ಪೋಸ್ಟರ್​ನಲ್ಲಿ ದರ್ಶನ್​​ ಜೊತೆ ಸಪ್ಲೈಯರ್​ ಹುಡುಗನ ಫೋಟೋ; ಅಚ್ಚರಿ ಮೂಡಿಸಿದ ‘ಝೂ’ ಚಿತ್ರ

TV9 Digital Desk

| Edited By: ಮದನ್​ ಕುಮಾರ್​

Updated on: Jul 25, 2021 | 12:35 PM

‘ಝೂ’ ಚಿತ್ರದ ಮೂಲಕ ಡಿ ಬಾಸ್​ ದರ್ಶನ್​ ಅವರಿಗೆ ಗೌರವ ಸಲ್ಲಿಸಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ. ಮೋಷನ್​ ಪೋಸ್ಟರ್​ನಲ್ಲಿ ಹಲವು ಅಂಶಗಳು ಗಮನ ಸೆಳೆಯುತ್ತಿವೆ.

ಪೋಸ್ಟರ್​ನಲ್ಲಿ ದರ್ಶನ್​​ ಜೊತೆ ಸಪ್ಲೈಯರ್​ ಹುಡುಗನ ಫೋಟೋ; ಅಚ್ಚರಿ ಮೂಡಿಸಿದ ‘ಝೂ’ ಚಿತ್ರ
ಪೋಸ್ಟರ್​ನಲ್ಲಿ ದರ್ಶನ್​​ ಜೊತೆ ಸಪ್ಲೈಯರ್​ ಹುಡುಗನ ಫೋಟೋ

Follow us on


ನಟ ದರ್ಶನ್​ (Darshan) ಅವರಿಗೆ ಸಿನಿಮಾ ಅಲ್ಲದೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಇದೆ. ಕೃಷಿ, ಹೈನುಗಾರಿಕೆ, ಫೋಟೋಗ್ರಫಿ ಮುಂತಾದ ವಿಷಯಗಳ ಬಗ್ಗೆ ಡಿ ಬಾಸ್​ (D Boss) ಆಸಕ್ತಿ ಇಟ್ಟುಕೊಂಡಿದ್ದಾರೆ. ಅದೇ ರೀತಿ ಅವರಿಗೆ ಪರಿಸರ ಮತ್ತು ಪ್ರಾಣಿಗಳು ಎಂದರೆ ಸಖತ್​ ಪ್ರೀತಿ. ಅದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಅದೇ ಕಾರಣಕ್ಕಾಗಿ ಅವರು ಇತ್ತೀಚೆಗೆ ಕರ್ನಾಟಕದಲ್ಲಿನ ಮೃಗಾಲಯಗಳ ಕಷ್ಟಕ್ಕೆ ಮಿಡಿದಿದ್ದರು. ಲಾಕ್​ಡೌನ್​ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಝೂಗಳಿಗೆ ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ದರ್ಶನ್​ ಮನವಿ ಮಾಡಿಕೊಂಡಿದ್ದರು. ಅಚ್ಚರಿ ಎಂದರೆ ‘ಝೂ’ (Zoo) ಎಂಬ ಶೀರ್ಷಿಕೆಯಲ್ಲೇ ಈಗೊಂದು ಸಿನಿಮಾ ಮೂಡಿಬರುತ್ತಿದೆ!

