AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mint Benefits: ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಕಾಯಿಲೆಗೂ ಪುದೀನಾ ರಾಮಬಾಣ

Pudina Benefits: ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ. ಪುದೀನಾ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಚರ್ಮದ ರಕ್ಷಕ, ಟೋನರ್ ಮತ್ತು ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತವೆ.

Mint Benefits: ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಕಾಯಿಲೆಗೂ ಪುದೀನಾ ರಾಮಬಾಣ
ಪುದೀನಾ
TV9 Web
| Edited By: |

Updated on:Aug 04, 2021 | 8:30 AM

Share

ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಕಾಯಿಲೆಯನನ್ನು ತಡೆಗಟ್ಟುವಲ್ಲಿ ಪುದೀನಾ ಪ್ರಮುಖ ಪಾತ್ರ ವಹಿಸುತ್ತದೆ. ಪುದೀನಾ ಎಲೆಗಳು ಚರ್ಮಕ್ಕೆ ತುಂಬಾ ಒಳ್ಳೆಯದು. ಇದನ್ನು ಫೇಸ್ ವಾಶ್ ಮತ್ತು ಮಾಯಿಶ್ಚರೈಸರ್​ನಂತಹ ಚರ್ಮದ ಆರೈಕೆ ಉತ್ಪನ್ನಗಳಿಗೆ ಬಳಸಲಾಗುತ್ತದೆ. ಪುದೀನಾ ಎಲೆಗಳು(Pudina) ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದು ಚರ್ಮದ(Skin) ಆರೋಗ್ಯವನ್ನು ಕಾಪಾಡುವಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ. ಪುದೀನಾ(Mint) ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಚರ್ಮದ ರಕ್ಷಕ, ಟೋನರ್ ಮತ್ತು ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತವೆ.

1. ಮೊಡವೆಗಳಿಂದ ಮುಕ್ತಿ ಪುದೀನಾ ಎಲೆಗಳು ಸ್ಯಾಲಿಸಿಲಿಕ್ ಆಮ್ಲ ಮತ್ತು ವಿಟಮಿನ್ ಎ ಅನ್ನು ಹೊಂದಿರುತ್ತವೆ. ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ಮೊಡವೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಇದು ಚರ್ಮದಲ್ಲಿ ತೈಲ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಪುದೀನಾವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ನೀವು ಪುದೀನಾ ಎಲೆ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ಈ ಪೇಸ್ಟ್ ಮೊಡವೆಯ ಕಲೆಗಳನ್ನು ಕೂಡ ಕಡಿಮೆ ಮಾಡುತ್ತದೆ.

2. ಗಾಯಗಳನ್ನು ಗುಣಪಡಿಸುತ್ತದೆ ಪುದೀನಾ ಉರಿಯೂತವನ್ನು ದೂರ ಮಾಡುವ ಗುಣಗಳನ್ನು ಹೊಂದಿದೆ. ಚರ್ಮದ ಮೇಲಿನ ಕಲೆ, ಸೊಳ್ಳೆ ಮತ್ತು ತುರಿಕೆಯನ್ನು ನಿವಾರಿಸುತ್ತಾರೆ. ಇದಕ್ಕಾಗಿ ನೀವು ಪುದೀನಾ ಎಲೆಗಳ ರಸವನ್ನು ಬಾಧಿತ ಜಾಗಕ್ಕೆ ಹಚ್ಚಬೇಕು. ಇದು ಗಾಯವನ್ನು ಗುಣಪಡಿಸುತ್ತವೆ. ಅಲ್ಲದೆ ಗಾಯದಿಂದ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡಲು ಪುದೀನಾ ಸಹಾಯ ಮಾಡುತ್ತದೆ.

3. ಚರ್ಮವನ್ನು ಹೈಡ್ರೇಟ್ ಆಗಿರಿಸುತ್ತದೆ ಪುದೀನಾ ಎಲೆಗಳು ಹೈಡ್ರೇಟ್ ಸಂಕೋಚಕವಾಗಿ ಕಾರ್ಯನಿರ್ವಹಿಸುತ್ತವೆ. ಇದು ಚರ್ಮದಿಂದ ಕೊಳೆಯನ್ನು ತೆಗೆದುಹಾಕಲು ಮತ್ತು ಚರ್ಮವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಪುದೀನಾ ಚರ್ಮದಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೇ ಇದು ಚರ್ಮದ ಮೇಲೆ ಸುಕ್ಕುಗಳನ್ನು ತಡೆಯುತ್ತದೆ. ಪುದೀನಾ ಫೇಸ್ ಪ್ಯಾಕ್ ಅನ್ನು ಹಚ್ಚಿ, 20 ರಿಂದ 25 ನಿಮಿಷಗಳ ಕಾಲ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಕಾಂತಿಯುತವಾಗಿ ಮಾಡುತ್ತದೆ.

4. ಕಪ್ಪು ವರ್ತುಲಗಳನ್ನು ಕಡಿಮೆ ಮಾಡುತ್ತದೆ ಪುದೀನಾ ಎಲೆಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇವು ಕಣ್ಣಿನ ಕೆಳಗಿರುವ ಕಪ್ಪು ವರ್ತುಲಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪುದೀನಾ ಪೇಸ್ಟ್ ಅನ್ನು ಕಣ್ಣುಗಳ ಕೆಳಗೆ ಹಚ್ಚಿ ರಾತ್ರಿಯಿಡೀ ಬಿಡಬೇಕು. ಇದು ನಿಮ್ಮ ಕಣ್ಣಿನ ಕೆಳಗಿರುವ ಕಪ್ಪು ವರ್ತುಲಗಳನ್ನು ಕಡಿಮೆ ಮಾಡುತ್ತದೆ.

5. ಚರ್ಮದ ಹೊಳಪು ಹೆಚ್ಚಿಸುತ್ತದೆ ಪುದೀನಾ ಎಲೆಗಳು ನಂಜುನಿರೋಧಕ ಗುಣಗಳನ್ನು ಹೊಂದಿವೆ. ಇವು ಕಪ್ಪು ಕಲೆಗಳು ಮತ್ತು ದದ್ದುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪುದೀನಾ ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಪುದೀನಾ ಎಲೆಗಳನ್ನು ಚರ್ಮದ ಹೊಳಪು ಹೆಚ್ಚಿಸಲು ಬಳಸಲಾಗುತ್ತದೆ.

ಇದನ್ನೂ ಓದಿ: Garam Masala Benefits: ಗರಂ ಮಸಾಲೆ ಪರಿಮಳ ಮತ್ತು ರುಚಿಗಷ್ಟೇ ಸಿಮಿತವಾಗಿಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿದೆ

Salt: ಉಪ್ಪು ಕಡಿಮೆ ತಿನ್ನುವ ಅಭ್ಯಾಸ ಇದೆಯೇ? ಅಪಾಯದ ಬಗ್ಗೆ ಎಚ್ಚರ ತಪ್ಪಬೇಡಿ

Published On - 8:30 am, Wed, 4 August 21