AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ನಿಮಗೆ ಹಸಿವಾಗುತ್ತಿಲ್ಲ ಎಂಬ ಚಿಂತೆಯೇ? ಇಲ್ಲಿದೆ ರಾಮಬಾಣ

ತ್ರಿಫಲ ಪುಡಿಯು ಹಲವಾರು ರೋಗ ಸಮಸ್ಯೆಗಳನ್ನು ನಿವಾರಿಸಲು ರಾಮಬಾಣವಾಗಿದೆ. ಮಲಬದ್ಧತೆ ಸಮಸ್ಯೆ ಇರುವವರು ಹೆಚ್ಚಾಗಿ ಇದರ ಪ್ರಯೋಜನ ಪಡೆದುಕೊಳ್ಳುತ್ತಾರೆ. ಒಂದು ಚಮಚ ತ್ರಿಫಲ ಪುಡಿಯನ್ನು ಉಗುರು ಬೆಚ್ಚಗಿನ ಹಾಲಿನೊಂದಿಗೆ ಬೆರೆಸಿ ಸೇವಿಸುವ ಮೂಲಕ ಜೀರ್ಣ ಕ್ರಿಯೆ ಸಮಸ್ಯೆ ಸರಿಯಾಗುತ್ತದೆ.

Health Tips: ನಿಮಗೆ ಹಸಿವಾಗುತ್ತಿಲ್ಲ ಎಂಬ ಚಿಂತೆಯೇ? ಇಲ್ಲಿದೆ ರಾಮಬಾಣ
ಸಾಂದರ್ಭಿಕ ಚಿತ್ರ
TV9 Web
| Updated By: shruti hegde|

Updated on:Aug 03, 2021 | 5:40 PM

Share

ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಹಸಿವು ಆಗುದಿಲ್ಲ ಎಂಬ ಸಮಸ್ಯೆ. ಹೆಚ್ಚಿನ ಜನರು ಊಟವನ್ನು ನೋಡಿದರೆ ಸಾಕು ಎಂದು ದೂರವೇ ಸರಿಯುತ್ತಾರೆ. ಈ ರೀತಿಯ ಸಮಸ್ಯೆ ಇತ್ತೀಚಿನ ಜನರಲ್ಲಿ ಹೆಚ್ಚು ಕಾಡುತ್ತಿದೆ. ಇಂಥಹ ಸಮಸ್ಯೆಗೆ ಪರಿಹಾರಗಳೇನು? ಹಸಿವಾಗಲು ಏನು ಮಾಡುವುದು? ಈ ಪ್ರಶ್ನೆಗಳಿಗೆ ಕೆಲವು ಟಿಪ್ಸ್​ಗಳು ಇಲ್ಲಿವೆ. ಇವುಗಳನ್ನು ಪಾಲಿಸುವ ಮೂಲಕ ನಿಮಗೆ ಹಸಿವಾಗುವಂತೆ ನೋಡಿಕೊಳ್ಳಬಹುದು.

ತ್ರಿಫಲ ಚೂರ್ಣ ತ್ರಿಫಲ ಪುಡಿಯು ಹಲವಾರು ರೋಗ ಸಮಸ್ಯೆಗಳನ್ನು ನಿವಾರಿಸಲು ರಾಮಬಾಣವಾಗಿದೆ. ಮಲಬದ್ಧತೆ ಸಮಸ್ಯೆ ಇರುವವರು ಹೆಚ್ಚಾಗಿ ಇದರ ಪ್ರಯೋಜನ ಪಡೆದುಕೊಳ್ಳುತ್ತಾರೆ. ಒಂದು ಚಮಚ ತ್ರಿಫಲ ಪುಡಿಯನ್ನು ಉಗುರು ಬೆಚ್ಚಗಿನ ಹಾಲಿನೊಂದಿಗೆ ಬೆರೆಸಿ ಸೇವಿಸುವ ಮೂಲಕ ಜೀರ್ಣ ಕ್ರಿಯೆ ಸಮಸ್ಯೆ ಸರಿಯಾಗುತ್ತದೆ. ಇದರಿಂದ ಹಸಿವಿನ ಸಮಸ್ಯೆಗೆ ಪರಿಹಾರ ಪಡೆಯಬಹುದು.

ಗ್ರೀನ್ ಟೀ ಹಸಿವನ್ನು ಹೆಚ್ಚಿಸಲು ಗ್ರೀನ್ ಟೀಯನ್ನು ಉತ್ತಮ ಮನೆಮದ್ದಾಗಿ ಬಳಸಬಹುದು. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹಲವು ರೋಗಗಳನ್ನು ನಿಯಂತ್ರಿಸಬಹುದು. ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಗ್ರೀನ್ ಟೀ ಸವಿಯುವ ಮೂಲಕ ನಿಮ್ಮ ಹೊಟ್ಟೆಯನ್ನು ಶುದ್ಧಗೊಳಿಸಬಹುದು. ಇದರಿಂದ ಹಸಿವಾಗದ ಸಮಸ್ಯೆಯಿಂದ ಪರಿಹಾರ ಪಡೆಯಬಹುದಾಗಿದೆ.

ನಿಂಬೆ ದೇಹಕ್ಕೆ ಸಾಕಷ್ಟು ಪ್ರಮಾಣದ ನೀರಿನಾಂಶ ಬೇಕಾಗಿರುತ್ತದೆ. ಇದು ಹಸಿವನ್ನು ಹೆಚ್ಚಿಸುತ್ತದೆ. ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ನಿಂಬೆ ರಸ ಮತ್ತು ನೀರನ್ನು ಸೇವಿಸುವ ಮೂಲಕ ಹಸಿವಿನ ಅನುಭವ ಪಡೆಯಬಹುದಾಗಿದೆ.

ಜ್ಯೂಸ್ ನೀವೂ ಏನನ್ನೂ ತಿನ್ನಲು ಬಯಸಿದ್ದರೆ ಅಥವಾ ಹಸಿವೇ ಆಗುತ್ತಿಲ್ಲ ಅಂದನಿಸುತ್ತಿದ್ದದೆ ಹಣ್ಣಿನ ರಸವನ್ನಾದರೂ ಸೇವಿಸುವುದು ಉತ್ತಮ. ಇಲ್ಲವೇ ನಿಂಬೆ ರಸದೊಡನೆ ಉಪ್ಪು ಅಥವಾ ಕಲ್ಲು ಉಪ್ಪು ಸೇರಿಸಿ ಕುಡಿಯುವುದರಿಂದ ಹೊಟ್ಟೆ ಸ್ವಚ್ಛವಾಗಿರುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಿಂದ ಹಸಿವಿನ ಅನುಭವವನ್ನು ಪಡೆಯಬಹುದು.

ಇದನ್ನೂ ಓದಿ:

Health Tips: ಬೆಂಡೆಕಾಯಿ ನೋಡಿ ಮೂಗು ಮುರಿಯಬೇಡಿ; ಬಿಪಿ, ಡಯಾಬಿಟಿಸ್​ಗೆ ಇದೇ ರಾಮಬಾಣ

Health Tips: ಅರಿಶಿಣ ನೀರು ಸೇವಿಸುವುದರಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ತಿಳಿಯಿರಿ

Published On - 5:38 pm, Tue, 3 August 21