ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ ಐಶ್ವರ್ಯಾ ರೈ ತದ್ರೂಪಿ ಆಶಿತಾ ಸಿಂಗ್; ವಿಡಿಯೊ ನೋಡಿ

ಆಶಿತಾ ಸಿಂಗ್ ಅವರು ನೋಡುವುದಕ್ಕೆ ಐಶ್ವರ್ಯಾ ರೈಯಂತೆಯೇ‌ ಕಾಣುತ್ತಾರೆ. ಈಗ ಇನ್ಸ್ಟಾಗ್ರಾಂನಲ್ಲಿ ಫೊಟೋಸ್, ರೀಲ್ಸ್ ಮುಖಾಂತರ ಸದ್ದು ಮಾಡುತ್ತಿರುವ ಅವರಿಗೆ ದಿನದಿಂದ ದಿನಕ್ಕೆ ಅಭಿಮಾನಿಗಳ‌ ಸಂಖ್ಯೆ ಏರುತ್ತಲೇ ಇದೆ.

ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ ಐಶ್ವರ್ಯಾ ರೈ ತದ್ರೂಪಿ ಆಶಿತಾ ಸಿಂಗ್; ವಿಡಿಯೊ ನೋಡಿ
ಐಶ್ವರ್ಯಾ ರೈ ಅವರಂತೆಯೇ ಕಾಣಿಸುವ ಆಶಿತಾ ಸಿಂಗ್
Follow us
TV9 Web
| Updated By: shivaprasad.hs

Updated on:Aug 04, 2021 | 2:12 PM

ಜನಪ್ರಿಯ ತಾರೆಯರಂತೆಯೇ ಕಾಣುವ ಜನಸಾಮಾನ್ಯರು ಆಗಾಗ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಅವರ ಹಾವ ಭಾವ ಒಂದೇ ರೀತಿ ಇದ್ದರಂತೂ ಜನರಿಗೆ ನಿಜವಾದ ವ್ಯಕ್ತಿ ಯಾರು, ಅವರಂತೆಯೇ ಇರುವ ಮತ್ತೊಬ್ಬರು ಯಾರು ಎಂದು ಗುರುತಿಸುವುದು ಕಷ್ಟ. ಈಗ ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಮಾದರಿಯಲ್ಲೇ ಇರುವ ಮತ್ತೊಬ್ಬರು ಅಂತರ್ಜಾಲದಲ್ಲಿ ಸಕ್ಕತ್ ಸದ್ದು ಮಾಡುತ್ತಿದ್ದಾರೆ. ಅವರ ಹೆಸರು ಆಶಿತಾ ಸಿಂಗ್. ಇನ್ಸ್ಟಾಗ್ರಾಂನಲ್ಲಿ ತಮ್ಮ ಫೊಟೋಸ್, ರೀಲ್ಸ್ ಮುಖಾಂತರ ಜನಸಾಮಾನ್ಯರಿಗೆ ಹತ್ತಿರವಾಗುತ್ತಿರುವ ಇವರನ್ನು ಒಮ್ಮೆಲೇ ನೋಡಿದವರಿಗೆ ಇವರೇ ನಿಜವಾದ ಐಶ್ವರ್ಯಾ ರೈ ಎಂಬಂತೆ ಕಾಣಿಸುತ್ತಾರೆ.

