AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ. ರಾಜ್​ಕುಮಾರ್​ ಜತೆ ದಿಲೀಪ್​ ಕುಮಾರ್​ಗೆ ಇದ್ದ ಒಡನಾಟ ಎಂಥದ್ದು? ಫೋಟೋ ಸಹಿತ ವಿವರಿಸಿದ ಪುನೀತ್​

Dilip Kumar: 5 ದಶಕಗಳ ಕಾಲ ಬಾಲಿವುಡ್​ನಲ್ಲಿ ಸ್ಟಾರ್​ ಆಗಿ ಮಿಂಚಿದ ದಿಲೀಪ್​ ಕುಮಾರ್​ಗೆ ಕರುನಾಡು ಮತ್ತು ಕನ್ನಡ ಚಿತ್ರರಂಗದ ಜೊತೆಗೆ ಒಡನಾಟ ಇತ್ತು. ಚಂದನವನದ ಮೇರು ನಟ ಡಾ. ರಾಜ್​ಕುಮಾರ್​ ಮತ್ತು ದಿಲೀಪ್​ ಕುಮಾರ್​ ಅನೇಕ ಸಂದರ್ಭಗಳಲ್ಲಿ ಭೇಟಿ ಆಗಿದ್ದರು.

ಡಾ. ರಾಜ್​ಕುಮಾರ್​ ಜತೆ ದಿಲೀಪ್​ ಕುಮಾರ್​ಗೆ ಇದ್ದ ಒಡನಾಟ ಎಂಥದ್ದು? ಫೋಟೋ ಸಹಿತ ವಿವರಿಸಿದ ಪುನೀತ್​
ಡಾ. ರಾಜ್​ಕುಮಾರ್​, ದಿಲೀಪ್​ ಕುಮಾರ್​
TV9 Web
| Updated By: ಮದನ್​ ಕುಮಾರ್​|

Updated on: Jul 07, 2021 | 4:16 PM

Share

ಭಾರತೀಯ ಚಿತ್ರರಂಗದ ದಿಗ್ಗಜ ನಟ ದಿಲೀಪ್​ ಕುಮಾರ್​ ಅವರು ಇಂದು (ಜು.7) ನಿಧನರಾಗಿರುವುದು ನೋವಿನ ಸಂಗತಿ. ಅವರ ಜೊತೆ ಒಡನಾಡಿದ ಅನೇಕರು ತಮ್ಮ ನೆನಪಿನ ಪುಟ ತೆರೆಯುತ್ತಿದ್ದಾರೆ. ದಿಲೀಪ್​ ಕುಮಾರ್​ ಆತ್ಮಕ್ಕೆ ಶಾಂತಿ ಕೋರುತ್ತಲೇ ಕೆಲವು ಅವಿಸ್ಮರಣೀಯ ಘಟನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಟ ಪುನೀತ್​ ರಾಜ್​ಕುಮಾರ್​ ಕೂಡ ಒಂದೆರಡು ಬಾರಿ ದಿಲೀಪ್​ ಕುಮಾರ್​ ಅವರನ್ನು ಭೇಟಿ ಮಾಡಿದ್ದರು. ಆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಸಮೇತ ಮಾಹಿತಿ ಹಂಚಿಕೊಂಡಿರುವ ಪುನೀತ್​ ಅವರು ದಿಲೀಪ್​ ಕುಮಾರ್​ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

5 ದಶಕಗಳ ಕಾಲ ಬಾಲಿವುಡ್​ನಲ್ಲಿ ಸ್ಟಾರ್​ ಆಗಿ ಮಿಂಚಿದ ದಿಲೀಪ್​ ಕುಮಾರ್​ಗೆ ಕರುನಾಡು ಮತ್ತು ಕನ್ನಡ ಚಿತ್ರರಂಗದ ಜೊತೆಗೆ ಒಡನಾಟ ಇತ್ತು. ಚಂದನವನದ ಮೇರು ನಟ ಡಾ. ರಾಜ್​ಕುಮಾರ್​ ಮತ್ತು ದಿಲೀಪ್​ ಕುಮಾರ್​ ಅನೇಕ ಸಂದರ್ಭಗಳಲ್ಲಿ ಭೇಟಿ ಆಗಿದ್ದರು. ಅದನ್ನು ಈಗ ಪುನೀತ್​ ನೆನಪಿಸಿಕೊಂಡಿದ್ದಾರೆ. ‘ಎರಡು ಬಾರಿ ದಿಲೀಪ್​ ಕುಮಾರ್​ ಅವನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯ’ ಎಂದು ಅವರು ಹೇಳಿದ್ದಾರೆ.

‘ಅಪ್ಪಾಜಿ (ಡಾ. ರಾಜ್​ಕುಮಾರ್​) ಮತ್ತು ದಿಲೀಪ್​ ಕುಮಾರ್​ ಅವರು ಪರಸ್ಪರ ಆದರದ ಭಾವ ಮತ್ತು ಗೌರವವನ್ನು ಹೊಂದಿದ್ದರು. ಅಪ್ಪಾಜಿ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಪಡೆಯುವಾಗ ನಾನು ಅವರನ್ನು ಭೇಟಿಯಾಗಿದ್ದು ನೆನಪಾಗುತ್ತಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಯ ಕಾರಣಕ್ಕಾಗಿ ಅವರನ್ನು ಎಂದಿಗೂ ಸ್ಮರಿಸಲಾಗುವುದು’ ಎಂದು ಟ್ವೀಟ್ ಮಾಡಿರುವ ಪುನೀತ್​ ಅವರು ಅಪರೂಪದ ಒಂದು ಫೋಟೋ ಹಂಚಿಕೊಂಡಿದ್ದಾರೆ.

ನರೇಂದ್ರ ಮೋದಿ, ರಾಹುಲ್​ ಗಾಂಧಿ, ಅಮಿತಾಭ್​ ಬಚ್ಚನ್​, ಅಕ್ಷಯ್​ ಕುಮಾರ್​, ಸಲ್ಮಾನ್​ ಖಾನ್​, ಸೋನು ಸೂದ್​, ಬಿ.ಎಸ್​. ಯಡಿಯೂರಪ್ಪ ಸೇರಿದಂತೆ ನೂರಾರು ಗಣ್ಯರು ದಿಲೀಪ್​ ಕುಮಾರ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಹಲವು ಬಾರಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜೂ.30ರಂದು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಅವರು ನಿಧನರಾದ ಕಹಿ ಸುದ್ದಿ ಹೊರಬಿತ್ತು. 98 ವರ್ಷಗಳ ತುಂಬು ಜೀವನ ನಡೆಸಿದ ದಿಲೀಪ್​ ಕುಮಾರ್​ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಪಾರ ಸಂಖ್ಯೆಯ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ:

Dilip Kumar Death: ಲೆಜೆಂಡರಿ ನಟ ದಿಲೀಪ್​ ಕುಮಾರ್​ ಬಗ್ಗೆ ಯಡಿಯೂರಪ್ಪ, ಅಮಿತಾಭ್​, ಸೋನು ಸೂದ್​ ಹೇಳಿದ್ದೇನು?

ಪೆಟ್ಟು ತಿನ್ನಬೇಕಾಗುತ್ತೆ ಎಂಬ ಭಯದಲ್ಲಿ ಖಾನ್​ ಬದಲು ದಿಲೀಪ್​ ಕುಮಾರ್​ ಎಂದು ಹೆಸರಿಟ್ಟುಕೊಂಡಿದ್ದ ದಿಗ್ಗಜ ನಟ

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