Skin Care: ಚರ್ಮದ ಹೊಳಪನ್ನು ಹೆಚ್ಚಿಸಲು ಕೊರಿಯನ್ನರು ಅನುಸರಿಸುವ ಈ 7 ರಹಸ್ಯಗಳ ಬಗ್ಗೆ ನಿಮಗೆ ತಿಳಿದಿದೆಯೇ?

Beauty Tips: ಚರ್ಮದ ಆರೈಕೆ ಮತ್ತು ಕೂದಲಿನ ರಕ್ಷಣೆಯು ತಮ್ಮ ದಿನಚರಿಯಲ್ಲಿ ಒಂದು ಭಾಗವಾಗಿಬಿಟ್ಟಿದೆ. ಹೀಗೆ ಚರ್ಮದ ಆರೈಕೆ ಮಾಡುವವರು ಕೊರಿಯ್ನನರ ತ್ವಚ್ಛೆಯ ರಹಸ್ಯದ ಬಗ್ಗೆ ತಿಳಿಯುವುದು ಸೂಕ್ತ.

Skin Care: ಚರ್ಮದ ಹೊಳಪನ್ನು ಹೆಚ್ಚಿಸಲು ಕೊರಿಯನ್ನರು ಅನುಸರಿಸುವ ಈ 7 ರಹಸ್ಯಗಳ ಬಗ್ಗೆ ನಿಮಗೆ ತಿಳಿದಿದೆಯೇ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Aug 04, 2021 | 4:09 PM

ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ವಿಶ್ವದಾದ್ಯಂತ ಒಂದಿಲ್ಲಾ ಒಂದು ಪ್ರಯೋಗ ನಡೆಯುತ್ತಲೇ ಇದೆ. ಕೆಲವರು ಮನೆಯಲ್ಲಿಯೇ ನೈಸರ್ಗಿಕವಾಗಿ ಸಿಗುವ ವಸ್ತುಗಳ ಮೂಲಕ ತಮ್ಮ ತ್ವಚ್ಛೆಯನ್ನು ಕಾಪಾಡಿಕೊಂಡರೆ, ಇನ್ನು ಹಲವರು ಪಾರ್ಲರ್​ಗಳಿಗೆ ಹೋಗಿ ಸೌಂದರ್ಯವನ್ನು( Beauty) ಹೆಚ್ಚಿಸಿಕೊಳ್ಳುತ್ತಾರೆ. ಆದರೆ ನೈಸರ್ಗಿಕವಾಗಿ ಸಿಗುವ ವಸ್ತುಗಳೇ ದೀರ್ಘಕಾಲದವರೆಗೆ ಸೌಂದರ್ಯವನ್ನು ಕಾಯ್ದಿರಿಸುತ್ತದೆ ಎಂಬುವುದು ಹಲವರ ಅಭಿಪ್ರಾಯ. ವಿಶೇಷವಾಗಿ ಚರ್ಮದ ಆರೈಕೆ (Skin Care) ಮತ್ತು ಕೂದಲಿನ ರಕ್ಷಣೆಯು ತಮ್ಮ ದಿನಚರಿಯಲ್ಲಿ ಒಂದು ಭಾಗವಾಗಿಬಿಟ್ಟಿದೆ. ಹೀಗೆ ಚರ್ಮದ ಆರೈಕೆ ಮಾಡುವವರು ಕೊರಿಯ್ನನರ ತ್ವಚ್ಛೆಯ ರಹಸ್ಯದ ಬಗ್ಗೆ ತಿಳಿಯುವುದು ಸೂಕ್ತ.

1. ಸ್ಟೀಮ್ ತೆಗೆದುಕೊಳ್ಳಿ ಚರ್ಮದ ಆರೊಗ್ಯವನ್ನು ಕಾಪಾಡಲು ಕೊರಿಯನ್ನರು ಅನುಸರಿಸುವ ಪ್ರಮುಖ ಮಾರ್ಗವೆಂದರೆ ಸ್ಟೀಮ್ ತೆಗೆದುಕೊಳ್ಳುವುದು. ಚರ್ಮದಲ್ಲಿನ ಎಲ್ಲಾ ಕೊಳಕು ಮತ್ತು ಬ್ಯಾಕ್ಟೀರಿಯಾಗಳನ್ನು ಇದು ಹೋಗಲಾಡಿಸುತ್ತದೆ. ಬಿಸಿನೀರಿನಿಂದ ಸ್ಟೀಮ್ ತೆಗೆದುಕೊಳ್ಳುವುದು ಅಥವಾ ಸ್ಟೀಮ್ ಯಂತ್ರಗಳನ್ನು ಬಳಸುವುದು ನಿಮ್ಮ ಆಯ್ಕೆಯಾಗಿದೆ.

2. ಚಹಾ ಕೊರಿಯನ್ನರು ಮೂಲಭೂತವಾಗಿ ಪ್ರೀತಿಸುವುದು ಚಹಾವನ್ನು. ಎಲ್ಲಾ ರೀತಿಯ ಚಹಾವನ್ನು ಕುಡಿಯುವುದರಿಂದ ಹಿಡಿದು ಅದನ್ನು ಮುಖಕ್ಕೆ ಟೋನರಿನಂತೆ ಹಚ್ಚುವವರೆಗೆ ಇವರು ಚಹಾವನ್ನು ಇಷ್ಟಪಡುತ್ತಾರೆ. ಚಹಾವು ಚರ್ಮದ ವಿಷವನ್ನು ತೊಡೆದುಹಾಕಲು ಮತ್ತು ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.

3. ಮುಖದ ವ್ಯಾಯಾಮ ಮುಖದ ವ್ಯಾಯಾಮವು ಕೂಡ ಕೊರಿಯನ್ನರ ಸೌಂದರ್ಯದ ಪ್ರಮುಖ ರಹಸ್ಯವಾಗಿದೆ. ಇದು ಹೊಳೆಯುವ ಚರ್ಮವನ್ನು ನೀಡುವುದಲ್ಲದೆ ಉತ್ತಮ ಆಕಾರವನ್ನು ನೀಡುತ್ತದೆ.

4. ಮಸಾಜ್ ರಕ್ತ ಪರಿಚಲನೆಯನ್ನು ಉತ್ತೇಜಿಸಲು ಮಸಾಜ್ ಉತ್ತಮ ಮಾರ್ಗವಾಗಿದೆ. ಮಸಾಜ್ ಮಾಡುವಾಗ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಬ್ಯಾಕ್ಟೀರಿಯಾವನ್ನು ದೂರ ಮಾಡುತ್ತದೆ.

5. ಫೇಸ್ ಪ್ಯಾಕ್ ರಾತ್ರಿ ಮಲಗುವಾಗ ಕೊರಿಯನ್ನರು ಫೇಸ್ ಪ್ಯಾಕ್ ಹಾಕುತ್ತಾರೆ.  ಫೇಸ್ ಪ್ಯಾಕ್ ಹಾಕುವುದರಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ ಮತ್ತು ಈ ಸಮಯದಲ್ಲಿ ಚರ್ಮವು ತನಗೆ ಬೇಕಾದಷ್ಟು ಪೊಷಕಾಂಶಗಳನ್ನು ಪಡೆಯುತ್ತದೆ ಎನ್ನುವುದು ಅವರ ಅಭಿಪ್ರಾಯ.

6. ತುಟಿಯ ಆರೈಕೆ ತಮ್ಮ ತುಟಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಕೊರಿಯನ್ನರು ಇಷ್ಟಪಡುತ್ತಾರೆ. ದಿನವಿಡೀ ಲಿಪ್​ಸ್ಟಿಕ್​ ಬಳಸುವುದರಿಂದ ತುಟಿಯ ಬಣ್ಣ ಕಾಲಾನಂತರದಲ್ಲಿ ಕಪ್ಪಾಗುತ್ತದೆ. ಹೀಗಾಗಿ ತುಟಿಗೆ ಲಿಪ್ ಕೇರ್, ಇನ್ನಿತರ ತೈಲವನ್ನು ಬಳಸುತ್ತಿರುತ್ತಾರೆ.

7. ಮಾಯಿಶ್ಚರೈಸರ್ ಫೇಸ್ ಮಾಸ್ಕ್​ನಿಂದ ಮಾಯಿಶ್ಚರೈಸರ್ ವರೆಗಿನ ಸಂಪೂರ್ಣ 10 ಹಂತದ ದಿನಚರಿಯನ್ನು ಅನುಸರಿಸುವ ಮೂಲಕ ಕೊರಿಯನ್ನರು, ತಮ್ಮ ಚರ್ಮಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ: Mosambi Benefits: ಮೂಸಂಬಿ ಹಣ್ಣಿನ ಜ್ಯೂಸ್ ಕುಡಿಯುವುದರ ಜತೆಗೆ, ಚರ್ಮದ ಕಾಳಜಿಗಾಗಿ ಇದರ ರಸವನ್ನು ಬಳಸಿ

Mint Benefits: ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಕಾಯಿಲೆಗೂ ಪುದೀನಾ ರಾಮಬಾಣ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