ಬಾಲಿವುಡ್ ಹಾಡುಗಳಿಗೆ ದನಿಗೂಡಿಸುತ್ತಾ, ಐಶ್ವರ್ಯಾ ರೈ ಅವರ ಮಾದರಿಯಲ್ಲಿಯೇ ಕೆಲವು ಫೊಟೊಗಳನ್ನೂ ತೆಗೆಸಿಕೊಂಡಿರುವ ಆಶಿತಾ ಈಗ ಎಲ್ಲರ ಕಣ್ಮಣಿಯಾಗಿದ್ದಾರೆ. ಈಗಾಗಲೇ ಸುಮಾರು 27,000ದ ಸಮೀಪ ಅವರ ಅಭಿಮಾನಿ‌ ಬಳಗವಿದ್ದು, ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಐಶ್ವರ್ಯಾ ಅವರು ಹಾಡುಗಳಲ್ಲಿ ವ್ಯಕ್ತಪಡಿಸಿರುವ ಭಾವನೆಗಳನ್ನೂ ಸಮರ್ಥವಾಗಿ ವ್ಯಕ್ತಪಡಿಸುವ ಆಶಿತಾ, ಐಶ್ವರ್ಯಾ ರೈ ಅವರ ಹಿಟ್ ಗೀತೆಗಳಿಗೆ ಲಿಪ್ ಸಿಂಕ್ ಮಾಡಿದ್ದಾರೆ.

2002ರಲ್ಲಿ ತೆರೆಕಂಡ, ಶಾರುಖ್ ಖಾನ್, ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್ ಅಭಿನಯದ ‘ದೇವದಾಸ್’ ಚಿತ್ರದ ‘ಸಿಸಿಲಾ ಏ ಚಾಹತ್’ ಹಾಡಿಗೆ ಆಶಿತಾ ಅಭಿನಯ ನೋಡಿ:

‘ಬಾಡಿಗಾರ್ಡ್’ ಚಿತ್ರದ ‘ತೇರಿ ಮೇರಿ ಪ್ರೇಮ್ ಕಹಾನಿ’ ಹಾಡಿಗೆ ಆಶಿತಾ ಲಿಪ್ ಸಿಂಕ್:

ಐಶ್ವರ್ಯಾ ರೈ ಅವರಂತೆಯೇ ಕಾಣುತ್ತಿರುವ ಆಶಿತಾ ಅವರ ಅಭಿನಯ ನೋಡಿ:

ಐಶ್ವರ್ಯಾ ರೈ ಅವರಂತೆಯೇ ಕಾಣಿಸುವ ಆಶಿತಾ ಸಿಂಗ್:

ಐಶ್ವರ್ಯಾ ರೈ ಅವರಿಗೂ ಆಶಿತಾ ಸಿಂಗ್ ಅವರಿಗೂ ನೋಡುವುದಕ್ಕೆ ಬಹಳ ವ್ಯತ್ಯಾಸವೇ ಇಲ್ಲ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪ್ರಪಂಚದಲ್ಲಿ ಇಂತಹ ಹಲವು ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಉದಾಹರಣೆಗೆ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅವರಂತೆಯೇ ಕಾಣುವ ವ್ಯಕ್ತಿಯೊಬ್ಬರಿದ್ದಾರೆ. ಮಹಾತ್ಮಾ ಗಾಂಧಿಯಂತೆ ಕಾಣುವ, ವಿರಾಟ್ ಕೊಹ್ಲಿಯಂತೆ ಕಾಣುವ ವ್ಯಕ್ತಿಗಳು ಈಗಾಗಲೇ ನೆಟ್ಟಿಗರ ಮನ ಸೆಳೆದಿದ್ದಾರೆ. ಇವರ ಸರದಿಗೆ ಹೊಸ ಸೇರ್ಪಡೆ ಆಶಿತಾ ಸಿಂಗ್.

ಇದನ್ನೂ ಓದಿ:

Yashika Aanand: ಭೀಕರ ಅಪಘಾತದ ಇಂಚಿಂಚೂ ವಿವರ; ಹಾಸಿಗೆಯಲ್ಲೇ ನರಕ ನೋಡುತ್ತಿರುವ ನಟಿ ಯಶಿಕಾ ಆನಂದ್​

Shocking Video: ನೈಟ್​ಕ್ಲಬ್​ನಲ್ಲಿ ಕುಡಿದ ಯುವತಿಯ ಪರಿಸ್ಥಿತಿ ನೋಡಿದ್ರೆ ಆಘಾತವಾಗುತ್ತೆ!

(Ashitha Singh creates the new sensation because she is doppelganger of Aishwarya Rai Bachchan)

Published On - 12:37 pm, Wed, 4 August 21