ಏಕಕಾಲಕ್ಕೆ ಅನೇಕ ಸ್ತ್ರೀಯರ ಜೊತೆ ಲೈಂಗಿಕ ಕ್ರಿಯೆ, ಪತ್ನಿಗೆ ಥಳಿತ; ಹನಿ ಸಿಂಗ್​ ಕರ್ಮಕಾಂಡದ ಪೂರ್ತಿ ಲಿಸ್ಟ್​ ಇಲ್ಲಿದೆ

ಏಕಕಾಲಕ್ಕೆ ಅನೇಕ ಸ್ತ್ರೀಯರ ಜೊತೆ ಲೈಂಗಿಕ ಕ್ರಿಯೆ, ಪತ್ನಿಗೆ ಥಳಿತ; ಹನಿ ಸಿಂಗ್​ ಕರ್ಮಕಾಂಡದ ಪೂರ್ತಿ ಲಿಸ್ಟ್​ ಇಲ್ಲಿದೆ
ಯೋ ಯೋ ಹನಿ ಸಿಂಗ್​

Yo Yo Honey Singh | Shalini Talwar: ಈ ಎಲ್ಲ ಆರೋಪಗಳ ಕುರಿತು ಸ್ಪಷ್ಟನೆ ನೀಡುವಂತೆ ಹನಿ ಸಿಂಗ್​ಗೆ ನ್ಯಾಯಾಲಯ ನೋಟಿಸ್​ ಜಾರಿ ಮಾಡಿದೆ. ಪತ್ನಿ ಶಾಲಿನಿ ತಲ್ವಾರ್​ ಪರವಾಗಿ ಕೋರ್ಟ್ ಮಧ್ಯಂತರ ಅದೇಶ ನೀಡಿದೆ.

TV9kannada Web Team

| Edited By: Madan Kumar

Aug 04, 2021 | 11:05 AM

ಬಾಲಿವುಡ್​ನ ಖ್ಯಾತ ರ‍್ಯಾಪ್ ಸಿಂಗರ್​ ಯೋ ಯೋ ಹನಿ ಸಿಂಗ್​ (Yo Yo Honey Singh) ಸಂಸಾರದ ಗಲಾಟೆ ಈಗ ಬೀದಿಗೆ ಬಂದಿದೆ. ಹನಿ ಸಿಂಗ್​ ಪತ್ನಿ ಶಾಲಿನ ತಲ್ವಾರ್​ (Shalini Talwar) ಅವರು ಹನಿ ಸಿಂಗ್​ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಒಂದು ಕಾಲದಲ್ಲಿ ಬಹುಬೇಡಿಕೆಯ ಗಾಯಕನಾಗಿದ್ದ ಹನಿ ಸಿಂಗ್​ಗೆ ವಿವಾದಗಳು ಹೊಸದೇನಲ್ಲ. ಆದರೆ ಈ ಬಾರಿ ಅವರ ಪತ್ನಿ ಕೋರ್ಟ್​ ಮೆಟ್ಟಿಲು ಏರಿರುವುದರಿಂದ ಅದು ಗಂಭೀರ ಸ್ವರೂಪ ಪಡೆದುಕೊಂಡಿದೆ. ಇಷ್ಟು ದಿನಗಳ ಕಾಲ ಗೌಪ್ಯವಾಗಿದ್ದ ತಮ್ಮ ಸಂಸಾರದ ಕಹಿ ಸತ್ಯಗಳನ್ನೆಲ್ಲ ಶಾಲಿನಿ ತಲ್ವಾರ್​ ಬಹಿರಂಗಪಡಿಸಿದ್ದಾರೆ. ಹನಿ ಸಿಂಗ್​ ಅವರ ಕರಾಳ ಮುಖವನ್ನು ಅವರು ಬಯಲು ಮಾಡಿದ್ದಾರೆ. 

2011ರಲ್ಲಿ ಹನಿ ಸಿಂಗ್​ ಮತ್ತು ಶಾಲಿನಿ ತಲ್ವಾರ್​ ಮದುವೆ ನೆರವೇರಿತ್ತು. ಹತ್ತು ವರ್ಷಗಳ ಕಾಲ ಹನಿ ಸಿಂಗ್​ ಜೊತೆ ದಾಂಪತ್ಯ ಜೀವನ ನಡೆಸಿರುವ ಶಾಲಿನಿ ಅನೇಕ ಹಿಂಸೆ ಅನುಭವಿಸಿದ್ದಾರೆ. ಕೋರ್ಟ್​ಗೆ ಸಲ್ಲಿಸಿದ ದೂರಿನಲ್ಲಿ ಅವರು ಎಲ್ಲವನ್ನೂ ವಿವರಿಸಿದ್ದಾರೆ. ಶಾಲಿನ ಮಾಡಿರುವ ಪ್ರಮುಖ ಆರೋಪಗಳ ಪಟ್ಟಿ ಇಲ್ಲಿದೆ.

1. ಅನೇಕ ಬಾರಿ ದೈಹಿಕವಾಗಿ, ಮಾನಸಿಕವಾಗಿ ಮತ್ತು ಮೌಖಿಕವಾಗಿ ನನ್ನ ಮೇಲೆ ಹನಿ ಸಿಂಗ್​ ಹಲ್ಲೆ ಮಾಡಿದ್ದಾರೆ.

