ಕಿರಿಕ್​ ಬಳಿಕ ಮುಂದುವರಿದ ರಕ್ಷಿತಾ-ದರ್ಶನ್​ ಫ್ರೆಂಡ್​ಶಿಪ್​; ಇಲ್ಲಿದೆ ಫೋಟೋ ಸಾಕ್ಷಿ

ವಿವಾದದ ನಂತರ ದರ್ಶನ್​ ಮತ್ತು ರಕ್ಷಿತಾ ಪ್ರೇಮ್​ ನಡುವೆ ಮತ್ತೆ ಸ್ನೇಹ ಚಿಗುರಿದೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಫೋಟೋವನ್ನು ರಕ್ಷಿತಾ ಹಂಚಿಕೊಂಡಿದ್ದಾರೆ. ಅದರ ಜೊತೆ ಅವರು ನೀಡಿರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ.

ಕಿರಿಕ್​ ಬಳಿಕ ಮುಂದುವರಿದ ರಕ್ಷಿತಾ-ದರ್ಶನ್​ ಫ್ರೆಂಡ್​ಶಿಪ್​; ಇಲ್ಲಿದೆ ಫೋಟೋ ಸಾಕ್ಷಿ
ದರ್ಶನ್​, ರಕ್ಷಿತಾ ಪ್ರೇಮ್​

ಕೆಲವೇ ದಿನಗಳ ಹಿಂದೆ ಸ್ಯಾಂಡಲ್​ವುಡ್​ನಲ್ಲಿ ವಿವಾದ ಭುಗಿಲೆದ್ದಿತ್ತು. ನಟ ದರ್ಶನ್​ (Darshan) ಮತ್ತು ನಿರ್ದೇಶಕ ಇಂದ್ರಜಿತ್​ ಲಂಕೇಶ್ (Indrajit Lankesh)​ ಅವರ ನಡುವೆ ಜಟಾಪಟಿ ಏರ್ಪಟ್ಟಿತ್ತು. ಮೊದಲು 25 ಕೋಟಿ ರೂ. ವಂಚನೆ ಯತ್ನದಿಂದ ಆರಂಭವಾದ ಪ್ರಕರಣ ಎತ್ತೆತ್ತಲೋ ಸಾಗಿತ್ತು. ಮಾತಿನ ಭರದಲ್ಲಿ ನಿರ್ದೇಶಕ ಪ್ರೇಮ್​ (Prem) ಬಗ್ಗೆಯೂ ದರ್ಶನ್ ಹಗುರವಾಗಿ ಮಾತನಾಡಿದ್ದರು. ಇದು ಸಹಜವಾಗಿಯೇ ಪ್ರೇಮ್​ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಈಗ ಪ್ರೇಮ್​ ಪತ್ನಿ, ನಟಿ ರಕ್ಷಿತಾ (Rakshitha Prem) ಅವರ ಸೋಶಿಯಲ್​ ಮೀಡಿಯಾ ಪೋಸ್ಟ್​ ಹೊಸ ಸಂದೇಶ ರವಾನಿಸಿದೆ.

ಪ್ರೇಮ್​ ಬಗ್ಗೆ ದರ್ಶನ್​ ಹಗುರವಾಗಿ ಮಾತನಾಡಿದ್ದರಿಂದ ರಕ್ಷಿತಾಗೂ ಬೇಸರ ಆಗಿತ್ತು. ಆದರೆ ಈಗ ದರ್ಶನ್​ ಮತ್ತು ರಕ್ಷಿತಾ ನಡುವೆ ಮತ್ತೆ ಸ್ನೇಹ ಚಿಗುರಿದೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಫೋಟೋವನ್ನು ರಕ್ಷಿತಾ ಹಂಚಿಕೊಂಡಿದ್ದಾರೆ. ಅದರ ಜೊತೆ ಅವರು ನೀಡಿರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ.