ಕನ್ನಡಲ್ಲಿ ರಾಜಾಹುಲಿ, ರುದ್ರತಾಂಡವ ಮುಂತಾದ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಗುರು ದೇಶಪಾಂಡೆ ಅವರು ‘ಝೂ’ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆಗೆ ‘ಕೇರ್​ ಆಫ್​ ಡಿ ಬಾಸ್​’ ಎಂಬ ಅಡಿಬರಹ ಕೂಡ ಇದೆ. ಜು.25ರಂದು ಗುರು ದೇಶಪಾಂಡೆ ಅವರ ಜನ್ಮದಿನದ ಅಂಗವಾಗಿ ಈ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಆನಂದ್​ ಆಡಿಯೋ ಮೂಲಕ ಮೋಷನ್​ ಪೋಸ್ಟರ್​ ಹೊರಬಂದಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

‘ಝೂ’ ಚಿತ್ರದ ಮೂಲಕ ಡಿ ಬಾಸ್​ ದರ್ಶನ್​ ಅವರಿಗೆ ಗೌರವ ಸಲ್ಲಿಸಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ. ಮೋಷನ್​ ಪೋಸ್ಟರ್​ನಲ್ಲಿ ಹಲವು ಅಂಶಗಳು ಗಮನ ಸೆಳೆಯುತ್ತಿವೆ. ದರ್ಶನ್​ ಫೋಟೋ ಹಿನ್ನೆಲೆಯಲ್ಲಿ ಇದೆ. ಒಬ್ಬ ಸಪ್ಲೈಯರ್​ ಹುಡುಗ ಟೀ ಕೊಡಲು ಬರುತ್ತಿರುವ ಫೋಟೋ ಕೂಡ ಹೈಲೈಟ್ ಆಗಿದೆ. ನವಿಲಿನ ಚಿತ್ರ ಸಹ ಕುತೂಹಲ ಮೂಡಿಸುವಂತಿದೆ. ಒಟ್ಟಾರೆ ಈ ಸಿನಿಮಾ ಮೂಲಕ ಗುರು ದೇಶಪಾಂಡೆ ಯಾವ ಕಥೆ ಹೇಳಲಿದ್ದಾರೆ ಎಂಬ ಕೌತುಕದ ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಹುಟ್ಟಿಕೊಂಡಿದೆ.

ಈ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡುವುದರ ಜೊತೆಗೆ ಕ್ರಿಯೇಟಿವ್​ ಹೆಡ್​ ಆಗಿಯೂ ಗುರು ದೇಶಪಾಂಡೆ ಕೆಲಸ ಮಾಡುತ್ತಿದ್ದಾರೆ. ಮಣಿಕಾಂತ್​ ಕದ್ರಿ ಸಂಗೀತ ನಿರ್ದೇಶನ, ಅಭಿಲಾಶ್​ ಛಾಯಾಗ್ರಹಣ ಮಾಡಲಿದ್ದಾರೆ. ಇತ್ತೀಚೆಗೆ ದರ್ಶನ್​ ಮತ್ತು ಇಂದ್ರಜಿತ್​ ಲಂಕೇಶ್​ ನಡುವೆ ದೊಡ್ಡ ವಿವಾದ ಆಗಿತ್ತು. ಈ ಜಟಾಪಟಿಯಲ್ಲಿ ಅನೇಕ ಸೆಲೆಬ್ರಿಟಿಗಳು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳು ಸೋಶಿಯಲ್​ ಮೀಡಿಯಾ ಮೂಲಕ ದರ್ಶನ್​ಗೆ ಬೆಂಬಲ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ:

ದರ್ಶನ್​ ವಿವಾದ: ಫ್ಯಾನ್ಸ್​ ಇಟ್ಟ ಬೇಡಿಕೆಗೆ ಒಂದೇ ಮಾತಲ್ಲಿ ಉತ್ತರಿಸಿದ ಜಗ್ಗೇಶ್​

‘ನನ್ನ ಪ್ರೀತಿ, ನಂಬಿಕೆ, ಸ್ಫೂರ್ತಿಗೆ ಇನ್ನೊಂದು ಹೆಸರು ಡಿ ಬಾಸ್’; ದರ್ಶನ್​ ಬೆಂಬಲಕ್ಕೆ ನಿಂತ ಯುವ ನಟ

ತಾಜಾ ಸುದ್ದಿ

Click on your DTH Provider to Add TV9 Kannada