AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಾಯಿಗಳೂ ಆಶ್ಚರ್ಯ ವ್ಯಕ್ತಪಡಿಸುತ್ತವೆ, ಗಮನಿಸಿದ್ದೀರಾ? ಈ ವಿಡಿಯೋ ನೋಡಿ

ಕೆಂಚು ಬಣ್ಣದ ನಾಯಿ ತನ್ನ ಎರಡೂ ಕಣ್ಗುಡ್ಡೆಗಳನ್ನು ಅರಳಿಸಿ ಕ್ಯಾಮೆರಾದತ್ತ ತಿರುಗಿರುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಮನುಷ್ಯರು ಹೇಗೆ ಆಶ್ಚರ್ಯವಾದಾಗ ಹುಬ್ಬೇರಿಸಿ ತಮ್ಮ ಅಚ್ಚರಿಯನ್ನು ಹೊರಹಾಕುತ್ತಾರೋ ಅದೇ ರೀತಿ ಈ ನಾಯಿ ಕೂಡಾ ಪ್ರತಿಕ್ರಿಯೆ ನೀಡಿದೆ.

Viral Video: ನಾಯಿಗಳೂ ಆಶ್ಚರ್ಯ ವ್ಯಕ್ತಪಡಿಸುತ್ತವೆ, ಗಮನಿಸಿದ್ದೀರಾ? ಈ ವಿಡಿಯೋ ನೋಡಿ
ವೈರಲ್​ ಆದ ನಾಯಿ
TV9 Web
| Edited By: |

Updated on: Jul 31, 2021 | 12:20 PM

Share

ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಫೋಟೋ, ವಿಡಿಯೋ, ಪೋಸ್ಟ್​ಗಳು ಬಲುಬೇಗನೆ ಜನರ ಗಮನ ಸೆಳೆದು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತವೆ. ಅದರಲ್ಲೂ ಪ್ರಾಣಿ, ಪಕ್ಷಿಗಳಿಗೆ ಸಂಬಂಧಿಸಿದಂತಹ ವಿಚಾರಗಳಿದ್ದರಂತೂ ಜನ ಮುಗಿಬಿದ್ದು ನೋಡುತ್ತಾರೆ. ಕೆಲಸದ ನಡುವೆ ಎಂತಹ ಒತ್ತಡವಿದ್ದರೂ ಮುದ್ದು ಮುದ್ದಾದ ಪ್ರಾಣಿಗಳ ತಲೆಹರಟೆ ನೋಡಿದಾಗ ಮನಸ್ಸು ಉಲ್ಲಸಿತವಾಗುತ್ತದೆ. ಹೀಗಾಗಿ ಅಂತಹ ವಿಚಾರಗಳು ಬಲುಬೇಗನೆ ವೈರಲ್ ಆಗುತ್ತವೆ. ಅದರಲ್ಲೂ ಪ್ರಾಣಿ ಪ್ರಿಯರ ಮೊಬೈಲ್​ಗಳನ್ನೇನಾದರೂ ತೆಗೆದು ನೋಡಿದರೆ ಅದರಲ್ಲಿ ಪ್ರಾಣಿ, ಪಕ್ಷಿಗಳಿಗೆ ಸಂಬಂಧಿಸಿದ ವಿಚಾರಗಳೇ ತುಂಬಿ ತುಳುಕಾಡುತ್ತಿರುತ್ತವೆ. ಇತ್ತೀಚೆಗೆ ವೈರಲ್​ ಆದ ನಾಯಿಯೊಂದರ ವಿಡಿಯೋ ಕೂಡಾ ಭಾರೀ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದು, ನಾಯಿಯ ಮುಖಭಾವವನ್ನು ನೋಡಿ ಜನರು ನಕ್ಕು ಹಗುರಾಗುತ್ತಿದ್ದಾರೆ.