2. ಎಲ್ಲ ಸಂಭಾವನೆಯನ್ನು ನಗದು ರೂಪದಲ್ಲೇ ಹನಿ ಸಿಂಗ್​ ಪಡೆಯುತ್ತಾರೆ. ಹಣದ ವ್ಯವಹಾರವನ್ನು ನನ್ನಿಂದ ಮುಚ್ಚಿಟ್ಟಿದ್ದಾರೆ.

3. ತಿಂಗಳಿಗೆ ನಾಲ್ಕು ಕೋಟಿ ರೂ. ಸಂಪಾದಿಸುತ್ತಿದ್ದ ಹನಿ ಸಿಂಗ್​ ಮದ್ಯವ್ಯಸನಿ ಆಗಿದ್ದಾರೆ. ಆಗಲೇ ಅವರು ಡ್ರಗ್​ ಅಡಿಕ್ಟ್​ ಕೂಡ ಆದರು.

4. ಅನೇಕ ಮಹಿಳೆಯರ ಜೊತೆ ಹನಿ ಸಿಂಗ್​ ಸಹಜ ಎಂಬಂತೆ ಲೈಂಗಿಕ ಕ್ರಿಯೆ ನಡೆಸುತ್ತಾರೆ.

5. ಪಂಜಾಬಿ ನಟಿಯೊಬ್ಬರ ಜೊತೆ ಹನಿ ಸಿಂಗ್​ ಅಕ್ರಮ ಸಂಬಂಧ ಹೊಂದಿದ್ದಾರೆ.

6. ನನ್ನ ಜೊತೆ ಮದುವೆ ಆಗಿದೆ ಎಂಬ ಸತ್ಯವನ್ನು ಜನರಿಂದ ಹಲವು ವರ್ಷಗಳವರೆಗೆ ಹನಿ ಸಿಂಗ್​ ಮುಚ್ಚಿಟ್ಟಿದ್ದರು.

7. ನಮ್ಮ ಮದುವೆಯ ಫೋಟೋಗಳು ಇಂಟರ್​ನೆಟ್​ನಲ್ಲಿ ಲೀಕ್​ ಆಗಿದ್ದಕ್ಕೆ ನಾನೇ ಕಾರಣ ಎಂದು ಅವರು ಅನುಮಾನಪಟ್ಟಿದ್ದರು ಹಾಗೂ ಕೋಪಗೊಂಡು ನನ್ನನ್ನು ಮನಬಂದಂತೆ ಥಳಿಸಿದ್ದರು.

8. ನಮ್ಮ ಮದುವೆ ಉಂಗುರವನ್ನು ಹನಿ ಸಿಂಗ್​ ಧರಿಸುತ್ತಿರಲಿಲ್ಲ. ಅದು ತನಗೆ ದುರದೃಷ್ಟ ಎಂದು ಅವರು ಹೇಳುತ್ತಿದ್ದರು.

9. ಮಹಿಳಾ ಸಹೋದ್ಯೋಗಿಗಳ ಜೊತೆ ಹನಿ ಸಿಂಗ್​ ಅಕ್ರಮ ಸಂಬಂಧ ಹೊಂದಿದ್ದರು. ಅದು ನನಗೆ ಗೊತ್ತಾಗಿ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಬಿಯರ್ ಬಾಟಲಿ ಒಡೆದಿದ್ದರು.

ಈ ಎಲ್ಲ ಆರೋಪಗಳ ಕುರಿತು ಸ್ಪಷ್ಟನೆ ನೀಡುವಂತೆ ಹನಿ ಸಿಂಗ್​ಗೆ ನ್ಯಾಯಾಲಯ ನೋಟಿಸ್​ ಜಾರಿ ಮಾಡಿದೆ. ಶಾಲಿನಿ ಪರವಾಗಿ ಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಪತ್ನಿಯ ಜೊತೆ ಜಂಟಿ ಒಡೆತನದಲ್ಲಿ ಇರುವ ಯಾವುದೇ ಆಸ್ತಿಯನ್ನೂ ಮಾರಾಟ ಮಾಡದಂತೆ ಹನಿ ಸಿಂಗ್​ಗೆ ನ್ಯಾಯಾಲಯ ಸೂಚಿಸಿದೆ.

ಇದನ್ನೂ ಓದಿ:

ಪೋಷಕರೇ ಹುಷಾರ್​! ಬೆತ್ತಲಾಗ್ತಾರೆ ಬಿಗ್​ ಬಾಸ್​ ಸ್ಪರ್ಧಿಗಳು; ವೀಕ್ಷಕರೇ ಶಿಕ್ಷೆ ಕೊಡಬಹುದು

ನಗ್ನವಾಗಿ ಲೈವ್​ ಬಂದ ನಟಿ ಗೆಹನಾ; ಜನರಿಗೆ ಸವಾಲು ಹಾಕಿದ ಅಶ್ಲೀಲ ಸಿನಿಮಾ ಆರೋಪಿ

Follow us on

Related Stories

Most Read Stories

Click on your DTH Provider to Add TV9 Kannada