AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜಾರು ಬಂಡಿಯಲ್ಲಿ ಪಾಂಡಾಗಳ ಭರ್ಜರಿ ತುಂಟಾಟ; ಇದು ನಿಮ್ಮ ಬಾಲ್ಯವನ್ನು ನೆನಪಿಸೀತು!

Viral Video: ಜಾರು ಬಂಡಿಯಲ್ಲಿ ಪಾಂಡಾಗಳ ಭರ್ಜರಿ ತುಂಟಾಟ; ಇದು ನಿಮ್ಮ ಬಾಲ್ಯವನ್ನು ನೆನಪಿಸೀತು!

TV9 Web
| Updated By: shivaprasad.hs

Updated on:Aug 01, 2021 | 9:53 AM

Panda: ಪ್ರಾಣಿ ಪ್ರಪಂಚದಲ್ಲಿ ತನ್ನ ತುಂಟತನದಿಂದ ಎಲ್ಲರ ಮನಸೆಳೆಯುವ ಪಾಂಡಾಗಳ ಆಟವನ್ನು ನೋಡುವುದೇ ಒಂದು ಸೊಗಸು. ಜಾರು ಬಂಡಿ ಆಟದಲ್ಲಿ ನಾಲ್ಕು ಪಾಂಡಾಗಳು ತಲ್ಲೀನವಾಗಿರುವ ಮುದ್ದಾದ ವಿಡಿಯೊ ಇಲ್ಲಿದೆ.

ಪಾಂಡಾಗಳು ಪ್ರಾಣಿಗಳಲ್ಲೇ ಅತ್ಯಂತ ಮುದ್ದಿನ ಪ್ರಾಣಿಗಳೆಂದು ಹೆಸರು ಮಾಡಿದವುಗಳು. ವಿಶ್ವದ ಎಲ್ಲೆಡೆ ಇವು ಕಂಡುಬರದ ಕಾರಣ, ಪ್ರಾಣಿ ಪ್ರಿಯರಿಗೆಲ್ಲಾ ನೇರವಾಗಿ ಇವುಗಳ ದರ್ಶನ ಭಾಗ್ಯ ಕಡಿಮೆಯೆಂದೇ ಹೇಳಬೇಕು. ಆದ್ದರಿಂದಲೇ ಅವುಗಳ ತುಂಟಾಟವನ್ನು, ಚೇಷ್ಟೆಯನ್ನು ವಿಡಿಯೊಗಳ ಮುಖಾಂತರ ಎಲ್ಲರೂ ಮನದುಂಬಿ ಆನಂದಿಸುತ್ತಾರೆ. ಸದ್ಯ ಪಾಂಡಾಗಳ ಅಂಥದ್ದೇ ಒಂದು ತುಂಟಾಟದ ವಿಡಿಯೊ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಸಣ್ಣ ಮಕ್ಕಳು ಜಾರು ಬಂಡಿ ಆಡುವಂತೆ ಪಾಂಡಾಗಳೂ ಕೂಡಾ ಜಾರುಬಂಡಿಯನ್ನು ಏರಿ ಅದರಲ್ಲಿ ಇಳಿಜಾರಿನಲ್ಲಿ ಜಾರುವ ಆಟವಾಡಿದ್ದು ನೋಡುಗರಿಗೆ ಮುದ ನೀಡಿದೆ.

ಜಾರುಬಂಡಿಯಲ್ಲಿ ನಾಲ್ಕು ಪಾಂಡಾಗಳು ನಾ ಮುಂದು ತಾ ಮುಂದು ಎಂದು ಸ್ಪರ್ಧೆ ಮಾಡುತ್ತಾ ಆಟದಲ್ಲಿ ತಲ್ಲೀನವಾಗಿವೆ. ಒಮ್ಮೊಮ್ಮೆಯಂತೂ ಜಾರುವ ಜಾಗದಲ್ಲೇ ಮರಳಿ ಹತ್ತಿ ಹೋಗುವ ಆಟವನ್ನೂ ಅವು ಆಡುತ್ತಿವೆ. ಜಾರು ಬಂಡಿ ಅಟದಲ್ಲಿ ಸಿಕ್ಕಾಪಟ್ಟೆ ಫನ್ ಮಾಡ್ತಿರೋ ಪಾಂಡಾಗಳ ಅವಸ್ಥೆ ನಿಮ್ಮನ್ನು ನಗಿಸದೆ ಇರಲು ಸಾಧ್ಯವೇ ಇಲ್ಲ.

ಇದನ್ನೂ ನೋಡಿ: ಜಿಮ್ನಾಸ್ಟಿಕ್ ಸ್ಪರ್ಧಿಗಳನ್ನು ತನ್ನ ಬೇಟೆ ಎಂದು ಭಾವಿಸಿದ ಮುದ್ದಾದ ಬೆಕ್ಕು; ವಿಡಿಯೊ ವೈರಲ್

ಇದನ್ನೂ ನೋಡಿ: Viral Video: ನಾಯಿಗಳೂ ಆಶ್ಚರ್ಯ ವ್ಯಕ್ತಪಡಿಸುತ್ತವೆ, ಗಮನಿಸಿದ್ದೀರಾ? ಈ ವಿಡಿಯೋ ನೋಡಿ

(Four Panda’s are busy in sliding game and fun activities video goes viral)

Published on: Aug 01, 2021 09:53 AM