ಈ ವಿಡಿಯೋದಲ್ಲಿರುವ ನಾಯಿ ಸುಮ್ಮನೇ ಕುಳಿತಲ್ಲೇ ಕುಳಿತು ಜನಪ್ರಿಯತೆ ಪಡೆಯುವುದಕ್ಕೆ ಕಾರಣವಾಗಿರುವುದು ಅದು ನೋಟ ಬೀರಿರುವ ರೀತಿ. ಸಾಮಾನ್ಯವಾಗಿ ಮನುಷ್ಯರಾದರೆ ಯಾವುದಾದರೂ ಒಂದು ವಿಚಾರಕ್ಕೆ ಪ್ರತಿಕ್ರಿಯೆ ನೀಡುವಾಗ ಆಶ್ಚರ್ಯ ಭಾವ, ಪ್ರಶ್ನಾರ್ಥಕ ಭಾವ, ಕೋಪ, ದುಃಖ, ನಗು ಹೀಗೆ ವಿವಿಧ ಭಾವಗಳನ್ನು ವ್ಯಕ್ತಪಡಿಸುತ್ತಾರೆ. ಆದರೆ, ಉಳಿದ ಪ್ರಾಣಿಗಳಲ್ಲಿ ಇದು ಅಷ್ಟು ಸುಲಭವಾಗಿ ಕಂಡುಬರುವುದಿಲ್ಲ ಅಥವಾ ಇದ್ದರೂ ಅದು ಅವುಗಳಿಗೆ ಮಾತ್ರ ಅರ್ಥವಾಗುವಂತೆ ಇರುತ್ತವೆ.

ಪ್ರಾಣಿಗಳ ಪೈಕಿ ನಾಯಿ ಮನುಷ್ಯನೊಟ್ಟಿಗೆ ಬಲುಬೇಗನೇ ಒಡನಾಟ ಬೆಳೆಸಿಕೊಳ್ಳುತ್ತದೆ. ಹೀಗಾಗಿ ಉಳಿದವುಗಳಿಗೆ ಹೋಲಿಸಿದರೆ ನಾಯಿಯನ್ನು ಮನುಷ್ಯ, ಮನುಷ್ಯನನ್ನು ನಾಯಿ ಅರ್ಥ ಮಾಡಿಕೊಳ್ಳುವುದು ತುಸು ಬೇಗ. ಅಷ್ಟೇ ಅಲ್ಲ, ಎಷ್ಟೋ ಸಂದರ್ಭದಲ್ಲಿ ನಾಯಿಗಳು ಮನುಷ್ಯನ ಆಯಾ ಕ್ಷಣದ ವರ್ತನೆಗೆ ತಕ್ಕಂತೆ ಪ್ರತಿಕ್ರಿಯೆಯನ್ನೂ ಕೊಡುತ್ತವೆ. ಈ ವಿಡಿಯೋದಲ್ಲಿರುವ ನಾಯಿ ಕೂಡಾ ವಿಚಿತ್ರ ಮುಖಭಾವವನ್ನು ವ್ಯಕ್ತಪಡಿಸಿದ್ದು, ಕಣ್ಣರಳಿಸಿ ಅಚ್ಚರಿ ವ್ಯಕ್ತಪಡಿಸಿದೆ.

ಕೆಂಚು ಬಣ್ಣದ ನಾಯಿ ತನ್ನ ಎರಡೂ ಕಣ್ಗುಡ್ಡೆಗಳನ್ನು ಅರಳಿಸಿ ಕ್ಯಾಮೆರಾದತ್ತ ತಿರುಗಿರುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಮನುಷ್ಯರು ಹೇಗೆ ಆಶ್ಚರ್ಯವಾದಾಗ ಹುಬ್ಬೇರಿಸಿ ತಮ್ಮ ಅಚ್ಚರಿಯನ್ನು ಹೊರಹಾಕುತ್ತಾರೋ ಅದೇ ರೀತಿ ಈ ನಾಯಿ ಕೂಡಾ ಪ್ರತಿಕ್ರಿಯೆ ನೀಡಿದೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: Viral Video: ಅಚ್ಚರಿಯಾದರೂ ಸತ್ಯ; ವಕೀಲನ ಮೇಲೆ ದಾಳಿ ಮಾಡಿದ 2 ನಾಯಿಗಳಿಗೆ ಮರಣದಂಡನೆ ಶಿಕ್ಷೆ! 

ಬೆಣ್ಣೆಹಳ್ಳದಲ್ಲಿ ನೋಡ ನೋಡುತ್ತಲೇ ಕೊಚ್ಚಿ ಹೋದ ಸಾಕುನಾಯಿಗಳು; ಹೂಳು ಎತ್ತದ ಕಾರಣ ಹೆಚ್ಚುತ್ತಿದೆ ಅನಾಹುತ

(Viral Video of dog which give shocked expression watch this funny clip here)

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್