Mirabai Chanu: ಸಿನಿಮಾ ಆಗಲಿದೆ ಮೀರಾಬಾಯಿ ಚಾನು ಜೀವನ: ಯಾವ ಭಾಷೆಯಲ್ಲಿ ಬರಲಿದೆ ಗೊತ್ತಾ?
ಟೊಕಿಯೋ ಒಲಂಪಿಕ್ಸ್ (Tokyo Olympics) ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಮೀರಾಬಾಯಿ ಚಾನು (Mirabai Chanu) ಈಗ ಎಲ್ಲರ ಮನೆಮಾತಾಗಿದ್ದಾರೆ. 49 ಕೆಜಿ ವೇಟ್-ಲಿಫ್ಟಿಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಒಟ್ಟು 202 ಕೆಜಿ ಭಾರ ಎತ್ತುವ (87 ಕೆಜಿ ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್ನಲ್ಲಿ 115 ಕೆಜಿ) ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು.
ಬಾಲಿವುಡ್ಗೂ ಕ್ರೀಡಾ ವಲಯಕ್ಕೂ ಅವಿನಾಭಾವ ಸಂಬಂಧ ಇರುವುದು ಗೊತ್ತೇ ಇದೆ. ಇದಕ್ಕೆ ಸಾಕ್ಷಿಯೇ ಬಾಲಿವುಡ್ನಲ್ಲಿ ಮೂಡಿ ಬರುತ್ತಿರುವ ಕ್ರೀಡಾ ಕಥಾಹಂದರದ ಚಿತ್ರಗಳು. ಈಗಾಗಲೇ ಕ್ರಿಕೆಟಿಗರ ಜೀವನ ಚರಿತ್ರೆಯನ್ನು ತಿಳಿಸುವ ಎಂಎಸ್ ಧೋನಿ (ಮಹೇಂದ್ರ ಸಿಂಗ್ ಧೋನಿ), ಅಜರ್ (ಮೊಹಮ್ಮದ್ ಅಜರುದ್ದೀನ್) ಚಿತ್ರಗಳು ತೆರೆಕಂಡಿದೆ. ಇನ್ನು ಕಪಿಲ್ ದೇವ್ ಅವರ ತೆರೆ ಮರೆಯ ಕಹಾನಿ ತಿಳಿಸಲಿರುವ 83 ಇನ್ನೇನು ಬಿಡುಗಡೆಯಾಗಲಿದೆ. ಹಾಗೆಯೇ ಸೌರವ್ ಗಂಗೂಲಿ ಅವರ ಬಯೋಪಿಕ್ ಕೂಡ ಬರಲಿದೆ. ಇದಲ್ಲದೆ ಅಥ್ಲೀಟ್ಗೆ ಸಂಬಂಧಿಸಿದಂತೆ ಬಾಲಿವುಡ್ನಲ್ಲಿ ಬಾಗ್ ಮಿಖಾ ಬಾಗ್ ಚಿತ್ರ ತೆರೆಕಂಡಿದೆ. ಅದರ ಜೊತೆಗೆ ಬಾಕ್ಸರ್ ಮೇರಿ ಕೋಮ್ ಅವರ ಕಹಾನಿ ತಿಳಿಸಿದ್ದ ಚಿತ್ರ ಕೂಡ ಬಾಲಿವುಡ್ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತ್ತು. ಇದೀಗ ಮತ್ತೊಬ್ಬರು ಕ್ರೀಡಾಪಟುವಿನ ಚಿತ್ರಕ್ಕೆ ಚಿತ್ರಸಂಸ್ಥೆಯೊಂದು ಕೈಹಾಕಿದೆ. ಆ ಕಹಾನಿ ಮತ್ಯಾರದ್ದೂ ಅಲ್ಲ, ಟೋಕಿಯೋ ಒಲಿಂಪಿಕ್ಸ್ (Tokyo Olympics) ನಲ್ಲಿ ಬೆಳ್ಳಿ ಪದಕ ಗೆದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನು (Mirabai Chanu) ಅವರದ್ದು.
