Milkshake: ಹಲಸಿನ ಹಣ್ಣಿನ ಬೀಜದಲ್ಲಿ ಕೂಡ ಮಿಲ್ಕ್ ಶೇಕ್ ಮಾಡಬಹುದು

Milkshake: ಹಲಸಿನ ಹಣ್ಣಿನ ಬೀಜದಲ್ಲಿ ಕೂಡ ಮಿಲ್ಕ್ ಶೇಕ್ ಮಾಡಬಹುದು

TV9 Web
| Updated By: preethi shettigar

Updated on: Aug 01, 2021 | 7:43 AM

ಹಲಸಿನ ಹಣ್ಣಿನ ಸೀಜನ್ ಆರಂಭವಾದರೆ ಸಾಕು ಹಲಸಿನ ಹಣ್ಣಿನ ದೋಸೆ, ಇಡ್ಲಿ, ಮುಳ್ಕ ಮಾಡಲು ಶುರು ಮಾಡುತ್ತಾರೆ. ನಾನಾ ಬಗೆಯ ಅಡುಗೆ ಮಾಡಲು ಇಚ್ಛಿಸುವವರು ಹಲಸಿನ ಹಣ್ಣಿನ ಬೀಜದಲ್ಲಿ ಯಾವೆಲ್ಲಾ ವಿಧದ ಅಡುಗೆ ಮಾಡಬಹುದು ಎಂದು ತಿಳಿದುಕೊಳ್ಳುವುದು ಸೂಕ್ತ.

ಮಳೆಗಾಲದ ಆರಂಭದಲ್ಲಿ ಹಲಸಿನ ಹಣ್ಣಿನದ್ದೇ ಸುದ್ದಿ. ಅದರಲ್ಲೂ ಹಲಸಿನ ಹಣ್ಣಿನ ಸೀಜನ್ ಆರಂಭವಾದರೆ ಸಾಕು ಹಲಸಿನ ಹಣ್ಣಿನ ದೋಸೆ, ಇಡ್ಲಿ, ಮುಳ್ಕ ಮಾಡಲು ಶುರು ಮಾಡುತ್ತಾರೆ. ನಾನಾ ಬಗೆಯ ಅಡುಗೆ ಮಾಡಲು ಇಚ್ಛಿಸುವವರು ಹಲಸಿನ ಹಣ್ಣಿನ ಬೀಜದಲ್ಲಿ ಯಾವೆಲ್ಲಾ ವಿಧದ ಅಡುಗೆ ಮಾಡಬಹುದು ಎಂದು ತಿಳಿದುಕೊಳ್ಳುವುದು ಸೂಕ್ತ. ಹಲಸಿನ ಹಣ್ಣಿನ ಬೀಜದಲ್ಲಿ ಮಿಲ್ಕ್ ಶೇಕ್​ ಮಾಡಿದರೆ ತುಂಬಾ ರುಚಿಕರವಾಗಿರುತ್ತದೆ . ಇದನ್ನು ಹೇಗೆ ಮಾಡುವುದು ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಹಲಸಿನ ಹಣ್ಣಿನ ಬೀಜದ ಮಿಲ್ಕ್ ಶೇಕ್ ಮಾಡಲು ಬೇಕಾಗುವ ಸಾಮಾಗ್ರಿಗಳು ಹಲಸಿನ ಹಣ್ಣಿನ ಬೀಜ, ಬೆಲ್ಲ, ಏಲಕ್ಕಿ, ಹಾಲು.

ಹಲಸಿನ ಹಣ್ಣಿನ ಬೀಜವನ್ನು ಕುಕ್ಕರ್ಗೆ ಹಾಕಿ ಬೇಯಿಸಿಕೊಳ್ಳಿ, ಬಳಿಕ ಅದರ ಬೀಜವನ್ನು ತುಂಡು ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ. ನಂತರ ಅದಕ್ಕೆ ಎಲಕ್ಕಿ, ಬೆಲ್ಲ, ಹಾಲು ಹಾಕಿ ರುಬ್ಬಿಕೊಳ್ಳಿ. ಬಳಿಕ ಈ ರುಬ್ಬಿದ ಮಿಶ್ರಣವನ್ನು ಒಂದು ಬೌಲ್ಗೆ ಹಾಕಿ ಬೇಕಾದಷ್ಟು ಪ್ರಮಾಣದ್ಲಲಿ ಹಾಲು ಹಾಕಿ. ಈಗ ರುಚಿಕರವಾದ ಹಲಸಿನ ಹಣ್ಣಿನ ಬೀಜದಲ್ಲೂ ಮಿಲ್ಕ್ ಶೇಕ್ ಸವಿಯಲು ಸಿದ್ಧ.

ಇದನ್ನೂ ಓದಿ:

Jackfruit: ಹಲಸಿನ ಹಣ್ಣಿನ ಆರೋಗ್ಯಯುತ ಗುಣಗಳ ಬಗ್ಗೆ ತಿಳಿದರೆ ಒಂದು ಹಣ್ಣನ್ನೂ ಹಾಳು ಮಾಡುವುದಿಲ್ಲ

ಹಲಸಿನ ಹಣ್ಣಿನ ಬೀಜದಲ್ಲಿ ಚಟ್ನಿ ಹೇಗೆ ಮಾಡುವುದು ಅಂತೀರಾ ನೀವೇ ನೋಡಿ