ಪುನೀತ್​ ನಿರ್ಮಾಣದ ‘ಮ್ಯಾನ್​ ಆಫ್​ ದಿ ಮ್ಯಾಚ್​’ ಚಿತ್ರದಲ್ಲಿ ವಾಸುಕಿ ವೈಭವ್; ಏನಿದು ಗುಡ್​ ನ್ಯೂಸ್​?

ಪುನೀತ್​ ರಾಜ್​ಕುಮಾರ್​ ಅವರ ಪಿಆರ್​ಕೆ ಪ್ರೊಡಕ್ಷನ್ಸ್​, ಸತ್ಯ & ಮಯೂರ ಪಿಕ್ಚರ್ಸ್​ ಜೊತೆಗೂಡಿ ಈ ಸಿನಿಮಾ ನಿರ್ಮಿಸುತ್ತಿವೆ. ವಾಸುಕಿ ವೈಭವ್ ವಿಶೇಷ ಪಾತ್ರದ ಜೊತೆಗೆ​ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ.

ಪುನೀತ್​ ನಿರ್ಮಾಣದ ‘ಮ್ಯಾನ್​ ಆಫ್​ ದಿ ಮ್ಯಾಚ್​’ ಚಿತ್ರದಲ್ಲಿ ವಾಸುಕಿ ವೈಭವ್; ಏನಿದು ಗುಡ್​ ನ್ಯೂಸ್​?
ಪುನೀತ್​ ನಿರ್ಮಾಣದ ‘ಮ್ಯಾನ್​ ಆಫ್​ ದಿ ಮ್ಯಾಚ್​’ ಚಿತ್ರದಲ್ಲಿ ವಾಸುಕಿ ವೈಭವ್
Follow us
TV9 Web
| Updated By: ಮದನ್​ ಕುಮಾರ್​

Updated on: Jul 30, 2021 | 8:56 AM

ನಟ, ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ (Vasuki Vaibhav)​ ಅವರನ್ನು ಬಹುಮುಖ ಪ್ರತಿಭೆ ಎಂದೇ ಹೇಳಬೇಕು. ಬಿಗ್​ ಬಾಸ್​ ಕನ್ನಡ ಸೀಸನ್​ 7ರಲ್ಲಿ ಸ್ಪರ್ಧಿಸಿ ಬಂದ ಬಳಿಕ ಅವರಿಗೆ ದೊಡ್ಡಮಟ್ಟದ ಜನಪ್ರಿಯತೆ ಸಿಕ್ಕಿತು. ಹಲವು ಸಿನಿಮಾಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಅದರ ನಡುವೆ ಅವರು ‘ಮ್ಯಾನ್​ ಆಫ್​ ದಿ ಮ್ಯಾಚ್’​ ಆಗಿದ್ದಾರೆ. ಅಂದರೆ, ಡಿ. ಸತ್ಯಪ್ರಕಾಶ್​ ನಿರ್ದೇಶನ ಮಾಡುತ್ತಿರುವ ‘ಮ್ಯಾನ್​ ಆಫ್​ ದಿ ಮ್ಯಾಚ್​’ (Man Of The Match) ಸಿನಿಮಾದಲ್ಲಿ ವಾಸುಕಿ ವೈಭವ್​ ನಟಿಸಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ಖಷಿ ನೀಡಿದೆ.

‘ರಾಮಾ ರಾಮಾ ರೇ’ ಖ್ಯಾತಿಯ ಸತ್ಯಪ್ರಕಾಶ್​ ಅವರು ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ ‘ಮ್ಯಾನ್​ ಆಫ್​ ದಿ ಮ್ಯಾಚ್​’. ಈ ಚಿತ್ರಕ್ಕೆ ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಬಂಡವಾಳ ಹೂಡುತ್ತಿದ್ದಾರೆ. ಶೂಟಿಂಗ್​ ಪೂರ್ಣಗೊಳಿಸಿರುವ ಈ ಸಿನಿಮಾದಲ್ಲಿ ವಾಸುಕಿ ವೈಭವ್​ ಒಂದು ವಿಶೇಷ ಪಾತ್ರದಲ್ಲಿ ನಟಿಸಿರುವುದು ಮಾತ್ರವಲ್ಲದೆ, ಸಂಗೀತ ನಿರ್ದೇಶನ ಮಾಡಿದ್ದಾರೆ. ಒಂದು ಹಾಡಿನಲ್ಲಿ ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ.​

