ಮೈಸೂರಿನಲ್ಲಿ ಶಿವರಾಜ್​ಕುಮಾರ್​-ಕೆಎಸ್​ ಈಶ್ವರಪ್ಪ ದಿಢೀರ್ ಭೇಟಿ; ಇಲ್ಲಿದೆ ಕಾರಣ

ಶಿವರಾಜ್​ಕುಮಾರ್​ ಅವರ ಫಿಟ್​ನೆಸ್​ಗೆ ಈಶ್ವರಪ್ಪ ಮೆಚ್ಚುಗೆ ಸೂಚಿಸಿದ್ದಾರೆ. ಹೋಟೆಲ್​ನಲ್ಲಿದ್ದ ಅಭಿಮಾನಿಗಳು ಈ ಗಣ್ಯರಿಬ್ಬರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

ಮೈಸೂರಿನಲ್ಲಿ ಶಿವರಾಜ್​ಕುಮಾರ್​-ಕೆಎಸ್​ ಈಶ್ವರಪ್ಪ ದಿಢೀರ್ ಭೇಟಿ; ಇಲ್ಲಿದೆ ಕಾರಣ
ಕೆಎಸ್​ ಈಶ್ವರಪ್ಪ, ಶಿವರಾಜ್​ಕುಮಾರ್​
TV9kannada Web Team

| Edited By: Madan Kumar

Jul 30, 2021 | 1:45 PM


ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಜಟಾಪಟಿ ಶುರುವಾದಾಗಿನಿಂದಲೂ ರಾಜಕೀಯ ವಲಯದಲ್ಲಿ ತೀವ್ರ ಕೌತುಕ ನಿರ್ಮಾಣ ಆಗಿತ್ತು. ಈಗ ಸಚಿವ ಸಂಪುಟದ ಕುರಿತು ಎಲ್ಲೆಲ್ಲೂ ಚರ್ಚೆ ಆಗುತ್ತಿದೆ. ಈ ಸಂದರ್ಭದಲ್ಲಿ ಎಲ್ಲ ಶಾಸಕರ ನಡೆ-ನುಡಿ ಕೂಡ ಗಮನ ಸೆಳೆಯುತ್ತಿದೆ. ಈ ನಡುವೆ ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ (Shivarajkumar) ಮತ್ತು ಮಾಜಿ ಸಚಿವ ಕೆಎಸ್​ ಈಶ್ವರಪ್ಪ (KS Eshwarappa) ಅವರು ಪರಸ್ಪರ ಭೇಟಿ ಆಗಿರುವುದು ಕೌತುಕ ಮೂಡಿಸಿದೆ. ಮೈಸೂರಿನಲ್ಲಿ (Mysore) ಈ ಗಣ್ಯರಿಬ್ಬರು ಭೇಟಿ ಆಗಿದ್ದಾರೆ. ಈ ದಿಢೀರ್​ ಭೇಟಿಗೆ ಕಾರಣ ಏನು ಎಂದು ಎಲ್ಲರ ಮನದಲ್ಲೂ ಪ್ರಶ್ನೆ ಮೂಡಿದೆ. 

ಶಿವರಾಜ್​ಕುಮಾರ್​ ಅವರು ಈವರೆಗೂ ನೇರವಾಗಿ ರಾಜಕೀಯಕ್ಕೆ ಎಂಟ್ರಿ ನೀಡಿದವರಲ್ಲ. ಆದರೆ ಅವರ ಕುಟುಂಬಕ್ಕೂ ರಾಜಕೀಯಕ್ಕೂ ನಂಟು ಮೊದಲಿನಿಂದಲೂ ಇದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಅಳಿಯ ಶಿವರಾಜ್​ಕುಮಾರ್​. ಅವರ ಪತ್ನಿ ಗೀತಾ ಕೂಡ ಈ ಹಿಂದೆ ಚುನಾವಣೆಯ ಕಣಕ್ಕೆ ಇಳಿದಿದ್ದರು. ಆಗೆಲ್ಲ ಪತ್ನಿ ಪರವಾಗಿ ಶಿವರಾಜ್​ಕುಮಾರ್​ ಪ್ರಚಾರ ಮಾಡಿದ್ದರು. ಹೀಗೆ ಪರೋಕ್ಷವಾಗಿ ಅವರು ರಾಜಕೀಯದ ಜೊತೆ ಸಂಪರ್ಕ ಹೊಂದಿದ್ದಾರೆ.

