ಹಳ್ಳಿ ಸೊಗಡಿನ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ಗೆ ಬಿಗ್​ ಬಾಸ್ ವಾಸುಕಿ ಸಾಹಿತ್ಯ

ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ಕಥಾ ಹಂದರ, ವಿಭಿನ್ನ ಟೈಟಲ್​ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆ ಲಿಸ್ಟ್​ಗೆ ಸದ್ಯ ಸೇರ್ಪಡೆಯಾಗುತ್ತಿರುವ ಚಿತ್ರವೇ ಊರಿನ ಗ್ರಾಮಸ್ಥರಲ್ಲಿ ವಿನಂತಿ. ಹೆಸರೇ ಹೇಳೋ ಹಾಗೆ ಚಿತ್ರ ಹಳ್ಳಿ ಸೊಗಡನ್ನ ಹೊಂದಿದೆ. ಒಂದೊಳ್ಳೆ ಸಂದೇಶ ನೀಡೋ ಸಿನಿಮಾ ಇದಾಗಿದೆ ಅನ್ನೋದ್ರಲ್ಲಿ ಯಾವುದೇ ಸಂದೇಹ ಇಲ್ಲ. ಹೆಚ್​.ಆರ್.ಕೆ ಸ್ಟುಡಿಯೋಸ್​ ಬ್ಯಾನರ್​ ಅಡಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಡಿ.ಆರ್​ ಕುಮಾರಸ್ವಾಮಿ ಮತ್ತು ದೇವನಗೌಡ ವಡಗೇರಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಎಮ್. ಕೃಷ್ಣಮೂರ್ತಿ ಕಥೆ. ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿ […]

ಹಳ್ಳಿ ಸೊಗಡಿನ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ಗೆ ಬಿಗ್​ ಬಾಸ್ ವಾಸುಕಿ ಸಾಹಿತ್ಯ
Follow us
ಸಾಧು ಶ್ರೀನಾಥ್​
|

Updated on:Dec 22, 2019 | 2:13 PM

ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ಕಥಾ ಹಂದರ, ವಿಭಿನ್ನ ಟೈಟಲ್​ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆ ಲಿಸ್ಟ್​ಗೆ ಸದ್ಯ ಸೇರ್ಪಡೆಯಾಗುತ್ತಿರುವ ಚಿತ್ರವೇ ಊರಿನ ಗ್ರಾಮಸ್ಥರಲ್ಲಿ ವಿನಂತಿ. ಹೆಸರೇ ಹೇಳೋ ಹಾಗೆ ಚಿತ್ರ ಹಳ್ಳಿ ಸೊಗಡನ್ನ ಹೊಂದಿದೆ. ಒಂದೊಳ್ಳೆ ಸಂದೇಶ ನೀಡೋ ಸಿನಿಮಾ ಇದಾಗಿದೆ ಅನ್ನೋದ್ರಲ್ಲಿ ಯಾವುದೇ ಸಂದೇಹ ಇಲ್ಲ.

ಹೆಚ್​.ಆರ್.ಕೆ ಸ್ಟುಡಿಯೋಸ್​ ಬ್ಯಾನರ್​ ಅಡಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಡಿ.ಆರ್​ ಕುಮಾರಸ್ವಾಮಿ ಮತ್ತು ದೇವನಗೌಡ ವಡಗೇರಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಎಮ್. ಕೃಷ್ಣಮೂರ್ತಿ ಕಥೆ. ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ವಾಸುಕಿ ವೈಭವ್​ ಅವರ ಸಾಹಿತ್ಯ, ಕಾರ್ತಿಕ್​ ಎಸ್​ ಛಾಯಾಗ್ರಹಣ, ಸಾಯಿವಂಶಿ ಸಂಗೀತ, ಅನಿಲ್​ ಬಿಲ್ಲವ ಸಂಕಲನ ಚಿತ್ರಕ್ಕೆ ಇರಲಿದೆ.

ಜನವರಿ 1 ರಿಂದ ಚಿತ್ರೀಕರಣ ಪ್ರಾರಂಭ ಚಿತ್ರದ ಶೂಟಿಂಗ್​ಗೆ ಭರದ ಸಿದ್ಧತೆ ನಡೆದಿದ್ದು ಮುಂದಿನ ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. 30 ವರ್ಷಗಳ ಹಿಂದಿನ ಕಥೆಯನ್ನ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಚಿತ್ರದ ಮೂಲಕ ತೆರೆ ಮೇಲೆ ತರುವ ಪ್ರಯತ್ನಕ್ಕೆ ನಿರ್ದೇಶಕ ಕೃಷ್ಣಮೂರ್ತಿ ಕೈ ಹಾಕಿದ್ದಾರೆ. 30 ವರ್ಷದ ಹಿಂದೆ ಹಳ್ಳಿ-ಹಳ್ಳಿಗಳಿಗೆ ಹೋಗಿ ನಾಟಕ ಮಾಡಿಕೊಂಡು ಜೀವನ ನಡೆಸುವವರ ರೀತಿ-ನೀತಿ, ಪದ್ಧತಿಯನ್ನ ಸಿನಿಮಾದಲ್ಲಿ ಎಳೆಎಳೆಯಾಗಿ ತೊರಿಸಲಾಗುತ್ತೆ.

12 ವರ್ಷದ ಬಾಲಕನ ತರಲೆ, 30 ವರ್ಷಗಳ ಹಿಂದಿನ ಬೆಳವಣಿಗೆಯನ್ನು ಹೊಂದಿದ್ದು, ಕಥೆಯ ಕೊನೆ ಕ್ಷಣದಲ್ಲಿ ಇವನ ಧೈರ್ಯ, ಸಾಹಸ ಜನರಿಗೆ ನಾಯಕತ್ವ ತೋರುತ್ತದೆ. ಊರಿನ ರಾಕ್ಷರ ಕೋಟೆಯೊಂದರಲ್ಲಿ ಸಿಲುಕಿ ಭಯದಿಂದ ಜೀವನ ದೂಡೂತ್ತಿದ್ದ ಜನರ ಪಾಲಿಗೆ 12 ವರ್ಷದ ಹುಡುಗನ ಆಗಮನ, ಅವನ ಧೈರ್ಯ, ಸಾಹಸ ಕಂಡು ಭಯದಲ್ಲಿದ್ದ ಜನರಿಗೆ ತಮ್ಮನ್ನು ರಕ್ಷಣೆ ಮಾಡಲು ಬಂದ ಹನುಮಾನ್​ ರೂಪದಲ್ಲಿ ಕಾಣುತ್ತಾನೆ. ಇದು ಗ್ರಾಮಸ್ಥರಲ್ಲಿ ವಿನಂತಿ ಚಿತ್ರದ ಕಥಾ ಸಾರಂಶವಾಗಿದೆ.

ಈ ಎಲ್ಲಾ ಸನ್ನಿವೇಶಗಳನ್ನ ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸಿ ಒಂದು ಒಳ್ಳೆ ಸಂದೇಶದೊಂದಿಗೆ ಜನರ ಮುಂದೆ ತರಲು ಚಿತ್ರತಂಡ ಹೊರಟಿದೆ. ಚಿತ್ರತಂಡಕ್ಕೆ ನಾವು-ನೀವು ಆಲ್​ ದಿ ಬೆಸ್ಟ್​ ಹೋಳೋಣ, ಆಲ್​ ದಿ ಬೆಸ್ಟ್​ .. ಊರಿನ ಗ್ರಾಮಸ್ಥರಲ್ಲಿ ವಿನಂತಿ ಚಿತ್ರತಂಡ.

Published On - 10:25 am, Sat, 21 December 19

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