AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಮಂತ್​ ಅಕ್ಕಿನೇನಿ 2ನೇ ಮದುವೆ? ಲಗ್ನ ಪತ್ರಿಕೆ ವೈರಲ್​ ಆದ ಬಳಿಕ ಸ್ಪಷ್ಟನೆ ನೀಡಿದ ನಟ

ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್​ ಅವರ ಮೊಮ್ಮಗ ಅಕ್ಕಿನೇನಿ ಸುಮಂತ್​. ಗೌರಿ, ಸತ್ಯಂ, ಮಳ್ಳಿರಾವ, ರಾಜ್​, ಕ್ಲಾಸ್​ಮೇಟ್ಸ್​, ಗೋದಾವರಿ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಸುಮಂತ್​ ಅಕ್ಕಿನೇನಿ 2ನೇ ಮದುವೆ? ಲಗ್ನ ಪತ್ರಿಕೆ ವೈರಲ್​ ಆದ ಬಳಿಕ ಸ್ಪಷ್ಟನೆ ನೀಡಿದ ನಟ
ಅಕ್ಕಿನೇನಿ ಸುಮಂತ್​
TV9 Web
| Edited By: |

Updated on: Jul 30, 2021 | 2:44 PM

Share

ಟಾಲಿವುಡ್​ ನಟ ಅಕ್ಕಿನೇನಿ ಸುಮಂತ್​ (Sumanth Akkineni) ಅವರ ಖಾಸಗಿ ಬದುಕಿಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಕಳೆದೆರಡು ದಿನಗಳಿಂದ ವೈರಲ್​ ಆಗುತ್ತಿದೆ. 2006ರಲ್ಲಿಯೇ ವಿಚ್ಛೇದನ ಪಡೆದುಕೊಂಡಿರುವ ಅವರು ಈಗ ಮತ್ತೆ ಎರಡನೇ ಮದುವೆ (Marriage) ಆಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಲ್ಲೂ ಹಬ್ಬಿತ್ತು. ಅದಕ್ಕೆ ಕಾರಣ ಆಗಿದ್ದು ಲಗ್ನ ಪತ್ರಿಕೆ. ಹೌದು, ಸುಮಂತ್​ ಅವರ ಎರಡನೇ ಮದುವೆಯದ್ದು ಎನ್ನಲಾದ ಆಹ್ವಾನ ಪತ್ರಿಕೆಯ ಫೋಟೋ ವೈರಲ್​ ಆಗಿತ್ತು. ಅದನ್ನು ನೋಡಿದ ಎಲ್ಲರೂ ಸುಮಂತ್​ಗೆ ಎರಡನೇ ಮದುವೆ ಆಗುತ್ತಿರುವುದು ನಿಜ ಎಂದೇ ಭಾವಿಸಿದ್ದರು. ಆದರೆ ಅದರ ಹಿಂದಿನ ಸತ್ಯ ಏನು ಎಂಬುದನ್ನು ಸ್ವತಃ ಸುಮಂತ್​ ಈಗ ವಿವರಿಸಿದ್ದಾರೆ.

ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್​ ಅವರ ಮೊಮ್ಮಗ ಅಕ್ಕಿನೇನಿ ಸುಮಂತ್​. ಗೌರಿ, ಸತ್ಯಂ, ಮಳ್ಳಿರಾವ, ರಾಜ್​, ಕ್ಲಾಸ್​ಮೇಟ್ಸ್​, ಗೋದಾವರಿ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2004ರಲ್ಲಿ ನಟಿ ಕೀರ್ತಿ ರೆಡ್ಡಿ ಜೊತೆ ಅವರ ವಿವಾಹ ನೆರವೇರಿತ್ತು. ಆದರೆ ಎರಡೇ ವರ್ಷಕ್ಕೆ ಅವರಿಬ್ಬರ ಮದುವೆ ಮುರಿದುಬಿದ್ದಿತ್ತು. ಅಲ್ಲಿಂದೀಚೆಗೆ ಸುಮಂತ್​ ಇನ್ನೊಂದು ಮದುವೆ ಆಗಿರಲಿಲ್ಲ. ಈಗ ಅವರು ಮತ್ತೆ ಪವಿತ್ರಾ ಎಂಬುವವರ ಜೊತೆ ಹಸೆಮಣೆ ಏರುತ್ತಾರೆ ಎಂಬ ಗಾಳಿ ಸುದ್ದಿ ಕೇಳಿಬಂದಾಗ ಎಲ್ಲರಿಗೂ ಅಚ್ಚರಿ ಆಗಿದ್ದು ನಿಜ.

ಈ ಸುದ್ದಿ ಸ್ವತಃ ಸುಮಂತ್​ ಕಿವಿಗೂ ಬಿದ್ದಿದೆ. ಅದಕ್ಕೆ ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ‘ನಾನು ಎರಡನೇ ಮದುವೆ ಆಗುತ್ತಿಲ್ಲ. ಕಾಕತಾಳೀಯವೆಂದರೆ, ನನ್ನ ಮುಂದಿನ ಸಿನಿಮಾದ ಕಥೆ ಕೂಡ ವಿಚ್ಛೇದನ ಮತ್ತು ಮರುಮದುವೆಯ ಕುರಿತಾಗಿ ಇದೆ. ಆ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಒಂದು ಮದುವೆ ಆಹ್ವಾನ ಪತ್ರಿಕೆಯ ಫೋಟೋ ಲೀಕ್ ಆಗಿದೆ. ಬಹುಶಃ ಅದರಿಂದಲೇ ಇಷ್ಟೆಲ್ಲ ಅಪಾರ್ಥ ಆಗಿರಬಹುದು’ ಎಂದು ಅಕ್ಕಿನೇನಿ ಸುಮಂತ್​ ಹೇಳಿದ್ದಾರೆ.

ಸುಮಂತ್​ ಮದುವೆಯ ಗಾಳಿಸುದ್ದಿ ಹಬ್ಬುತ್ತಿದ್ದಂತೆಯೇ ಕಾಂಟ್ರವರ್ಸಿ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರು ಟ್ವೀಟ್​ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸುಮಂತ್​, ‘ನನ್ನ ಬಗ್ಗೆ ಇಷ್ಟೆಲ್ಲ ಕಾಳಜಿ ತೋರಿಸುತ್ತಿರುವ ರಾಮ್​ ಗೋಪಾಲ್​ ವರ್ಮಾ ಮತ್ತು ಆಸಕ್ತಿ ಹೊಂದಿರುವ ಎಲ್ಲರಿಗಾಗಿ ಈ ಸ್ಪಷ್ಟನೆ ನೀಡುತ್ತಿದ್ದೇನೆ’ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

ಯುವರತ್ನ ನಟಿ ಸಾಯೆಶಾಗೆ ಮಗು ಜನಿಸಿದ ಬಳಿಕ ಗಂಡನಿಂದಾಗಿ ಮುಜುಗರ; ಪರಸ್ತ್ರೀ ಜೊತೆ ಆರ್ಯ ಲವ್ವಿಡವ್ವಿ?

ಐಶ್ವರ್ಯಾ ರೈ ಬಚ್ಚನ್​ ಮತ್ತೆ ಪ್ರೆಗ್ನೆಂಟ್​? ಫೋಟೋ ನೋಡಿ ಪ್ರಶ್ನೆ ಮಾಡಿದ ನೆಟ್ಟಿಗರು

Follow Us
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಬಿಗ್​​ಬಾಸ್​​ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?
ಬಿಗ್​​ಬಾಸ್​​ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?