ಇಷ್ಟೆಲ್ಲ ಸಹಾಯ ಮಾಡಿದ ಸೋನು ಸೂದ್​ಗೆ ಜನರಿಂದ ಸಿಕ್ಕಿದ್ದೇನು? ಅದನ್ನು ಅಳತೆ ಮಾಡಲು ಸಾಧ್ಯವಿಲ್ಲ

Sonu Sood Birthday: ಎಷ್ಟೋ ಜನರು ತಮಗೆ ಜನಿಸಿದ ಮಗುವಿಗೆ ಸೋನು ಸೂದ್​ ಎಂದು ಹೆಸರು ಇಟ್ಟಿದ್ದಾರೆ. ಅನೇಕರ ಮನೆಗಳಲ್ಲಿ ದೇವರ ಫೋಟೋ ಜೊತೆಗೆ ಸೋನು ಸೂದ್​ ಅವರ ಭಾವಚಿತ್ರವನ್ನೂ ಇಟ್ಟು ಪೂಜೆ ಮಾಡಲಾಗುತ್ತಿದೆ.

ಇಷ್ಟೆಲ್ಲ ಸಹಾಯ ಮಾಡಿದ ಸೋನು ಸೂದ್​ಗೆ ಜನರಿಂದ ಸಿಕ್ಕಿದ್ದೇನು? ಅದನ್ನು ಅಳತೆ ಮಾಡಲು ಸಾಧ್ಯವಿಲ್ಲ
ಸೋನು ಸೂದ್​

ನಟ ಸೋನು ಸೂದ್​ (Sonu Sood) ಅವರನ್ನು ಪರಿಚಯ ಮಾಡಿಕೊಡುವ ಅಗತ್ಯವೇ ಇಲ್ಲ. ಅಷ್ಟರಮಟ್ಟಿಗೆ ಅವರು ಫೇಮಸ್​ ಆಗಿದ್ದಾರೆ. ಸಿನಿಮಾಗಳಿಗಿಂತಲೂ ಸಮಾಜಸೇವೆಯ ಕಾರಣದಿಂದ ಅವರಿಗೆ ಹೆಚ್ಚು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಲಾಕ್​ಡೌನ್​ನಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದಕ್ಕಾಗಿ ಅವರು ‘ರಿಯಲ್​ ಹೀರೋ’ (Real Hero Sonu Sood) ಎನಿಸಿಕೊಂಡಿದ್ದಾರೆ. ಇಂದಿಗೂ ಅವರು ಜನಸೇವೆ ಮಾಡುವುದನ್ನು ನಿಲ್ಲಿಸಿಲ್ಲ. ಬಡವರಿಗೆ ಸದಾ ಅವರು ಸಹಾಯಹಸ್ತ ಚಾಚಿರುತ್ತಾರೆ. ಇಂದು (ಜು.30) ಸೋನು ಸೂದ್​ ಜನ್ಮದಿನ (Birthday). ದೇಶದೆಲ್ಲೆಡೆಯಿಂದ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲಾಗುತ್ತಿದೆ. 

ಬಡಜನರಿಗೆ ಸೋನು ಸೂದ್​ ಕಡೆಯಿಂದ ಸಿಕ್ಕಾಪಟ್ಟೆ ಸಹಾಯ ಆಗಿದೆ. ತಮ್ಮದೇ ಹಣ ಖರ್ಚು ಮಾಡಿ ಅವರು ಅನೇಕರಿಗೆ ಶಿಕ್ಷಣ, ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸ್ವಂತ ವ್ಯಾಪಾರ ಆರಂಭಿಸಲು ಎಷ್ಟೋ ಬಡವರಿಗೆ ಹಣಕಾಸಿನ ನೆರವು ನೀಡಿದ್ದಾರೆ. ಇಷ್ಟೆಲ್ಲ ಮಾಡಿರುವ ಸೋನು ಸೂದ್​ಗೆ ಜನರಿಂದ ಸಿಕ್ಕಿರುವುದು ಏನು? ಅದನ್ನು ಹಣದಲ್ಲಿ ಅಳತೆ ಮಾಡಲು ಸಾಧ್ಯವಿಲ್ಲ.

