ಎಷ್ಟು ಕೋಟಿಗೆ ಸೇಲ್​ ಆಯ್ತು ‘ಕೆಜಿಎಫ್​ 2’ ಆಡಿಯೋ? ಲಹರಿ ಮ್ಯೂಸಿಕ್​ ತೆಕ್ಕೆಗೆ ಎಲ್ಲ ಭಾಷೆಯ ಸಾಂಗ್ಸ್​

KGF Chapter 2 songs: ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ, ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಎಲ್ಲ ಭಾಷೆಯ ಆಡಿಯೋ ರೈಟ್ಸ್​ ಲಹರಿ ಸಂಸ್ಥೆಯ ಪಾಲಾಗಿದೆ.

ಎಷ್ಟು ಕೋಟಿಗೆ ಸೇಲ್​ ಆಯ್ತು ‘ಕೆಜಿಎಫ್​ 2’ ಆಡಿಯೋ? ಲಹರಿ ಮ್ಯೂಸಿಕ್​ ತೆಕ್ಕೆಗೆ ಎಲ್ಲ ಭಾಷೆಯ ಸಾಂಗ್ಸ್​
ಲಹರಿ ಮ್ಯೂಸಿಕ್​ ತೆಕ್ಕೆಗೆ ‘ಕೆಜಿಎಫ್​ 2’ ಆಡಿಯೋ
Follow us
ಮದನ್​ ಕುಮಾರ್​
|

Updated on: Jul 01, 2021 | 2:21 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಕೆಜಿಎಫ್​ 2’ ಚಿತ್ರ ಹಲವು ಕಾರಣಗಳಿಗಾಗಿ ಸದ್ದು ಮಾಡುತ್ತಿದೆ. ಯಶ್​ ನಾಯಕತ್ವದ, ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾದ ಆಡಿಯೋ ಹಕ್ಕುಗಳು ಮಾರಾಟ ಆಗಿವೆ. ಪ್ರತಿಷ್ಠಿತ ‘ಲಹರಿ ಮ್ಯೂಸಿಕ್​’ ಕಂಪನಿಯು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಆಡಿಯೋ ರೈಟ್ಸ್​ ಖರೀದಿ ಮಾಡಿದೆ. ಭಾರಿ ಮೊತ್ತಕ್ಕೆ ಹಕ್ಕುಗಳು ಸೇಲ್​ ಆಗಿವೆ.

‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ಹಾಡಿನ ಹಕ್ಕುಗಳು ಕೂಡ ‘ಲಹರಿ ಮ್ಯೂಸಿಕ್​’ ಪಾಲಾಗಿದ್ದವು. ಮೂಲಗಳ ಪ್ರಕಾರ, ಆಗ 3.60 ಕೋಟಿಗೆ ವ್ಯವಹಾರ ಕುದುರಿತ್ತು. ಆದರೆ ಈಗ ಅದಕ್ಕಿಂತಲೂ ದುಪ್ಪಟ್ಟ ಹಣ ನೀಡಿ ‘ಕೆಜಿಎಫ್​: ಚಾಪ್ಟರ್​ 2’ ಆಡಿಯೋವನ್ನು ಲಹರಿ ಸಂಸ್ಥೆ ಖರೀದಿಸಿದೆ. ಕೇಳಿಬಂದಿರುವ ಮಾಹಿತಿ ಪ್ರಕಾರ 6 ಕೋಟಿ ರೂ.ಗಿಂತಲೂ ಹೆಚ್ಚಿನ ಮೊತ್ತಕ್ಕೆ ಆಡಿಯೋ ರೈಟ್ಸ್​ ಮಾರಾಟ ಆಗಿದೆ. ಜು.1ರ ರಾತ್ರಿ 9 ಗಂಟೆಗೆ ಅಧಿಕೃತವಾಗಿಯೇ ಈ ಬಗ್ಗೆ ಮಾಹಿತಿ ಬಹಿರಂಗ ಆಗಲಿದೆ. ಆಗ ಪಕ್ಕಾ ಲೆಕ್ಕ ಸಿಗಲಿದೆ.

ಈ ಸಿನಿಮಾದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ, ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಎಲ್ಲ ಭಾಷೆಯ ಆಡಿಯೋ ರೈಟ್ಸ್​ ಲಹರಿ ಸಂಸ್ಥೆಯ ಪಾಲಾಗಿದೆ.

ಆಡಿಯೋ ಹಕ್ಕು ಮಾರಾಟಕ್ಕೆ ಸಂಬಂಧಿಸಿದಂತೆ ಇಂದು (ಜು.1) ಹೊಂಬಾಳೆ ಫಿಲ್ಮ್ಸ್​ ಜೊತೆ ಲಹರಿ ಸಂಸ್ಥೆ ಅಧಿಕೃತವಾಗಿ ಒಪ್ಪಂದ ಮಾಡಿಕೊಂಡಿದೆ. ಲಹರಿ ಸಂಸ್ಥೆ ಮಾಲೀಕರಾದ ಮನೋಹರ್​ ನಾಯ್ಡು ಅವರು ಇಂದು ಸಹಿ ಹಾಕಿದ್ದಾರೆ. ಆದಷ್ಟು ಬೇಗ ಆಡಿಯೋ ರಿಲೀಸ್​ ಆಗಲಿ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 1’ ರೀತಿಯೇ ‘ಕೆಜಿಎಫ್​: ಚಾಪ್ಟರ್​ 2’ ಹಾಡುಗಳ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.

ಎಲ್ಲವೂ ಪ್ಲ್ಯಾನ್​ ಪ್ರಕಾರ ನಡೆದರೆ, ಜು.16ರಂದು ಚಿತ್ರವನ್ನು ತೆರೆಕಾಣಿಸಬೇಕು ಎಂಬುದು ನಿರ್ಮಾಪಕ ವಿಜಯ್​ ಕಿರಗಂದೂರು ಅವರ ಆಲೋಚನೆ ಆಗಿತ್ತು. ಆದರೆ ಕೊರೊನಾ ವೈರಸ್​ ಎರಡನೇ ಅಲೆ ಹಾವಳಿಯಿಂದಾಗಿ ಲಾಕ್​ಡೌನ್​ ಉಂಟಾದ ಪರಿಣಾಮ, ರಿಲೀಸ್​ ದಿನಾಂಕ ಮತ್ತೆ ಮಂದೂಡುವುದು ಅನಿವಾರ್ಯ ಆಯಿತು. ಹೊಸ ರಿಲೀಸ್​ ಡೇಟ್​ ತಿಳಿದುಕೊಳ್ಳಲು ಸಿನಿಪ್ರಿಯರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ಇದನ್ನೂ ಓದಿ:

ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಪುಷ್ಪ, ಕೆಜಿಎಫ್​ 2; ಯಶ್​-ಅಲ್ಲು ಅರ್ಜುನ್​ ನಡುವೆ​ ಭಾರಿ ಪೈಪೋಟಿ

ಮುಗಿಯಿತು ರಕ್ಷಿತ್​ Vs​ ಲಹರಿ ಕಿರಿಕ್​; ಮತ್ತೆ ಸ್ನೇಹ ಚಿಗುರಿದ್ದಕ್ಕೆ ಹೊಸ ಸೆಲ್ಫೀ ಸಾಕ್ಷಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