ಬೆಣ್ಣೆಹಳ್ಳದಲ್ಲಿ ನೋಡ ನೋಡುತ್ತಲೇ ಕೊಚ್ಚಿ ಹೋದ ಸಾಕುನಾಯಿಗಳು; ಹೂಳು ಎತ್ತದ ಕಾರಣ ಹೆಚ್ಚುತ್ತಿದೆ ಅನಾಹುತ

ಮೂಕ ಪ್ರಾಣಿಗಳ ಪರದಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅವುಗಳ ಅಸಹಾಯಕತೆ ಬೇಸರ ತರಿಸುತ್ತದೆ, ಯಾವಗಲ್ ಬಳಿ ಬೆಣ್ಣೆಹಳ್ಳದಲ್ಲಿ ಈ ಘಟನೆ ನಡೆದಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಬೆಣ್ಣೆಹಳ್ಳ ಸುತ್ತಮುತ್ತಲಿನ ಗ್ರಾಮಸ್ಥರಲ್ಲೂ ಭೀತಿ ಹುಟ್ಟಿಸಿದೆ.

ಬೆಣ್ಣೆಹಳ್ಳದಲ್ಲಿ ನೋಡ ನೋಡುತ್ತಲೇ ಕೊಚ್ಚಿ ಹೋದ ಸಾಕುನಾಯಿಗಳು; ಹೂಳು ಎತ್ತದ ಕಾರಣ ಹೆಚ್ಚುತ್ತಿದೆ ಅನಾಹುತ
ಪ್ರವಾಹದಲ್ಲಿ ಕೊಚ್ಚಿಹೋದ ಶ್ವಾನಗಳು

ಗದಗ: ಕರ್ನಾಟಕದ ಹಲವೆಡೆ ಭಾರೀ ಮಳೆಯಿಂದಾಗಿ (Karnataka Rains) ಪ್ರವಾಹ ಪರಿಸ್ಥಿತಿ (Flood) ಉಂಟಾಗಿದೆ. ನದಿ, ಹಳ್ಳ, ಕೊಳ್ಳಗಳು ಉಕ್ಕೇರಿ ಹರಿಯುತ್ತಿದ್ದು ಜನ ಜಾನುವಾರಗಳು ಪ್ರಾಣಭೀತಿ ಎದುರಿಸುವಂತಾಗಿದೆ. ಗದಗ (Gadag) ಜಿಲ್ಲೆಯಲ್ಲಿ ಬೆಣ್ಣೆಹಳ್ಳ (Bennehalla) ಮೈದುಂಬಿ ಹರಿಯುತ್ತಿದ್ದು, ಅಕ್ಕಪಕ್ಕದ ಜಮೀನುಗಳು ಜಲಾವೃತಗೊಂಡಿವೆ. ಜಿಲ್ಲೆಯ ರೋಣ ತಾಲ್ಲೂಕಿನ ಯಾವಗಲ್ ಗ್ರಾಮದ ಸೇತುವೆ ಬಳಿ ಜೋಡಿ ಶ್ವಾನಗಳು (Dogs) ಬೆಣ್ಣೆಹಳ್ಳದ ಪ್ರವಾಹಕ್ಕೆ ಸಿಲುಕಿ ನೋಡನೋಡುತ್ತಲೇ ಕೊಚ್ಚಿ ಹೋದ ಹೃದಯ ವಿದ್ರಾವಕ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಭಾರೀ ಮಳೆಯ ಕಾರಣ ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿದ್ದು, ಎರಡು ಸಾಕು ನಾಯಿಗಳು ಆಕಸ್ಮಿಕವಾಗಿ ಪ್ರವಾಹಕ್ಕೆ ಸಿಲುಕಿವೆ. ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಕತ್ತನ್ನು ಮೇಲೆತ್ತಿಕೊಂಡು ಜೀವ ಉಳಿಸಿಕೊಳ್ಳಲು ಪರದಾಟ ನಡೆಸಿದ ನಾಯಿಗಳು ಆದಷ್ಟು ಬಲ ಪ್ರಯೋಗಿಸಿ ಈಜಿ ದಡ ಸೇರಲು ಪ್ರಯತ್ನಿಸಿವೆ. ಆದರೆ, ನೀರಿನ ರಭಸ ಹೆಚ್ಚಿದ್ದ ಕಾರಣ ಜನರು ನೋಡುತ್ತಿರುವಂತೆಯೇ ಎರಡೂ ನಾಯಿಗಳು ಕೊಚ್ಚಿಕೊಂಡು ಹೋಗಿವೆ.

