ರಾಜ್ ಕುಂದ್ರಾ ಮುಖವಾಡ ಕಳಚಲಾರಂಭಿಸಿದೆ, ಬೆತ್ತಲೆ ಮಾಡಿ ವಿಡಿಯೋ ಶೂಟ್ ಮಾಡಲಾಯಿತು ಅಂತ ದೂರಿದ್ದಾರೆ ಒಬ್ಬ ಮಾಡೆಲ್!

ಈ ಮಾಡೆಲ್ ಪೊಲೀಸರಿಗೆ ಸಲ್ಲಿಸಿರುವ ದೂರಿನ ಸಾರಾಂಶವೇನೆಂದರೆ, ಸಿನಿಮಾಗಳಲ್ಲಿ ಅವಕಾಶ ಕೊಡಿಸುವ ಆಮಿಷ ಒಡ್ಡಿ, ಆಕೆಯ ಬೆತ್ತಲೆ ದೇಹವನ್ನು ಶೂಟ್ ಮಾಡಲಾಗಿದೆ. ಹುಟ್ಟುಡುಗೆಯಲ್ಲಿ ಕೆಸರಿನಿಂದ ಆಕೆ ಮೇಲೆದ್ದು ಬರುವ ಶೂಟ್ಗೆ ಕುಂದ್ರಾ ರೂ. ಒಂದು ಲಕ್ಷ ಸಂಭಾವನೆ ನೀಡುವ ಭರವಸೆ ನೀಡಿದ್ದರಂತೆ.

ಒಂದು ಕಡೆ ನೀಲಿ ಚಿತ್ರ ತಯಾರಿಸಿರುವ ಆರೋಪ ಹೊತ್ತ ಉದ್ಯಮಿ ರಾಜ್ ಕುಂದ್ರಾರ ಪತ್ನಿ ತನ್ನ ಮತ್ತು ಗಂಡನ ಬಗ್ಗೆ ವರದಿ ಮಾಡಿದರೆ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಒಡ್ಡುತ್ತಾರೆ. ಆದರೆ ಮತ್ತೊಂದೆಡೆ ಮುಂಬೈನ ಮಾಡೆಲ್ ಒಬ್ಬರು ಕುಂದ್ರಾ ತನ್ನನ್ನು ಶೋಷಿಸಿ ಬ್ಲ್ಯಾಕ್ಮೇಲ್ ಮಾಡಿರುವ ಬಗ್ಗೆ ಮಹಾನಗರದ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ದೂರು ಸಲ್ಲಿಸುತ್ತಾರೆ. ಆಕೆ ಪೋಲಿಸರಲ್ಲಿಗೆ ಹೋಗಿದ್ದೇ ಒಳ್ಳೆಯದಾಯಿತು, ನ್ಯಾಯ ಕೇಳಿ ಶಿಲ್ಪಾ ಹತ್ತಿರ ಹೋಗಿದ್ದರೆ, ಬಾಯಿ ಮುಚ್ಚಿಕೊಂಡಿರದಿದ್ದರೆ, ಕೇಸ್ ಮಾಡ್ತೀನಿ ಅಂತ ನಟಿ ಹೇಳುವುದನ್ನು ಕೇಳಿಸಿಕೊಳ್ಳಬೇಕಾಗುತ್ತಿತ್ತು!

ಈ ಮಾಡೆಲ್ ಪೊಲೀಸರಿಗೆ ಸಲ್ಲಿಸಿರುವ ದೂರಿನ ಸಾರಾಂಶವೇನೆಂದರೆ, ಸಿನಿಮಾಗಳಲ್ಲಿ ಅವಕಾಶ ಕೊಡಿಸುವ ಆಮಿಷ ಒಡ್ಡಿ, ಆಕೆಯ ಬೆತ್ತಲೆ ದೇಹವನ್ನು ಶೂಟ್ ಮಾಡಲಾಗಿದೆ. ಹುಟ್ಟುಡುಗೆಯಲ್ಲಿ ಕೆಸರಿನಿಂದ ಆಕೆ ಮೇಲೆದ್ದು ಬರುವ ಶೂಟ್ಗೆ ಕುಂದ್ರಾ ರೂ. ಒಂದು ಲಕ್ಷ ಸಂಭಾವನೆ ನೀಡುವ ಭರವಸೆ ನೀಡಿದ್ದರಂತೆ. ಆದರೆ ಶೂಟ್ ಮುಗಿದ ನಂತರ ಆಕೆಯ ಕೈಗಿತ್ತಿದ್ದು ಕೇವಲ ರೂ. 10,000. ಬೆತ್ತಲೆ ಭಾಗವನ್ನು ಎಡಿಟ್ ಮಾಡುವಾಗ ಬ್ಲರ್ ಮಾಡಲಾಗುವುದು ವಿಡಿಯೋ ಏರ್ ಮಾಡುವ ಮೊದಲು ಆಕೆಗೆ ತೋರಿಸಲಾಗುವುದು ಅಂತಲೂ ಕುಂದ್ರಾ ಹೇಳಿದ್ದರಂತೆ.

ಎಡಿಟ್ ಆದ ನಂತರವೂ ವಿಡಿಯೋದಲ್ಲಿ ತನ್ನ ಬೆತ್ತಲೆ ದೃಶ್ಯಗಳಿರುವ ಬಗ್ಗೆ ಆಕೆ ಆಕ್ಷೇಪಣೆ ಎತ್ತಿದಾಗ ಕುಂದ್ರಾ ಆಕೆಗೆ ರೂ 3,500 ನೀಡಿ ಸುಮ್ಮನಿರುವಂತೆ ಸೂಚಿಸಿದರಂತೆ. ಆಕೆ ಪ್ರತಿಭಟಿಸಿದಾಗ ಕರೀಯರ್ ಹಾಳು ಮಾಡುವ ಬೆದರಿಕೆಯನ್ನು ಕುಂದ್ರಾ ಒಡ್ಡಿದರಂತೆ.

ಇದೇ ರೀತಿ ಒಟ್ಟು 4 ವಯಸ್ಕ ಚಿತ್ರಗಳಲ್ಲಿ ನಟಿಸುವಂಥ ಅಸಾಹಾಯಕ ಸ್ಥಿತಿಗೆ ತನ್ನನ್ನು ದೂಡಲಾಯಿತು ಎಂದು ಆ ಮಾಡೆಲ್ ಹೇಳಿದ್ದಾರೆ.

ಆ ಶೂಟ್ ಮುಗಿಸಿ ಗಂಡ ಮನೆಗೆ ಬಂದಾಗಲೂ ಶಿಲ್ಪಾ ‘ಸೂಪರ್ ಸೆ ಊಪರ್’ ಅಂತ ಉದ್ಗರಿಸಿದರೇ?

ಇದನ್ನೂ ಓದಿ: ಸುಮಂತ್​ ಅಕ್ಕಿನೇನಿ 2ನೇ ಮದುವೆ? ಲಗ್ನ ಪತ್ರಿಕೆ ವೈರಲ್​ ಆದ ಬಳಿಕ ಸ್ಪಷ್ಟನೆ ನೀಡಿದ ನಟ

Click on your DTH Provider to Add TV9 Kannada