ಕರೀನಾ ಕಪೂರ್​ 12 ಕೋಟಿ ಸಂಭಾವನೆ ಕೇಳಿದ ವಿಚಾರ; ಬೆಬೊ ಬೆಂಬಲಕ್ಕೆ ನಿಂತ ಕರಾವಳಿ ನಟಿ

ಈ ವಿಚಾರಕ್ಕೆ ತಕ್ಕಂತೆ ಕರೀನಾ ಅವರನ್ನು ಅನೇಕರು ಬೆಂಬಲಿಸಿದ್ದರು. ನಟಿ ಪ್ರಿಯಾಮಣಿ, ತಾಪ್ಸೀ ಪನ್ನು ಸೇರಿ ಸಾಕಷ್ಟು ಹಿರೋಯಿನ್​ಗಳು ಕರೀನಾ ಅವರನ್ನು ಬೆಂಬಲಿಸಿದ್ದರು. ಈಗ ಪೂಜಾ ಹೆಗ್ಡೆ ಕೂಡ ಕರೀನಾ ಬೆಂಬಲಕ್ಕೆ ನಿಂತಂತಾಗಿದೆ.

ಕರೀನಾ ಕಪೂರ್​ 12 ಕೋಟಿ ಸಂಭಾವನೆ ಕೇಳಿದ ವಿಚಾರ; ಬೆಬೊ ಬೆಂಬಲಕ್ಕೆ ನಿಂತ ಕರಾವಳಿ ನಟಿ
ಕರೀನಾ ಕಪೂರ್​ ಖಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 30, 2021 | 8:27 PM

ರಾಮಾಯಣದ ಕಥೆ ಆಧರಿಸಿ ಬಾಲಿವುಡ್​ನಲ್ಲಿ ಸಿದ್ಧ ಆಗಬೇಕಿರುವ ಬಿಗ್​ ಬಜೆಟ್​ ಸಿನಿಮಾದಲ್ಲಿ ಸೀತೆ ಪಾತ್ರ ಮಾಡೋಕೆ ಕರೀನಾ ಕಪೂರ್​ ಬರೋಬ್ಬರಿ 12 ಕೋಟಿ ರೂ. ಸಂಭಾವನೆ ಕೇಳಿದ್ದಾರೆ ಎಂಬ ಗುಸುಗುಸು ಇತ್ತೀಚೆಗೆ ಹರಿದಾಡಿತ್ತು. ಈ ವಿಚಾರದಲ್ಲಿ ಅವರು ಸಾಕಷ್ಟು ಟ್ರೋಲ್​ಗಳು ಕೂಡ ಹರಿದಾಡಿದ್ದವು. ಈಗ ಕರೀನಾ ಬೆಂಬಲಕ್ಕೆ ಕರಾವಳಿ ಬೆಡಗಿ ಪೂಜಾ ಹೆಗ್ಡೆ ನಿಂತಿದ್ದಾರೆ.  

ಈ ಬಗ್ಗೆ ಪೂಜಾ ಹೆಗ್ಡೆ ಆಂಗ್ಲ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. ‘ಕೆಲವಷ್ಟು ಜನರು ಹೇಳುತ್ತಾರೆ, ಏಕೆಂದರೆ ಹೇಳೋದೆ ಅವರ ಕೆಲಸ. ಕರೀನಾ ತಮ್ಮ ಮೌಲ್ಯಕ್ಕೆ ತಕ್ಕಂತೆ ಸಂಭಾವನೆ ಕೇಳಿದ್ದಾರೆ. ಯಾವ ಮಹಿಳೆಯರು ತಮ್ಮ ಮೌಲ್ಯವನ್ನು ಕಂಡುಕೊಳ್ಳುತ್ತಾರೋ ಅವರಿಗೆ ತಕ್ಕನಾದ ಗೌರವ ಸಿಕ್ಕೇ ಸಿಗುತ್ತದೆ’ ಎಂದು ಪೂಜಾ ಅವರು ಕರೀನಾರನ್ನು ಬೆಂಬಲಿಸಿದ್ದಾರೆ.

