ಪುನೀತ್-ಪವನ್​ ಚಿತ್ರಕ್ಕೆ ಹೀರೋಯಿನ್​ ಫೈನಲ್​; ಹರಿದಾಡುತ್ತಿದೆ ಈ ನಟಿಯ ಹೆಸರು

TV9 Digital Desk

| Edited By: Rajesh Duggumane

Updated on: Jul 25, 2021 | 8:59 PM

ಸೈಕಲಾಜಿಕಲ್​ ಕಥಾಹಂದರ ಹೊಂದಿದ್ದ ‘ಲೂಸಿಯಾ’ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಪವನ್​ ಕುಮಾರ್​ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅವರು ‘ದ್ವಿತ್ವ’ ಸಿನಿಮಾದಲ್ಲಿ ಮತ್ತೆ ಸೈಕಲಾಜಿಕಲ್​ ಕಥೆಯನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ.

ಪುನೀತ್-ಪವನ್​ ಚಿತ್ರಕ್ಕೆ ಹೀರೋಯಿನ್​ ಫೈನಲ್​; ಹರಿದಾಡುತ್ತಿದೆ ಈ ನಟಿಯ ಹೆಸರು
ಪುನೀತ್ ಹೊಸ ಚಿತ್ರ

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಪವನ್​ ಕುಮಾರ್​ ಜೊತೆಯಾಗಿ ಮಾಡಲಿರುವ ಹೊಸ ಚಿತ್ರಕ್ಕೆ ‘ದ್ವಿತ್ವ’ ಎಂದು ಶೀರ್ಷಿಕೆ ಇಡಲಾಗಿದೆ. ಚಿತ್ರಕ್ಕೆ ಪುನೀತ್​ ಹೀರೋ ಅನ್ನೋ ಮಾಹಿತಿ ಬಿಟ್ಟರೆ ಇತರೆ ಪಾತ್ರವರ್ಗದ ಬಗ್ಗೆ ಯಾವುದೇ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.  ಹೀಗಾಗಿ, ಸಿನಿಮಾ ನಾಯಕಿ​ ಯಾರು ಅನ್ನೋದು ಅನೇಕರ ಪ್ರಶ್ನೆಯಾಗಿತ್ತು. ಸಿನಿಮಾ ಹೀರೋಯಿನ್​ ಬಗ್ಗೆ ಹೊಸ ಗುಸುಗುಸು ಹರಿದಾಡಿದೆ.   

ಸೈಕಲಾಜಿಕಲ್​ ಕಥಾಹಂದರ ಹೊಂದಿದ್ದ ‘ಲೂಸಿಯಾ’ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಪವನ್​ ಕುಮಾರ್​ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅವರು ‘ದ್ವಿತ್ವ’ ಸಿನಿಮಾದಲ್ಲಿ ಮತ್ತೆ ಸೈಕಲಾಜಿಕಲ್​ ಕಥೆಯನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಶೀರ್ಷಿಕೆ ಜೊತೆಗೆ ಡಿಫರೆಂಟ್​ ಆದಂತಹ ಪೋಸ್ಟರ್​ ಕೂಡ ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಈಗ ಈ ಚಿತ್ರಕ್ಕೆ ತ್ರಿಷಾ ಕೃಷ್ಣನ್​ ನಾಯಕಿ ಎನ್ನುವ ವಿಚಾರ ಕೇಳಿ ಬಂದಿದ್ದು, ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ.

2014ರಲ್ಲಿ ತೆರೆಗೆ ಬಂದ ಪುನೀತ್​ ನಟನೆಯ ‘ಪವರ್***​’ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ಹಾಗೂ ಕೊನೆಯ ಕನ್ನಡ ಚಿತ್ರ. ಈ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇದಾದ ನಂತರದಲ್ಲಿ ಅವರು ಯಾವುದೇ ಕನ್ನಡ ಚಿತ್ರಗಳಲ್ಲಿ ನಟಿಸಿಲ್ಲ. ‘ಪವರ್​’ ತೆರೆಕಂಡ ನಂತರದಲ್ಲಿ ತ್ರಿಷಾಗೆ ಬೇರೆ ಭಾಷೆಗಳಲ್ಲಿ ಒಳ್ಳೆಯ ಆಫರ್ ಬರೋಕೆ ಶುರುವಾದವು. ಹೀಗಾಗಿ, ಅವರು ಪರ ಭಾಷೆಯಲ್ಲಿ ಬ್ಯುಸಿಯಾದರು. ಈಗ ಅವರು  ಮತ್ತೆ ಕನ್ನಡಕ್ಕೆ ಮರಳುತ್ತಿದ್ದಾರೆ ಎನ್ನಲಾಗಿದೆ.

ಈಗಾಗಲೇ ತ್ರಿಷಾ ಸಿನಿಮಾದ ಕಥೆ ಕೇಳಿದ್ದಾರೆ. ಅವರಿಗೆ ಇದು ಇಷ್ಟವಾಗಿದೆ. ಹೀಗಾಗಿ, ಚಿತ್ರದಲ್ಲಿ ನಟಿಸೋಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರಂತೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

2018ರಲ್ಲಿ ಬಂದ ‘ಯೂ ಟರ್ನ್​’ ಚಿತ್ರದ ಬಳಿಕ ಕನ್ನಡದಲ್ಲಿ ಬೇರೆ ಯಾವುದೇ ಸಿನಿಮಾವನ್ನು ಪವನ್​ ಕುಮಾರ್​ ನಿರ್ದೇಶನ ಮಾಡಿಲ್ಲ. ದೊಡ್ಡ ಗ್ಯಾಪ್​ ಬಳಿಕ ಅವರು ಕನ್ನಡ ಪ್ರಾಜೆಕ್ಟ್​ ಕೈಗೆತ್ತಿಕೊಂಡಿರುವುದರಿಂದ ನಿರೀಕ್ಷೆ ಜೋರಾಗಿದೆ. ಲೂಸಿಯಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯರಾಗಿದ್ದ ಪೂರ್ಣಚಂದ್ರ ತೇಜಸ್ವಿ ಅವರೇ ‘ದ್ವಿತ್ವ’ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಇದನ್ನೂ ಓದಿ: ಪೋಸ್ಟರ್​ ಕಾಪಿ ಎಂಬ ಆರೋಪಕ್ಕೆ ಪುನೀತ್​ ನಟನೆಯ ‘ದ್ವಿತ್ವ’ ಚಿತ್ರ ತಂಡದಿಂದ ಸ್ಪಷ್ಟನೆ

‘ದ್ವಿತ್ವ’ ಪೋಸ್ಟರ್​ ಹಿಂದಿನ ಸತ್ಯ ತೆರೆದಿಟ್ಟು, ಫ್ಯಾನ್ಸ್​ ಬಳಿ ಕ್ಷಮೆ ಕೇಳಿದ ಪವನ್​ ಕುಮಾರ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada