‘ಎಲ್ಲರಿಗೂ ಇಂಥ ಆಸೆ ಇರುತ್ತೆ, ನಂಗೆ ಇರಲ್ವಾ?’ ವಜ್ರೇಶ್ವರಿ ಕಂಬೈನ್ಸ್​ ಬಗ್ಗೆ ಡಾ. ರಾಜ್​ ಮೊಮ್ಮಗಳ ಮನದ ಮಾತು

‘ಇನ್ನೂ ಸ್ವಲ್ಪ ದಿನಗಳ ಕಾಲ ತಾತ (ಡಾ. ರಾಜ್​ಕುಮಾರ್​) ನಮ್ಮ ಜೊತೆ ಇರಬಹುದಿತ್ತು. ಈ ಸಂದರ್ಭದಲ್ಲಿ ಅವರಿಂದ ಸಿಗಬಹುದಾಗಿದ್ದ ಸಲಹೆ, ಮಾರ್ಗದರ್ಶನ ಬಹಳ ಮುಖ್ಯವಾಗುತ್ತಿತ್ತು’ ಎಂದು ತಮ್ಮ ಮೊದಲ ಸಿನಿಮಾ ಬಿಡುಗಡೆ ಸಮಯದಲ್ಲಿ ಧನ್ಯಾ ರಾಮ್​ಕುಮಾರ್​ ಮಾತನಾಡಿದ್ದಾರೆ.

ಡಾ. ರಾಜ್​ಕುಮಾರ್​ (Dr Rajkumar) ಮೊಮ್ಮಗಳು ಧನ್ಯಾ ರಾಮ್​ಕುಮಾರ್​ (Dhanya Ramkumar) ನಟನೆಯ ಮೊದಲ ಸಿನಿಮಾ ‘ನಿನ್ನ ಸನಿಹಕೆ’ (Ninna Sanihake) ಆ.20ರಂದು ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ತಾತ ಇರಬೇಕಿತ್ತು ಎಂದು ಅವರು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಡಾ. ರಾಜ್​ ಜೊತೆ ಕಳೆದ ಬಾಲ್ಯದ ದಿನಗಳನ್ನು ಧನ್ಯಾ ರಾಮ್​ಕುಮಾರ್​ ಮೆಲುಕು ಹಾಕಿದ್ದಾರೆ. ‘ತಾತ ನನ್ನನ್ನು ಕ್ಯೂಟ್​ ಆಗಿ ಅಮ್ಮೆ ಎಂದು ಕರೆಯುತ್ತಿದ್ದರು. ನನ್ನನ್ನು ಮಾತ್ರ ಅವರು ಹಾಗೆ ಕರೆಯುತ್ತಿದ್ದರು. ಅವರ ಕೊನೆಯ ಮ್ಯೂಸಿಕಲ್​ ನೈಟ್​ಗೆ ನಾನು ಹೋಗಿದ್ದೆ. ನಾನು ಕೂಡ ಅವರ ಜೊತೆ ವೇದಿಕೆ ಮೇಲೆ ಕುಳಿತಿದ್ದೆ. ಅಂಥ ಅನುಭವ ಮತ್ತೆ ನನ್ನ ಜನ್ಮದಲ್ಲಿ ಸಿಗಲು ಸಾಧ್ಯವಿಲ್ಲ’ ಎಂದು ಧನ್ಯಾ ಹೇಳಿದ್ದಾರೆ.

‘ಇನ್ನೂ ಸ್ವಲ್ಪ ದಿನಗಳ ಕಾಲ ತಾತ ನಮ್ಮ ಜೊತೆ ಇರಬಹುದಿತ್ತು. ಈ ಸಂದರ್ಭದಲ್ಲಿ ಅವರಿಂದ ಸಿಗಬಹುದಾಗಿದ್ದ ಸಲಹೆ, ಮಾರ್ಗದರ್ಶನ ಬಹಳ ಮುಖ್ಯವಾಗುತ್ತಿತ್ತು. ಸ್ಯಾಂಡಲ್​ವುಡ್​ನಲ್ಲಿ ಇರುವವರಿಗೆಲ್ಲ ವಜ್ರೇಶ್ವರಿ ಕಂಬೈನ್ಸ್​ ಬ್ಯಾನರ್​ನಲ್ಲಿ ಒಂದಾದರೂ ಸಿನಿಮಾ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದೇ ರೀತಿ ನನಗೂ ಆಸೆ ಇದೆ’ ಎಂದು ಧನ್ಯಾ ಹೇಳಿದ್ದಾರೆ.

ಇದನ್ನೂ ಓದಿ:

Rajkumar Death Anniversary: ಡಾ. ರಾಜ್​ ನಿಧನರಾದ ದಿನ ಆಕಾಶ ನೋಡಿಕೊಂಡು ದೇವರಿಗೆ ಬೈಯ್ದಿದ್ದ ಮೊಮ್ಮಗಳು ಧನ್ಯಾ!

ಡಾ. ರಾಜ್​ಕುಮಾರ್​ ಜತೆ ದಿಲೀಪ್​ ಕುಮಾರ್​ಗೆ ಇದ್ದ ಒಡನಾಟ ಎಂಥದ್ದು? ಫೋಟೋ ಸಹಿತ ವಿವರಿಸಿದ ಪುನೀತ್​

Click on your DTH Provider to Add TV9 Kannada