ಶೂಟಿಂಗ್ ತಡವಾದರೆ ಆಮಿರ್ಗೆ ಕೊಡಬೇಕು ಡಬಲ್ ಸಂಭಾವನೆ; ನಿರ್ದೇಶಕ ಬಿಚ್ಚಿಟ್ಟ ಅಚ್ಚರಿಯ ವಿಚಾರ
ಆಮಿರ್ ಖಾನ್ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಟ್ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಅವರು ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಸಿನಿಮಾ ಮೇಲಿನ ಪ್ರೀತಿ ಇದಕ್ಕೆಲ್ಲ ಕಾರಣ.
‘ತೂಫಾನ್’ ಸಿನಿಮಾ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ‘ದಿ ಸ್ಟ್ರೇಂಜರ್ ಇನ್ ದಿ ಮಿರರ್’ ಆಟೋಬಯೋಗ್ರಫಿ ಬರೆದಿದ್ದಾರೆ. ಜುಲೈ 27ರಂದು ಈ ಪುಸ್ತಕ ಬಿಡುಗಡೆ ಆಗಿದೆ. ಈ ಆಟೋಬಯೋಗ್ರಫಿಯಲ್ಲಿ ಬಾಲಿವುಡ್ ನಟ ಆಮಿರ್ ಖಾನ್ ಬಗ್ಗೆ ಬರೆಯಲಾಗಿದೆ. ಶೂಟಿಂಗ್ ತಡವಾದರೆ ಡಬಲ್ ಸಂಭಾವನೆ ಕೊಡಬೇಕಾಗುತ್ತದೆ ಎಂದು ಓಂಪ್ರಕಾಶ್ಗೆ ಆಮಿರ್ ಹೇಳಿದ್ದರು ಎನ್ನುವ ವಿಚಾರ ಈ ಪುಸ್ತಕದದಿಂದ ಬೆಳಕಿಗೆ ಬಂದಿದೆ.
2006ರಲ್ಲಿ ತೆರೆಗೆ ಬಂದ ‘ರಂಗ್ ದೇ ಬಸಂತಿ’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಸಿನಿಮಾವನ್ನು ರಾಕೇಶ್ ಓಂ ಪ್ರಕಾಶ್ ನಿರ್ದೇಶನ ಮಾಡಿದ್ದರು. ಆಮಿರ್ ಖಾನ್ ನಟಿಸಿದ್ದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಸಿನಿಮಾ ಶೂಟಿಂಗ್ ಸಮಯದಲ್ಲಿ ಆಮಿರ್ ಖಾನ್ ವಿಧಿಸಿದ್ದ ಷರತ್ತನ್ನು ರಾಕೇಶ್ ಓಂಪ್ರಕಾಶ್ ನೆನಪಿಸಿಕೊಂಡಿದ್ದಾರೆ.
ಆಮಿರ್ ಖಾನ್ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಟ್ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಅವರು ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಸಿನಿಮಾ ಮೇಲಿನ ಪ್ರೀತಿ ಇದಕ್ಕೆಲ್ಲ ಕಾರಣ. ಅಂದಹಾಗೆ, ಸಿನಿಮಾ ಶೂಟಿಂಗ್ ಆರಂಭಕ್ಕೂ ಮೊದಲು ಆಮಿರ್ ಸಾಕಷ್ಟು ಷರತ್ತುಗಳನ್ನು ವಿಧಿಸುತ್ತಿದ್ದರಂತೆ.
‘ಆಮಿರ್ ಸಿನಿಮಾ ಸೆಟ್ಗೆ ಬಂದರು ಎಂದರೆ ಅವರು ಕೊಟ್ಟ ಡೇಟ್ಸ್ನಲ್ಲೇ ಶೂಟಿಂಗ್ ಮುಗಿಸಬೇಕು. ಇಲ್ಲವಾದರೆ, ಅವರಿಗೆ ಡಬಲ್ ಸಂಭಾವನೆ ಕೊಡಬೇಕಿತ್ತು. ಅಂದರೆ, ಅವರ ಸಂಭಾವನೆ ನಾಲ್ಕು ಕೋಟಿ ಇದೆ ಎಂದರೆ, ಶೂಟಿಂಗ್ ವಿಳಂಬವಾದರೆ 8 ಕೋಟಿ ರೂಪಾಯಿ ಕೊಡಬೇಕಿತ್ತು. ಇದನ್ನು ಅವರು ಷರತ್ತಿನಲ್ಲೇ ಸೇರಿಸಿಬಿಡುತ್ತಿದ್ದರು. ನಾನು ‘ರಂಗ್ ದೇ ಬಸಂತಿ’ ಶೂಟಿಂಗ್ಅನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿದೆ. ಹೀಗಾಗಿ, ದಂಡ ಕಟ್ಟುವ ಪ್ರಮೇಯ ಬಂದಿಲ್ಲ’ ಎಂದಿದ್ದಾರೆ ಅವರು.
ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಕೆಲಸಗಳಲ್ಲಿ ಆಮಿರ್ ಖಾನ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ಗೆ ಈಗಾಗಲೇ ಸಾಕಷ್ಟು ವಿಘ್ನಗಳು ಎದುರಾಗಿವೆ. ಇದನ್ನೆಲ್ಲವೂ ಮೆಟ್ಟಿ ನಿಂತಿರುವ ಆಮಿರ್ ಖಾನ್ ಈಗ ಮತ್ತೆ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ. ಇದಕ್ಕಾಗಿಯೇ ಅವರು ಕಾರ್ಗಿಲ್ಗೆ ತೆರಳಿದ್ದಾರೆ.
ಇದನ್ನೂ ಓದಿ: ನಿತ್ಯ ಒಂದೇ ಕಾರಲ್ಲಿ ಎರಡು ಗಂಟೆ ಪ್ರಯಾಣ ಮಾಡುತ್ತಿದ್ದಾರೆ ಆಮಿರ್-ನಾಗಚೈತನ್ಯ