ಎಷ್ಟೋ ಜನರು ತಮಗೆ ಜನಿಸಿದ ಮಗುವಿಗೆ ಸೋನು ಸೂದ್​ ಎಂದು ಹೆಸರು ಇಟ್ಟಿದ್ದಾರೆ. ಅನೇಕರ ಮನೆಗಳಲ್ಲಿ ದೇವರ ಫೋಟೋ ಜೊತೆಗೆ ಸೋನು ಸೂದ್​ ಅವರ ಭಾವಚಿತ್ರವನ್ನೂ ಇಟ್ಟು ಪೂಜೆ ಮಾಡಲಾಗುತ್ತಿದೆ. ಇದು ಜನರಿಂದ ಅವರಿಗೆ ಸಿಕ್ಕಿರುವ ಪ್ರೀತಿ. ಅದರ ಜೊತೆಗೆ ದೇಶಾದ್ಯಂತ ಎಷ್ಟೋ ಅಂಗಡಿಗಳಿಗೆ ಈಗ ಸೋನು ಸೂದ್​ ಹೆಸರು ಇಡಲಾಗಿದೆ. ಹಾಗಂತ ಇವು ಯಾವುವೂ ಐಷಾರಾಮಿ ಮಳಿಗೆಗಳಲ್ಲ. ಚಿಕ್ಕ ಮೊಬೈಲ್​ ಅಂಗಡಿ, ವೆಲ್ಡಿಂಗ್​ ಶಾಪ್​, ಮಟನ್​ ಶಾಪ್​ ಮುಂತಾದ ಅಂಗಡಿಗಳಿಗೆ ಸೋನು ಅವರ ಹೆಸರಿಟ್ಟು ಗೌರವ ಸೂಚಿಸಲಾಗುತ್ತಿದೆ.

ಈ ಮೂಲಕ ಬೇರೆ ಯಾವ ನಟರಿಗೂ ಸಿಗದಷ್ಟು ಗೌರವ, ಪ್ರೀತಿ, ಅಭಿಮಾನವನ್ನು ಜನರು ಸೋನು ಸೂದ್​ಗೆ ನೀಡುತ್ತಿದ್ದಾರೆ. ಜನ್ಮದಿನದ ಪ್ರಯಕ್ತ ತೆಲುಗು ದೇಶಂ ಪಾರ್ಟಿ ಅಧ್ಯಕ್ಷ ಎನ್​. ಚಂದ್ರಬಾಬು ನಾಯ್ಡು ಕೂಡ ಶುಭಾಶಯ ತಿಳಿಸಿದ್ದಾರೆ.

‘ಭರವಸೆಯ ಕಿರಣವಾಗಿರುವ ನೀವು ಅಸಂಖ್ಯಾತ ಪ್ರಜೆಗಳಿಗೆ ಸ್ಫೂರ್ತಿಯಾಗಿದ್ದೀರಿ. ನೀವು ನಿಜಕ್ಕೂ ರಿಯಲ್​ ಹೀರೋ. ನಿಮಗೆ ಉತ್ತಮ ಆರೋಗ್ಯ, ಸಂತಸ ಮತ್ತು ಯಶಸ್ಸು ಸಿಗಲಿ ಎಂದ ಹಾರೈಸುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು’ ಎಂದು ಚಂದ್ರಬಾಬು ನಾಯ್ಡು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

ತಾಯಿ ಫೋಟೋ ಜೊತೆ ಸೋನು ಸೂದ್​ ಭಾವುಕ ಪತ್ರ; ಮನಮುಟ್ಟುವ ಸಾಲುಗಳು ಇಲ್ಲಿವೆ..

ರಾಜಕೀಯಕ್ಕೆ ಬರಲ್ಲ ಎನ್ನುವ ಸೋನು ಸೂದ್​ಗೆ ಈ ರಾಜಕಾರಣಿ ಕಂಡರೆ ಹೆಚ್ಚು ಅಭಿಮಾನ; ಯಾರದು?

Click on your DTH Provider to Add TV9 Kannada