India vs England: ಯಾರಾಗಲಿದ್ದಾರೆ ಆರಂಭಿಕ: ಟೀಮ್ ಇಂಡಿಯಾ ಮುಂದಿದೆ 4 ಆಯ್ಕೆ

ಟೀಮ್ ಇಂಡಿಯಾ ಪರ ಇದುವರೆಗೆ 6 ಇನ್ನಿಂಗ್ಸ್‌ಗಳಲ್ಲಿ ಪೂಜಾರ ಓಪನಿಂಗ್ ಮಾಡಿದ್ದಾರೆ. ಇದರಲ್ಲಿ 1 ಶತಕ ಮತ್ತು 2 ಅರ್ಧ ಶತಕದೊಂದಿಗೆ 348 ರನ್ ಗಳಿಸಿದ್ದಾರೆ.

1/5
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ  ಬುಧವಾರ (ಆಗಸ್ಟ್ 4) ದಿಂದ ಶುರುವಾಗಲಿದೆ. ಈ ಸರಣಿಯೊಂದಿಗೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡನೇ ಸೀಸನ್ ಕೂಡ ಆರಂಭವಾಗಲಿದೆ. ಆದರೆ ಈ ಮಹತ್ವದ ಸರಣಿಯ ಮೊದಲ ಪಂದ್ಯದಿಂದ ಟೀಮ್ ಇಂಡಿಯಾ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಹೊರಗುಳಿದಿದ್ದಾರೆ. ಅಭ್ಯಾಸದ ವೇಳೆ ಗಾಯಗೊಂಡ ಪರಿಣಾಮ ಮಯಾಂಕ್​ಗೆ ವಿಶ್ರಾಂತಿ ನೀಡಲಾಗಿದೆ. ಅತ್ತ ಮತ್ತೋರ್ವ ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಕೂಡ ಗಾಯಗೊಂಡು ಈಗಾಗಲೇ ಸರಣಿಯಿಂದ ಹೊರಬಂದಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾರನ್ನು ಆರಂಭಿಕರಾಗಿ ಕಣಕ್ಕಿಳಿಸಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಒಂದೆಡೆ ರೋಹಿತ್ ಶರ್ಮಾ ಇನಿಂಗ್ಸ್​ ಆರಂಭಿಸಿದರೆ ಮತ್ತೊಂದೆಡೆ ಓಪನರ್​ಗಳಾಗಿ ಟೀಮ್ ಇಂಡಿಯಾ ಮುಂದೆ ನಾಲ್ಕು ಆಯ್ಕೆಗಳಿವೆ.

2/5
ಅಭಿಮನ್ಯು ಈಶ್ವರನ್: ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಚೊಚ್ಚಲ ಬಾರಿ ಅವಕಾಶ ಪಡೆದಿರುವ ಅಭಿಮನ್ಯು ಈಶ್ವರನ್ ಆರಂಭಿಕ ಆಟಗಾರ ಕೂಡ ಹೌದು. ಪಶ್ಚಿಮ ಬಂಗಾಳ ರಣಜಿ ತಂಡದ ಆಟಗಾರನಾಗಿರುವ ಈಶ್ವರನ್ ಈ ಬಾರಿ ಸ್ಟ್ಯಾಂಡ್‌ಬೈ ಓಪನರ್ ಆಗಿ ಆಯ್ಕೆಯಾಗಿದ್ದರು. ಶುಭಮನ್ ಗಿಲ್ ಗಾಯಗೊಂಡ ಬಳಿಕ ಈಶ್ವರನ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಯಿತು. ಈಶ್ವರನ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಉತ್ತಮ ದಾಖಲೆ ಹೊಂದಿದ್ದು,  64 ಪಂದ್ಯಗಳಲ್ಲಿ 4401 ರನ್ ಗಳಿಸಿದ್ದಾರೆ. ಇದರಲ್ಲಿ 13 ಶತಕಗಳು ಮತ್ತು 18 ಅರ್ಧ ಶತಕಗಳು ಮೂಡಿಬಂದಿವೆ. ಇದಾಗ್ಯೂ ಇಂಗ್ಲೆಂಡ್ ಪಿಚ್​ನಲ್ಲಿ ಅನಾನುಭವಿ ಆಟಗಾರರನ್ನು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಕಣಕ್ಕಿಳಿಸಲಿದೆಯಾ ಎಂಬುದೇ ಪ್ರಶ್ನೆ.