ಹೌದು, ಇಂಫಾಲ್ ಮೂಲದ ಸ್ಯೂಟಿ ಫಿಲ್ಮ್ಸ್ ಪ್ರೊಡಕ್ಷನ್ ಸಂಸ್ಥೆ ಮೀರಾ ಬಾಯಿ ಅವರ ಕಥೆಯನ್ನು ಚಿತ್ರವನ್ನಾಗಿಸಲು ಮುಂದಾಗಿದೆ. ಬಡತನದಿಂದ ಬೆಳೆದು ಬಂದ ಹುಡುಗಿನ ಕಥೆಯನ್ನು ಬೆಳ್ಳಿ ಪರದೆಯಲ್ಲಿ ಮೂಡಿಸುವ ತಯಾರಿಯಲ್ಲಿದೆ. ಈಗಾಗಲೇ ಈ ಬಗ್ಗೆ ಮೀರಾಬಾಯಿ ಕುಟುಂಬದೊಂದಿಗೆ ಚಿತ್ರ ಸಂಸ್ಥೆ ಮಾತುಕತೆ ನಡೆಸಿದೆ. ಅತ್ತ ಮೀರಾಬಾಯಿ ಕೂಡ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಹೀಗಾಗಿಯೇ ಚಿತ್ರತಂಡ ಮೀರಾಬಾಯಿ ಚಾನು ಪಾತ್ರಕ್ಕಾಗಿ ನಟಿಯ ಹುಡುಕಾಟದಲ್ಲಿದೆ. ಆಕೆಯನ್ನೇ ಹೋಲುವ ಹಾಗೂ ವಯಸ್ಸು, ಎತ್ತರ, ಮೈಕಟ್ಟು ಹೊಂದಿರುವ ಪ್ರತಿಭೆಯನ್ನೇ ಚಿತ್ರದಲ್ಲಿ ತೋರಿಸಲು ಸ್ಯೂಟಿ ಫಿಲ್ಮ್ಸ್ ಪ್ರೊಡಕ್ಷನ್ ಸಂಸ್ಥೆ ನಿರ್ಧರಿಸಿದೆ. ಅದರಂತೆ ಇದೀಗ ನಟಿಯ ಹುಡುಕಾಟಕ್ಕೆ ಚಿತ್ರತಂಡ ಇಳಿದಿದ್ದು, ಆಕೆಗೆ ತರಬೇತಿ ನೀಡಿ ಚಿತ್ರೀಕರಣ ಆರಂಭಿಸಲು ಕನಿಷ್ಠ ಆರು ತಿಂಗಳು ಬೇಕಾಗುತ್ತದೆ ಎಂದು ತಿಳಿಸಿದೆ.
ಚಿತ್ರದ ಕಥೆ ಹಾಗೂ ಸಂಭಾಷನೆಯ ಜವಾಬ್ದಾರಿಯನ್ನು ಮನೌಬಿ ಎಂಬವರು ವಹಿಸಿಕೊಂಡಿದ್ದು, ಬೆಳ್ಳಿ ಹುಡುಗಿಯ ಕಥೆಗೆ ಓಸಿ ಮೀರಾ ಎಂಬವರು ನಿರ್ದೇಶನ ಮಾಡಲಿದ್ದಾರೆ. ಇನ್ನು ಈ ಚಿತ್ರವು ಮಣಿಪುರಿ ಭಾಷೆಯಲ್ಲಿ ನಿರ್ಮಾಣವಾಗಲಿದ್ದು, ಅದರ ಜತೆಗೆ ವಿವಿಧ ಭಾರತೀಯ ಭಾಷೆಗಳಿಗೆ ಡಬ್ ಆಗಲಿದೆ. ಅಂದರೆ ಹಿಂದಿಯ ಜೊತೆ ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಚಿತ್ರ ಬಿಡುಗಡೆ ಆಗಲಿದೆ. ಹಾಗೆಯೇ ಇಂಗ್ಲಿಷ್ನಲ್ಲೂ ಚಿತ್ರ ಮೂಡಿಬರಲಿದೆ ಎಂದು ಸ್ಯೂಟಿ ಫಿಲ್ಮ್ಸ್ ಪ್ರೊಡಕ್ಷನ್ ಸಂಸ್ಥೆ ತಿಳಿಸಿದೆ.
ಒಟ್ಟಿನಲ್ಲಿ ಟೊಕಿಯೋ ಒಲಂಪಿಕ್ಸ್ (Tokyo Olympics) ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಮೀರಾಬಾಯಿ ಚಾನು (Mirabai Chanu) ಈಗ ಎಲ್ಲರ ಮನೆಮಾತಾಗಿದ್ದಾರೆ. 49 ಕೆಜಿ ವೇಟ್-ಲಿಫ್ಟಿಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಒಟ್ಟು 202 ಕೆಜಿ ಭಾರ ಎತ್ತುವ (87 ಕೆಜಿ ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್ನಲ್ಲಿ 115 ಕೆಜಿ) ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು. ಇದೀಗ ಸ್ಯೂಟಿ ಫಿಲ್ಮ್ಸ್ ಪ್ರೊಡಕ್ಷನ್ ಸಂಸ್ಥೆ ಮೀರಾಬಾಯಿ ಚಾನು ಅವರ ಒಲಿಂಪಿಕ್ಸ್ ಪಯಣವನ್ನು ಬೆಳ್ಳಿಪರದೆಯಲ್ಲಿ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿರುವುದು ವಿಶೇಷ.
ಇದನ್ನೂ ಓದಿ: India vs England: ಯಾರಾಗಲಿದ್ದಾರೆ ಆರಂಭಿಕ: ಟೀಮ್ ಇಂಡಿಯಾ ಮುಂದಿದೆ 4 ಆಯ್ಕೆ
ಇದನ್ನೂ ಓದಿ: IPL 2021: ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್: 12 ಆಟಗಾರರು ಕಣಕ್ಕಿಳಿಯುವುದು ಖಚಿತ
ಇದನ್ನೂ ಓದಿ: 108mp ಕ್ಯಾಮೆರಾ ಜೊತೆ ಸೂಪರ್ ಆಫರ್: ಅತೀ ಕಡಿಮೆ ಬೆಲೆಗೆ 5G ಸ್ಮಾರ್ಟ್ಫೋನ್
(Biopic to be made on Olympic medalist Mirabai Chanu’s life)