ಹಲವಾರು ಸೂಪರ್​ ಹಿಟ್​ ಹಾಡುಗಳನ್ನು ಬರೆದಿರುವ ನಿರ್ದೇಶಕ ಯೋಗರಾಜ್​ ಭಟ್​ ಅವರ ಬತ್ತಳಿಕೆಯಿಂದಲೇ ಈ ಗೀತೆ ಹೊರಬಂದಿದೆ. ಅವರಿಗೆ ಸತ್ಯಪ್ರಕಾಶ್​ ಕೂಡ ಸಾಥ್​ ನೀಡಿದ್ದಾರೆ. ಇವರಿಬ್ಬರು ಜಂಟಿಯಾಗಿ ರಚಿಸಿರುವ ಈ ಹಾಡಿಗೆ ಸ್ವತಃ ಸತ್ಯಪ್ರಕಾಶ್​ ಕೊರಿಯೋಗ್ರಫಿ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಮ್ಯಾನ್​ ಆಫ್​ ದಿ ಮ್ಯಾಚ್’ ಸಿನಿಮಾದ ಮರುಗು ಹೆಚ್ಚಿದೆ.

ಪುನೀತ್​ ರಾಜ್​ಕುಮಾರ್​ ಅವರ ಪಿಆರ್​ಕೆ ಪ್ರೊಡಕ್ಷನ್ಸ್​, ಸತ್ಯ & ಮಯೂರ ಪಿಕ್ಚರ್ಸ್​ ಜೊತೆಗೂಡಿ ಈ ಸಿನಿಮಾ ನಿರ್ಮಿಸುತ್ತಿವೆ. ಸತ್ಯಪ್ರಕಾಶ್​ ಅವರ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಪುನೀತ್​ ರಾಜ್ ಕುಮಾರ್​ ಸಂತಸ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಬಹುತೇಕ ಹೊಸ ಕಲಾವಿದರೇ ನಟಿಸಿರುವುದು ವಿಶೇಷ. 50ಕ್ಕೂ ಹೆಚ್ಚು ಮಂದಿ ಹೊಸಬರಿಗೆ ಇದರಲ್ಲಿ ಅವಕಾಶ ನೀಡಿಲಾಗಿದೆ. ‘ರಾಮಾ ರಾಮಾ ರೇ’ ಚಿತ್ರದಲ್ಲಿದ್ದ ಧರ್ಮಣ್ಣ ಕಡೂರು ಮತ್ತು ನಟರಾಜ್​ ಅವರು ‘ಮ್ಯಾನ್ ಆಫ್​ ದಿ ಮ್ಯಾಚ್​​’ನಲ್ಲೂ ಅಭಿನಯಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪುನೀತ್​ ರಾಜ್​ಕುಮಾರ್​ ನಟನೆಯ ಒಂದು ಚಿತ್ರಕ್ಕೆ ಸತ್ಯಪ್ರಕಾಶ್​ ನಿರ್ದೇಶನ ಮಾಡಬೇಕಿತ್ತು. ಆದರೆ ಕಾರಣಾಂತರ ಆ ಪ್ರಾಜೆಕ್ಟ್​ ಮುಂದಕ್ಕೆ ಹೋಗಿದೆ.

ಇದನ್ನೂ ಓದಿ:

‘ಮ್ಯಾನ್​ ಆಫ್​ ದಿ ಮ್ಯಾಚ್​’ ಚಿತ್ರಕ್ಕಾಗಿ ಕೈ ಜೋಡಿಸಿದ ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಸತ್ಯ ಪ್ರಕಾಶ್​

ಪುನೀತ್​ ರಾಜ್​ಕುಮಾರ್​ ಬಾಲಿವುಡ್​ ಎಂಟ್ರಿ ಯಾವಾಗ? ಅವರಿಂದಲೇ ಸಿಕ್ತು ಉತ್ತರ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್