ಐಶ್ವರ್ಯಾ ರೈ ಬಚ್ಚನ್​ ಮತ್ತೆ ಪ್ರೆಗ್ನೆಂಟ್​? ಫೋಟೋ ನೋಡಿ ಪ್ರಶ್ನೆ ಮಾಡಿದ ನೆಟ್ಟಿಗರು

Aishwarya Rai Bachchan: ಈ ಫೋಟೋ ಗಮನಿಸಿದರೆ ಐಶ್ವರ್ಯಾ ರೈ ಬಚ್ಚನ್​​ ಗರ್ಭಿಣಿ ಆಗಿರಬಹುದು ಎಂಬ ಅನುಮಾನ ಎಲ್ಲರಿಗೂ ಮೂಡುತ್ತಿದೆ. ಅದನ್ನು ನೇರವಾಗಿ ಕಮೆಂಟ್​ಗಳ ಮೂಲಕ ಜನರು ಕೇಳಿಯೇ ಬಿಟ್ಟಿದ್ದಾರೆ.

ಐಶ್ವರ್ಯಾ ರೈ ಬಚ್ಚನ್​ ಮತ್ತೆ ಪ್ರೆಗ್ನೆಂಟ್​? ಫೋಟೋ ನೋಡಿ ಪ್ರಶ್ನೆ ಮಾಡಿದ ನೆಟ್ಟಿಗರು
ಐಶ್ವರ್ಯಾ ರೈ ಬಚ್ಚನ್​ ಮತ್ತೆ ಪ್ರೆಗ್ನೆಂಟ್​? ಫೋಟೋ ನೋಡಿ ಪ್ರಶ್ನೆ ಮಾಡಿದ ನೆಟ್ಟಿಗರು
Follow us
TV9 Web
| Updated By: Digi Tech Desk

Updated on:Jul 30, 2021 | 9:53 AM

ಒಂದು ಕಾಲದಲ್ಲಿ ನಟಿ ಐಶ್ವರ್ಯಾ ರೈ (Aishwarya Rai Bachchan) ಅವರು ಬಾಲಿವುಡ್​ನಲ್ಲಿ ಆಳ್ವಿಕೆ ನಡೆಸಿದ್ದರು ಎಂದರೆ ತಪ್ಪಿಲ್ಲ. ಬಹುಬೇಡಿಕೆಯ ನಟಿಯಾಗಿದ್ದ ಅವರು ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಇಂದಿಗೂ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆದರೆ ಅಭಿಷೇಕ್​ ಬಚ್ಚನ್​ (Abhishek Bachchan) ಜೊತೆಗೆ ಮದುವೆ ಆದ ಬಳಿಕ ನಟನೆಯ ಬಗ್ಗೆ ಐಶ್ವರ್ಯಾ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಮಗಳ ಆರಾಧ್ಯಾ ಬಚ್ಚನ್​ ಪಾಲನೆಯಲ್ಲಿ ಐಶ್​ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಮತ್ತೆ ಪ್ರೆಗ್ನೆಂಟ್ (Pregnant)​ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಕಾರಣ ಆಗಿರುವುದು ಒಂದೇ ಒಂದು ಫೋಟೋ.

ಪ್ರಸ್ತುತ ಐಶ್ವರ್ಯಾ ಅವರು ಪಾಂಡಿಚರಿಯಲ್ಲಿ ಇದ್ದಾರೆ. ಮಣಿರತ್ನಂ ನಿರ್ದೇಶನ ಮಾಡುತ್ತಿರುವ ‘ಪೊನ್ನಿಯನ್​ ಸೆಲ್ವನ್​’ ಚಿತ್ರದ ಶೂಟಿಂಗ್​ನಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಬಹುದಿನಗಳ ಬಳಿಕ ಅವರು ಇಂಥ ಒಂದು ಮೆಗಾ ಪ್ರಾಜೆಕ್ಟ್​ನಲ್ಲಿ ನಟಿಸುತ್ತಿರುವುದಕ್ಕೆ ಅಭಿಮಾನಿಗಳಿಗೆ ಖುಷಿ ಇದೆ. ಅದರ ನಡುವೆ ಐಶ್​ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂಬ ಅನುಮಾನ ಮೂಡಿಸುವಂತಹ ಫೋಟೋ ಈಗ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಶೂಟಿಂಗ್​ ಸಂದರ್ಭದಲ್ಲಿ ಐಶ್ವರ್ಯಾ ಅವರನ್ನು ಭೇಟಿಯಾದ ನಟಿ ವರಲಕ್ಷ್ಮೀ ಶರತ್​ಕುಮಾರ್ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಫೋಟೋ ಗಮನಿಸಿದರೆ ಐಶ್​ ಗರ್ಭಿಣಿ ಆಗಿರಬಹುದು ಎಂಬ ಅನುಮಾನ ಎಲ್ಲರಿಗೂ ಮೂಡುತ್ತಿದೆ. ಅದನ್ನು ನೇರವಾಗಿ ಕಮೆಂಟ್​ಗಳ ಮೂಲಕ ಜನರು ಕೇಳಿಯೇ ಬಿಟ್ಟಿದ್ದಾರೆ. ಐಶ್​ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

‘ಅವರು ಗರ್ಭಿಣಿ ಆಗಿರುವುದರಿಂದಲೇ ಎರಡೂ ಫೋಟೋದಲ್ಲಿ ಹೊಟ್ಟೆಯ ಎದುರು ಕೈ ಇಟ್ಟುಕೊಂಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಹೊಟ್ಟೆ ಕಾಣದಂತೆ ಎಲ್ಲರ ಹಿಂದೆ ನಿಂತಿದ್ದಾರೆ. ಇದು ನಿಜಕ್ಕೂ ಸಿಹಿ ಸುದ್ದಿ. ಅಮಿತಾಭ್​ ಬಚ್ಚನ್ ಮತ್ತೊಮ್ಮೆ ಅಜ್ಜನಾಗುತ್ತಿದ್ದಾರೆ’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ.

ಫ್ಯಾನ್ಸ್​ ಮನದಲ್ಲಿ ಮೂಡಿರುವ ಈ ಅನುಮಾನಕ್ಕೆ ಐಶ್ ಅಥವಾ ಅವರ ಕುಟುಂಬದವರ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಪಾಂಡಿಚರಿಯಲ್ಲಿ ಶೂಟಿಂಗ್​ ಮಾಡುತ್ತಿರುವ ಐಶ್ವರ್ಯಾ ಜೊತೆ ಮಗಳು ಆರಾಧ್ಯ, ಪತಿ ಅಭಿಷೇಕ್​ ಬಚ್ಚನ್​ ಕೂಡ ಇದ್ದಾರೆ.​

ಇದನ್ನೂ ಓದಿ:

ಪತಿ ಅಭಿಷೇಕ್​ ಎದುರಲ್ಲೇ ಐಶ್ವರ್ಯಾ ರೈಗೆ ಅಪರಿಚಿತ ವ್ಯಕ್ತಿಯ ಮದುವೆ​ ಪ್ರಪೋಸ್​; ವಿಡಿಯೋ ವೈರಲ್​

ಪುರುಷ ಮಾಡೆಲ್​ ವಿಚಾರಕ್ಕೆ ಕಿತ್ತಾಡಿಕೊಂಡಿದ್ದ ಐಶ್ವರ್ಯಾ ರೈ-ಮನಿಷಾ ಕೊಯಿರಾಲಾ; ಬಚ್ಚನ್​ ಸೊಸೆಯ ಕಣ್ಣೀರ ಕಥೆ

Published On - 8:15 am, Fri, 30 July 21