ಈ ವಿಚಾರಕ್ಕೆ ತಕ್ಕಂತೆ ಕರೀನಾ ಅವರನ್ನು ಅನೇಕರು ಬೆಂಬಲಿಸಿದ್ದರು. ನಟಿ ಪ್ರಿಯಾಮಣಿ, ತಾಪ್ಸೀ ಪನ್ನು ಸೇರಿ ಸಾಕಷ್ಟು ಹಿರೋಯಿನ್​ಗಳು ಕರೀನಾ ಅವರನ್ನು ಬೆಂಬಲಿಸಿದ್ದರು. ಈಗ ಪೂಜಾ ಹೆಗ್ಡೆ ಕೂಡ ಕರೀನಾ ಬೆಂಬಲಕ್ಕೆ ನಿಂತಂತಾಗಿದೆ.

ರಾಮಾಯಣದ ಕಥೆಯನ್ನು ಈಗಾಗಲೇ ಜನರು ಹಲವು ರೂಪಗಳಲ್ಲಿ ತಿಳಿದುಕೊಂಡಿದ್ದಾರೆ. ಸೀರಿಯಲ್​, ಸಿನಿಮಾ, ವೆಬ್​ ಸಿರೀಸ್​ನಲ್ಲೂ ರಾಮಾಯಣ ಮೂಡಿಬಂದಿದೆ. ಹಾಗಿದ್ದರೂ ಮತ್ತೊಮ್ಮೆ ಮೆಗಾ ಬಜೆಟ್​ನಲ್ಲಿ ರಾಮಾಯಣ ಕಥೆಯನ್ನು ತೆರೆ ಮೇಲೆ ತರಲು ಬಾಲಿವುಡ್​ನಲ್ಲಿ ಮಾತುಕತೆ ನಡೆಯುತ್ತಿದೆ. ಆ ಚಿತ್ರದ ಸೀತೆ ಪಾತ್ರಕ್ಕೆ ಕರೀನಾಗೆ ಆಫರ್​ ನೀಡಲಾಗಿತ್ತು. ಆದರೆ ಅವರು 12 ಕೋಟಿ ರೂ. ಸಂಭಾವನೆ ಕೇಳಿದ್ದರಿಂದ, ಅಷ್ಟು ಕೊಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರನ್ನು ತಂಡದಿಂದ ಕೈ ಬಿಡಲಾಯಿತು ಎಂಬ ಗಾಸಿಪ್​ ಹರಿದಾಡಿತ್ತು.

ಕರೀನಾ ಎರಡನೇ ಮಗುವಿನ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಮಗುವಿಗೆ ಜನ್ಮ ನೀಡುವುದಕ್ಕೂ ಮುನ್ನ ಅವರು ಆಮೀರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇದೆ. ಲಾಕ್​ಡೌನ್​ ಕಾರಣಕ್ಕಾಗಿ ಚಿತ್ರದ ಕೆಲಸಗಳು ತಡವಾಗಿವೆ. ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಚಿತ್ರದ ಹಿಂದಿ ರಿಮೇಕ್​ ಆಗಿ ‘ಲಾಲ್​ ಸಿಂಗ್​ ಚಡ್ಡಾ’ ಮೂಡಿಬರುತ್ತಿದೆ. ಕಭಿ ಈದ್​ ಕಭಿ ದಿವಾಳಿ ಸಿನಿಮಾದಲ್ಲಿ ಪೂಜಾ ನಟಿಸುತ್ತಿದ್ದಾರೆ.  ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾಗೂ ಪೂಜಾ ನಾಯಕಿ.

ಇದನ್ನೂ ಓದಿ: ‘ಕೂದಲು ಮುಟ್ಟಿದ್ರೆ ಕರೀನಾ ನನ್ನ ಕೊಂದುಬಿಡ್ತಾಳೆ’; ಸಂಸಾರದ ಗುಟ್ಟು ತೆರೆದಿಟ್ಟ ಸೈಫ್​ ಅಲಿ ಖಾನ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