‘ಚೆನ್ನಾಗಿದ್ದಾಗ ಶಿಲ್ಪಾ ಶೆಟ್ಟಿ ಜೊತೆ ಎಲ್ಲರೂ ಪಾರ್ಟಿ ಮಾಡಿದ್ರಿ, ಆದರೆ ಈಗ?’ ಬಾಲಿವುಡ್​ ಮಂದಿಗೆ ಹನ್ಸಲ್​ ಮೆಹ್ತಾ ಚಾಟಿ

‘ಸ್ಕ್ಯಾಮ್​ 1992’ ವೆಬ್​ ಸಿರೀಸ್​ ನಿರ್ದೇಶಕ ಹನ್ಸಲ್​ ಮೆಹ್ತಾ ಅವರು ತಮ್ಮ ನೇರ ನಡೆ-ನುಡಿಯ ಕಾರಣದಿಂದ ಫೇಮಸ್​. ಈಗ ಅವರು ಶಿಲ್ಪಾ ಶೆಟ್ಟಿ ಪರವಾಗಿ ಧ್ವನಿ ಎತ್ತಿದ್ದಾರೆ.

‘ಚೆನ್ನಾಗಿದ್ದಾಗ ಶಿಲ್ಪಾ ಶೆಟ್ಟಿ ಜೊತೆ ಎಲ್ಲರೂ ಪಾರ್ಟಿ ಮಾಡಿದ್ರಿ, ಆದರೆ ಈಗ?’ ಬಾಲಿವುಡ್​ ಮಂದಿಗೆ ಹನ್ಸಲ್​ ಮೆಹ್ತಾ ಚಾಟಿ
ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ
Follow us
TV9 Web
| Updated By: ಮದನ್​ ಕುಮಾರ್​

Updated on: Jul 31, 2021 | 9:24 AM

ಪತಿ ರಾಜ್​ ಕುಂದ್ರಾ (Raj Kundra) ಮಾಡಿದ ತಪ್ಪಿಗಾಗಿ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕಷ್ಟ ಅನುಭವಿಸುವಂತಾಗಿದೆ. ಸಾರ್ವಜನಿಕ ಜೀವನದಲ್ಲಿ ಸಖತ್​ ಜನಪ್ರಿಯತೆ ಪಡೆದುಕೊಂಡಿದ್ದ ಅವರಿಗೆ ಈಗ ಕಳಂಕ ಅಂಟಿಕೊಂಡಿದೆ. ಪತಿಯ ಅಶ್ಲೀಲ ಸಿನಿಮಾ ದಂಧೆಯ ಕಾರಣದಿಂದ ಶಿಲ್ಪಾ ಶೆಟ್ಟಿ ಮುಜುಗರ ಅನುಭವಿಸುವಂತಾಗಿದೆ. ಅವರ ಬಗ್ಗೆ ಇಲ್ಲಸಲ್ಲದ ಗಾಸಿಪ್​ಗಳೆಲ್ಲ ಹರಿದಾಡುತ್ತಿವೆ. ಇಂಥ ಸಂದರ್ಭದಲ್ಲಿ ಬಾಲಿವುಡ್​ನ ಬಹುತೇಕ ಸೆಲೆಬ್ರಿಟಿಗಳು ಮೌನ ವಹಿಸಿದ್ದಾರೆ. ಯಾರೂ ಕೂಡ ಸರಿಯಾಗಿ ಶಿಲ್ಪಾಗೆ ಬೆಂಬಲ ನೀಡುತ್ತಿಲ್ಲ. ಇದನ್ನು ನಿರ್ದೇಶಕ ಹನ್ಸಲ್​ ಮೆಹ್ತಾ (Hansal Mehta) ಖಂಡಿಸಿದ್ದಾರೆ. ತಮ್ಮ ಕಟು ಮಾತುಗಳ ಮೂಲಕ ಅವರು ಟೀಕೆ ಮಾಡಿದ್ದಾರೆ.

‘ಸ್ಕ್ಯಾಮ್​ 1992’ ವೆಬ್​ ಸಿರೀಸ್​ ನಿರ್ದೇಶಕ ಹನ್ಸಲ್​ ಮೆಹ್ತಾ ಅವರು ತಮ್ಮ ನೇರ ನಡೆ-ನುಡಿಯ ಕಾರಣದಿಂದ ಫೇಮಸ್​. ಈಗ ಅವರು ಶಿಲ್ಪಾ ಶೆಟ್ಟಿ ಪರವಾಗಿ ಧ್ವನಿ ಎತ್ತಿದ್ದಾರೆ. ಅಲ್ಲದೆ, ಸೈಲೆಂಟ್​ ಆಗಿರುವ ಬಾಲಿವುಡ್​ ಸೆಲೆಬ್ರಿಟಿಗಳ ವಿರುದ್ಧ ಅವರು ಗುಡುಗಿದ್ದಾರೆ. ಈ ಕುರಿತು ಹನ್ಸಲ್​ ಮೆಹ್ತಾ ಮಾಡಿರುವ ಸರಣಿ ಟ್ವೀಟ್​ ವೈರಲ್​ ಆಗುತ್ತಿದೆ.

