Radhika Pandit: ಹೊಸ ಮನೆಯ ಟೆರೇಸ್​ನಿಂದ ಅಭಿಮಾನಿಗಳಿಗೆ ಹೆಲೋ​ ಹೇಳಿದ ರಾಧಿಕಾ ಪಂಡಿತ್​-ಆಯ್ರಾ ಯಶ್

Ayra Yash: ರಾಧಿಕಾ ಪಂಡಿತ್​ ನಟನೆಯಿಂದ ದೂರ ಉಳಿದಿದ್ದಾರೆ. ಆಗೊಂದು ಈಗೊಂದು ಪೋಸ್ಟ್​ ಹಾಕುವ ಮೂಲಕ ಅಭಿಮಾನಿಗಳ ಜತೆ ರಾಧಿಕಾ ಪಂಡಿತ್​ ಸಂಪರ್ಕದಲ್ಲಿದ್ದಾರೆ.

Radhika Pandit: ಹೊಸ ಮನೆಯ ಟೆರೇಸ್​ನಿಂದ ಅಭಿಮಾನಿಗಳಿಗೆ ಹೆಲೋ​ ಹೇಳಿದ ರಾಧಿಕಾ ಪಂಡಿತ್​-ಆಯ್ರಾ ಯಶ್
ಹೊಸ ಮನೆಯ ಟೆರೇಸ್​ನಿಂದ ಹೆಲೋ​ ಹೇಳಿದ ರಾಧಿಕಾ ಪಂಡಿತ್​-ಆಯ್ರಾ ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 29, 2021 | 3:53 PM

ನಟಿ ರಾಧಿಕಾ ಪಂಡಿತ್ (Radhika Pandit)​ ಕುಟುಂಬದ ಜತೆ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ನಟನೆಯಿಂದ ದೂರವೇ ಇರುವ ಅವರು ಮಕ್ಕಳ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ, ಅವರು ಮಕ್ಕಳ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ಖುಷಿ ಪಡಿಸುತ್ತಾರೆ. ಈಗ ನಟಿ ರಾಧಿಕಾ ಪಂಡಿತ್ ಮಗಳು ಆಯ್ರಾ (Ayra Yash) ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ.

ಪ್ರೆಸ್ಟೀಜ್​ ಗಾಲ್ಫ್​ ಅಪಾರ್ಟ್​​ಮೆಂಟ್ ಟೆರೇಸ್​ ಮೇಲೆ ರಾಧಿಕಾ ಪಂಡಿತ್​ ಹಾಗೂ ಆಯ್ರಾ ಇಬ್ಬರೂ ನಿಂತಿದ್ದಾರೆ. ‘ನಿಮಗೊಂದು ಹೆಲೋ ಹೇಳಬೇಕಿತ್ತು’ ಎಂದು ರಾಧಿಕಾ ಕ್ಯಾಪ್ಶನ್​ ನೀಡಿದ್ದಾರೆ. ಆಯ್ರಾ ಈ ಫೋಟೋದಲ್ಲಿ ಸಖತ್​ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ.

ಗಾಲ್ಫ್​ ಅಪಾರ್ಟ್​​ಮೆಂಟ್​ನಲ್ಲಿ ಯಶ್‌ ಹೊಸ ಮನೆ​ ಖರೀದಿ ಮಾಡಿದ್ದರು. ಹಲವು ತಿಂಗಳ ಕಾಲ ಮನೆಯ ವಿನ್ಯಾಸ ಕೆಲಸಗಳು ನಡೆಯುತ್ತಿತ್ತು. ಅವೆಲ್ಲವೂ ಪೂರ್ಣಗೊಂಡು ಈ ತಿಂಗಳ ಆರಂಭದಲ್ಲಿ  ಗೃಹ ಪ್ರವೇಶದ ಕಾರ್ಯಗಳು ನಡೆದಿದ್ದವು. ಈ ಸಂದರ್ಭದಲ್ಲಿ ಯಶ್​ ಮನೆಯ ಫೋಟೋಗಳು, ಗೃಹ ಪ್ರವೇಶ ಕಾರ್ಯಕ್ರಮದ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಈಗ ರಾಧಿಕಾ ಕ್ಲಿಕ್​ ಮಾಡಿರುವ ಫೋಟೋ ಕೂಡ ಮನೆಯ ಟೆರೇಸ್​ನದ್ದೇ ಎಂದು ಹೇಳಲಾಗುತ್ತಿದೆ.

ರಾಧಿಕಾ ಪಂಡಿತ್​ ನಟನೆಯಿಂದ ದೂರ ಉಳಿದಿದ್ದಾರೆ. ಆಗೊಂದು ಈಗೊಂದು ಪೋಸ್ಟ್​ ಹಾಕುವ ಮೂಲಕ ಅಭಿಮಾನಿಗಳ ಜತೆ ರಾಧಿಕಾ ಪಂಡಿತ್​ ಸಂಪರ್ಕದಲ್ಲಿದ್ದಾರೆ. ಇನ್ನು, ರಾಧಿಕಾ ಕೊನೆಯದಾಗಿ ಕಾಣಿಸಿಕೊಂಡಿದ್ದು 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲಿ. ಈ ಸಿನಿಮಾ ತೆರೆಗೆ ಬಂದ ನಂತರದಲ್ಲಿ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಇನ್ನು, ಯಶ್​ ‘ಕೆಜಿಎಫ್​ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಸಂಜಯ್​ ದತ್​ ಅಧೀರನಾಗಿ ಕಾಣಿಸಿಕೊಂಡಿದ್ದಾರೆ. ಇಂದು ಸಂಜಯ್​ ದತ್​ಜನ್ಮದಿನ. ಈ ಕಾರಣಕ್ಕೆ ಹೊಸ ಪೋಸ್ಟರ್​ ರಿಲೀಸ್​ ಆಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

ಇದನ್ನೂ ಓದಿ: Radhika Pandit: ಹೊಸ ಮನೆಯ ಬಾಲ್ಕನಿ ವ್ಯೂ ಹಂಚಿಕೊಂಡ ನಟಿ ರಾಧಿಕಾ ಪಂಡಿತ್​

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