿ ಶಿಲ್ಪಾ ಶೆಟ್ಟಿ ಅವರ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಶಿಲ್ಪಾ ದಿನಚರಿ ಬುಡಮೇಲಾಗಿದೆ. ಅದರಿಂದ ಅವರಿಗೆ ಕೋಟಿ ಕೋಟಿ ರೂ. ನಷ್ಟ ಆಗುತ್ತಿದೆ.

ಗಂಡನ ಕರ್ಮಕಾಂಡ ಬಯಲಾಗುವುದಕ್ಕೂ ಮುನ್ನ ಹಲವು ಪ್ರಾಜೆಕ್ಟ್​ಗಳಲ್ಲಿ ಶಿಲ್ಪಾ ಶೆಟ್ಟಿ ತೊಡಗಿಕೊಂಡಿದ್ದರು. ಅವರ ಡೇಟ್ಸ್​ ಹಂಚಿಕೆ ಆಗಿತ್ತು. ಅದರಲ್ಲೂ ಸೋನಿ ವಾಹಿನಿಯ ‘ಸೂಪರ್​ ಡ್ಯಾನ್ಸರ್​ 4’ ರಿಯಾಲಿಟಿ ಶೋನಲ್ಲಿ ಜಡ್ಜ್​ ಆಗಿ ಅವರು ವಾರಕ್ಕೆ ಎರಡು ದಿನ ಭಾಗವಹಿಸುತ್ತಿದ್ದರು. ಆದರೆ ಈಗ ಈ ಯಾವ ಕಾರ್ಯಕ್ರಮಗಳಿಗೂ ಹೋಗಲು ಶಿಲ್ಪಾಗೆ ಸಾಧ್ಯವಾಗುತ್ತಿಲ್ಲ. ಒಂದು ವಾರ ಅವರ ಅನುಪಸ್ಥಿತಿಯಲ್ಲಿ ಕರೀಷ್ಮಾ ಕಪೂರ್​ ಅವರು ಜಡ್ಜ್​ ಆಗಿದ್ದರು. ಮುಂಬರುವ ವಾರ ರಿತೇಶ್​ ದೇಶಮುಖ್​ ಮತ್ತು ಜೆನಿಲಿಯಾ ಡಿಸೋಜಾ ಜಡ್ಜ್​ ಸ್ಥಾನ ಅಲಂಕರಿಸಲಿದ್ದಾರೆ.

ಪ್ರತಿ ಎಪಿಸೋಡ್​ಗೆ ಶಿಲ್ಪಾ ಶೆಟ್ಟಿ 18ರಿಂದ 20 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು. ಇನ್ನೂ ಮೂರು-ನಾಲ್ಕು ವಾರ ಅವರು ಗೈರಾದರೆ ಅಂದಾಜು 2 ಕೋಟಿ ರೂ. ಸಂಭಾವನೆ ತಪ್ಪಿಹೋಗಲಿದೆ. ಅಲ್ಲದೇ ಹಲವು ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಶಿಲ್ಪಾ ರಾಯಭಾರಿ ಆಗಿದ್ದು, ಆ ಪೈಕಿ ಕೆಲ ಕಂಪನಿಗಳು ಒಪ್ಪಂದ ಮುರಿದುಕೊಳ್ಳಲು ಮುಂದಾಗಿವೆ ಎನ್ನಲಾಗಿದೆ. ಈ ಎಲ್ಲ ಕಾರಣದಿಂದ ಆರ್ಥಿಕವಾಗಿ ಶಿಲ್ಪಾ ಶೆಟ್ಟಿಗೆ ದೊಡ್ಡ ಹೊಡೆತ ಬೀಳುತ್ತಿದೆ.

‘ಸೂಪರ್​ ಡ್ಯಾನ್ಸರ್​ 4’ ರಿಯಾಲಿಟಿ ಶೋನ ಜಡ್ಜ್​ ಸ್ಥಾನದಿಂದ ಶಿಲ್ಪಾ ಅವರನ್ನು ಕೆಳಗಿಳಿಸಲಾಗಿದೆ ಎಂಬ ಸುದ್ದಿ ಕೂಡ ಇತ್ತೀಚೆಗೆ ಹಬ್ಬಿತ್ತು. ಆದರೆ ಅದನ್ನು ಸೋನಿ ವಾಹಿನಿ ತಳ್ಳಿ ಹಾಕಿದೆ. ಒಟ್ಟಿನಲ್ಲಿ ಪತಿ ಮಾಡಿದ ತಪ್ಪಿಗೆ ಶಿಲ್ಪಾ ಶೆಟ್ಟಿ ಹಲವು ಬಗೆಯ ಕಷ್ಟ ಅನುಭವಿಸುವಂತಾಗಿದೆ. ಇತ್ತೀಚೆಗೆ ಪೊಲೀಸರೊಂದಿಗೆ ಮನೆಗೆ ಬಂದಿದ್ದ ಗಂಡನ ಮೇಲೆ ಶಿಲ್ಪಾ ಹರಿಹಾಯ್ದಿದ್ದರು ಎಂದು ಸುದ್ದಿ ಆಗಿತ್ತು. ‘ಇಷ್ಟೆಲ್ಲ ಶ್ರೀಮಂತಿಕೆ ಇದ್ದರೂ ಕೂಡ ಅಶ್ಲೀಲ ಸಿನಿಮಾ ದಂಧೆಗೆ ಯಾಕೆ ಕೈ ಹಾಕಿದ್ರಿ’ ಎಂದು ಕಣ್ಣೀರು ಸುರಿಸುತ್ತ ರಾಜ್​ ಕುಂದ್ರಾ ಎದುರು ಅವರು ರಂಪಾಟ ಮಾಡಿದ್ದರು ಎನ್ನಲಾಗಿತ್ತು.

ಇದನ್ನೂ ಓದಿ:

‘ಚೆನ್ನಾಗಿದ್ದಾಗ ಶಿಲ್ಪಾ ಶೆಟ್ಟಿ ಜೊತೆ ಎಲ್ಲರೂ ಪಾರ್ಟಿ ಮಾಡಿದ್ರಿ, ಆದರೆ ಈಗ?’ ಬಾಲಿವುಡ್​ ಮಂದಿಗೆ ಹನ್ಸಲ್​ ಮೆಹ್ತಾ ಚಾಟಿ

ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ ದಂಪತಿಗೆ ಶಾಕ್​; ದೊಡ್ಡ ಮೊತ್ತದ ದಂಡ ವಿಧಿಸಿದ ಸೆಬಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada