ಮೆಟ್ರೋದಲ್ಲಿ ಕೊರೊನಾ ವೈರಸ್ ಪೀಡಿತನಂತೆ ಪ್ರಾಂಕ್ ಮಾಡಿ ಜನರನ್ನು ಹೆದರಿಸಿದ್ದವನಿಗೆ ಎರಡು ವರ್ಷ ಜೈಲು ಶಿಕ್ಷೆ

Viral Video: ಜನನಿಬಿಡ ಮೆಟ್ರೋದಲ್ಲಿ ಪ್ರಾಂಕ್ ಮಾಡಲು ಹೋಗಿ ಪ್ರಾಂಕ್​ ಸ್ಟಾರ್ ಒಬ್ಬ ಸಿಕ್ಕಿ ಬಿದ್ದಿದ್ದಾನೆ. ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ನ್ಯಾಯಾಲಯವು, ವಿಡಿಯೊ ಮಾಡಿದ ಆತನ ಸ್ನೇಹಿತರಿಗೂ ಶಿಕ್ಷೆ ನೀಡಿದೆ.

ಮೆಟ್ರೋದಲ್ಲಿ ಕೊರೊನಾ ವೈರಸ್ ಪೀಡಿತನಂತೆ ಪ್ರಾಂಕ್ ಮಾಡಿ ಜನರನ್ನು ಹೆದರಿಸಿದ್ದವನಿಗೆ ಎರಡು ವರ್ಷ ಜೈಲು ಶಿಕ್ಷೆ
ವಿಡಿಯೊದಿಂದ ಸೆರೆಹಿಡಿಯಲಾದ ಚಿತ್ರ
Follow us
TV9 Web
| Updated By: shivaprasad.hs

Updated on:Aug 04, 2021 | 5:26 PM

ರಷ್ಯಾ: ಮಾಸ್ಕೋದ ಅಂಡರ್​ಗ್ರೌಂಡ್ ಮೆಟ್ರೊವೊಂದರಲ್ಲಿ ಕೊರೊನಾ ವೈರಸ್ ಪೀಡಿತನಂತೆ ನಾಟಕವಾಡಿ ಜನರನ್ನು ಬೆದರಿಸಿದ್ದ ಯುವಕನಿಗೆ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಕರೊಮಟುಲ್ಲೊ ಜಬರೋವ್(Karomatullo Dzhaborov) ಎಂಬ ಯುವಕ 2020ರ ಫೆಬ್ರವರಿಯಲ್ಲಿ ಪ್ರಾಂಕ್ ನೆಪದಲ್ಲಿ ಪುಂಡಾಟಿಕೆ ನಡೆಸಿದ್ದ. ಆತನಿಗೆ ಶಿಕ್ಷೆ ವಿಧಿಸಿರುವ ನ್ಯಾಯಾಲಯವು ಪ್ರಾಂಕ್​ಗೆ ವಿಡಿಯೊಗ್ರಫಿ ಮಾಡಿದ ಆತನ ಇನ್ನೀರ್ವರು ಸ್ನೇಹಿತರಿಗೂ ಶಿಕ್ಷೆ ವಿಧಿಸಿದೆ.

ಪ್ರಾಂಕ್ ಹೇಗೆ ಮಾಡಿದ್ದರು?

ಮೊದಲಿಗೆ ಮಾಸ್ಕೋದ ಜನನಿಬಿಡ ಮೆಟ್ರೊವೊಂದರ ಬೋಗಿಯೊಳಗೆ, ಜಬರೋವ್ ಬೀಳುತ್ತಾನೆ. ಆತನ ಸಹಾಯಕ್ಕೆ ತಕ್ಷಣ ಜನರು ಧಾವಿಸುತ್ತಾರೆ. ಆಗ ಅಲ್ಲಿ ಆತ ಕೊರೊನಾ ಸೋಂಕು ಪೀಡಿತ ಎಂಬ ಸುದ್ದಿಯನ್ನು ಹಬ್ಬಿಸುತ್ತಾರೆ. ಆಗ ಜನ ಹೆದರಿಕೊಂಡು ಹೇಗೆ ಓಡುತ್ತಾರೆ ಎಂಬುದನ್ನು ವಿಡಿಯೊದಲ್ಲಿ ಚಿತ್ರೀಕರಿಸಲಾಗಿತ್ತು. ಇದನ್ನು ಅಂತರ್ಜಾಲದಲ್ಲೂ ಹಂಚಿಕೊಂಡಿದ್ದ ತಂಡ, ಅಪಾರ ಟೀಕೆಗೆ ಗುರಿಯಾಗಿತ್ತು.

ಪ್ರಾಂಕ್ ಮಾಡಿದ ವಿಡಿಯೊ ಇಲ್ಲಿದೆ:

ಬಂಧಿಸಿದ್ದು ಹೇಗೆ?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಈ ವಿಡಿಯೊದ ಆಧಾರದಲ್ಲಿಯೇ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಪುಂಡಾಟಿಕೆ ಮಾಡಿದ ಆರೋಪದ ಮೇಲೆ ಜಬರೋವ್​ನನ್ನೂ ಬಂಧಿಸಿದ್ದರು. ಅಲ್ಲಿಂದ ಕಸ್ಟಡಿಯಲ್ಲಿದ್ದ ಜಬರೋವ್​ಗೆ ರಷ್ಯಾದ ಆರ್ಟಿಕಲ್ 213ರ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಪುಂಡಾಟಿಕೆ ಮಾಡಿದ್ದಕ್ಕೆ ಎರಡು ವರ್ಷಗಳ ಕಾರಾಗೃಹ ವಾಸದ ಶಿಕ್ಷೆಯನ್ನು ವಿಧಿಸಲಾಗಿದೆ. ಈತನ ಸ್ನೇಹಿತರಾದ ಸ್ಟಾನಿಸ್ಲಾವ್ ಮೆಲಿಖೋವ್(Stanislav Melikhov) ಮತ್ತು ಅರ್ಟುರ್ ಇಸಾಚೆಂಕ್(Artur Isachenk) ಅವರನ್ನೂ ಬಂಧಿಸಿ, ಶಿಕ್ಷೆ ವಿಧಿಸಲಾಗಿದೆ.

ಇತ್ತೀಚೆಗಷ್ಟೇ ಇಂಡೋನೇಷಿಯಾದ ವ್ಯಕ್ತಿಯೊಬ್ಬ ಕೊರೊನಾ ಪಾಸಿಟಿವ್ ಇದ್ದರೂ ಸಹ, ತನ್ನ ಪತ್ನಿಯ ಪಾಸ್​ಪೋರ್ಟ್ ಬಳಸಿ ಪ್ರಯಾಣಿಸಲು ಪ್ರಯತ್ನಿಸಿ ಪೊಲೀಸರ ಅತಿಥಿಯಾಗಿದ್ದ. ಪತ್ನಿಯ ವೇಷವನ್ನೇ ಧರಿಸಿ ಎಲ್ಲೂ ಅನುಮಾನ ಬಾರದಂತೆ ಏರ್​ಪೋರ್ಟ್ ಒಳಗೂ ಪ್ರವೇಶ ಪಡೆದಿದ್ದ ಆತ ತನ್ನ ಒಂದು ತಪ್ಪಿನಿಂದ ಸಿಕ್ಕಿಹಾಕಿಕೊಂಡದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:

ಪತ್ನಿಯ ವೇಷ ಧರಿಸಿ ವಿಮಾನ ಹತ್ತಿದ ಕೊವಿಡ್​ 19 ಸೋಂಕಿತ; ಮಾರ್ಗ ಮಧ್ಯೆ ಫ್ಲೈಟ್​ನ ಬಾತ್​ರೂಂನಲ್ಲಿ ಮಾಡಿದ ಅದೊಂದು ತಪ್ಪಿನಿಂದ ಸಿಕ್ಕಿಬಿದ್ದ !

Skin Care: ಚರ್ಮದ ಹೊಳಪನ್ನು ಹೆಚ್ಚಿಸಲು ಕೊರಿಯನ್ನರು ಅನುಸರಿಸುವ ಈ 7 ರಹಸ್ಯಗಳ ಬಗ್ಗೆ ನಿಮಗೆ ತಿಳಿದಿದೆಯೇ?

(A prankster in Russia jailed for two years because he acts he has corona virus in a metro)

Published On - 5:16 pm, Wed, 4 August 21