AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ್​ ನೀಲ್​ ಕಡೆಯಿಂದ ‘ಕೆಜಿಎಫ್ 2’​ ಫಸ್ಟ್​ ಡೇ ಫಸ್ಟ್​ ಶೋ ಟಿಕೆಟ್​ ಪಡೆಯಲಿರುವ ವಿಶೇಷ ಅಭಿಮಾನಿ

ಅಕ್ಕಿ ಕಾಳಿನ ಮೇಲೆ ಅಕ್ಷರಗಳನ್ನು ಬರೆಯುವ ಕಲಾವಿದ ವೈವಸ್ವತ್​ ತಾಂಡುಲ. ಆ ಮೂಲಕ ಅವರು ‘ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​’ನಲ್ಲಿ ದಾಖಲೆ ಮಾಡಿದ್ದಾರೆ.

ಪ್ರಶಾಂತ್​ ನೀಲ್​ ಕಡೆಯಿಂದ ‘ಕೆಜಿಎಫ್ 2’​ ಫಸ್ಟ್​ ಡೇ ಫಸ್ಟ್​ ಶೋ ಟಿಕೆಟ್​ ಪಡೆಯಲಿರುವ ವಿಶೇಷ ಅಭಿಮಾನಿ
ಯಶ್​-ಪ್ರಶಾಂತ್​ ನೀಲ್
TV9 Web
| Edited By: |

Updated on: Jul 24, 2021 | 8:51 AM

Share

ಎಲ್ಲವೂ ಪ್ಲ್ಯಾನ್​ ಪ್ರಕಾರವೇ ನಡೆದಿದ್ದರೆ ಯಶ್​ (Yash) ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಈಗಾಗಲೇ ಅದ್ದೂರಿಯಾಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿರಬೇಕಿತ್ತು. ಆದರೆ ಕೊರೊನಾ ವೈರಸ್​​ ಎರಡನೇ ಅಲೆಯ ಹಾವಳಿಯಿಂದಾಗಿ ಈ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಹಾಗಂತ ಅಭಿಮಾನಿಗಳ ನಿರೀಕ್ಷೆ ಕಿಂಚಿತ್ತೂ ಕಡಿಮೆ ಆಗಿಲ್ಲ. ಒಂದಿಲ್ಲೊಂದು ರೀತಿಯಲ್ಲಿ ಸಿನಿಪ್ರಿಯರು ‘ಕೆಜಿಎಫ್​ 2’ (KGF Chapter 2) ಬಗ್ಗೆ ತಮಗಿರುವ ನಿರೀಕ್ಷೆಯ ಮಟ್ಟವನ್ನು ತೋರ್ಪಡಿಸುತ್ತಿದ್ದಾರೆ. ಅದಕ್ಕೆ ಈಗೊಂದು ಹೊಸ ಉದಾಹರಣೆ ಸಿಕ್ಕಿದೆ. ಅದನ್ನು ಕಂಡು ನಿರ್ದೇಶಕ ಪ್ರಶಾಂತ್​ ನೀಲ್​ (Prashanth Neel) ಖುಷಿ ಆಗಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ. ಈ ಚಿತ್ರವನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಲು ಅಪಾರ ಅಭಿಮಾನಿಗಳು ಕಾಯುತ್ತಿದ್ದಾರೆ. ಹಾಗಂತ ಮೊದಲ ದಿನವೇ ಎಲ್ಲರಿಗೂ ಟಿಕೆಟ್​ ಸಿಗುವುದಿಲ್ಲ. ಅದಕ್ಕಾಗಿ ಎಷ್ಟೋ ಜನರು ಹರಸಾಹಸ ಮಾಡುತ್ತಾರೆ. ಆದರೆ ಒಬ್ಬ ಅಭಿಮಾನಿಗೆ ತುಂಬ ಸುಲಭವಾಗಿ ‘ಕೆಜಿಎಫ್​ 2’ ಚಿತ್ರದ ಮೊದಲ ದಿನ ಮೊದಲ ಶೋ ಟಿಕೆಟ್​ ಸಿಗಲಿದೆ. ಅದು ಕೂಡ ಸ್ವತಃ ನಿರ್ದೇಶಕ ಪ್ರಶಾಂತ್​ ನೀಲ್​ ಕಡೆಯಿಂದ ಎಂಬುದು ಅಚ್ಚರಿಯ ವಿಚಾರ.

ಹೌದು, ವೈವಸ್ವತ್​ ತಾಂಡುಲ ಎಂಬ ಅಭಿಮಾನಿಗೆ ನಿರ್ದೇಶಕ ಪ್ರಶಾಂತ್​ ಅವರು ಈ ಭರವಸೆ ನೀಡಿದ್ದಾರೆ. ಅಕ್ಕಿ ಕಾಳಿನ ಮೇಲೆ ಅಕ್ಷರಗಳನ್ನು ಬರೆಯುವ ಕಲಾವಿದ ವೈವಸ್ವತ್​ ತಾಂಡುಲ. ಆ ಮೂಲಕ ಅವರು ‘ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​’ನಲ್ಲಿ ದಾಖಲೆ ಮಾಡಿದ್ದಾರೆ. ಈಗ ಅವರು ಅಕ್ಕಿ ಕಾಳಿನ ಮೇಲೆ ‘ಹೊಂಬಾಳೆ’ ಮತ್ತು ‘ಕೆಜಿಎಫ್’ ಎಂದು ಬರೆದು ಚಿತ್ರತಂಡಕ್ಕೆ ಕಳಿಸಿಕೊಟ್ಟಿದ್ದಾರೆ. ಅಲ್ಲದೆ, ಈ ನಿರ್ಮಾಣ ಸಂಸ್ಥೆ​ಯಿಂದ ಬಂದ ಸಿನಿಮಾಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಒಳಗೊಂಡ ಪತ್ರವನ್ನೂ ಬರೆದಿದ್ದಾರೆ.

ಇದನ್ನು ಕಂಡು ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಗೆ ಖುಷಿ ಆಗಿದೆ. ನಿರ್ದೇಶಕ ಪ್ರಶಾಂತ್​ ನೀಲ್​ ಅವರು ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ್ದು, ‘ಹಾಯ್​ ವೈವಸ್ವತ್​. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ಸಂಪರ್ಕದಲ್ಲಿ ಇರೋಣ. ನಿಮಗೆ ನಮ್ಮ ಕಡೆಯಿಂದ ಕೆಜಿಎಫ್​: ಚಾಪ್ಟರ್​ 2 ಚಿತ್ರದ ಫಸ್ಟ್​ ಡೇ ಫಸ್ಟ್​ ಶೋ ಟಿಕೆಟ್​ಗಳು’ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಎಷ್ಟು ಕೋಟಿಗೆ ಸೇಲ್​ ಆಯ್ತು ‘ಕೆಜಿಎಫ್​ 2’ ಆಡಿಯೋ? ಲಹರಿ ಮ್ಯೂಸಿಕ್​ ತೆಕ್ಕೆಗೆ ಎಲ್ಲ ಭಾಷೆಯ ಸಾಂಗ್ಸ್​

ಅನಂತ್ ನಾಗ್​ ಬಗ್ಗೆ ಯಶ್​ ವಿಶೇಷ ಮಾತು; ಪದ್ಮ ಪ್ರಶಸ್ತಿ ಒತ್ತಾಯಕ್ಕೆ ರಾಕಿಂಗ್​ ಸ್ಟಾರ್​ ಧ್ವನಿ

ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