ಮೂಕ ಪ್ರಾಣಿಗಳ ಪರದಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅವುಗಳ ಅಸಹಾಯಕತೆ ಬೇಸರ ತರಿಸುತ್ತದೆ, ಯಾವಗಲ್ ಬಳಿ ಬೆಣ್ಣೆಹಳ್ಳದಲ್ಲಿ ಈ ಘಟನೆ ನಡೆದಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಬೆಣ್ಣೆಹಳ್ಳ ಸುತ್ತಮುತ್ತಲಿನ ಗ್ರಾಮಸ್ಥರಲ್ಲೂ ಭೀತಿ ಹುಟ್ಟಿಸಿದೆ. ಭಾರೀ ಮಳೆಯ ಪರಿಣಾಮ ನೀರಿನ ಹರಿವು ಹೆಚ್ಚಾಗಿದ್ದು ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವೂ ಸಂಭವಿಸಿದೆ.

CROP LOSS GADAGA

ಪ್ರವಾಹದಿಂದ ನಾಶವಾದ ಬೆಳೆ

ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿರುವ ಬೆಣ್ಣೆಹಳ್ಳದಿಂದಾಗಿ ಯಾವಗಲ್ ಸೇರಿದಂತೆ ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಹದ್ಲಿ, ಮೆಣಸಗಿ ಗ್ರಾಮಗಳಲ್ಲೂ ಬೆಳೆ ಹಾನಿ ಉಂಟಾಗಿದೆ. ಹೆಸರು, ಗೋವಿನಜೋಳ, ಶೇಂಗಾ, ಈರುಳ್ಳಿ, ಸೂರ್ಯಕಾಂತಿ ಸೇರಿ ಹಲವು ಬೆಳೆಗಳು ಜಲಾವೃತವಾಗಿದ್ದು, ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ನಾಶವಾಗಿವೆ.

ಬೆಣ್ಣೆಹಳ್ಳದ ಹೂಳು ತೆಗೆಯದೆ ಇರುವುದೇ ಅನಾಹುತಕ್ಕೆ ಕಾರಣ: ರೈತರು
ಬೆಳೆಗಳನ್ನೇ ನಂಬಿ ಬದುಕುತ್ತಿರುವ ರೈತರು ಮಳೆಯ ಹೊಡೆತದಿಂದ ಕಂಗಾಲಾಗಿ ಹೋಗಿದ್ದು, ಸಾಲ ಮಾಡಿ ಬಿತ್ತನೆ ಮಾಡಿದವರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಈ ರೀತಿಯ ಅನಾಹುತಕ್ಕೆ ಬೆಣ್ಣೆಹಳ್ಳದಲ್ಲಿ ಶೇಖರಣೆಯಾಗಿರುವ ಹೂಳು ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಹೂಳು ತೆಗೆಯುವಂತೆ ಒತ್ತಾಯ ಮಾಡಿದ್ದಾರೆ. ಹೂಳು ತೆಗೆಯದ ಹಿನ್ನೆಲೆಯಲ್ಲಿ, ಬೆಣ್ಣೆಹಳ್ಳ ವಿಶಾಲವಾಗಿ ಹರಿಯುತ್ತಿದೆ. ಹೀಗಾಗಿ ವರ್ಷದಲ್ಲಿ ನಾಲ್ಕು ಬಾರಿ ನಾವು ಬೆಳೆದ ಬೆಳೆ ಜಲಾವೃತವಾಗುತ್ತಿದೆ ಎಂದು ಸಮಸ್ಯೆ ಹೇಳಿಕೊಂಡಿದ್ದು, ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ:
ಬಾಗಲಕೋಟೆ: ಪ್ರವಾಹದ ನಡುವೆಯೇ ನದಿಯಲ್ಲಿ ಈಜಿ ಹಾಲು ಮಾರಾಟಕ್ಕೆ ಬರುತ್ತಿರುವ ಜನರು!

ದಾವಣಗೆರೆ: ಡ್ಯಾಂನಿಂದ ಹರಿದು ಬರುತ್ತಿರುವ ನೀರಿನಲ್ಲಿ ಮೀನು ಹಿಡಿಯುವ ಹುಚ್ಚು ಸಾಹಸಕ್ಕೆ ಇಳಿದು ಕೊಚ್ಚಿ ಹೋಗುತ್ತಿದ್ದ ಯುವಕ; ಅಪಾಯದಿಂದ ಪಾರು

(Heavy Rain leads to flood in Gadag as Bennehalla overflows)

Click on your DTH Provider to Add TV9 Kannada