3/5
ಹನುಮ ವಿಹಾರಿ: ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿರುವ ಹನುಮ ವಿಹಾರಿ ಆರಂಭಿಕನಾಗಿ ಕೂಡ ಕಣಕ್ಕಿಳಿದ ಅನುಭವ ಹೊಂದಿದ್ದಾರೆ. 2019 ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್‌ನಲ್ಲಿ ವಿಹಾರಿ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಇದೀಗ ಮತ್ತೊಮ್ಮೆ ತಂಡ ಓಪನರ್ ಜವಾಬ್ದಾರಿಯನ್ನು ನಿರ್ವಹಿಸಲು ವಿಹಾರಿ ಸಿದ್ಧರಾಗಿದ್ದಾರೆ. ಆದರೆ ಪ್ರಸ್ತುತ ಅವರ ಫಾರ್ಮ್​ ಗಮನಿಸಿದರೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಸಿಗೋದು ತುಸು ಕಷ್ಟ ಎನ್ನಬಹುದು.

4/5
ಚೇತೇಶ್ವರ ಪೂಜಾರ:  ಪೂಜಾರ ಕೂಡ ಭಾರತೀಯ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್. ಆದರೆ ಈ ಹಿಂದೆ ಅಗತ್ಯ ಬಿದ್ದಾಗ ಕೆಲವು ಸಂದರ್ಭಗಳಲ್ಲಿ ತಂಡದ ಆರಂಭಿಕರಾಗಿ ಕಣಕ್ಕಿಳಿದ ಅನುಭವ ಹೊಂದಿದ್ದಾರೆ. ಟೀಮ್ ಇಂಡಿಯಾ ಪರ ಇದುವರೆಗೆ 6 ಇನ್ನಿಂಗ್ಸ್‌ಗಳಲ್ಲಿ ಪೂಜಾರ ಓಪನಿಂಗ್ ಮಾಡಿದ್ದಾರೆ. ಇದರಲ್ಲಿ 1 ಶತಕ ಮತ್ತು 2 ಅರ್ಧ ಶತಕದೊಂದಿಗೆ 348 ರನ್ ಗಳಿಸಿದ್ದಾರೆ. ಹೀಗಾಗಿ ಚೇತೇಶ್ವರ ಪೂಜಾರ ಅವರನ್ನು ಕೂಡ ಬಳಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ ಮುಂದಿದೆ.

5/5
ಕೆಎಲ್ ರಾಹುಲ್: ಪ್ರಸ್ತುತ ತಂಡದಲ್ಲಿರುವ ಪರಿಪೂರ್ಣ ಆರಂಭಿಕ ಆಟಗಾರನೆಂದರೆ ಕೆಎಲ್ ರಾಹುಲ್. ಆದರೆ ರಾಹುಲ್ ಕೊನೆಯ ಟೆಸ್ಟ್ ಆಡಿ 2 ವರ್ಷಗಳು ಕಳೆದಿವೆ.  ಆಗಸ್ಟ್ 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನದ ನಂತರ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಈ ಬಾರಿ ಮಧ್ಯಮ ಕ್ರಮಾಂಕದ ಆಟಗಾರನಾಗಿ ರಾಹುಲ್ ಆಯ್ಕೆಯಾಗಿದ್ದರು. ಇದೀಗ ಆರಂಭಿಕನ ಅನಿವಾರ್ಯತೆ ಇರುವುದರಿಂದ ರೋಹಿತ್ ಶರ್ಮಾ ಜೊತೆ ಇನಿಂಗ್ಸ್​ ಆರಂಭಿಸುವ ಜವಾಬ್ದಾರಿ ರಾಹುಲ್ ಪಾಲಾಗುವ ಸಾಧ್ಯತೆ ಹೆಚ್ಚು.

Click on your DTH Provider to Add TV9 Kannada