‘ಒಳ್ಳೆಯ ಸಮಯದಲ್ಲಿ ಎಲ್ಲರೂ ಜೊತೆಯಾಗಿ ಪಾರ್ಟಿ ಮಾಡುತ್ತಾರೆ. ಕಷ್ಟದ ಸಂದರ್ಭದಲ್ಲಿ ದೊಡ್ಡ ಮೌನ ಆವರಿಸುತ್ತದೆ. ಎಲ್ಲರೂ ದೂರಾಗಿಬಿಡುತ್ತಾರೆ. ಅಂತಿಮವಾಗಿ ಏನೇ ಸತ್ಯ ಹೊರಬರಬಹುದು. ಆದರೆ ಅದಕ್ಕೂ ಮುನ್ನವೇ ಶಿಲ್ಪಾ ಶೆಟ್ಟಿಗೆ ಹಾನಿ ಆಗಿದೆ’ ಎಂದು ಹನ್ಸಲ್ ಮೆಹ್ತಾ ಗರಂ ಆಗಿದ್ದಾರೆ.

‘ಸಿನಿಮಾ ಸೆಲೆಬ್ರಿಟಿಯ ಮೇಲೆ ಆರೋಪಗಳು ಕೇಳಿಬಂದಾಗ ಅವರ ಖಾಸಗಿತನದ ಮೇಲೆ ದಾಳಿ ಮಾಡಲಾಗುತ್ತದೆ. ಗಾಸಿಪ್​ಗಳ ಮೂಲಕ ಚಾರಿತ್ರ್ಯ ಹರಣ ಮಾಡುತ್ತ, ಜಡ್ಜ್​ಮೆಂಟ್​ ನೀಡಲಾಗುತ್ತದೆ. ಇತರೆ ಸೆಲೆಬ್ರಿಟಿಗಳು ಬೆಂಬಲ ನೀಡದೇ ಮೌನವಾಗಿರುವುದರಿಂದಲೇ ಇಷ್ಟೆಲ್ಲ ಆಗುತ್ತದೆ’ ಎಂದು ಹನ್ಸಲ್​ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.

ರಾಜ್​ ಕುಂದ್ರಾ ಪೊಲೀಸರ ಅತಿಥಿ ಆದಾಗಿನಿಂದಲೂ ಶಿಲ್ಪಾ ಶೆಟ್ಟಿಯ ದಿನಚರಿ ಬುಡಮೇಲಾಗಿದೆ. ಇಷ್ಟು ದಿನ ಆರಾಮಾಗಿ ನಡೆದುಕೊಂಡು ಬರುತ್ತಿದ್ದ ಅವರ ಕೆಲಸಗಳಿಗೆಲ್ಲ ಬ್ರೇಕ್​ ಬಿದ್ದಿದೆ. ‘ಸೂಪರ್​ ಡ್ಯಾನ್ಸರ್​ 4’ ರಿಯಾಲಿಟಿ ಶೋನಿಂದ ಅವರು ಕಾಣೆ ಆಗಿಬಿಟ್ಟಿದ್ದಾರೆ. ಸೋನಿ ಟಿವಿಯ ಜನಪ್ರಿಯ ‘ಸೂಪರ್​ ಡ್ಯಾನ್ಸರ್​ 4’ ರಿಯಾಲಿಟಿ ಶೋಗೆ ದೊಡ್ಡ ಪ್ರೇಕ್ಷಕವರ್ಗ ಇದೆ. ಆ ಕಾರ್ಯಕ್ರಮದಲ್ಲಿ ಜಡ್ಜ್​ ಆಗಿ ಶಿಲ್ಪಾ ಶೆಟ್ಟಿ ಕೆಲಸ ಮಾಡುತ್ತಿದ್ದರು. ಆದರೆ ಪತಿ ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ಕೇಸ್​ನಲ್ಲಿ ಸಿಕ್ಕಿಹಾಕಿಕೊಂಡ ನಂತರದಿಂದ ಶಿಲ್ಪಾ ಶೆಟ್ಟಿ ‘ಸೂಪರ್​ ಡ್ಯಾನ್ಸರ್​ 4’ ರಿಯಾಲಿಟಿ ಶೋ ಸೆಟ್​ಗೆ ಕಾಲಿಟ್ಟಿಲ್ಲ.

ಕಾರ್ಯಕ್ರಮದ ಆಯೋಜಕರು ಹಲವು ಬಾರಿ ಸಂಪರ್ಕಿಸುವ ಪ್ರಯತ್ನ ಮಾಡಿದರೂ ಕೂಡ ಶಿಲ್ಪಾ ಶೆಟ್ಟಿ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿಲ್ಲ. ಹಾಗಾಗಿ ಜಡ್ಜ್​ ಸ್ಥಾನಕ್ಕೆ ಶಿಲ್ಪಾ ಬದಲು ಬೇರೆ ಸೆಲೆಬ್ರಿಟಿಗಳನ್ನು ಕರೆತರುವುದು ಅನಿವಾರ್ಯ ಆಗಿದೆ.

ಇದನ್ನೂ ಓದಿ:

ಗಂಡನ ಪ್ರಮಾದಗಳನ್ನು ಬದಿಗಿಟ್ಟು ಮಾಧ್ಯಮಗಳನ್ನು ದೂಷಿಸಲಾರಂಭಿಸಿದ ನಟಿ ಶಿಲ್ಪಾ ಶೆಟ್ಟಿ

ಆ ಆ್ಯಪ್​ ಬಗ್ಗೆ ನಂಗೆ ಗೊತ್ತಿಲ್ಲ, ಪತಿಯ ಉದ್ಯಮದಲ್ಲಿ ನಾನು ತಲೆ ಹಾಕಲ್ಲ; ಶಿಲ್ಪಾ ಶೆಟ್ಟಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