‘ಕೆಲವು ಸಂಬಂಧಗಳಿಗೆ ಕೊನೆ ಎಂಬುದೇ ಇಲ್ಲ. ದರ್ಶನ್​ ನೀವು ನನಗಾಗಿ ಸದಾ ಇರುತ್ತೀರಿ ಎಂಬುದು ನನಗೆ ಗೊತ್ತು. ನನ್ನ ಬದುಕಿನಲ್ಲಿ ಅಂಥ ವ್ಯಕ್ತಿ ಆಗಿರುವುದಕ್ಕೆ ಧನ್ಯವಾದಗಳು’ ಎಂದು ರಕ್ಷಿತಾ ಪೋಸ್ಟ್​ ಮಾಡಿದ್ದಾರೆ. #friendhipforever ಎಂಬ ಹ್ಯಾಶ್​ಟ್ಯಾಗ್​ ಮೂಲಕ ತಮ್ಮ ಸ್ನೇಹ ಶಾಶ್ವತ ಎಂಬುದನ್ನು ಅವರು ಮತ್ತೊಮ್ಮೆ ಸಾರಿ ಹೇಳಿದ್ದಾರೆ.

ರಕ್ಷಿತಾ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಈ ಫೋಟೋ ಕಂಡು ಅವರ ಅಭಿಮಾನಿಗಳು ಖುಷಿ ಆಗಿದ್ದಾರೆ. ‘ನಿಮ್ಮ ಸ್ನೇಹ ಚಿರಕಾಲ ಹೀಗೆ ಇರಲಿ. ನಿಮ್ಮನ್ನು ಜೊತೆಯಾಗಿ ನೋಡೋಕೆ ಖುಷಿ ಆಗುತ್ತದೆ. ನೀವಿಬ್ಬರು ಒಂದಾಗಿದ್ದನ್ನು ಕಂಡ ಆನಂದಭಾಷ್ಪ ಬಂತು’ ಎಂದೆಲ್ಲ ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

 

View this post on Instagram

 

A post shared by Rakshitha🌸 (@rakshitha__official)

ಸ್ಯಾಂಡಲ್​ವುಡ್​ನಲ್ಲಿ ಅಭಿಮಾನಿಗಳ ಮನಗೆದ್ದ ಬೆಸ್ಟ್​ ಜೋಡಿಗಳಲ್ಲಿ ದರ್ಶನ್ ಮತ್ತು ರಕ್ಷಿತಾ ಕೂಡ ಪ್ರಮುಖರು. ‘ಅಯ್ಯ’, ‘ಸುಂಟರಗಾಳಿ’, ‘ಕಲಾಸಿಪಾಳ್ಯ’, ‘ಮಂಡ್ಯ’ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ ಈ ಜೋಡಿಗೆ ಸಿನಿಪ್ರಿಯರು ಫಿದಾ ಆಗಿದ್ದರು. ಆ ಸಿನಿಮಾಗಳೆಲ್ಲ ತೆರೆಕಂಡು ಹಲವು ವರ್ಷಗಳೇ ಕಳೆದಿವೆ. ರಕ್ಷಿತಾ ಅವರ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಹಾಗಿದ್ದರೂ ಕೂಡ ರಕ್ಷಿತಾ​ ಮತ್ತು ದರ್ಶನ್​ ನಡುವಿನ ಸ್ನೇಹ ಮಾಸಿಲ್ಲ.

ಇದನ್ನೂ ಓದಿ:

ಪೋಸ್ಟರ್​ನಲ್ಲಿ ದರ್ಶನ್​​ ಜೊತೆ ಸಪ್ಲೈಯರ್​ ಹುಡುಗನ ಫೋಟೋ; ಅಚ್ಚರಿ ಮೂಡಿಸಿದ ‘ಝೂ’ ಚಿತ್ರ

ದರ್ಶನ್​ ವಿವಾದ: ಫ್ಯಾನ್ಸ್​ ಇಟ್ಟ ಬೇಡಿಕೆಗೆ ಒಂದೇ ಮಾತಲ್ಲಿ ಉತ್ತರಿಸಿದ ಜಗ್ಗೇಶ್​

Read Full Article

Click on your DTH Provider to Add TV9 Kannada