ಈಗ ಶಿವರಾಜ್​ಕುಮಾರ್​ ಅವರು ಮೈಸೂರಿನಲ್ಲಿ ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಅವರನ್ನು ಭೇಟಿ ಆಗಿರುವುದಕ್ಕೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಇದೊಂದು ಸಹಜ ಭೇಟಿ ಎನ್ನಲಾಗಿದೆ. ಇಂದು (ಜು.30) ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ಸಲುವಾಗಿ ಈಶ್ವರಪ್ಪ ಬಂದಿದ್ದಾರೆ. ಬಳಿಕ ಉಪಾಹಾರಕ್ಕಾಗಿ ಖಾಸಗಿ ಹೋಟೆಲ್​ಗೆ ಅವರು ತೆರಳಿದರು. ಇದೇ ವೇಳೆ ಆ ಹೋಟೆಲ್​ನಲ್ಲಿದ್ದ ಶಿವರಾಜ್​ಕುಮಾರ್​ ಅವರನ್ನು ಈಶ್ವರಪ್ಪ ಭೇಟಿಯಾದರು.

ಈ ಭೇಟಿಯಲ್ಲಿ ಶಿವರಾಜ್​ಕುಮಾರ್​ ಮತ್ತು ಈಶ್ವರಪ್ಪ ಅವರು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಶಿವರಾಜ್​ಕುಮಾರ್​ ಅವರ ಫಿಟ್​ನೆಸ್​ಗೆ ಈಶ್ವರಪ್ಪ ಮೆಚ್ಚುಗೆ ಸೂಚಿಸಿದ್ದಾರೆ. ಹೋಟೆಲ್​ನಲ್ಲಿದ್ದ ಅಭಿಮಾನಿಗಳು ಇಬ್ಬರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಡಾ. ರಾಜ್​ಕುಮಾರ್​ ಅವರ ತಂಗಿ (ನಾಗತ್ತೆ) ಅವರನ್ನು ನೋಡಿಕೊಂಡು ಬರಲು ಶಿವರಾಜ್​ಕುಮಾರ್​ ಗಾಜನೂರಿನತ್ತ ಪ್ರಯಾಣ ಬೆಳೆಸಿದ್ದರು.

ಸದ್ಯ ಶಿವರಾಜ್​ಕುಮಾರ್​ ಕೈಯಲ್ಲಿ ಹಲವು ಸಿನಿಮಾಗಳಿವೆ. ಎ. ಹರ್ಷ ನಿರ್ದೇಶನದ ‘ಭಜರಂಗಿ 2’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ‘ವೇದ’, ‘ಬೈರಾಗಿ’ ಮುಂತಾದ ಸಿನಿಮಾಗಳ ಕೆಲಸಗಳು ಪ್ರಗತಿಯಲ್ಲಿವೆ.

ಇದನ್ನೂ ಓದಿ:

ಶಿವರಾಜ್​ಕುಮಾರ್​ 124ನೇ ಚಿತ್ರಕ್ಕೆ ನಾಯಕಿಯಾದ್ರು ಮೆಹ್ರೀನ್​ ಪೀರ್ಜಾದಾ

ಕಷ್ಟಕಾಲದಲ್ಲಿ ಸಿನಿಮಾ ಕಾರ್ಮಿಕರ ಕೈ ಹಿಡಿದ ಶಿವರಾಜ್​ಕುಮಾರ್​; 10 ಲಕ್ಷ ರೂ. ನೆರವು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada