ರಾಜ್​ಕುಮಾರ್ ಹಳೆಯ ವಿಡಿಯೋ ಹಂಚಿಕೊಂಡ ನಟ ಜಗ್ಗೇಶ್​; ಗುರುಪೂರ್ಣಿಮೆಗೆ ವಿಶೇಷ ಸ್ಮರಣೆ

‘ನಮ್ಮದು ಕಲಾವಿದರ ಜಾತಿ. ಕಲಾವಿದರು ಬೆಳೆದರೆ ನನಗೆ ಖುಷಿ. ನಾನು ನಟ ಮಾತ್ರನಲ್ಲ. ನಾನು ಅಭಿಮಾನಿಯೂ ಹೌದು. ಕಲೆಯ ಅಭಿಮಾನ ನನಗೆ ತುಂಬಾನೇ ಇದೆ’ ಎಂದು ವಿಡಿಯೋದಲ್ಲಿ ರಾಜ್​ಕುಮಾರ್​ ಮಾತನಾಡಿದ್ದಾರೆ.

ರಾಜ್​ಕುಮಾರ್ ಹಳೆಯ ವಿಡಿಯೋ ಹಂಚಿಕೊಂಡ ನಟ ಜಗ್ಗೇಶ್​; ಗುರುಪೂರ್ಣಿಮೆಗೆ ವಿಶೇಷ ಸ್ಮರಣೆ
‘ಅಣ್ಣಾವ್ರ ಹಿತನುಡಿ ಮನದಲ್ಲಿ ಲೀನವಾಗಿ ಬದುಕಿನ ಭಾಗವಾಗಿದೆ’; ಗುರುಪೂರ್ಣಿಮೆ ದಿನ ಜಗ್ಗೇಶ್​ ಸ್ಮರಣೆ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 24, 2021 | 4:59 PM

ಇಂದು ಗುರುಪೂರ್ಣಿಮೆ. ತಮ್ಮ ಜೀವನದಲ್ಲಿ ಬಂದು ಒಂದಲ್ಲಾ ಒಂದು ರೀತಿಯಲ್ಲಿ ಪಾಠ ಕಲಿಸಿದ ಗುರುವನ್ನು ಎಲ್ಲರೂ ನೆನೆಯುತ್ತಿದ್ದಾರೆ. ನಟ ಜಗ್ಗೇಶ್​ ಕೂಡ ಈ ವಿಶೇಷ ದಿನದಂದು ತಮ್ಮ ಗುರುವನ್ನು ನೆನೆದಿದ್ದು, ವರನಟ ಡಾ. ರಾಜ್​ಕುಮಾರ್​ ಅವರಿಗೆ ಗುರುಪೂರ್ಣಿಮೆಯ ನಮನಗಳು ಎಂದಿದ್ದಾರೆ.

ರಾಜ್​ಕುಮಾರ್​ ಅವರು ಮಾತನಾಡಿದ ವಿಡಿಯೋವನ್ನು ಜಗ್ಗೇಶ್​ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ, ‘ಈ ಮಾತುಗಳನ್ನು ಎದುರಲ್ಲೇ ಕೂತು ಕೇಳಿದ ಅದೃಷ್ಟವಂತ ನಾನು. ಇವರ ಎಲ್ಲಾ ಹಿತನುಡಿ ನನ್ನ ಮನದಲ್ಲಿ ಲೀನವಾಗಿ ಬದುಕಿನ ಭಾಗವಾಗಿದೆ. ಯಾವಜನ್ಮದ ಪುಣ್ಯವೋ ಅವರ ಅಭಿಮಾನಿಯಾಗಿ, ಅವರ ಕಾಲದಲ್ಲೇ ನಟಿಸಿ ಅವರ ಬಳಿಯೇ ಶಹಭಾಸ್​​ಗಿರಿ ಪಡೆದುಬಿಟ್ಟೆ. ನನ್ನ ಕಲಾರಂಗದ ಗುರುವಿಗೆ ಗುರುಪೂರ್ಣಿಮೆಯ ನಮನಗಳು. ಗುರುಭ್ಯೋನಮಃ’ ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.

‘ನಮ್ಮದು ಕಲಾವಿದರ ಜಾತಿ. ಕಲಾವಿದರು ಬೆಳೆದರೆ ನನಗೆ ಖುಷಿ. ನಾನು ನಟ ಮಾತ್ರನಲ್ಲ. ನಾನು ಅಭಿಮಾನಿಯೂ ಹೌದು. ಕಲೆಯ ಅಭಿಮಾನ ನನಗೆ ತುಂಬಾನೇ ಇದೆ’ ಎಂದು ವಿಡಿಯೋದಲ್ಲಿ ರಾಜ್​ಕುಮಾರ್​ ಮಾತನಾಡಿದ್ದಾರೆ. ಇದಲ್ಲದೆ, ನಿರ್ಮಾಪಕರ ಬಗ್ಗೆಯೂ ರಾಜ್​ಕುಮಾರ್​ ಮಾತನಾಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ಸೆಲೆಬ್ರಿಟಿಗಳಲ್ಲಿ ನಟ ಜಗ್ಗೇಶ್​ ಕೂಡ ಪ್ರಮುಖರು. ಸಿನಿಮಾ ಮಾತ್ರವಲ್ಲದೆ ಹಲವು ವಿಚಾರಗಳನ್ನು ಹಂಚಿಕೊಳ್ಳುವ ಅವರು ಸದಾ ಕಾಲ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಕೊರೊನಾ ಎರಡನೇ ಹಾವಳಿ ಬಳಿಕ ಒಂದಷ್ಟು ದಿನಗಳ ಕಾಲ ಸಾಮಾಜಿಕ ಜಾಲತಾಣದಿಂದ ದೂರ ಉಳಿದುಕೊಂಡಿದ್ದ ಜಗ್ಗೇಶ್​ ಈಗ ಮತ್ತೆ ಸಕ್ರಿಯರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಜಗ್ಗೇಶ್​ ಅವರು ನಾಲ್ಕು ಒಳ್ಳೆಯ ಸ್ಕ್ರಿಪ್ಟ್​ಗಳನ್ನು ಕೇಳಿದ್ದಾರೆ. ಆ ಪೈಕಿ ಎರಡಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದು, ಇನ್ನೆರಡು ಸ್ಕ್ರಿಪ್ಟ್​ಗಳ ಮಾತುಕತೆ ನಡೆಯುತ್ತಿದೆ ಎಂದು ಅವರು​ ಇತ್ತೀಚೆಗೆ ಮಾಹಿತಿ ನೀಡಿದ್ದರು. ವಿಜಯ್​ ಪ್ರಸಾದ್​ ನಿರ್ದೇಶನದ ‘ತೋತಾಪುರಿ’ ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್​ ವಿವಾದ: ಫ್ಯಾನ್ಸ್​ ಇಟ್ಟ ಬೇಡಿಕೆಗೆ ಒಂದೇ ಮಾತಲ್ಲಿ ಉತ್ತರಿಸಿದ ಜಗ್ಗೇಶ್​

ಜಗ್ಗೇಶ್​ 10ನೇ ಕ್ಲಾಸ್​ ಅಂಕಪಟ್ಟಿ ವೈರಲ್​; ಅಪ್ಪನಿಂದ ಬಿದ್ದಿತ್ತು ಬೂಟಿನ ಏಟು

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