AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿ ಅಭಿಷೇಕ್​ ಎದುರಲ್ಲೇ ಐಶ್ವರ್ಯಾ ರೈಗೆ ಅಪರಿಚಿತ ವ್ಯಕ್ತಿಯ ಮದುವೆ​ ಪ್ರಪೋಸ್​; ವಿಡಿಯೋ ವೈರಲ್​

Aishwarya Rai Bachchan | Abhishek Bachchan: ನಟಿ ಐಶ್ವರ್ಯಾ ರೈ ಅವರನ್ನು ಮದುವೆ ಆಗಬೇಕು ಎಂದು ಆಸೆ ಪಟ್ಟವರು ಒಬ್ಬಿಬ್ಬರಲ್ಲ. ಐಶ್​ ಜೊತೆ ಸಲ್ಮಾನ್​ ಖಾನ್​, ವಿವೇಕ್​ ಒಬೆರಾಯ್​, ರಾಜೀವ್​ ಮೂಲ್ಚಂದಾನಿ ಡೇಟಿಂಗ್​ ಮಾಡಿದ್ದರು.

ಪತಿ ಅಭಿಷೇಕ್​ ಎದುರಲ್ಲೇ ಐಶ್ವರ್ಯಾ ರೈಗೆ ಅಪರಿಚಿತ ವ್ಯಕ್ತಿಯ ಮದುವೆ​ ಪ್ರಪೋಸ್​; ವಿಡಿಯೋ ವೈರಲ್​
ಅಭಿಷೇಕ್​ ಬಚ್ಚನ್​ - ಐಶ್ವರ್ಯಾ ರೈ
ಮದನ್​ ಕುಮಾರ್​
| Edited By: |

Updated on:May 20, 2021 | 12:04 PM

Share

ಬಾಲಿವುಡ್​ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್​ ಅವರು ಈಗ ಸಿನಿಮಾಗಳಿಂದ ಕೊಂಚ ದೂರ ಇದ್ದಾರೆ. 2018ರಲ್ಲಿ ಬಂದ ‘ಫನ್ನೆ ಖಾನ್​’ ಬಳಿಕ ಅವರ ಬೇರೆ ಯಾವುದೇ ಸಿನಿಮಾ ತೆರೆಕಂಡಿಲ್ಲ. ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿಯೂ ಅವರು ಅವಸರ ತೋರುತ್ತಿಲ್ಲ. ಸದ್ಯಕ್ಕೆ ಮನೆ, ಮಕ್ಕಳು, ಸಂಸಾರ ಅಂತ ಅವರು ಬ್ಯುಸಿ ಆಗಿದ್ದಾರೆ. ಅವರು ಚಿತ್ರರಂಗದಿಂದ ದೂರ ಇದ್ದರೂ ಕೂಡ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರ ವೈಯಕ್ತಿಕ ವಿಚಾರಗಳು ಚರ್ಚೆ ಆಗುತ್ತಲೇ ಇರುತ್ತವೆ. ಈಗ ಒಂದು ವಿಡಿಯೋ ವೈರಲ್​ ಆಗಿದೆ.

ಐಶ್ವರ್ಯಾ ರೈ ಅವರನ್ನು ಮದುವೆ ಆಗಬೇಕು ಎಂದು ಆಸೆ ಪಟ್ಟವರು ಒಬ್ಬಿಬ್ಬರಲ್ಲ. ಐಶ್​ ಜೊತೆ ನಟರಾದ ಸಲ್ಮಾನ್​ ಖಾನ್​, ವಿವೇಕ್​ ಒಬೆರಾಯ್​, ಮಾಡೆಲ್​ ರಾಜೀವ್​ ಮೂಲ್ಚಂದಾನಿ ಡೇಟಿಂಗ್​ ಮಾಡಿದ್ದರು. ಅವರನ್ನು ನೋಡುತ್ತಲೇ ಇರಬೇಕು ಎನಿಸುತ್ತದೆ ಎಂದು ನಟ ಅಕ್ಷಯ್​ ಖನ್ನಾ ಹೇಳಿದ್ದರು. ಅಭಿಮಾನಿಗಳಂತೂ ಐಶ್ವರ್ಯಾ ರೈ ಬಗ್ಗೆ ಹಗಲುಗನಸು ಕಂಡಿದ್ದೇ ಹೆಚ್ಚು. ಆ ಪೈಕಿ ಕೆಲವರು ಧೈರ್ಯ ಪ್ರದರ್ಶಿಸಿ, ಮದುವೆ ಪ್ರಪೋಸ್​ ಕೂಡ ಮಾಡಿದ್ದರು.

ಅಂತಾರಾಷ್ಟ್ರೀಯ ಸೌಂದರ್ಯ ವರ್ಧಕಗಳ ಕಂಪನಿಗಳಿಗೆ ರಾಯಭಾರಿ ಆಗಿರುವ ಐಶ್ವರ್ಯಾ ರೈ ಅವರು ಹಲವು ಬಾರಿ ಪ್ರತಿಷ್ಠಿತ ಕಾನ್​ ಫಿಲ್ಮ್​ ಫೆಸ್ಟಿವಲ್​ಗೆ ಹೋಗಿದ್ದಾರೆ. ಒಮ್ಮೆ ಅವರ ಜೊತೆ ಪತಿ ಅಭಿಷೇಕ್​ ಬಚ್ಚನ್​ ಕೂಡ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುತ್ತ, ಮಾಧ್ಯಮಗಳ ಕ್ಯಾಮರಾಗಳಿಗೆ ಪೋಸ್​ ನೀಡುತ್ತಿದ್ದರು. ಆಗ ಅಭಿಮಾನಿಗಳು ಹುಚ್ಚೆದ್ದು ಕೂಗುತ್ತಿದ್ದರು. ಆ ಪೈಕಿ ಒಬ್ಬ ಅಭಿಮಾನಿಯಂತೂ ‘ನನ್ನನ್ನು ಮದುವೆ ಆಗು’ ಎಂಬ ಫಲಕ ಹಿಡಿದುಕೊಂಡು ಕೂಗುತ್ತಿದ್ದ.

ಸಾರ್ವಜನಿಕವಾಗಿ ಪತಿ ಅಭಿಷೇಕ್​ ಬಚ್ಚನ್​ ಎದುರಿನಲ್ಲೇ ಐಶ್​ಗೆ ಅಭಿಮಾನಿ ಪ್ರಪೋಸ್​ ಮಾಡಿದ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಆ ವ್ಯಕ್ತಿಗೆ ಅಭಿಷೇಕ್​ ನೀಡಿದ ಉತ್ತರ ಕೂಡ ಅಷ್ಟೇ ಮಜವಾಗಿತ್ತು. ಆತನ ಮ್ಯಾರೇಜ್​ ಪ್ರಪೋಸಲ್​ ನೋಡಿದ ಐಶ್​ ನಕ್ಕು ಸುಮ್ಮನಾದರು. ಆದರೆ ಅಭಿಷೇಕ್​, ‘ಆಕೆ ನನ್ನನ್ನು ಮದುವೆ ಆದಿದ್ದಾಳೆ ಮಾರಾಯಾ, ಸಾರಿ’ ಎಂದು ನಗುತ್ತಲೇ ಹೇಳಿಬಿಟ್ಟರು.

ಸದ್ಯ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್​ ಸೆಲ್ವನ್​ ಸಿನಿಮಾದಲ್ಲಿ ಐಶ್ವರ್ಯಾ ರೈ ನಟಿಸುತ್ತಿದ್ದಾರೆ. ಲಾಕ್​ಡೌನ್​ನಿಂದಾಗಿ ಚಿತ್ರದ ಶೂಟಿಂಗ್​ ತಾತ್ಕಾಲಿಕವಾಗಿ ನಿಂತಿದೆ. ಆ ಸಿನಿಮಾ ಮೇಲೆ ಪ್ರೇಕ್ಷಕರು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ:

ಪುರುಷ ಮಾಡೆಲ್​ ವಿಚಾರಕ್ಕೆ ಕಿತ್ತಾಡಿಕೊಂಡಿದ್ದ ಐಶ್ವರ್ಯಾ ರೈ-ಮನಿಷಾ ಕೊಯಿರಾಲಾ; ಬಚ್ಚನ್​ ಸೊಸೆಯ ಕಣ್ಣೀರ ಕಥೆ

ಐಶ್ವರ್ಯಾ ರೈ-ಅಭಿಷೇಕ್​ ಪ್ರೀತಿಗೆ ಸೇತುವೆ ಆಗಿದ್ದು ಬಾಬಿ ಡಿಯೋಲ್; ಎರಡು ದಶಕಗಳ ನಂತರ ಹೊರ ಬಿತ್ತು ಸತ್ಯ

Published On - 11:48 am, Thu, 20 May 21

Follow Us
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